ಕರಾವಳಿ

ಜಾನುವಾರುಗಳ ಆಕಸ್ಮಿಕ ಸಾವು- ಅನುಗ್ರಹ ಯೋಜನೆಯಡಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 14. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಅನುಗ್ರಹ ಯೋಜನೆಯಡಿ ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರಿಗೆ ಗರಿಷ್ಠ 10,000 ಪರಿಹಾರ ಧನ ವಿತರಿಸಲಾಗುತ್ತದೆ. ಸದರಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ಕಂತುಗಳಲ್ಲಿ ಒಟ್ಟು ರೂ. 44 ಲಕ್ಷ ಅನುದಾನ ಹಂಚಿಕೆಯಾಗಿದೆ. ಆಕಸ್ಮಿಕ ಮರಣ ಹೊಂದಿದ ರಾಸುಗಳ (ಹಸು, ಎಮ್ಮೆ, ಎತ್ತು, ಕುರಿ/ಆಡು/ಮೇಕೆ) ಜಾನುವಾರು ಮಾಲೀಕರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಪಶು ಪಾಲನೆ […]

ಜಾನುವಾರುಗಳ ಆಕಸ್ಮಿಕ ಸಾವು- ಅನುಗ್ರಹ ಯೋಜನೆಯಡಿ ಅರ್ಜಿ ಆಹ್ವಾನ Read More »

ಕರಾವಳಿ

ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ಸಮಸ್ಯೆ ಶೀಘ್ರವೇ ಬಗೆಹರಿಸಿ- ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 14. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ಕಾರ್ಡ್‍ಗಳಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದರು. ಅವರು ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂಗವಿಕಲರ ಕುಂದು ಕೊರತೆಗಳ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಕಾರ್ಡ್‍ಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಗೆ ಕಾರಣಗಳನ್ನು ಹುಡುಕಿ ಆದಷ್ಟು ಬೇಗ ವಿಕಲಚೇತನರ ವಿಶಿಷ್ಟ ಗುರುತಿನ ಕಾರ್ಡ್

ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ಸಮಸ್ಯೆ ಶೀಘ್ರವೇ ಬಗೆಹರಿಸಿ- ಜಿಲ್ಲಾಧಿಕಾರಿ Read More »

ಕರಾವಳಿ

ಫೆ. 26 ಹಾಗೂ 27ರಂದು ಬೃಹತ್ ಉದ್ಯೋಗ ಮೇಳ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 14. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ ಫೆ. 26 ಹಾಗೂ 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಬೃಹತ್ ಉದ್ಯೋಗ ಮೇಳಕ್ಕೆ ರಾಜ್ಯದ ಎಲ್ಲಾ ವಲಯಗಳಿಂದ 500ಕ್ಕೂ ಹೆಚ್ಚಿನ ಪ್ರತಿಷ್ಠಿತ ಬೃಹತ್/ಮಧ್ಯಮ/ಸಣ್ಣ ಉದ್ಯೋಗದಾತರ ಸಂಸ್ಥೆಗಳು ಭಾಗವಹಿಸಲಿದೆ. ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೋಮಾ, ನರ್ಸಿಂಗ್, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಮತ್ತು ಇತರೆ ವಿದ್ಯಾರ್ಹತೆಯುಳ್ಳ

ಫೆ. 26 ಹಾಗೂ 27ರಂದು ಬೃಹತ್ ಉದ್ಯೋಗ ಮೇಳ Read More »

ಕರಾವಳಿ

ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ತರಬೇತಿ ಶಿಬಿರ- ಆಸಕ್ತರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 14. ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಜಿಲ್ಲೆಯ ಯುವಕ, ಯುವತಿಯರಿಗೆ 10 ದಿನಗಳ ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಆಸಕ್ತ ಯುವಕ, ಯುವತಿಯರಿಂದ ಫೆ.23ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ- ಶಿಬಿರದಲ್ಲಿ ಭಾಗವಹಿಸುವ ಯುವಕ, ಯುವತಿಯರು ದಕ್ಷಿಣ ಕನ್ನಡ ಜಿಲ್ಲೆಯವರಾಗಿರಬೇಕು, ಕನಿಷ್ಟ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು, 18 ರಿಂದ 35 ವರ್ಷ ವಯೋಮಾನದವರಾಗಿರಬೇಕು. ಜೀವ ರಕ್ಷಕ ಕವಚವಿಲ್ಲದೆ ಕನಿಷ್ಟ 100 ಮೀಟರ್ ಈಜಬೇಕು.

ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ತರಬೇತಿ ಶಿಬಿರ- ಆಸಕ್ತರಿಂದ ಅರ್ಜಿ ಆಹ್ವಾನ Read More »

ಕರಾವಳಿ

ಗೃಹರಕ್ಷಕರಿಗೆ ಹೃದಯ ಪುನಶ್ಚೇತನ ತರಬೇತಿ ಶಿಬಿರ; ಹೃದಯ ಪುನಶ್ಚೇತನ ಕೌಶಲ್ಯ ಅತ್ಯಗತ್ಯ- ಡಾ|| ಕಿಶನ್ ರಾವ್ ಬಾಳಿಲ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 14. ಗೃಹರಕ್ಷಕರಿಗೆ ಹೃದಯ ಪುನಶ್ಚೇತನ ಕೌಶಲ್ಯ ತರಬೇತಿ ಶಿಬಿರವು ದ.ಕ ಜಿಲ್ಲಾ ಗೃಹರಕ್ಷಕ ದಳ, ಲಯನ್ಸ್ ಕ್ಲಬ್ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಮೇರಿಹಿಲ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಶೀನ ಪೂಜಾರಿ, ಲಯನ್ಸ್ ಕ್ಲಬ್ ಮಂಗಳೂರು ಮತ್ತು  ಡಾ|| ಮಹಾಲಿಂಗ ಶರ್ಮ ಸಂಪತ್ತಿಲ, ಹಿರಿಯ ಬಾಯಿ, ಮುಖ

ಗೃಹರಕ್ಷಕರಿಗೆ ಹೃದಯ ಪುನಶ್ಚೇತನ ತರಬೇತಿ ಶಿಬಿರ; ಹೃದಯ ಪುನಶ್ಚೇತನ ಕೌಶಲ್ಯ ಅತ್ಯಗತ್ಯ- ಡಾ|| ಕಿಶನ್ ರಾವ್ ಬಾಳಿಲ Read More »

ಕರಾವಳಿ

ಬಂಟ್ವಾಳ: ಅಕ್ರಮ ಮರಳು ಸಾಗಾಟ – ಆರೋಪಿಗಳ ಸಹಿತ 2 ಟಿಪ್ಪರ್ ಮತ್ತು ಮರಳು ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 13. ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಎಂಟು ಮಂದಿಯನ್ನು ವಶಕ್ಕೆ ಪಡೆದಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಎರಡು ಟಿಪ್ಪರ್ ಲಾರಿ ಮತ್ತು ಮರಳನ್ನು ಜಪ್ತಿ ಮಾಡಿರುವ ಕುರಿತು ವರದಿಯಾಗಿದೆ. ವಾಹನ ತಪಾಸಣಾ ನಿರತ ಪೊಲೀಸರು ಸೋಮವಾರದಂದು ರಾತ್ರಿ ತಲಪಾಡಿ ಕಡೆಯಿಂದ ಬರುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ತಡೆದು ನಿಲ್ಲಿಸಿ ಚಾಲಕರನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ವಳಚ್ಚಿಲ್ ಎಂಬಲ್ಲಿಂದ ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ

ಬಂಟ್ವಾಳ: ಅಕ್ರಮ ಮರಳು ಸಾಗಾಟ – ಆರೋಪಿಗಳ ಸಹಿತ 2 ಟಿಪ್ಪರ್ ಮತ್ತು ಮರಳು ವಶಕ್ಕೆ Read More »

ಕರಾವಳಿ, ಕರ್ನಾಟಕ

ಕೊಯಿಲ, ಆತೂರು ಪರಿಸರದಲ್ಲಿ ಜಾನುವಾರು ಕಳ್ಳತನ

(ನ್ಯೂಸ್ ಕಡಬ) newskadaba.com ಕಡಬ, ಫೆ. 13. ತಾಲೂಕಿನ ರಾಮಕುಂಜ ಹಾಗೂ ಕೊಯಿಲ ಗ್ರಾಮದಲ್ಲಿ ರಾತ್ರಿ ವೇಳೆ ನಿರಂತರ ಜಾನುವಾರು ಕಳ್ಳತನ ಆಗುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಫೆ. 09ರಂದು ರಾತ್ರಿ ಬೆಳಗಾಗುವುದರೊಳಗೆ 8 ಜಾನುವಾರು ಕಳವಾಗಿರುವ ಕುರಿತು ವರದಿಯಾಗಿದೆ. ಕೊಯಿಲ ಗ್ರಾಮದ ದೇವಳ ಬಳಿ ನಿವಾಸಿಗಳಾದ ಇಬ್ಬು ಎಂಬವರಿಗೆ ಸೇರಿದ 2 ಹೋರಿ, ರಜಾಕ್ ಎಂಬವರ 1 ಹೋರಿ, ಅಬೂಬಕ್ಕರ್ ಎಂಬವರ 2 ಹೋರಿ, ಮೋನು ಎಂಬವರಿಗೆ ಸೇರಿದ 1 ಹಸು, ಆತೂರು

ಕೊಯಿಲ, ಆತೂರು ಪರಿಸರದಲ್ಲಿ ಜಾನುವಾರು ಕಳ್ಳತನ Read More »

ಕರಾವಳಿ

ಕಡಬ: ಹೊಯಿಗೆಕೆರೆಯಲ್ಲಿ ಮೊಸಳೆ ಪತ್ತೆ..!

(ನ್ಯೂಸ್ ಕಡಬ) newskadaba.com ಕಡಬ, ಫೆ. 13. ಇಲ್ಲಿನ ಸಮೀಪದ ಅಡ್ಡಗದ್ದೆ ಎಂಬಲ್ಲಿನ ಹೊಯಿಗೆಕೆರೆಯಲ್ಲಿ ಮೊಸಳೆ ಇರುವುದು ಕಂಡುಬಂದಿದೆ. ಫೆ. 12ರಂದು ಸ್ಥಳೀಯ ಯುವತಿಯೋರ್ವಳು ಕೆರೆಯ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೊಸಳೆ ಕಂಡುಬಂದಿದೆ ಎನ್ನಲಾಗಿದೆ. ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿರುವ ಸಮಯದಲ್ಲಿ ಮೊಸಳೆಗಳು ಕಾಣಸಿಗುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಡಬ: ಹೊಯಿಗೆಕೆರೆಯಲ್ಲಿ ಮೊಸಳೆ ಪತ್ತೆ..! Read More »

ಕರಾವಳಿ

ರೋಲರ್ ಸಾಗಾಟದ ಲಾರಿ ಓವರ್ ಬ್ರಿಡ್ಜ್ ಗೆ ಢಿಕ್ಕಿ – ಕೆಲಕಾಲ ಸಂಚಾರ ವ್ಯತ್ಯಯ

(ನ್ಯೂಸ್ ಕಡಬ) newskadaba.com, ಪುತ್ತೂರು, ಫೆ. 13. ರೋಡ್ ರೋಲರ್ ವಾಹನವನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯೊಂದು ರೈಲ್ವೇ ಓವರ್ ಬ್ರಿಡ್ಜ್ ನ ಅಡಿಯಲ್ಲಿ ಸಿಲುಕಿಕೊಂಡ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆಯಾದ ಘಟನೆ ಬಿಸಿರೋಡಿನ ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿ ನಡೆದಿದೆ. ಖಾಸಗಿ ಗುತ್ತಿಗೆ ಸಂಸ್ಥೆಗೆ ಸೇರಿದ ಲಾರಿ ಇದಾಗಿದ್ದು, ಬೆಂಜನಪದವು ಸೈಟ್ ನಿಂದ ಸವಣೂರಿನಲ್ಲಿ ನಡೆಯಲಿರುವ ಕಾಮಗಾರಿಗೆ ರೋಲರ್ ನ್ನು ಲಾರಿಯಲ್ಲಿ ತುಂಬಿಸಿಕೊಂಡು ಹೋಗಲಾಗಿತ್ತು. ಈ ವೇಳೆ ಮೊಡಂಕಾಪು ಎಂಬಲ್ಲಿ ರೈಲ್ವೇ ಸೇತುವೆಯ ಅಡಿಭಾಗದಲ್ಲಿ ಕ್ರಾಸ್ ಮಾಡಲು

ರೋಲರ್ ಸಾಗಾಟದ ಲಾರಿ ಓವರ್ ಬ್ರಿಡ್ಜ್ ಗೆ ಢಿಕ್ಕಿ – ಕೆಲಕಾಲ ಸಂಚಾರ ವ್ಯತ್ಯಯ Read More »

ಕರಾವಳಿ

ಮೀನುಗಾರಿಕೆಯ ವೇಳೆ ಬೋಟಿನಲ್ಲಿ ಕುಸಿದು ಬಿದ್ದು ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಮಲ್ಪೆ, ಫೆ. 13. ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಬೋಟಿನಲ್ಲಿದ್ದ ಮೀನುಗಾರರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಲ್ಪೆ ಸಮೀಪ ನಡೆದಿದೆ. ಮೃತರನ್ನು ಬೋಟಿನ ಕಲಾಸಿ ಮ್ಯಾಥೀವ್(52) ಎಂದು ಗುರುತಿಲಾಗಿದೆ. ಇವರು ಯಮುನಾ ಮಾಲಕತ್ವದ ಶ್ರೀಮಹಾಲಕ್ಷ್ಮೀ ಬೋಟಿನಲ್ಲಿ ಇತರ ಮೀನುಗಾರರೊಂದಿಗೆ ಫೆ. 10ರಂದು ಮೀನುಗಾರಿಕೆಗಾಗಿ ತೆರಳಿದ್ದು, 27 ನಾಟಿಕಲ್ ದೂರದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಮ್ಯಾಥೀವ್ ಅವರು ಬೋಟಿನಲ್ಲಿಯೇ ಕುಸಿದು ಬಿದ್ದರು ಎನ್ನಲಾಗಿದೆ. ತೀವ್ರ ಅಸ್ವಸ್ಥಗೊಂಡಿದ್ದ ಅವರು ಮಲ್ಪೆ ಬಂದರಿಗೆ ಬಂದು ಉಡುಪಿ

ಮೀನುಗಾರಿಕೆಯ ವೇಳೆ ಬೋಟಿನಲ್ಲಿ ಕುಸಿದು ಬಿದ್ದು ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top