ಕಡಬ: ಬೀಡಿ ಅದ್ರಾಮ ಎಂದು ಚಿರಪರಿಚಿತರಾಗಿದ್ದ ಹಾಜಿ ಅಬ್ದುಲ್ ರಹಿಮಾನ್ ನಿಧನ
(ನ್ಯೂಸ್ ಕಡಬ) newskadaba.com ಕಡಬ, ಜ.22. ಇಲ್ಲಿನ ಮರ್ದಾಳ ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ, ಬೀಡಿ ಉದ್ಯೋಗದಾತರಾಗಿದ್ದ ಹಾಜಿ ಅಬ್ದುಲ್ ರಹಮಾನ್(75) ಇವರು ಸೋಮವಾರದಂದು ಸ್ವಗೃಹದಲ್ಲಿ ನಿಧನರಾದರು. ಕಡಬ ಪರಿಸರದಲ್ಲಿ ಸುಮಾರು 50 ವರ್ಷಗಳಿಂದ ಬೀಡಿ ಕಾಂಟ್ರಾಕ್ಟ್ ಉದ್ಯಮ ನಡೆಸುತ್ತಿದ್ದ ಇವರು ಅನೇಕ ಬೀಡಿ ಕಾರ್ಮಿಕರಿಗೆ ಉದ್ಯೋಗದಾತರಾಗಿದ್ದು, ಬೀಡಿ ಅದ್ರಾಮ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಕಡಬ: ಬೀಡಿ ಅದ್ರಾಮ ಎಂದು ಚಿರಪರಿಚಿತರಾಗಿದ್ದ ಹಾಜಿ ಅಬ್ದುಲ್ ರಹಿಮಾನ್ ನಿಧನ Read More »
ಕರಾವಳಿ


