ಕರಾವಳಿ

ಗಣೇಶ ಹಬ್ಬಕ್ಕೆ ತುಳು ಸಿನಿಮಾ ‘ಪಿಚ್ಚರ್’ ಟೈಟಲ್ ಪೋಸ್ಟರ್ ರಿಲೀಸ್

(ನ್ಯೂಸ್‌ ಕಡಬ) newskadaba.com, ಆ.28: ಗಣೇಶ ಹಬ್ಬದ ಸಂಭ್ರಮದಲ್ಲಿ ಗೋಲ್ಡನ್ ಮೂವೀಸ್ ಕಡೆಯಿಂದ ಬಿಗ್‌ ಅಪ್‌ಡೇಟ್‌ ಲಭಿಸಿದೆ.  ತುಳು ಮೂವಿ ನಿರ್ಮಾಣಕ್ಕೆ ಸಜ್ಜಾಗಿರುವ ಗೋಲ್ಡನ್‌ ಮೂವೀಸ್‌ ತಂಡ ಇದೀಗ ಗಣೇಶ ಚತುರ್ಥಿಯ ದಿನದಂದು ಟೈಟಲ್‌ ಪೋಸ್ಟರ್‌ ಹಂಚಿಕೊಂಡು ಸಂಭ್ರಮಿಸಿದೆ. ಪ್ರೊ ಡಕ್ಶನ್‌ ನಂಬರ್‌ ವನ್‌ ಎಂದು ತಾತ್ಕಾಲಿಕ ಶೀರ್ಷಿಕೆ ನೀಡಿದ್ದ ಚಿತ್ರಕ್ಕೆ ಪಿಚ್ಚರ್‌ ಎಂಬ ಶೀರ್ಷಿಕೆ ನೀಡಿ ಸಮಾಜಿಕ ಜಾಲತಾಣದಲ್ಲಿ ಟೈಟಲ್‌ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗೋಲ್ಡನ್ ಮೂವೀಸ್ ಇದೀಗ ತುಳು ಸಿನಿಮಾ ನಿರ್ಮಾಣಕ್ಕಿಳಿದಿದೆ. […]

ಗಣೇಶ ಹಬ್ಬಕ್ಕೆ ತುಳು ಸಿನಿಮಾ ‘ಪಿಚ್ಚರ್’ ಟೈಟಲ್ ಪೋಸ್ಟರ್ ರಿಲೀಸ್ Read More »

ಕರಾವಳಿ, ಸಿನಿಮಾ

ಮಂಗಳೂರು: ದ.ಕ. ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿ ವಕೀಲ ಸುನೀತ್ ಆರ್ ಡಿ’ಸಾ ಕುಲಶೇಖರ ನೇಮಕ

(ನ್ಯೂಸ್‌ ಕಡಬ) newskadaba.com, ಆಗಸ್ಟ್ 28  ಮಂಗಳೂರು : ಕುಲಶೇಖರ್‌ನ ವಕೀಲ ಸುನೀತ್ ಆರ್ ಡಿ’ಸಾ ಅವರು ದಕ್ಷಿಣ ಕನ್ನಡ (ದ.ಕ.) ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕುಲಶೇಖರ ಮೂಲದವರಾದ ಡಿ’ಸಾ ಅವರು ತಮ್ಮ ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣಗಳನ್ನು ಹೊಂದಿದ್ದರು. ಕಾಲೇಜು ವಿದ್ಯಾರ್ಥಿ ಒಕ್ಕೂಟ, ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್‌ನಲ್ಲಿ ವಿವಿಧ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಸುನೀತ್ ಆರ್ ಡಿ’ಸಾ ಅವರು ಕಳೆದ 16 ವರ್ಷಗಳಿಂದ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್ ನೊಂದಿಗೆ ಸಂಬಂಧ

ಮಂಗಳೂರು: ದ.ಕ. ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿ ವಕೀಲ ಸುನೀತ್ ಆರ್ ಡಿ’ಸಾ ಕುಲಶೇಖರ ನೇಮಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಬಸ್ ತಂಗುದಾಣಕ್ಕೆ ಡಿಕ್ಕಿ ಹೊಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ – ಮಗು ಸೇರಿ ಐವರು ಸಾವು, 7 ಜನರಿಗೆ ಗಾಯ

(ನ್ಯೂಸ್‌ ಕಡಬ) newskadaba.com, ಆಗಸ್ಟ್ 28  ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ವಿಫಲವಾಗಿ ನಿಯಂತ್ರಣ ಕಳೆದುಕೊಂಡು ಬಸ್ ತಂಗುದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಗುರುವಾರ ಮಧ್ಯಾಹ್ನ ತಲಪಾಡಿಯಲ್ಲಿ ಸಂಭವಿಸಿದೆ. ಈ ಘಟನೆ ಮಧ್ಯಾಹ್ನ 1.30 ರ ಸುಮಾರಿಗೆ ನಡೆದಿದೆ. ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬ ಪುರುಷ ಮತ್ತು ಮೂವರು ಮಹಿಳೆಯರು ಸೇರಿದಂತೆ ಮೃತರೆಲ್ಲರೂ ಒಂದೇ ಕುಟುಂಬದವರು ಎಂದು ಪೊಲೀಸರು ದೃಢಪಡಿಸಿದ್ದಾರೆ. ಇದಲ್ಲದೆ, ಒಂದು ಮಗು ಕೂಡ ಪ್ರಾಣ

ಮಂಗಳೂರು: ಬಸ್ ತಂಗುದಾಣಕ್ಕೆ ಡಿಕ್ಕಿ ಹೊಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ – ಮಗು ಸೇರಿ ಐವರು ಸಾವು, 7 ಜನರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ‘ತೆನೆ ಹಬ್ಬ ಸಾಮರಸ್ಯದ ಪ್ರತೀಕ’ – ತಾರಾನಾಥ್ ಗಟ್ಟಿ ಕಾಪಿಕಾಡ್

(ನ್ಯೂಸ್‌ ಕಡಬ) newskadaba.com, ಆಗಸ್ಟ್ 28  ಮಂಗಳೂರು : ತುಳುನಾಡಿನ ಕೃಷಿ ಪರಂಪರೆ ಪ್ರಕೃತಿ ಆರಾಧನೆ, ಸೌಹಾರ್ದ ಹಾಗೂ ಸಮೃದ್ಧ ಬದುಕಿನ ಆಶಯವನ್ನು ಪೋಷಿಸಿಕೊಂಡಿದೆ. ಮನೆ ತುಂಬಿಸುವ ಹಿನ್ನೆಲೆಯಲ್ಲಿ ಭತ್ತದ ತೆನೆಯನ್ನು ಕಟ್ಟುವ ಸಂಪ್ರದಾಯ ಪರಸ್ಪರ ವಿಶ್ವಾಸ ಮತ್ತು ಪ್ರೀತಿ ಬೆಳೆಸುವ ಆಚರಣೆಯಾಗಿ ಮುಂದುವರಿದಿದೆ ಎಂಬುದನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದರು. ಕುಲಶೇಖರದ ಕನ್ನಗುಡ್ಡೆಯ ಕೊರಗತನಿಯ ಕ್ಷೇತ್ರದಲ್ಲಿ ನಡೆದ  ಕಬ್ಬು ಹಾಗೂ ತೆನೆ ಹಂಚುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ

ಮಂಗಳೂರು : ‘ತೆನೆ ಹಬ್ಬ ಸಾಮರಸ್ಯದ ಪ್ರತೀಕ’ – ತಾರಾನಾಥ್ ಗಟ್ಟಿ ಕಾಪಿಕಾಡ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಸೆ.3 ರವರೆಗೂ ಮಳೆಯ ಮುನ್ಸೂಚನೆ

(ನ್ಯೂಸ್‌ ಕಡಬ) newskadaba.com, ಆ.28: ರಾಜ್ಯದಲ್ಲಿ ಸೆ.3ರವರೆಗೂ ಮಳೆ ಅಲರ್ಟ್  ನೀಡಿದ್ದು,  ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗುವ ಮುನ್ಸೂಚನೆ ನೀಡಿದೆ. ಇಂದು ಮತ್ತೆ ನಾಳೆ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ನೀಡಿದ್ದು, ಉತ್ತರ ಕನ್ನಡ ಜಿಲ್ಲೆಗೆ ಆಗಸ್ಟ್ 30ವರೆಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 03ರವರೆಗೂ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 

ರಾಜ್ಯದಲ್ಲಿ ಸೆ.3 ರವರೆಗೂ ಮಳೆಯ ಮುನ್ಸೂಚನೆ Read More »

ಕರಾವಳಿ, ಕರ್ನಾಟಕ

ಸೆ. 22ಕ್ಕೆ ಕುದ್ರೋಳಿ ದೇವಸ್ಥಾನದಲ್ಲಿ ಮಂಗಳೂರು ದಸರಾ ಆರಂಭ

(ನ್ಯೂಸ್‌ ಕಡಬ) newskadaba.com ಆ. 28. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಅದ್ಧೂರಿ ಮಂಗಳೂರು ದಸರಾ ಆಚರಣೆ ನಡೆಯಲಿದೆ ಎಂದು ದೇವಸ್ಥಾನದ ಖಜಾಂಚಿ ಪದ್ಮರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ವರ್ಷದ ದಸರಾದಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ. ನವದುರ್ಗಾ ಮತ್ತು ಶಾರದಾ ದೇವಿಯ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಗುವುದು, ದೇವಾಲಯದ ಆವರಣದೊಳಗೆ ಶಾರದಾ ದೇವಿಯ ವಿಗ್ರಹವನ್ನು ಸಾಧಾರಣ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುವುದು ಎಂದೂ ತಿಳಿಸಿದರು. ಈ ವರ್ಷ

ಸೆ. 22ಕ್ಕೆ ಕುದ್ರೋಳಿ ದೇವಸ್ಥಾನದಲ್ಲಿ ಮಂಗಳೂರು ದಸರಾ ಆರಂಭ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

9 ವರ್ಷಗಳ ನಂತರ ಐತಿಹಾಸಿಕ ಕಲಶ ಮರುಸ್ಥಾಪನೆ

(ನ್ಯೂಸ್‌ ಕಡಬ) newskadaba.com ಆ. 28.  ಒಂದು ಕಾಲದಲ್ಲಿ ಮಂಗಳೂರಿನ ಕಿರೀಟ ಎಂದು ಪರಿಗಣಿಸಲಾಗಿದ್ದ ಐತಿಹಾಸಿಕ ಕಲಶವನ್ನು 2016 ರಲ್ಲಿ ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣದ ಸಮಯದಲ್ಲಿ ತೆಗೆದುಹಾಕಲಾಗಿತ್ತು. ಆ ಸಂದರ್ಭದಲ್ಲಿ ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ವರ್ಷಗಳ ನಂತರ, ಪಂಪ್‌ವೆಲ್ ಮಹಾವೀರ್ ವೃತ್ತದಲ್ಲಿ ಮಂಗಳೂರು ಮುಕುಟವನ್ನು ಪುನಃ ಸ್ಥಾಪಿಸಲಾಗಿದೆ. ಈಗ ಕಳಶವನ್ನು ಪಂಪ್‌ವೆಲ್‌ನಿಂದ ಪಡೀಲ್‌ಗೆ ಹೋಗುವ ರಸ್ತೆಯಲ್ಲಿರುವ ವೃತ್ತದಲ್ಲಿ ಇರಿಸಲಾಗಿದೆ. ಸೋಮವಾರ ರಾತ್ರಿ 8:30 ಕ್ಕೆ ಸ್ಥಳಾಂತರ ಪ್ರಕ್ರಿಯೆ ಪ್ರಾರಂಭವಾಗಿ ಮಂಗಳವಾರ ಬೆಳಿಗ್ಗೆ 4:30 ರ ಹೊತ್ತಿಗೆ

9 ವರ್ಷಗಳ ನಂತರ ಐತಿಹಾಸಿಕ ಕಲಶ ಮರುಸ್ಥಾಪನೆ Read More »

ಕರಾವಳಿ

ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ ಜಾರಿ

(ನ್ಯೂಸ್‌ ಕಡಬ) newskadaba.com, ಆ.28: ಚಿಕ್ಕಮಗಳೂರು: ಚಿಕ್ಕಮಗಳೂರು- ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಿಕ್ಕಮಗಳೂರಿನ ಕೊಟ್ಟಿಗೆಹಾರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 173ರ ಚಾರ್ಮಾಡಿ ಘಾಟ್​  ರಸ್ತೆಯಲ್ಲಿ ಅಪರಾಧ ಕೃತ್ಯಗಳನ್ನು ತಡೆಯಲು ಚಿಕ್ಕಮಗಳೂರು ಪೊಲೀಸ್ ಇಲಾಖೆ ಹೊಸ ಪ್ಲಾನ್ ರೂಪಿಸಿದೆ. ಕೊಟ್ಟಿಗೆಹಾರ ಚೆಕ್ ​​ಪೋಸ್ಟ್​ನಲ್ಲಿ ಪ್ರತಿ ವಾಹನಗಳ ತಪಾಸಣೆ ಮಾಡುವುದರ ಜೊತೆಗೆ ಚಾರ್ಮಾಡಿ ಘಾಟ್​​ನಲ್ಲಿ ರಾತ್ರಿ ವೇಳೆ ಐದು ವಾಹನಗಳನ್ನು ಒಟ್ಟಿಗೆ ಕಳುಹಿಸಲಾಗುತ್ತಿದೆ. ಈ ಹೊಸ ನಿಯಮ ಚಾರ್ಮಾಡಿ ಘಾಟ್​ನಲ್ಲಿ ರಾತ್ರಿ ಸಂಚಾರ ಮಾಡುವ ವಾಹನಗಳಿಗೆ ಅನ್ವಯವಾಗಲಿದೆ.

ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ ಜಾರಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ : ಕೊಲೆಗೆ ಯತ್ನಿಸಿದ್ದಾರೆಂದು ಸುಳ್ಳು ದೂರು – ಆರೋಪಿ ಸೆರೆ

(ನ್ಯೂಸ್‌ ಕಡಬ) newskadaba.com, ಆ.28  ಬಂಟ್ವಾಳ : ಸಜಿಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಜೂನ್ 11 ರಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಸಜಿಪಮುನ್ನೂರು ನಿವಾಸಿ ಉಮರ್ ಫಾರೂಕ್ ಎಂಬಾತ ನೀಡಿದ ದೂರು ಸುಳ್ಳು ಪ್ರಕರಣವೆಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಜಿಪಮುನ್ನೂರು ಗ್ರಾಮದ ನಿವಾಸಿ ಉಮರ್ ಪಾರೂಕ್ (48) ಜೂನ್ 11 ರಂದು ಮುಂಜಾನೆ ಜೀಪಿನಲ್ಲಿ ನಂದಾವರದಿಂದ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದಾಗ ಸಜಿಪನಡು ಗ್ರಾಮದ ದೇರಾಜೆ ಬಸ್

ಬಂಟ್ವಾಳ : ಕೊಲೆಗೆ ಯತ್ನಿಸಿದ್ದಾರೆಂದು ಸುಳ್ಳು ದೂರು – ಆರೋಪಿ ಸೆರೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತಾಲೂಕು ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಮುಖ್ಯ ವೈದ್ಯರ ನಂತರ ಆರೋಗ್ಯ ಅಧಿಕಾರಿಯನ್ನು ಭೇಟಿಯಾದ ಎಸ್ಡಿಪಿಐ ನಿಯೋಗ

(ನ್ಯೂಸ್ ಕಡಬ) newskadaba.com ಆ. 28. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಶಾಹುಲ್ ಹಮೀದ್ ಎಸ್.ಎಚ್. ಅವರ ನೇತೃತ್ವದ ನಿಯೋಗವು ತಾಲೂಕು ಆರೋಗ್ಯಾಧಿಕಾರಿ ಡಾ|| ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಿ, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕೆಂದು ಆಗ್ರಹಿಸಿತು.   ನಿಯೋಗದಲ್ಲಿ SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಹಾಗೂ

ತಾಲೂಕು ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಮುಖ್ಯ ವೈದ್ಯರ ನಂತರ ಆರೋಗ್ಯ ಅಧಿಕಾರಿಯನ್ನು ಭೇಟಿಯಾದ ಎಸ್ಡಿಪಿಐ ನಿಯೋಗ Read More »

ಕರಾವಳಿ
Scroll to Top