ಕರಾವಳಿ

ಹಿರಿಯ ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 19. ಹಿರಿಯ ಪತ್ರಕರ್ತ ಭುವನೇಂದ್ರ ಪುದುವೆಟ್ಟು (42)ರವರು ಇಂದು ಕೊನೆಯುಸಿರೆಳೆದಿದ್ದಾರೆ. ಪುಡುವೆಟ್ಟು ನಿವಾಸಿ ನಾರಾಯಣ ಪೂಜಾರಿ ಮತ್ತು ಮೋಹಿನಿ ದಂಪತಿಯ ಪುತ್ರರಾದ ಭುವನೇಂದ್ರ ಅವರಿಗೆ ಎರಡು ದಿನಗಳ ಹಿಂದೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಅವರನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತಪಾಸಣೆ ವೇಳೆ ಪಿತ್ತಕೋಶದಲ್ಲಿ ಕಲ್ಲು ಇರುವುದರಿಂದ ಅಕ್ಯುಟ್ ಪ್ರಾಂಕಿಯಾಸಿಸ್ ಇರುವುದು ಗೊತ್ತಾಗಿತ್ತು. ತಕ್ಷಣ ಅವರನ್ನು ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ […]

ಹಿರಿಯ ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ರಸ್ತೆ ಅಪಘಾತ: ಇಬ್ಬರು ಪಾದಚಾರಿಗಳಿಗೆ ಗಾಯ

(ನ್ಯೂಸ್ ಕಡಬ) newskadaba.com ಉಡುಪಿ, ನ. 19. ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆಯಲ್ಲಿ 2024ರ ನ.17ರಂದು ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ನಡೆದಿದ್ದು, ಪಾದಚಾರಿಗಳಿಗೆ ಗಾಯಗೊಂಡ ಘಟನೆ ನಡೆದಿದೆ. ಪುತ್ತೂರು ಗ್ರಾಮದ ಆಶೀರ್ವಾದದ ಬಳಿ ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬಸ್ಸನ್ನು ಚಾಲಕ ಅಜಾಗರೂಕತೆಯಿಂದ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ರಸ್ತೆ ಬದಿ ನಿಂತಿದ್ದ ಬಾಗಲಕೋಟೆ ಜಿಲ್ಲೆಯ ಜೈನಬಿ ನದಾಫ್ (27) ಎಂಬ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ. ಜೈನಬಿಯ ಎಡಗೈ ಮತ್ತು ಕೆನ್ನೆಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಉಡುಪಿಯ ಆದರ್ಶ

ರಸ್ತೆ ಅಪಘಾತ: ಇಬ್ಬರು ಪಾದಚಾರಿಗಳಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

(ನ್ಯೂಸ್ ಕಡಬ) newskadaba.com ಮಣಿಪಾಲ, ನ. 19. ಮಣಿಪಾಲ ಸರಳಬೆಟ್ಟು ಬಾಲಮಿತ್ರ ಯಕ್ಷಗಾನ ಮಂಡಳಿಯ ಸಂಚಾಲಕ, ಆರ್ಯಭಟ ಪ್ರಶಸ್ತಿ ಪುರಸ್ಕೃತ ರಾದ ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನರಾಗಿದ್ದಾರೆ. ಯಕ್ಷಗಾನ ಕಲೆಯನ್ನು ವಿದ್ಯಾರ್ಥಿಗಳಲ್ಲಿ ಬಾಲ ಪ್ರತಿಭೆಗಳನ್ನುರೂಪಿಸಿವಲ್ಲಿ ಬಾಲ ಮಿತ್ರ ಯಕ್ಷಗಾನ ಮಂಡಳಿ ಮಣಿಪಾಲದ ಸರಳ ಬೆಟ್ಟು ವಿನಲ್ಲಿ ಸ್ಥಾಪಿಸಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಸೌತ್ ಆಫ್ರಿಕಾ, ದುಬೈ, ಮೊದಲಾದ ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದರು . ದೆಹಲಿ, ಮುಂಬೈ ,ಬೆಂಗಳೂರು, ಮೊದಲಾದ ಕಡೆಯಲ್ಲಿಯೂ ಮಕ್ಕಳ ಯಕ್ಷಗಾನದ ಪ್ರದರ್ಶನ

ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಪೊಲೀಸ್ ಎನ್ಕೌಂಟರ್ ಗೆ ನಕ್ಸಲ್ ನಾಯಕ ವಿಕ್ರಂಗೌಡ ಬಲಿ

(ನ್ಯೂಸ್ ಕಡಬ) newskadaba.com ಉಡುಪಿ, ನ. 19. ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೆಬ್ರಿ ಪರಿಸರದಲ್ಲಿ ಕಳೆದ ಕೆಲದಿನಗಳಿಂದ ನಕ್ಸಲ್ ಓಡಾಟ ವರದಿಯಾಗಿದ್ದು, ಎಎನ್ ಎಫ್ ತೀವ್ರ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಸೋಮವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ 5 ಮಂದಿ ನಕ್ಸಲರ ತಂಡ ಪೀತ

ಪೊಲೀಸ್ ಎನ್ಕೌಂಟರ್ ಗೆ ನಕ್ಸಲ್ ನಾಯಕ ವಿಕ್ರಂಗೌಡ ಬಲಿ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದ ಆರೋಪ ಸಾಬೀತು; ಆರೋಪಿಗೆ ಜೈಲು ಶಿಕ್ಷೆ, ದಂಡ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 18. ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿ ಅಂಗಡಿಯೊಂದಕ್ಕೆ ಬಂದಿದ್ದ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿದ್ದ ಪ್ರಕರಣದ ಆರೋಪ ಸಾಬೀತಾಗಿದ್ದು, ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಪುತ್ತೂರು ಹೆಚ್ಚುವರಿ ಹಿರಿಯ ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ದೇವರಾಜ್ ಅರಸ್ ವೈ.ಎಚ್. ಅವರ ಪೀಠ ತೀರ್ಪು ಪ್ರಕಟಿಸಿದೆ. ಬದ್ರುದ್ದೀನ್ ಯಾನೆ ಬದ್ರು ಶಿಕ್ಷೆಗೆ ಒಳಗಾದ ಅಪರಾಧಿ. 2022ರ ಸೆ. 14ರಂದು ತಿಂಗಳಾಡಿಯ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಸ್ವೀಟ್ ಸ್ಟಾಲ್

ಪುತ್ತೂರು: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದ ಆರೋಪ ಸಾಬೀತು; ಆರೋಪಿಗೆ ಜೈಲು ಶಿಕ್ಷೆ, ದಂಡ Read More »

ಕರಾವಳಿ

31 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆಬಾಳುವ ಕದ್ದ ಹೋಂನರ್ಸ್

(ನ್ಯೂಸ್ ಕಡಬ) newskadaba.com ಉಡುಪಿ, ನ. 18. ವೃದ್ಧೆಯೊರ್ವರ ಆರೈಕೆಗಾಗಿ ಇರಿಸಿದ್ದ ಹೋಮ್ ನರ್ಸ್ ಒಬ್ಬಳು ವೃದ್ಧೆಯ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಬಡಗುಬೆಟ್ಟು ನಿವಾಸಿ ಪ್ರಸಾದ್ ರವರು 15 ದಿನಗಳ ಹಿಂದೆ ಉಡುಪಿಯ ಪರ್ಕಳ ಪ್ರದೇಶದಲ್ಲಿನ ಹೆಲ್ತ್ ಕೇರ್ ಸರ್ವಿಸ್ ಮೂಲಕ ಹೋಮ್ ನರ್ಸ್ ಸಿದ್ದಪ್ಪ ಕೆ ಕೋಡ್ಲಿ ಅವರನ್ನು ತಮ್ಮ ತಂದೆಯ ಆರೈಕೆಗಾಗಿ ನೇಮಿಸಿಕೊಂಡಿದ್ದರು. ನ. 17 ಆದಿತ್ಯವಾರದಂದು , ಸಿದ್ದಪ್ಪರವರು ಮನೆಯಲ್ಲಿ ಇರಿಸಲಾಗಿದ್ದ ಅಂದಾಜು 43,800 ಮೌಲ್ಯದ

31 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆಬಾಳುವ ಕದ್ದ ಹೋಂನರ್ಸ್ Read More »

ಕರಾವಳಿ

ಕೆಲಸದ ವೇಳೆ ಕುಸಿದುಬಿದ್ದು ಕಾರ್ಮಿಕ ಸಾವು: ಮೃತದೇಹವನ್ನು ರಸ್ತೆ ಬದಿ ಇಟ್ಟು ಹೋದ ದುರುಳ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 18. ತೀವ್ರ ಅಸ್ವಸ್ಥಗೊಂಡು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಕುಸಿದು ಬಿದ್ದ ಮೃತಪಟ್ಟ ಕಾರ್ಮಿಕನ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು, ಆತನ ಮನೆಯ ಸಮೀಪದ ರಸ್ತೆ ಬದಿಯಲ್ಲಿ ಇಟ್ಟುಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದಲ್ಲಿ ಶನಿವಾರ ನಡೆದಿದೆ. ಮೃತ ವ್ಯಕ್ತಿಯನ್ನು ಸಾಲ್ಮರ ತಾರಿಗುಡ್ಡೆ ನಿವಾಸಿ ಶಿವಪ್ಪ ಎಂದು ಗುರುತಿಸಲಾಗಿದ್ದು, ಇವರು ಸಾಲ್ಮರ ಕೆರೆಮೂಲೆ ನಿವಾಸಿ ವುಡ್‌ ಸಂಸ್ಥೆಯೊಂದರ ಮಾಲೀಕ ಹೆನ್ರಿ ತಾವ್ರೋ ಎಂಬುವರ ಗಿರಣಿಯಲ್ಲಿ ಕೆಲಸ

ಕೆಲಸದ ವೇಳೆ ಕುಸಿದುಬಿದ್ದು ಕಾರ್ಮಿಕ ಸಾವು: ಮೃತದೇಹವನ್ನು ರಸ್ತೆ ಬದಿ ಇಟ್ಟು ಹೋದ ದುರುಳ Read More »

ಕರಾವಳಿ
Death, deadbody, Waterfall

ಸಮುದ್ರದಲ್ಲಿ ಮುಳುಗಿ ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com ಕಾಸರಗೋಡು, ನ. 18. ದುಬೈಯಲ್ಲಿ ಸಮುದ್ರಕ್ಕಿಳಿದ ಕಾಸರಗೋಡು ಮೂಲದ ಬಾಲಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟ ಬಾಲಕನನ್ನು ಮೂಲತಃ ಚೆಂಗಳ ನಿವಾಸಿ ಅಬ್ದುಲ್ಲ ಮಫಾಝ್(15) ಎಂದು ಗುರುತಿಸಲಾಗಿದೆ. ದುಬೈ ನ್ಯೂ ಇಂಡಿಯನ್ ಮಾಡೆಲ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಈತ ಶುಕ್ರವಾರ ಮಮ್ಝಾರ್ ಬೀಚ್ ಗೆ ತೆರಳಿದ್ದ ವೇಳೆ ಘಟನೆ ನಡೆದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.    

ಸಮುದ್ರದಲ್ಲಿ ಮುಳುಗಿ ಬಾಲಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಮೂವರು ಯುವತಿಯರ ಮೃತ್ಯು ಪ್ರಕರಣ: ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ಉಳ್ಳಾಲ, ನ. 18. ಉಚ್ಚಿಲದ ವಾಝ್ಕೋ ಬೀಚ್ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರೆಸಾರ್ಟ್ ಮಾಲೀಕ ಮನೋಹರ್ ಹಾಗೂ ಮೆನೇಜರ್ ಭರತ್ ಎಂದು ಗುರುತಿಸಲಾಗಿದೆ. ಅವರ ನಿರ್ಲಕ್ಷ್ಯ ಧೋರಣೆಯಿಂದ ಈ ಅನಾಹುತ ಸಂಭವಿಸಿದ್ದು, ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈಜು ಕೊಳದಲ್ಲಿ ಮೃತಪಟ್ಟ ಕೀರ್ತನ, ನಿಶಿತಾ ಹಾಗೂ ಪಾರ್ವತಿ ಅವರ ಪೋಷಕರು ರವಿವಾರ ತಡರಾತ್ರಿ

ಮೂವರು ಯುವತಿಯರ ಮೃತ್ಯು ಪ್ರಕರಣ: ಇಬ್ಬರು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಸಿಡಿಲು ಬಡಿದು ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 18. ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ಕೆದಿಲ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಇಲ್ಲಿನ ಮುರಿಯಾಜೆ ನಿವಾಸಿ ಚಂದ್ರಹಾಸ ಎಂಬವರ ಪುತ್ರ ಸುಭೋದ್(14) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ 5.30ರ ಸುಮಾರಿಗೆ ಮನೆಯ ಸಿಟೌಟ್ ನಲ್ಲಿ ಕುಳಿತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ. ತಕ್ಷಣ ಮನೆಮಂದಿ ಮಾಣಿಯ ಕ್ಲಿನಿಕ್ ವೊಂದಕ್ಕೆ ಕರೆತಂದಿದ್ದು, ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅದರಂತೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು,

ಸಿಡಿಲು ಬಡಿದು ಬಾಲಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top