ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಅಸುರಕ್ಷಿತ ಡಾಮರು, ಜಲ್ಲಿ ಸಾಗಾಟ: ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲು – News Kadaba

ಅಸುರಕ್ಷಿತ ಡಾಮರು, ಜಲ್ಲಿ ಸಾಗಾಟ: ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲು

crime, arrest, suspected

(ನ್ಯೂಸ್ ಕಡಬ) newskadaba.com ನ. 14. ಡಾಮರು, ಜಲ್ಲಿ ಸಾಗಿಸುತ್ತಿದ್ದ ಕೇರಳ ನೋಂದಣಿಯ ಲಾರಿಯೊಂದನ್ನು ಮಣಿಪಾಲ ಠಾಣಾ ಪೊಲೀಸರು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿರುವ ಕುರಿತು ವರದಿಯಾಗಿದೆ.

ಲಾರಿಯು ಜಲ್ಲಿ ತುಂಬಿಸಿಕೊಂಡು ಪೆರಂಪಳ್ಳಿ ರಸ್ತೆ ಮೂಲಕ ಸಾಗುತ್ತಿದ್ದ ವೇಳೆ ಜಲ್ಲಿಗಳು ರಸ್ತೆಗೆ ಬಿದ್ದು, ಇತರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಬಾಗಿಲು ಕಡೆಗೆ ಹೋಗುತಿದ್ದ ಲಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಚಾಲಕ ಸೂಚನೆ ಧಿಕ್ಕರಿಸಿ ಲಾರಿಯನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ಲಾರಿಯನ್ನು ಬೆನ್ನಟ್ಟಿದ ಪೊಲೀಸರು ಕಕ್ಕುಂಜೆ ರೈಲ್ವೇ ಸೇತುವೆಯ ಬಳಿ ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿ ಚಾಲಕ ಸಂಗನಗೌಡ ಪಾಟೀಲ್‌ ವಿರುದ್ಧ ಮಣಿಪಾಲ  ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top