ಮೀನಿನ ಬಲೆ ಎಳೆಯುವಾಗ ದುರಂತ – ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು



(ನ್ಯೂಸ್ ಕಡಬ) newskadaba.com ಉಳ್ಳಾಲ, . 13.  ಮೀನುಗಾರಿಕೆಯ ವೇಳೆ ಮೀನಿಗೆ ಹಾಕಿದ್ದ ಬಲೆ ಎಳೆಯುವ ಸಂದರ್ಭ ಸಮುದ್ರಕ್ಕೆ ಜಾರಿ ಬಿದ್ದು, ಮೀನುಗಾರರೊಬ್ಬರು ಮೃತಪಟ್ಟ ಘಟನೆ ಉಳ್ಳಾಲ ಸಮುದ್ರದಿಂದ ಕೆಲವು ಮಾರು ದೂರದಲ್ಲಿ ನಡೆದಿದೆ.







ಮೃತ ಮೀನುಗಾರನನ್ನು ಮೊಗವೀರಪಟ್ಣ ನಿವಾಸಿ ತುಳಸೀರಾಮ್ (62) ಎಂದು ಗುರುತಿಸಲಾಗಿದೆ. ಮೊಗವೀರಪಟ್ಣ ನಿವಾಸಿ ಕಿರನ್ ಪುತ್ರನ್ ಎಂಬವರಿಗೆ ಸೇರಿದ್ದ ‘ವಾಸವಿ’ ಪರ್ಸಿನ್ ಎಂಬ ಬೋಟ್‍ನಲ್ಲಿ ತುಳಸಿರಾಮ್ ಸೇರಿದಂತೆ 30 ಜನ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಸಮುದ್ರ ಮದ್ಯದಲ್ಲಿ ಬಲೆ ಹಾಕಿ ಮಲಗಿದ್ದ ಮೀನುಗಾರರು ಬೆಳಗ್ಗೆ ಬಲೆಯನ್ನು ಎಳೆಯುತ್ತಿದ್ದಾಗ ತುಳಸೀರಾಮ್ ಆಯ ತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ತಕ್ಷಣವೇ ಸಹ ಮೀನುಗಾರರಾದ ಜಿತೇಂದ್ರ ಬಂಗೇರ ಮತ್ತು ಪ್ರಥ್ವಿನ್ ಸಮುದ್ರಕ್ಕೆ ಹಾರಿ ರಕ್ಷಿಸಲು ಯತ್ನಿಸಿದರಾದರೂ ಅದಾಗಲೇ ಮುಳುಗಿದ್ದ ತುಳಸೀರಾಮ್ ಸಮುದ್ರದಲ್ಲೇ ಮೃತಪಟ್ಟಿದ್ದರು. ಮೃತದೇಹವನ್ನು ಮೇಲಕ್ಕೆತ್ತಿ ಬಳಿಕ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top