ಕರಾವಳಿ

ಜಿಲ್ಲಾಧಿಕಾರಿ ಕಚೇರಿಯಲ್ಲಿ ದಲಿತ ಮುಖಂಡರ ಸಭೆ

(ನ್ಯೂಸ್ ಕಡಬ) newskadaba.com ಡಿ. 13. ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರ ಸಭೆಯು ಗುರುವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಹಳ ವರ್ಷಗಳಿಂದ ಚರ್ಚೆಯಲ್ಲಿಯೇ ನಗರದ ಅಂಬೇಡ್ಕರ್ ವೃತ್ತದ ಬಗ್ಗೆ ಮಾತನಾಡಿದ ಅವರು, ವೃತ್ತದ ಬಗ್ಗೆ ಚರ್ಚೆಯಲ್ಲಿಯೇ ಇರುವುದು ಶೋಭೆ ತರುವುದಿಲ್ಲ. ಆದಷ್ಟು ಬೇಗ ವೃತ್ತ ನಿರ್ಮಾಣ ಕಾರ್ಯರೂಪಕ್ಕೆ ತರಬೇಕು. ವೃತ್ತ ನಿರ್ಮಾಣಕ್ಕೆ ಬಳಸಲಾಗುವ ಅನುದಾನದ ಬಗ್ಗೆ ಮಹಾನಗರ […]

ಜಿಲ್ಲಾಧಿಕಾರಿ ಕಚೇರಿಯಲ್ಲಿ ದಲಿತ ಮುಖಂಡರ ಸಭೆ Read More »

ಕರಾವಳಿ

ಡಿ.18ರಂದು ನಗರಪಾಲಿಕೆ ಬಜೆಟ್ ಸಮಾಲೋಚನಾ ಸಭೆ

(ನ್ಯೂಸ್ ಕಡಬ) newskadaba.com ಡಿ. 13. ಮಂಗಳೂರು ಮಹಾನಗರ ಪಾಲಿಕೆಯ 2025-26 ನೇ ಸಾಲಿನ ಆಯವ್ಯಯ ತಯಾರಿಕೆ ಪ್ರಕ್ರಿಯೆ ಸಂಬಂಧಿಸಿದಂತೆ ಕರ್ನಾಟಕ ಪೌರಸಭೆಗಳ ಲೆಕ್ಕ ಪದ್ಧತಿ ಮತ್ತು ಬಜೆಟ್ ನಿಯಮಾವಳಿಗಳ ನಿಯಮದಂತೆ ಎರಡು ಸುತ್ತಿನ ಸಾರ್ವಜನಿಕ ಸಮಾಲೋಚನೆ ಸಭೆ ನಡೆಯಬೇಕಿದೆ. ಮೊದಲನೇ ಸುತ್ತಿನ ಸಭೆ ಡಿಸೆಂಬರ್ 18ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ಮಹಾನಗರಪಾಲಿಕೆಯ ಸುರತ್ಕಲ್ ವಲಯ ಕಚೇರಿಯಲ್ಲಿ ಮೇಯರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಯವ್ಯಯ ತಯಾರಿಕೆಗೆ ಸಾರ್ವಜನಿಕ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲು ಸಭೆಗೆ ನೋಂದಾಯಿತ ವಸತಿ

ಡಿ.18ರಂದು ನಗರಪಾಲಿಕೆ ಬಜೆಟ್ ಸಮಾಲೋಚನಾ ಸಭೆ Read More »

ಕರಾವಳಿ
Crime

ಶಾಲಾ ಮುಖ್ಯ ಶಿಕ್ಷಕರಿಗೆ ಜೀವ ಬೆದರಿಕೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ಡಿ. 12. ಹಳೆವಿದ್ಯಾರ್ಥಿಯೋರ್ವ ಶಾಲಾ ವಠಾರಕ್ಕೆ ಬಂದು ಶಾಲಾ ಮುಖ್ಯ ಶಿಕ್ಷಕರಿಗೆ ಬೆದರಿಕೆ ಒಡ್ಡಿದ ಘಟನೆ ಮಂಗಳವಾರ ಎಲಿಮಲೆಯಲ್ಲಿ ನಡೆದಿದೆ. ಎಲಿಮಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದ್ದು ಹಗಲು ರಾತ್ರಿ ನಿರಂತರ ಕೆಲಸ ಕಾರ್ಯಗಳು ನಡೆಯುತ್ತಿದ್ದು, ನಿನ್ನೆಯೂ ಹಿಟಾಚಿ ಯಂತ್ರದ ಮೂಲಕ ಕೆಲಸಗಳು ನಡೆಯುತ್ತಿತ್ತು. ಈ ಕಾಮಗಾರಿಯನ್ನು ವೀಕ್ಷಿಸಲು ಮುಖ್ಯಶಿಕ್ಷಕರು, ಹಳೆ ವಿದ್ಯಾರ್ಥಿಗಳು ಮತ್ತು ಶತಮಾನೋತ್ಸವ ಸಮಿತಿಯವರು ಬಂದಿದ್ದು, ಇದೇ ಸಂದರ್ಭ ಹಳೆ ವಿದ್ಯಾರ್ಥಿಗಳು ಶತಮಾನೋತ್ಸವದ ಲಕ್ಕಿಡಿಪ್ ವಿಚಾರವಾಗಿ ಚರ್ಚಿಸುತ್ತಿದ್ದರೆನ್ನಲಾಗಿದೆ.

ಶಾಲಾ ಮುಖ್ಯ ಶಿಕ್ಷಕರಿಗೆ ಜೀವ ಬೆದರಿಕೆ- ದೂರು ದಾಖಲು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಜ.21ರಿಂದ ಮಂಗಳೂರು-ಸಿಂಗಾಪುರ ವಿಮಾನ ಹಾರಾಟ ಆರಂಭ

(ನ್ಯೂಸ್ ಕಡಬ) newskadaba.com ಡಿ. 12. ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 2025ರ ಜ. 21ರಿಂದ ಸಿಂಗಾಪುರಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ನ ನೇರ ವಿಮಾನ ಹಾರಾಟ ಆರಂಭವಾಗಲಿದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ವಿಮಾನದ ಸೇವೆ ಹಾರಾಟ ಇರುತ್ತದೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು 2024ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮಂಗಳೂರು ಮತ್ತು ಸಿಂಗಾಪುರ ನೇರ ವಿಮಾನ ಸಂಪರ್ಕ ಸೌಲಭ್ಯಕ್ಕಾಗಿ

ಜ.21ರಿಂದ ಮಂಗಳೂರು-ಸಿಂಗಾಪುರ ವಿಮಾನ ಹಾರಾಟ ಆರಂಭ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಡುಪಿಯಲ್ಲಿ ಬೈಕ್ ಅಪಘಾತದಲ್ಲಿ ಕಾರು ರೇಸಿಂಗ್ ಚಾಂಪಿಯನ್ ಸಾವು

(ನ್ಯೂಸ್ ಕಡಬ) newskadaba.com  ಡಿ. 12 ಉಡುಪಿ: ಕುಂದಾಪುರ ಬಳಿ ಸೋಮವಾರ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ 59 ವರ್ಷದ ರಾಷ್ಟ್ರೀಯ ಕಾರು ರೇಸಿಂಗ್ ಚಾಂಪಿಯನ್ ಒಬ್ಬರು ಸಾವನ್ನಪ್ಪಿದ್ದಾರೆ. ಮಂಗಳೂರು ಮೂಲದ ರಂಜಿತ್ ಬಲ್ಲಾಳ್ ಮೃತಪಟ್ಟವರು. ತನ್ನ ಕುಟುಂಬಸ್ಥರೊಂದಿಗೆ ಮೂರು ದಿನಗಳ ಹಿಂದೆ ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದ ರಂಜಿತ್ ಬೈಕ್ ಗೆ ಗ್ಯಾಸ್ ಸಿಲಿಂಡರ್ ಸಾಗಾಟದ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ

ಉಡುಪಿಯಲ್ಲಿ ಬೈಕ್ ಅಪಘಾತದಲ್ಲಿ ಕಾರು ರೇಸಿಂಗ್ ಚಾಂಪಿಯನ್ ಸಾವು Read More »

ಕರಾವಳಿ

4 ವಿದ್ಯಾರ್ಥಿನಿಯರು ಮೃತಪಟ್ಟ ಪ್ರಕರಣ- 7 ಮಂದಿ ಶಿಕ್ಷಕರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಡಿ. 12. ಮುರುಡೇಶ್ವರ ಸಮುದ್ರ ತೀರದಲ್ಲಿ ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕಿ ಸೇರಿ ಒಟ್ಟು 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿರುವ ಕುರಿತು ವರದಿಯಾಗಿದೆ. ಕೋಲಾರದಿಂದ ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದವರ ಪೈಕಿ ನಾಲ್ಕು ಜನ ವಿದ್ಯಾರ್ಥಿನಿಯರು ನೀರು ಪಾಲಾದ ಬಳಿಕ ಉತ್ತರ ಕನ್ನಡ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಒಂದೆಡೆ ಮುರುಡೇಶ್ವರ ಬೀಚ್ ನಲ್ಲಿ ನಿರ್ಬಂಧ ಹೇರಲಾಗಿದ್ದು, ಇನ್ನೊಂದೆಡೆ ಮುಖ್ಯ ಶಿಕ್ಷಕಿ ಸಹಿತ ಒಟ್ಟು 7 ಶಿಕ್ಷಕರನ್ನು ಪೊಲೀಸರು

4 ವಿದ್ಯಾರ್ಥಿನಿಯರು ಮೃತಪಟ್ಟ ಪ್ರಕರಣ- 7 ಮಂದಿ ಶಿಕ್ಷಕರು ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕೇರಳದ ನರ್ಸ್‌ ಗಳಿಂದ ಗಲ್ಫ್ ಬ್ಯಾಂಕ್‌ಗೆ 700 ಕೋಟಿ ರೂ. ವಂಚನೆ – ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಡಿ. 12.  ಕೇರಳದ ನೂರಾರು ನರ್ಸ್‌ ಗಳು ಕುವೈತ್ ನ ಗಲ್ಫ್ ಬ್ಯಾಂಕ್‌ ಗೆ 700 ಕೋಟಿ ರೂ. ವಂಚನೆ ಮಾಡಿರುವ ಕುರಿತು ಬ್ಯಾಂಕ್ ನೀಡಿದ ದೂರಿನಂತೆ ಕೇರಳದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸಂಸ್ಥೆಯಿಂದ ಸಾಲವನ್ನು ಪಡೆದು ಮರುಪಾವತಿಯನ್ನು ಡೀಫಾಲ್ಟ್ ಮಾಡುವ ಮೂಲಕ ವಂಚಿಸಿದ್ದಾರೆ ಎಂದು ಕುವೈತ್ ಗಲ್ಫ್ ಬ್ಯಾಂಕ್ ಆರೋಪಿಸಿದೆ. ಬ್ಯಾಂಕ್ ಪ್ರಕಾರ, ಆರೋಪಿಗಳು ಆರಂಭದಲ್ಲಿ ಸಣ್ಣ ಸಾಲಗಳನ್ನು ತೆಗೆದುಕೊಂಡು, ನಂತರ ದೊಡ್ಡ ಮೊತ್ತವನ್ನು ಪಡೆದರು, ರಜೆಯ ಮೇಲೆ ಕುವೈತ್‌ನಿಂದ ಹೊರಡುವ ಮೊದಲು

ಕೇರಳದ ನರ್ಸ್‌ ಗಳಿಂದ ಗಲ್ಫ್ ಬ್ಯಾಂಕ್‌ಗೆ 700 ಕೋಟಿ ರೂ. ವಂಚನೆ – ಪ್ರಕರಣ ದಾಖಲು Read More »

ಕರಾವಳಿ

ಕಡಬ: ಪಿಜಕ್ಕಳ ಪಾಲೋಳಿ ಸೇತುವೆಯ ಸ್ಟ್ರೀಟ್ ಲೈಟು ಕಳ್ಳತನ

(ನ್ಯೂಸ್ ಕಡಬ) newskadaba.com  ಡಿ. 12 ಕಡಬ: ಕಡಬ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣವಾದ ಪಿಜಕ್ಕಳ‌ ಪಾಲೋಳಿ ಸೇತುವೆಯ ಸ್ಟ್ರೀಟ್ ಲೈಟುಗಳನ್ನೇ ಕಳ್ಳರು ಕದ್ದಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಇಂದು ಲೈಟ್ ಆನ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಸಂಬಂಧಪಟ್ಟವರು ಪರಿಶೀಲಿಸಿ ಸೂಕ್ತ  ಕ್ರಮ ಕೈಗೊಳ್ಳಬೇಕಿದೆ.

ಕಡಬ: ಪಿಜಕ್ಕಳ ಪಾಲೋಳಿ ಸೇತುವೆಯ ಸ್ಟ್ರೀಟ್ ಲೈಟು ಕಳ್ಳತನ Read More »

ಕರಾವಳಿ

ಮಂಗಳೂರು ನಗರ ಭಾಗದ ರೈಲ್ವೇ ಲೈನ್ ಗಳನ್ನು ದಕ್ಷಿಣ ರೈಲ್ವೆಯ ಬದಲಿಗೆ ನೈರುತ್ಯ ರೈಲ್ವೇ ಅಡಿಯಲ್ಲಿ ಕಾರ್ಯನಿರ್ವಹಿಸಲು ಸದನದಲ್ಲಿ ಚೌಟ ಪ್ರಸ್ತಾಪ

(ನ್ಯೂಸ್ ಕಡಬ) newskadaba.com ಡಿ. 12. ಮಂಗಳೂರು ನಗರ ಭಾಗದಲ್ಲಿ ಕಾರ್ಯನಿರ್ವಹಿಸುವ ರೈಲ್ವೇ ಲೈನ್ ಗಳು ಪ್ರಸ್ತುತ ದಕ್ಷಿಣ ರೈಲ್ವೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದರ ಬದಲಿಗೆ ಈ ರೈಲ್ವೆ ಲೈನ್ ಗಳನ್ನು ನೈರುತ್ಯ ರೈಲ್ವೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಸ್ತಾವನೆಯನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಮುಂದಿಟ್ಟಿದ್ದಾರೆ. ಆ ಮೂಲಕ, ಸಂಸದರು ಕರಾವಳಿಯ ರೈಲ್ವೆಯಲ್ಲಿ ಆಡಳಿತಾತ್ಮಕ ಸುಧಾರಣೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಸಂಸತ್ನ ಚಳಿಗಾಲದ

ಮಂಗಳೂರು ನಗರ ಭಾಗದ ರೈಲ್ವೇ ಲೈನ್ ಗಳನ್ನು ದಕ್ಷಿಣ ರೈಲ್ವೆಯ ಬದಲಿಗೆ ನೈರುತ್ಯ ರೈಲ್ವೇ ಅಡಿಯಲ್ಲಿ ಕಾರ್ಯನಿರ್ವಹಿಸಲು ಸದನದಲ್ಲಿ ಚೌಟ ಪ್ರಸ್ತಾಪ Read More »

ಕರಾವಳಿ, ಕರ್ನಾಟಕ

‘ಫಿದಾಕ್-6.0’ ಸಮಾಪ್ತಿ- ಪ್ರಶಸ್ತಿ ಪ್ರದಾನ; ಮುಈನೀ ಶಿಷ್ಯಂದಿರಿಂದ ಮಾಣಿ ಉಸ್ತಾದರಿಗೆ ಕಾರು ಉಡುಗೊರೆ

(ನ್ಯೂಸ್ ಕಡಬ) newskadaba.com ಡಿ. 11. ದಾರುಲ್ ಇರ್ಶಾದ್ ಅಧೀನದ ಮಿತ್ತೂರು ಕೆಜಿಎನ್ ಪಿಯು ಹಾಗೂ ಪದವಿಗಳನ್ನೊಳಗೊಂಡ ದ‌ಅ್-ವಾ ಕಾಲೇಜು ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನಃ ಹಮ್ಮಿಕೊಂಡಿದ್ದ ಮೂರು ದಿನಗಳ ವಿದ್ಯಾರ್ಥಿ ಸ್ಪರ್ಧಾಹಬ್ಬ ‘ಫಿದಾಕ್ 6.0’ ಸಮಾಪ್ತಿಗೊಂಡಿತು. “ಮಲೈ ಬಾರ್ ಇತಿಹಾಸ- ಭಾಷೆ -ಸಂಸ್ಕೃತಿ” ಎಂಬ ಧ್ಯೇಯ ವಾಕ್ಯದೊಂದಿಗೆ ಡಿ. 07ರಂದು ಆರಂಭಗೊಂಡು ಡಿ. 09ರ ಸಾಯಂಕಾಲ ತನಕ ಮೂರು ದಿನಗಳಲ್ಲಿ, ಎರಡು ವೇದಿಕೆಗಳಲ್ಲಿ ನಾಲ್ಕು ತಂಡಗಳ ನಡುವೆ ವಿವಿಧ 107 ಸ್ಪರ್ಧೆಗಳು ನಡೆಯಿತು. ಸುಮಾರು ಹದಿನೈದು ಮಂದಿ

‘ಫಿದಾಕ್-6.0’ ಸಮಾಪ್ತಿ- ಪ್ರಶಸ್ತಿ ಪ್ರದಾನ; ಮುಈನೀ ಶಿಷ್ಯಂದಿರಿಂದ ಮಾಣಿ ಉಸ್ತಾದರಿಗೆ ಕಾರು ಉಡುಗೊರೆ Read More »

ಕರಾವಳಿ
Scroll to Top