ಕರಾವಳಿ

crime, arrest, suspected

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಜು. 24.  2021ರಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ವಾರೆಂಟ್ ಆರೋಪಿಯೋರ್ವನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಮಂಜೇಶ್ವರದ ಯತಿರಾಜ್ (34) ಎಂದು ಗುರುತಿಸಲಾಗಿದೆ. ಆರೋಪಿಯು 2022ರಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಆರೋಪಿಗೆ 7 ಬಾರಿ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತಾದರೂ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ವಿಚಾರಣೆಗೆ ಹಾಜರಾಗದಿರುವ ಹಿನ್ನೆಲೆ ಆರೋಪಿಯ ವಿರುದ್ಧ ಉಪ್ಪಿನಂಗಡಿ […]

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಹಾರ್ನ್ ವಿಚಾರದಲ್ಲಿ ಆಕ್ರೋಶ- ಬಸ್ ಚಾಲಕನ ಮೇಲೆ ಹಲ್ಲೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 24. ಚಾಲಕ ಹಾರ್ನ್ ಹಾಕಿದ ಎಂಬ ಕಾರಣಕ್ಕೆ ಬೈಕ್ ಸವಾರರಿಬ್ಬರು ಬಸ್ಸನ್ನು ಅಡ್ಡ ಹಾಕಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಹಾಗೂ ಇದನ್ನು ಪ್ರಶ್ನಿಸಿದ ಪ್ರಯಾಣಿಕನ ಮೇಲೂ ಹೆಲ್ಮೆಟ್ ನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರ ನಡೆದಿದೆ.   ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ಸಿನ ಚಾಲಕ ರಿಯಾಝ್ ಅಹಮ್ಮದ್ ಅವರು ಬಸ್ಸಿಗೆ ಅಡ್ಡವಾಗಿ ಸಂಚರಿಸುತ್ತಿದ್ದ ಬೈಕೊಂದಕ್ಕೆ ದಾರಿ ಬಿಟ್ಟು

ಹಾರ್ನ್ ವಿಚಾರದಲ್ಲಿ ಆಕ್ರೋಶ- ಬಸ್ ಚಾಲಕನ ಮೇಲೆ ಹಲ್ಲೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 24. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಯೋಗದೊಂದಿಗೆ ವಾಲ್ಮೀಕಿ ಆಶ್ರಮ ಶಾಲೆ ಕದ್ರಿ ಇಲ್ಲಿ ಜರುಗಿದ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಕಾರ್ಯಕ್ರಮ ಬುಧವಾರದಂದು ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಬಸವರಾಜ ಮಾತನಾಡಿ, ಯಕ್ಷಗಾನವು ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾ ಶುದ್ಧಿ, ಧೈರ್ಯ, ಶಿಸ್ತು, ವ್ಯಕ್ತಿತ್ವ ಬೆಳವಣಿಗೆಗೆ ಹಾಗೂ ಆರ್ಥಿಕವಾಗಿ,

ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಕಾರ್ಯಕ್ರಮ Read More »

ಕರಾವಳಿ

ವಿವಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಿಶೇಷ ಮಹಾಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 24. ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು (ಹಿಂದಿನ ಸರಕಾರಿ ಕಾಲೇಜು) ಹಳೆ ವಿದ್ಯಾರ್ಥಿ ಸಂಘ ಇದರ ಬೈಲಾ ತಿದ್ದುಪಡಿಯ ಬಗ್ಗೆ ವಿಶೇಷ ಮಹಾ ಸಭೆಯನ್ನು ಜುಲೈ 27 ರಂದು ಬೆಳಿಗ್ಗೆ 10.30 ಗಂಟೆಗೆ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಡಾ. ಶಿವರಾಮ ಕಾರಂತ ಸಭಾ ಭವನದಲ್ಲಿ ನಡೆಯಲಿದೆ. ಸಭೆಗೆ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಿಶೇಷ ಮಹಾಸಭೆ Read More »

ಕರಾವಳಿ

ವಿಕಲಚೇತನರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜು. 24. ವಿಕಲಚೇತನರಿಗೆ ವಿಕಲಚೇತನರ ಮೂಲಕವೇ ಅವರು ವಾಸಿಸುವ ವ್ಯಾಪ್ತಿಯಲ್ಲಿ ಶೈಕ್ಷಣಿಕ ಉದ್ಯೋಗ ತರಬೇತಿ, ಆರ್ಥಿಕ ಪುನರ್ವಸತಿ ಮತ್ತು ಸಾಮಾಜಿಕ ಭದ್ರತೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಪುನರ್ವಸತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನಗರ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡುವ ಸಲುವಾಗಿ ವಿಟ್ಲ ಪಟ್ಟಣ ಪಂಚಾಯತ್, ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ವಾಸಿಸುವ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ:- ನಗರ ಪುನರ್ವಸತಿ ಕಾರ್ಯಕರ್ತರು ಸ್ಥಳೀಯರಾಗಿರಬೇಕು. ವಯೋಮಿತಿ 18-45 ವರ್ಷದ

ವಿಕಲಚೇತನರಿಂದ ಅರ್ಜಿ ಆಹ್ವಾನ Read More »

ಕರಾವಳಿ

ಕೋಡಿಕಲ್ : ಕೆ.ಎಸ್.ಆರ್.ಟಿ.ಸಿ ಬಸ್‍ಗೆ  ಚಾಲನೆ

(ನ್ಯೂಸ್ ಕಡಬ) newskadaba.com ಜು. 24. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿಯಲ್ಲಿ ಕೋಡಿಕಲ್‍ನಿಂದ ಮಂಗಳೂರು ಜಂಕ್ಷನ್‍ಗೆ  (ಕಂಕನಾಡಿ ರೈಲು ನಿಲ್ದಾಣ) ಹೊಸ ಬಸ್ ಮಂಜೂರು ಮಾಡಲಾಗಿದ್ದು, ಬುಧವಾರ ಕೋಡಿಕಲ್ ನಾರಾಯಣ ಗುರು ಮಂದಿರದ ಹತ್ತಿರ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ  ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಮಾಜಿ ಮೇಯರ್ ಶಶಿಧರ ಹೆಗಡೆ, ಮಾಜಿ ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ, ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ, ಜಿಲ್ಲೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಲ್ಸ್ಟನ್ ಡಿಕುನ್ಹಾ,

ಕೋಡಿಕಲ್ : ಕೆ.ಎಸ್.ಆರ್.ಟಿ.ಸಿ ಬಸ್‍ಗೆ  ಚಾಲನೆ Read More »

ಕರಾವಳಿ

ಕಡಬ: ಆರೋಗ್ಯ ಸುಧಾರಣೆಗಾಗಿ ಧರ್ಮಸ್ಥಳ ಯೋಜನೆಯಿಂದ 25,000 ಸಹಾಯಧನ ವಿತರಣೆ

(ನ್ಯೂಸ್ ಕಡಬ) newskadaba.com ಜು. 24. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಲ್ಯ ಗ್ರಾಮದ ಸನ್ನಿದಿ ಪ್ರಗತಿಬಂಧು ತಂಡದ ಸದಸ್ಯರಾದ ಯಾದವ ರವರಿಗೆ ಕ್ರಿಟಿಕಲ್ ಇನ್ಲೇಸ್ ಯೋಜನೆಯಡಿಯಲ್ಲಿ ರೂ. 25,000 ಸಹಾಧನವನ್ನು ಆರೋಗ್ಯ ಸುಧಾರಣೆಗಾಗಿ ವಿತರಿಸಿ ಸಾಂತ್ವನ ತಿಳಿಸಲಾಯಿತು. ಬಲ್ಯ ಗ್ರಾಮದ ಯಾದವರವರು ಕೆಲಸ ಮಾಡುವ ಸಂದರ್ಭ ಆಕಸ್ಮಿಕವಾಗಿ ಮರದಿಂದ ಬಿದ್ದು ಬೆನ್ನು ಮೂಳೆ ಮತ್ತು ಸೊಂಟದ ನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ದುರ್ಗಾವತಿ ಹಾಗೂ ಮೇಲ್ವೀಚಾರಕ ವಿಜೇಶ್ ಜೈನ್

ಕಡಬ: ಆರೋಗ್ಯ ಸುಧಾರಣೆಗಾಗಿ ಧರ್ಮಸ್ಥಳ ಯೋಜನೆಯಿಂದ 25,000 ಸಹಾಯಧನ ವಿತರಣೆ Read More »

ಕರಾವಳಿ

ಸೂರಿಕುಮೇರು ಸಂಜರಿ ಕಾಂಪ್ಲೆಕ್ಸ್ ನಲ್ಲಿ ‘ಸಂಜರಿ ಮೆನ್ಸ್ ಬ್ಯೂಟಿ ಪಾರ್ಲರ್ ಸಲೂನ್” ಶುಭಾರಂಭ

(ನ್ಯೂಸ್ ಕಡಬ) newskadaba.com ಜು. 24. ಇಲ್ಲಿನ ಸೂರಿಕುಮೇರು ಜಂಕ್ಷನ್ ಸಮೀಪದ ಹೈವೇ ಚಿಕನ್ ಸ್ಟಾಲ್ ಬಳಿ ಸಂಜರಿ ಕಾಂಪ್ಲೆಕ್ಸ್ ನಲ್ಲಿ  “The Sanjari Men’s Beauty Parlor Saloon” ಬುಧವಾರದಂದು ಶುಭಾರಂಭಗೊಂಡಿತು. ಯೂಸುಫ್ ಹಾಜಿ ಮಾಲಕತ್ವದ ಈ ಸಲೂನ್ ನಲ್ಲಿ ಉತ್ತರ ಪ್ರದೇಶದ ಅಹ್ಮದ್ ರಝಾಕ್ ಕೇಶ ವಿನ್ಯಾಸವನ್ನು ಮಾಡಲಿರುವರು, ಕಾರ್ಯಕ್ರಮದ ಉದ್ಘಾಟನೆಯ ಭಾಗವಾಗಿ ನಡೆದ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಾದ ಅಲ್ ಹಾಜ್ ಬಹು | ಇಬ್ರಾಹಿಂ ಸ‌ಅದಿ

ಸೂರಿಕುಮೇರು ಸಂಜರಿ ಕಾಂಪ್ಲೆಕ್ಸ್ ನಲ್ಲಿ ‘ಸಂಜರಿ ಮೆನ್ಸ್ ಬ್ಯೂಟಿ ಪಾರ್ಲರ್ ಸಲೂನ್” ಶುಭಾರಂಭ Read More »

ಕರಾವಳಿ

ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ವಿಟ್ಲ ಸ್ಕೌಟ್ಸ್ ಗೈಡ್ಸ್ ನ ಕಟ್ಟಡಕ್ಕೆ ಮಂಜೂರಾತಿ ಪತ್ರ ವಿತರಣೆ

(ನ್ಯೂಸ್ ಕಡಬ) newskadaba.com ಜು. 24. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ವಿಟ್ಲ ಸ್ಕೌಟ್ ಮತ್ತು ಗೈಡ್ಸ್ ನ ಕಟ್ಟಡ ನಿರ್ಮಾಣಕ್ಕೆ 1.50 ಲಕ್ಷ ಮಂಜೂರುಗೊಂಡಿದ್ದು, ಇದರ ಮಂಜೂರಾತಿ ಪತ್ರವನ್ನು ವಿಟ್ಲ ಯೋಜನಾ ಕಛೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ-2 ರ ನಿರ್ದೇಶಕರಾದ ಶ್ರೀ ಬಾಬು ನಾಯ್ಕ, ಯೋಜನಾಧಿಕಾರಿಗಳಾದ ಸುರೇಶ್ ಗೌಡ, ತಾಲೂಕಿನ ಮೇಲ್ವಿಚಾರಕರ ಸಮ್ಮುಖದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷರಾದ ಶ್ರೀ ಸುದರ್ಶನ್ ಪಡೆಯಾರ್ ಮತ್ತು ಸಮಿತಿಯವರಿಗೆ ಹಸ್ತಾಂತರ ಮಾಡಲಾಯಿತು.

ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ವಿಟ್ಲ ಸ್ಕೌಟ್ಸ್ ಗೈಡ್ಸ್ ನ ಕಟ್ಟಡಕ್ಕೆ ಮಂಜೂರಾತಿ ಪತ್ರ ವಿತರಣೆ Read More »

ಕರಾವಳಿ

ಕಡಬ ತಾಲೂಕಿನ ಶಾಲಾ-ಕಾಲೇಜುಗಳಿಗೆ ಇಂದು (ಜುಲೈ 24) ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಕಡಬ, ಜು.24. ಕಳೆದ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದಾಗಿ ಕಡಬ ತಾಲೂಕಿನ ಶಾಲಾ ಕಾಲೇಜುಗಳಿಗೆ ಗುರುವಾರದಂದು ರಜೆ ಘೋಷಿಸಲಾಗಿದೆ. ಕಡಬ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು, ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 24 ರಂದು ರಜೆ ಘೋಷಿಸಲಾಗಿದೆ ಎಂದು ಕಡಬ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಬ ತಾಲೂಕಿನ ಶಾಲಾ-ಕಾಲೇಜುಗಳಿಗೆ ಇಂದು (ಜುಲೈ 24) ರಜೆ ಘೋಷಣೆ Read More »

ಕರಾವಳಿ
Scroll to Top