ಅಲೆಯ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ..!

(ನ್ಯೂಸ್‌ ಕಡಬ) newskadaba.com ಉಡುಪಿ, ಫೆ. 19. ಸಮುದ್ರ ತೀರದಲ್ಲಿ ನೀರಿಗೆ ಇಳಿದು ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಮೀನುಗಾರಿಕಾ ದೋಣಿಯ ಸಿಬಂದಿ ರಕ್ಷಿಸಿದ ಘಟನೆ ಉಡುಪಿಯ ಮಲ್ಪೆ ಸಮೀಪದ ಕೋಡಿ ಬೆಂಗ್ರೆ ಡೆಲ್ಟಾ ಬೀಚ್‌ನಲ್ಲಿ ನಡೆದಿದೆ.

ಮೂಲತಃ ಬೆಂಗಳೂರಿನವರೆನ್ನಲಾದ ಇಬ್ಬರು ಯುವಕರು ಹಾಗೂ ಮೂವರು ಯುವತಿಯರು ಸೇರಿದಂತೆ ಒಟ್ಟು 5 ಮಂದಿ ನೀರಿಗೆ ಇಳಿದಿದ್ದು, ಯುವಕರಿಬ್ಬರು ನೀರಿನಲ್ಲಿ ಈಜಲು ಮುಂದಾಗಿದ್ದರು. ಹೀಗೆ ಈಜುತ್ತಾ ಮುಂದೆ ಹೋದ ಅವರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅವರ ಬೊಬ್ಬೆ ಕೇಳಿದ ಸ್ಥಳೀಯ ಸೀಬರ್ಡ್‌ ಮತ್ತು ಡೆಲ್ಟಾ ಬೋಟ್‌ ಹಾಗೂ ವಾಟರ್‌ ಸ್ಪೋರ್ಟ್ಸ್ ಬೋಟುಗಳ ಸಿಬಂದಿ ವಿವೇಕ್‌ ಪುತ್ರನ್‌, ರಮೇಶ್‌ ಬಂಗೇರ ಹಾಗೂ ಕೃಷ್ಣ ಅವರು ತಕ್ಷಣ ಧಾವಿಸಿ ಬೋಟಿನ ಸಹಾಯದಿಂದ ಮುಳುಗುತ್ತಿದ್ದ ಇಬ್ಬರನ್ನೂ ರಕ್ಷಿಸಿದ್ದಾರೆ.

Scroll to Top