ಕರಾವಳಿ

ಅಗ್ನಿವೀರ ನೇಮಕಾತಿ- ಆನ್ಲೈನ್ ನೋಂದಣಿ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 20. ಮಂಗಳೂರು ಸೇನಾ ನೇಮಕಾತಿ ಕೇಂದ್ರದ ವತಿಯಿಂದ ಅಗ್ನಿವೀರ ನೇಮಕಾತಿಗೆ ಆನ್‍ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ಎಪ್ರಿಲ್ 22 ರಿಂದ ಪ್ರಾರಂಭವಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಧಾರವಾಡ,  ದಾವಣಗೆರೆ, ಗದಗ, ಹಾವೇರಿ ಜಿಲ್ಲೆಯ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸೇನೆಯಲ್ಲಿ ಜನರಲ್ ಡ್ಯೂಟಿ, ಟೆಕ್ನಿಷಿಯನ್, ಟ್ರೇಡ್ಸ್ ಮೆನ್, ಕಚೇರಿ ಸಹಾಯಕ, ಸ್ಟೋರ್ ಕೀಪರ್ ಮತ್ತಿತರ ಹುದ್ದೆಗಳಿಗೆ ಆನ್‍ಲೈನ್ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳ […]

ಅಗ್ನಿವೀರ ನೇಮಕಾತಿ- ಆನ್ಲೈನ್ ನೋಂದಣಿ ಆರಂಭ Read More »

ಉದ್ಯೋಗ, ಕರಾವಳಿ

ಅಂಬೇಡ್ಕರ್ ಪುತ್ಥಳಿ ಸ್ತಬ್ದ ಚಿತ್ರದ ಸಂವಿಧಾನ ಜಾಗೃತಿ ಜಾಥಾ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 20. ಸುಳ್ಯ ತಾಲೂಕು ಸಮಾಜ ಕಲ್ಯಾಣ ಇಲಾಖೆ, ಬೆಳ್ಳಾರೆ ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾವು ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮಕ್ಕೆ ಸೋಮವಾರ ಬೆಳಿಗ್ಗೆ 9 ಗಂಟೆಗೆ ಆಗಮಿಸಿತು. ದಲಿತ ಸಂಘರ್ಷ ಸಮಿತಿ ಸದಸ್ಯರು, ವಿವಿಧ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಕಾಲ್ನಡಿಗೆ ಜಾಥಾ ಚಂಡೆಯೊಂದಿಗೆ ಸಂವಿಧಾನ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿವರ್ಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರು

ಅಂಬೇಡ್ಕರ್ ಪುತ್ಥಳಿ ಸ್ತಬ್ದ ಚಿತ್ರದ ಸಂವಿಧಾನ ಜಾಗೃತಿ ಜಾಥಾ Read More »

ಕರಾವಳಿ

ಕಡಬ: ಬೈಕ್ ಹಾಗೂ ಬಸ್ ನಡುವೆ ಅಪಘಾತ- ಸವಾರ ಮೃತ್ಯು..!

(ನ್ಯೂಸ್ ಕಡಬ) newskadaba.com ಕಡಬ, ಫೆ. 19. ಬೈಕ್ ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ಸೋಮವಾರದಂದು ನಡೆದಿದೆ. ಮೃತ ಬೈಕ್ ಸವಾರನನ್ನು ಕೊಂಬಾರು ಮಣಿಭಾಂಡ ತೇರೆಬೀದಿ ನಿವಾಸಿ ನೆಟ್ಟಣದಲ್ಲಿ ಮೆಕ್ಯಾನಿಕ್ ಆಗಿದ್ದ ವಾಸುದೇವ ಗೌಡ ಎಂದು ಗುರುತಿಸಲಾಗಿದೆ. ಕೆಎಸ್ಸಾರ್ಟಿಸಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಎದುರುನಿಂದ ಬಂದ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ವಾಸುದೇವರನ್ನು

ಕಡಬ: ಬೈಕ್ ಹಾಗೂ ಬಸ್ ನಡುವೆ ಅಪಘಾತ- ಸವಾರ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಅಲೆಯ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ..!

(ನ್ಯೂಸ್‌ ಕಡಬ) newskadaba.com ಉಡುಪಿ, ಫೆ. 19. ಸಮುದ್ರ ತೀರದಲ್ಲಿ ನೀರಿಗೆ ಇಳಿದು ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಮೀನುಗಾರಿಕಾ ದೋಣಿಯ ಸಿಬಂದಿ ರಕ್ಷಿಸಿದ ಘಟನೆ ಉಡುಪಿಯ ಮಲ್ಪೆ ಸಮೀಪದ ಕೋಡಿ ಬೆಂಗ್ರೆ ಡೆಲ್ಟಾ ಬೀಚ್‌ನಲ್ಲಿ ನಡೆದಿದೆ. ಮೂಲತಃ ಬೆಂಗಳೂರಿನವರೆನ್ನಲಾದ ಇಬ್ಬರು ಯುವಕರು ಹಾಗೂ ಮೂವರು ಯುವತಿಯರು ಸೇರಿದಂತೆ ಒಟ್ಟು 5 ಮಂದಿ ನೀರಿಗೆ ಇಳಿದಿದ್ದು, ಯುವಕರಿಬ್ಬರು ನೀರಿನಲ್ಲಿ ಈಜಲು ಮುಂದಾಗಿದ್ದರು. ಹೀಗೆ ಈಜುತ್ತಾ ಮುಂದೆ ಹೋದ ಅವರು ಸಮುದ್ರದ ಅಲೆಗೆ

ಅಲೆಯ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ..! Read More »

ಕರಾವಳಿ, ಕರ್ನಾಟಕ

ನಿರುದ್ಯೋಗ- ಯುವಕನಿಂದ ಆತ್ಮಹತ್ಯೆಗೆ ಯತ್ನ – ಸ್ಥಳೀಯರಿಂದ ರಕ್ಷಣೆ

(ನ್ಯೂಸ್‌ ಕಡಬ) newskadaba.com ಬಂಟ್ವಾಳ, ಫೆ. 19. ನಿರುದ್ಯೋಗಿ ಯುವಕನೋರ್ವ ಮನನೊಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದುದನ್ನು ಗಮನಿಸಿದ ಸ್ಥಳೀಯ ಯುವಕರ ತಂಡ ಆತನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ಪಾಣೆಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಪುತ್ತೂರಿನ ನಿಶ್ಚಿತ್ (25) ಎಂದು ಗುರುತಿಸಲಾಗಿದೆ. ಈತ ಎಂ ಎಸ್ ಡಬ್ಲ್ಯು ಪದವೀಧರನಾಗಿದ್ದು, ಸೂಕ್ತ ಉದ್ಯೋಗ ದೊರೆಯದ ಹಿನ್ನಲೆ ಮಾನಸಿಕ ಖಿನ್ನತೆಗೊಳಗಾಗಿ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಈತ

ನಿರುದ್ಯೋಗ- ಯುವಕನಿಂದ ಆತ್ಮಹತ್ಯೆಗೆ ಯತ್ನ – ಸ್ಥಳೀಯರಿಂದ ರಕ್ಷಣೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಟಿಪ್ಪು ಸುಲ್ತಾನ್ ಕಟೌಟ್ ತೆರವಿಗೆ ಪೊಲೀಸ್ ಇಲಾಖೆ ನೋಟಿಸ್

(ನ್ಯೂಸ್‌ ಕಡಬ) newskadaba.com ಮಂಗಳೂರು, ಫೆ. 19. ಇಲ್ಲಿನ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ನಡೆಯಲಿರುವ ಡಿವೈಎಫ್‌ಐ ರಾಜ್ಯ ಸಮ್ಮೇಳನದ ಪ್ರಯುಕ್ತ ಹರೇಕಳ ದಲ್ಲಿ ಅಳವಡಿಸಲಾದ ಟಿಪ್ಪು ಸುಲ್ತಾನ್ ಕಟೌಟ್ ನ್ನು ತೆರವುಗೊಳಿಸಬೇಕು ಎಂದು ಕೊಣಾಜೆ ಪೊಲೀಸ್ ಇನ್‌ಸ್ಟೆಕ್ಟರ್ ನೋಟಿಸ್ ನೀಡಿದ್ದಾರೆ. ಕಾರ್ಡ್‌ ಬೋರ್ಡ್‌ನಿಂದ ನಿರ್ಮಿಸಲಾದ 6 ಅಡಿ ಉದ್ದದ ಟಿಪ್ಪು ಸುಲ್ತಾನ್ ಕಟೌಟನ್ನು ಅನುಮತಿಯಿಲ್ಲದೇ ಅಳವಡಿಸಲಾಗಿದ್ದು, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ಕಟೌಟ್ ತೆರವುಗೊಳಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಮಂಗಳೂರು: ಟಿಪ್ಪು ಸುಲ್ತಾನ್ ಕಟೌಟ್ ತೆರವಿಗೆ ಪೊಲೀಸ್ ಇಲಾಖೆ ನೋಟಿಸ್ Read More »

ಕರಾವಳಿ, ಕರ್ನಾಟಕ

ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ವರ್ಗಾವಣೆ

(ನ್ಯೂಸ್‌ ಕಡಬ) newskadaba.com ಮಂಗಳೂರು, ಫೆ. 19. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸಂಬಂಧಿಸಿದಂತೆ 2024ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಜಿಲ್ಲಾ ವಾರ್ತಾಧಿಕಾರಿಗಳನ್ನು ವರ್ಗಾಯಿಸಿ ಇಲಾಖೆಯ ಆಯುಕ್ತ ಹೇಮಂತ ಹೇಮಂತ್ ನಿಂಬಾಳ್ಕರ್ ಆದೇಶ ಹೊರಡಿಸಿದ್ದಾರೆ. ದ.ಕ. ಜಿಲ್ಲಾ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಅವರನ್ನು ಹಾಸನಕ್ಕೂ, ಹಾಸನದ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮೀನಾಕ್ಷಮ್ಮ ಅವರನ್ನು ದ.ಕ. ಜಿಲ್ಲೆಗೂ ವರ್ಗಾಯಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಈ ವರ್ಗಾವಣೆಯಾದ ಕಚೇರಿಯಲ್ಲಿ ಕರ್ತವ್ಯ

ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ವರ್ಗಾವಣೆ Read More »

ಕರಾವಳಿ

ಏರ್ಪೋರ್ಟ್ ವಾಶ್ ರೂಂನಲ್ಲಿ ಬಚ್ಚಿಟ್ಟಿದ್ದ 45.44 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ

(ನ್ಯೂಸ್‌ ಕಡಬ) newskadaba.com ಮಂಗಳೂರು, ಫೆ. 19. ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ 45,44,600 ರೂಪಾಯಿ ಮೌಲ್ಯದ 733 ಗ್ರಾಂ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಕುರಿತು ವರದಿಯಾಗಿದೆ. ಇಮಿಗ್ರೇಷನ್ ಆಗಮನದ ಪ್ರದೇಶದಲ್ಲಿನ ವಾಶ್‌ರೂಮ್‌ನ ಡ್ರೈನೇಜ್ ಚೇಂಬರ್‌ನಲ್ಲಿ ಕಪ್ಪು ಬಣ್ಣದ ಚೀಲದೊಳಗೆ ಬಚ್ಚಿಟ್ಟಿದ್ದ ಪೇಸ್ಟ್ ರೂಪದಲ್ಲಿರುವ ಚಿನ್ನ ಕಂಡುಬಂದಿದ್ದು, ವಿಮಾನ ನಿಲ್ದಾಣ ಅಧಿಕಾರಿಗಳ ಗಮನಕ್ಕೆ ಬಂದಿದೆ. ಟಾಯ್ಲೆಟ್ ನಲ್ಲಿ ಚಿನ್ನವಿಟ್ಟ ವ್ಯಕ್ತಿ ಇನ್ನು ಪತ್ತೆಯಾಗಿಲ್ಲ ಎಂದು ತಿಳಿದಿದ್ದು,  ಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಣೆ ಮಾಡಿದ

ಏರ್ಪೋರ್ಟ್ ವಾಶ್ ರೂಂನಲ್ಲಿ ಬಚ್ಚಿಟ್ಟಿದ್ದ 45.44 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

40 ಅಡಿ ಎತ್ತರದ ಮರವೇರಿ ಕಾರ್ಮಿಕ ಆತ್ಮಹತ್ಯೆ..!

(ನ್ಯೂಸ್‌ ಕಡಬ) newskadaba.com ವಿಟ್ಲ, ಫೆ. 19. 40 ಅಡಿ ಎತ್ತರದ ಮರವೇರಿ ಕಾರ್ಮಿಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಡೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕನನ್ನು ಜಾರಪ್ಪನಾಯ್ಕ (60) ಎಂದು ಗುರುತಿಸಲಾಗಿದೆ. ಜಾರಪ್ಪನಾಯ್ಕ ಅವರು ಎಂದಿನಂತೆ ಮನೆಯಿಂದ ರಘುರಾಮ ತಂತ್ರಿ ಎಂಬವರ ತೋಟದ ಕೆಲಸಕ್ಕೆ ಹೋಗುವುದಾಗಿ ಹೇಳಿ ತೆರಳಿದ್ದರು. ಆದರೆ ಅಲ್ಲಿಗೆ ತಲುಪದೇ ಇದ್ದ ಕಾರಣ, ಜಾರಪ್ಪನಾಯ್ಕರ ಮನೆಯಲ್ಲಿ ವಿಚಾರಿಸಿದಾಗ ಬೆಳಿಗ್ಗೆಯೇ ಹೋಗಿದ್ದಾರೆ ಎಂದು ತಿಳಿಸಿದ್ದರು. ಇದರಿಂದ

40 ಅಡಿ ಎತ್ತರದ ಮರವೇರಿ ಕಾರ್ಮಿಕ ಆತ್ಮಹತ್ಯೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಬಸ್ ಹಾಗೂ ಕಾರು ನಡುವೆ ಢಿಕ್ಕಿ- ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 19. ಖಾಸಗಿ ಬಸ್‌ ಹಾಗೂ ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ, ಬಸ್ಸಿನ ನಿರ್ವಾಹಕ ಹಾಗೂ ಪ್ರಯಾಣಿಕರೋರ್ವರು ಗಾಯಗೊಂಡ ಘಟನೆ ಕರಿಯಂಗಳ ಗ್ರಾಮದ ಮಂಗಾಜೆ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಕಾರು ಚಾಲಕ ಹೊನ್ನಯ್ಯ ಪೂಜಾರಿ, ಬಸ್ಸಿನ ನಿರ್ವಾಹಕ ಶ್ರೀಕಾಂತ್‌ ಹಾಗೂ ಪ್ರಯಾಣಿಕೆ ಹೈಡ ಕುಟಿನ್ಹಾ ಎಂದು ಗುರುತಿಸಲಾಗಿದೆ. ಬಿ.ಸಿ.ರೋಡು ಕಡೆಗೆ ತೆರಳುತ್ತಿದ್ದ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಘಟನೆಯಲ್ಲಿ ಕಾರು

ಬಸ್ ಹಾಗೂ ಕಾರು ನಡುವೆ ಢಿಕ್ಕಿ- ಮೂವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top