ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಟ್ಟಡಗಳ ಪರವಾನಿಗೆ ಮತ್ತು ಪ್ರವೇಶ ಪತ್ರಗಳ ಮಂಜೂರಾತಿಗೆ ಅಧಿಕಾರ ನೀಡಿ ಆದೇಶ – News Kadaba

ಕಟ್ಟಡಗಳ ಪರವಾನಿಗೆ ಮತ್ತು ಪ್ರವೇಶ ಪತ್ರಗಳ ಮಂಜೂರಾತಿಗೆ ಅಧಿಕಾರ ನೀಡಿ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 18. ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ವಾಸ್ತವ್ಯ, ವಾಣಿಜ್ಯ ಮತ್ತು ಇತರೆ ಕಟ್ಟಡಗಳ ಪರವಾನಿಗೆ ಮತ್ತು ಪ್ರವೇಶ ಪತ್ರಗಳ ಮಂಜೂರಾತಿ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ 250 ಚ.ಮೀ ವಿಸ್ತೀರ್ಣಕ್ಕೆ ಮೇಲ್ಪಟ್ಟ ಎಲ್ಲಾ ಕಡತಗಳು ಆಯುಕ್ತರ ಮಂಜೂರಾತಿಗಾಗಿ ಕೇಂದ್ರ ಕಚೇರಿಗೆ ಸಲ್ಲಿಸಬೇಕಾದ ವ್ಯವಸ್ಥೆ ಇತ್ತು. ಅದನ್ನು ಗಮನಿಸಿ ಈ ವ್ಯವಸ್ಥೆಯಲ್ಲಿನ ಕಡತಗಳ ಚಲನೆ ಹಾಗೂ ನಿರ್ವಹಣೆ ಬಗ್ಗೆ ಸಮರ್ಪಕವಾಗಿ ವಿಶ್ಲೇಷಿಸಿ, ಈ ಪದ್ದತಿಯಲ್ಲಿ ಕಂಡುಬಂದ ನ್ಯೂನ್ಯತೆಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಗಳನ್ನು ಪರಿಹರಿಸುವ ಉದ್ದೇಶದಿಂದ, ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಲು ಕ್ರಮವಹಿಸಲಾಗಿದೆ.

ಅದರಂತೆ ಈ ನಿಟ್ಟಿನಲ್ಲಿ 500 ಚ.ಮೀ ವಿಸ್ತೀರ್ಣದವರೆಗಿನ ಎಲ್ಲಾ ವಾಸ್ತವ್ಯ, ವಾಣಿಜ್ಯ ಮತ್ತು ಇತರೆ ಉದ್ದೇಶದ ಕಟ್ಟಡಗಳಿಗೆ ಪರವಾನಿಗೆ, ಪ್ರವೇಶ ಪತ್ರಗಳ ಮಂಜೂರಾತಿ ಹಾಗೂ ಪರವಾನಿಗೆ ನವೀಕರಣ ಹಾಗೂ ಕಟ್ಟಡ ದುರಸ್ಥಿಗೆ ಸಂಬಂಧಪಟ್ಟ ಎಲ್ಲಾ ಕಡತಗಳನ್ನು ಆಯಾ ವಲಯ ಕಚೇರಿ ಹಂತದಲ್ಲಿ ಮುಕ್ತಾಯಗೊಳಿಸುವುದು ಸೂಕ್ತ ಎಂದು ಮನಗಂಡು ಇನ್ನು ಮುಂದೆ ಸಲ್ಲಿಕೆಯಾಗುವ ಅರ್ಜಿಗಳನ್ನು ವಲಯ ಹಂತದಲ್ಲಿ ಸ್ವೀಕರಿಸಿ ಸಹಾಯಕ ನಗರ ಯೋಜನಾಧಿಕಾರಿಯವರ ವರದಿ ಆಧಾರದ ಮೇಲೆ ವಲಯ ಆಯುಕ್ತರಿಗೆ ಮಂಜೂರಾತಿಗೊಳಿಸುವ ಅಧಿಕಾರವನ್ನು ನೀಡಿ ಆದೇಶಿಸಲಾಗಿದೆ.


ಅದರಂತೆ ಮೇಲ್ಕಂಡ ವಿಸ್ತೀರ್ಣಕ್ಕೊಳಪಟ್ಟ ಕಡತಗಳನ್ನು 15 ದಿನಗಳ ಕಾಲಮಿತಿಯೊಳಗೆ ಹಾಗೂ ಸರ್ಕಾರದಿಂದ ಜಾರಿಗೆ ತಂದಿರುವ ನಿರ್ಮಾಣ್ 2 (LBPAS) ಆನ್‍ಲೈನ್ ತಂತ್ರಾಂಶದ ಮೂಲಕವೇ ಕಡ್ಡಾಯವಾಗಿ ನಿರ್ವಹಿಸಲು ನಿರ್ದೇಶನ ನೀಡಲಾಗಿರುತ್ತದೆ. ಅಲ್ಲದೆ ಜಂಟಿ ನಿರ್ದೇಶಕರು (ನಗರ ಯೋಜನೆ) ಪ್ರತೀ ತಿಂಗಳು ಆ ಕಡತಗಳ ವಿಲೇವಾರಿ ಪ್ರಗತಿಯನ್ನು ಪರಿಶೀಲಿಸುವಂತೆ ನಿರ್ದೇಶನ ನೀಡಲಾಗಿದೆ.

ಕಟ್ಟಡ ನಿರ್ಮಾಣ ಪರವಾನಿಗೆ ಮತ್ತು ಪ್ರವೇಶ ಪತ್ರಗಳಿಗೆ ಸಂಬಂಧಪಟ್ಟಂತೆ ಪ್ರತೀ ತಿಂಗಳು ಸರಾಸರಿ 150 ಅರ್ಜಿಗಳು ಸ್ವೀಕೃತವಾಗುತ್ತಿದ್ದು, ಈ ವ್ಯವಸ್ಥೆ ಜಾರಿಗೆ ತಂದ ಹಿನ್ನಲೆಯಲ್ಲಿ ಇನ್ನು ಮುಂದೆ ಕಟ್ಟಡ ನಿರ್ಮಾಣದಾರರು ಕೇಂದ್ರ ಕಚೇರಿಗೆ ಆಗಮಿಸಬೇಕಾದ ಅವಶ್ಯಕತೆಯಿಲ್ಲದೆ ನೇರವಾಗಿ ವಲಯ ಕಚೇರಿಯಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top