ಕರಾವಳಿ

ಸೆ. 1 ರಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 2 ಟೋಲ್‌ ಪ್ಲಾಜಾದಲ್ಲಿ ದರ ಏರಿಕೆ!

(ನ್ಯೂಸ್‌ ಕಡಬ) newskadaba.com, ಆ.22 ಬೆಂಗಳೂರು:  ಸೆಪ್ಟೆಂಬರ್ 1 ರಿಂದ, ರಾಷ್ಟ್ರೀಯ ಹೆದ್ದಾರಿ 75 (ಬೆಂಗಳೂರು-ಮಂಗಳೂರು ರಸ್ತೆ) ದಲ್ಲಿರುವ ಎರಡು ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಹೆಚ್ಚಿನ ಬಳಕೆದಾರ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪರಿಷ್ಕೃತ ದರಗಳು ದೊಡ್ಡಕರೇನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ಮತ್ತು ಕರೆಬೈಲು (ತುಮಕೂರು ಜಿಲ್ಲೆ) ಟೋಲ್ ಪ್ಲಾಜಾಗಳಿಗೆ ಅನ್ವಯವಾಗುತ್ತವೆ. ಪ್ರತಿ ಟೋಲ್ ಪ್ಲಾಜಾದಲ್ಲಿ 40.13 ಕಿ.ಮೀ ದೂರಕ್ಕೆ ಶುಲ್ಕಗಳು ಅನ್ವಯವಾಗುತ್ತವೆ. ಈ ಟೋಲ್‌ ಪ್ಲಾಜಾಗಳಲ್ಲಿ ಕಾರ್‌, ಪ್ಯಾಸೆಂಜರ್‌ ವ್ಯಾನ್‌ ಹಾಗೂ ಜೀಪ್‌ಗಳು ಸಿಂಗಲ್‌ ಟ್ರಿಪ್‌ಗೆ 60 ರೂಪಾಯಿ, […]

ಸೆ. 1 ರಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 2 ಟೋಲ್‌ ಪ್ಲಾಜಾದಲ್ಲಿ ದರ ಏರಿಕೆ! Read More »

ಕರಾವಳಿ, ಕರ್ನಾಟಕ

ಉಳ್ಳಾಲ : ಬೈಕ್ ಢಿಕ್ಕಿ – ಪಾದಚಾರಿ ಮೃತ್ಯು

(ನ್ಯೂಸ್‌ ಕಡಬ) newskadaba.com, ಆ.22: ಉಳ್ಳಾಲದ ತೊಕ್ಕೊಟ್ಟು ಸಮೀಪದ ಕಾಪಿಕಾಡಿನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ದುರ್ಘಟನೆ ನಡೆದಿದೆ. ಮೃತರನ್ನು ಕುಂಪಲ ಚೇತನನಗರ ನಿವಾಸಿ ಲೋಕೇಶ್ (48) ಎಂದು ಗುರುತಿಸಲಾಗಿದೆ. ಅವರು ತೊಕ್ಕೊಟ್ಟಿನಲ್ಲಿ ಇರುವ ವಾಣಿಜ್ಯ ಸಂಕೀರ್ಣವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆ.15 ರಂದು ಸಂಜೆ ಪಾಳಿ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಪಿಕಾಡು ಎಂಬಲ್ಲಿ ಹೆದ್ದಾರಿ ದಾಟುತ್ತಿದ್ದಾಗ ಏಕಾಏಕಿ ಬೈಕ್ ಢಿಕ್ಕಿ

ಉಳ್ಳಾಲ : ಬೈಕ್ ಢಿಕ್ಕಿ – ಪಾದಚಾರಿ ಮೃತ್ಯು Read More »

ಕರಾವಳಿ

ಮಹೇಶ್ ತಿಮರೋಡಿ ವಶಕ್ಕೆ ಪಡೆದ ಬ್ರಹ್ಮಾವರ ಪೊಲೀಸರು!

(ನ್ಯೂಸ್‌ ಕಡಬ) newskadaba.com, ಆ.20 ಬ್ರಹ್ಮಾವರ: ಧರ್ಮಸ್ಥಳ ವಿಚಾರವಾಗಿ ಆಕ್ಷೇಪಾರ್ಹರ ಹೇಳಿಕೆ ನೀಡಿದ ಪ್ರಕರಣದಲ್ಲಿ ಉಡುಪಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಯನ್ನು ವಶಕ್ಕೆ ಪಡೆದಿದ್ದಾರೆ. ಒಂದೆಡೆ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಅನಾಮಿಕ ಹೇಳಿರುವ ಪ್ರಕರಣದ ಎಸ್​​ಐಟಿ ತನಿಖೆ ತೀವ್ರಗೊಂಡಿದ್ದು, ಮತ್ತೊಂದೆಡೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗುರುವಾರ ಉಡುಪಿಯ ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಮಾತನಾಡುವಾಗ ಬಿಜೆಪಿ ನಾಯಕ ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಉಡುಪಿಯ ಬ್ರಹ್ಮಾವರ

ಮಹೇಶ್ ತಿಮರೋಡಿ ವಶಕ್ಕೆ ಪಡೆದ ಬ್ರಹ್ಮಾವರ ಪೊಲೀಸರು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಕಾಂಗ್ರೆಸ್ ಸರ್ಕಾರವು ಪೊಲೀಸ್ ಇಲಾಖೆಯನ್ನ ಮುಂದಿಟ್ಟು ಹಿಂದೂ ಹಬ್ಬಗಳ ಆಚರಣೆಗೆ ಅಡ್ಡಿ’- ಸಂಸದ ಕ್ಯಾ. ಚೌಟ ಆಕ್ರೋಶ

(ನ್ಯೂಸ್‌ ಕಡಬ) newskadaba.com, ಆ.20 ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಪೊಲೀಸ್ ಇಲಾಖೆಯ ಮೂಲಕ ಹಬ್ಬಗಳ ಆಚರಣೆಗೆ ಮನಸೋ-ಇಚ್ಛೆ ನಿಯಮಗಳನ್ನು ಹೇರಿ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ಹುನ್ನಾರ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸೇರಿದಂತೆ ಹಲವು ಹಬ್ಬದ ಆಚರಣೆ ಸಂದರ್ಭ ಧ್ವನಿವರ್ಧಕ ಬಳಸುವುದಕ್ಕೆ ಪೊಲೀಸರು ಅವಕಾಶ ನೀಡದೆ ಷರತ್ತುಗಳನ್ನು ವಿಧಿಸಿ ತೊಂದರೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದರು, ತುಳುನಾಡು ದೈವಾರಾಧನೆ, ಧಾರ್ಮಿಕ ಆಚರಣೆಗಳು,

‘ಕಾಂಗ್ರೆಸ್ ಸರ್ಕಾರವು ಪೊಲೀಸ್ ಇಲಾಖೆಯನ್ನ ಮುಂದಿಟ್ಟು ಹಿಂದೂ ಹಬ್ಬಗಳ ಆಚರಣೆಗೆ ಅಡ್ಡಿ’- ಸಂಸದ ಕ್ಯಾ. ಚೌಟ ಆಕ್ರೋಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಿ.ಎಲ್‌ ಸಂತೋಷ್‌ ವಿರುದ್ದ ಅವಹೇಳನ: ಮಹೇಶ್‌ ಶೆಟ್ಟಿ ತಿಮರೋಡಿ ಪೊಲೀಸ್‌ ವಶಕ್ಕೆ

(ನ್ಯೂಸ್‌ ಕಡಬ) newskadaba.com, ಆ.21:‌ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ವಿರುದ್ದ ಅವೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಮಹೇಶ‌ ಶೆಟ್ಟಿ ತಿಮರೋಡಿ ಅವರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡದಿದ್ದಾರೆ. ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋವೊಂದರಲ್ಲಿ ತಿಮರೋಡಿ ಬಿಎಲ್‌ ಸಂತೋಷ‌ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಬಗ್ಗೆ ರಾಜೀವ್‌ ಕುಲಾಲ್‌ ಎಂಬವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ ಬಿಎಸ್‌ಎನ್ 196(1), 352,353(2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಭಾರೀ ಹೈಡ್ರಾಮದ

ಬಿ.ಎಲ್‌ ಸಂತೋಷ್‌ ವಿರುದ್ದ ಅವಹೇಳನ: ಮಹೇಶ್‌ ಶೆಟ್ಟಿ ತಿಮರೋಡಿ ಪೊಲೀಸ್‌ ವಶಕ್ಕೆ Read More »

ಕರಾವಳಿ

ಇಂದಿನ ಹವಮಾನ ವರದಿ

(ನ್ಯೂಸ್‌ ಕಡಬ) newskadaba.com, ಆ.20 ಬೆಂಗಳೂರು: ರಾಜ್ಯದಲ್ಲಿ ಆ.21ರಂದು ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ರಾಯಚೂರು, ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ ಸೇರಿ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು,

ಇಂದಿನ ಹವಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಎಂಟು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ

(ನ್ಯೂಸ್‌ ಕಡಬ) newskadaba.com, ಆ.21: ಮದ್ರಸಕ್ಕೆ ತೆರಳುತ್ತಿದ್ದ ಎಂಟು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ. ಮಂಜೇಶ್ವರದ ರಶೀದ್ ಅವರ ಪುತ್ರ ಅಬೂಬಕ್ಕರ್ ರಫಾನ್ ಗಾಯಗೊಂಡ ಬಾಲಕ. ಬೆಳಿಗ್ಗೆ ಮದ್ರಸಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ನಾಯಿ ಅಟ್ಟಾಡಿಸಿ ದಾಳಿ ನಡೆಸಿದೆ ಎನ್ನಲಾಗಿದೆ. ಬಾಲಕನ ಬೊಬ್ಬೆ ಕೇಳಿ ಸ್ಥಳೀಯರು ದಾವಿಸಿ ಬರುತ್ತಿದ್ದಂತೆ ನಾಯಿ ತಪ್ಪಿಸಿಕೊಂಡಿದೆ. ಗಾಯಗೊಂಡ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಸರಗೋಡು: ಎಂಟು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಕಾಂಗ್ರೆಸ್ ಗೆ ಗೆಲುವು

(ನ್ಯೂಸ್‌ ಕಡಬ) newskadaba.com ಆ.20 : ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 8 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಹುಮತ ಗಳಿಸಿದೆ. ಬಿಜೆಪಿ ಐದು ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಒಟ್ಟು 13 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮತ ಎಣಿಕೆ ಪ್ರಕ್ರಿಯೆ 9:45ರ ವೇಳೆ ಮುಕ್ತಾಯಗೊಂಡಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕಳಾರ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಮನ್ನಾ ಜಬೀನ್ ಜಯ ಗಳಿಸಿದರೆ. 8ನೇ ಪಿಜಕ್ಕಳ ವಾರ್ಡ್ ನಲ್ಲಿ

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಕಾಂಗ್ರೆಸ್ ಗೆ ಗೆಲುವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ: ಇಲೆಕ್ಟ್ರಿಕ್ ಆಟೋಗಳಿಗೆ ಅನುಮತಿ ನೀಡದಂತೆ ಮನವಿ – ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಡಿಸಿಗೆ ಹೈಕೋರ್ಟ್ ನಿರ್ದೇಶನ

(ನ್ಯೂಸ್ ಕಡಬ) newskadaba.com ಆ. 20. ಮಂಗಳೂರು ನಗರದಲ್ಲಿ ಹೊಸದಾಗಿ ಎಲೆಕ್ಟ್ರಿಕ್ ಆಟೋಗಳ ಕಾರ್ಯಾಚರಣೆಗೆ ಅನುಮತಿ ನೀಡದಂತೆ ಕೋರಿ ಮಂಗಳೂರು ಆಟೋ ರಿಕ್ಷಾ ಚಾಲಕ- ಮಾಲಕರ ಸಂಘ ಸಲ್ಲಿಸಿರುವ ಮನವಿಯನ್ನು ಎರಡು ವಾರಗಳಲ್ಲಿ ಕಾನೂನು ಪ್ರಕಾರ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಹೈಕೋರ್ಟ್‌ ನಿರ್ದೇಶಿಸಿದೆನ್ನಲಾಗಿದೆ. ಮನವಿಪತ್ರ ಪರಿಗಣಿಸದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕ್ರಮಕ್ಕೆ ಆಕ್ಷೇಪಿಸಿ ಮಂಗಳೂರು ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ

ದಕ್ಷಿಣ ಕನ್ನಡ: ಇಲೆಕ್ಟ್ರಿಕ್ ಆಟೋಗಳಿಗೆ ಅನುಮತಿ ನೀಡದಂತೆ ಮನವಿ – ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಡಿಸಿಗೆ ಹೈಕೋರ್ಟ್ ನಿರ್ದೇಶನ Read More »

ಕರಾವಳಿ

ಮದುವೆಯಾಗುವುದಾಗಿ ಅತ್ಯಾಚಾರ-ವಂಚನೆ ಪ್ರಕರಣ ಮಗು, ಸಂತ್ರಸ್ತೆ ಮತ್ತು ಆರೋಪಿಯ ಡಿಎನ್ಎ ಪರೀಕ್ಷೆ..!

(ನ್ಯೂಸ್ ಕಡಬ) newskadaba.com ಆ. 20. ಮದುವೆಯಾಗುವುದಾಗಿ ನಂಬಿಸಿ ಬಿಜೆಪಿ ಮುಖಂಡನ ಪುತ್ರ ಶ್ರೀಕೃಷ್ಣ ಜೆ. ರಾವ್ ನಿಂದ ಅತ್ಯಾಚಾರ, ವಂಚನೆಗೆ ಒಳಗಾದ ಸಂತ್ರಸ್ತ ವಿದ್ಯಾರ್ಥಿನಿ ಜನ್ಮ ನೀಡಿರುವ ಮಗುವಿನ ಡಿಎನ್ ಎ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನು ಪುತ್ತೂರಿನ ನ್ಯಾಯಾಲಯದಲ್ಲಿ ಮಂಗಳವಾರದಂದು ಸಂಗ್ರಹಿಸಲಾಗಿದೆ.   ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಶ್ರೀಕೃಷ್ಣನನ್ನು ಪೊಲೀಸರು ಮಂಗಳವಾರದಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ, ಡಿಎನ್ಎ ಪರೀಕ್ಷೆಗೆ ಸಂತ್ರಸ್ತೆ, ಮಗು ಹಾಗೂ ಆರೋಪಿಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ ಈ

ಮದುವೆಯಾಗುವುದಾಗಿ ಅತ್ಯಾಚಾರ-ವಂಚನೆ ಪ್ರಕರಣ ಮಗು, ಸಂತ್ರಸ್ತೆ ಮತ್ತು ಆರೋಪಿಯ ಡಿಎನ್ಎ ಪರೀಕ್ಷೆ..! Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top