ಕರಾವಳಿ

ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ವಲಯದಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ವಿಟ್ಲ, ಆ. 26. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ.) ಅಳಿಕೆ ವಲಯದ ಜನಜಾಗೃತಿ ಕಾರ್ಯಕ್ರಮದಡಿಯಲ್ಲಿ ಸ್ಥಾಸ್ಯ ಸಂಕಲ್ಪ ಕಾರ್ಯಕ್ರಮವು ಶ್ರೀಸತ್ಯ ಸಾಯಿ ಲೋಕಸೇವಾ ಪ್ರೌಢ ಶಾಲೆ ಅಳಿಕೆಯಲ್ಲಿ ನಡೆಸಲಾಯಿತು. ಶಾಲಾ ಅಧ್ಯಾಪಕರಾದ ನಾರಾಯಣರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಸಣ್ಣಗುತ್ತು, ಒಕ್ಕೂಟ ಪದಾಧಿಕಾರಿಯಾದ ವಿಜಯಲಕ್ಷಿ ಮೊದಲಾದವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಹಾಗೂ ಜನಜಾಗೃತಿ ವಲಯಾಧ್ಯಕ್ಷರಾದ ಬಾಲಕೃಷ್ಣ ಕಾರಂತ್ ಎರುಂಬು ಇವರು ಮಕ್ಕಳಿಗೆ ಮುಂದಿನ ಜೀವನದಲ್ಲಿ […]

ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ವಲಯದಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ Read More »

ಕರಾವಳಿ

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

(ನ್ಯೂಸ್‌ ಕಡಬ) newskadaba.com, ಆ.26 ಬೆಂಗಳೂರು: ಸುಂಕಗಳು ಮತ್ತು ಭೌಗೋಳಿಕ ರಾಜಕೀಯ ಒತ್ತಡಗಳ ನೆರಳಿನಲ್ಲಿ ವ್ಯಾಪಾರ ಮಾತುಕತೆಗಳು ಮುಂದುವರಿದಿರುವುದರಿಂದ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸಲು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದ ನಂತರ, ಇಂದಿನಿಂದ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡಾ 50ರಷ್ಟು ಸುಂಕವನ್ನು ಜಾರಿಗೆ ತರಲು ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (CBP) ಕರಡು ಸೂಚನೆಯನ್ನು ಹೊರಡಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭದಲ್ಲಿ 90 ಕ್ಕೂ ಹೆಚ್ಚು ದೇಶಗಳ ಮೇಲೆ

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ Read More »

ಕರಾವಳಿ

ಶಾಲಾ ಕಟ್ಟಡ ಕುಸಿತ: ಮೂವರು ವಿದ್ಯಾರ್ಥಿಗಳಿಗೆ ಗಾಯ

(ನ್ಯೂಸ್‌ ಕಡಬ) newskadaba.com, ಆ.26 ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಕಟ್ಟಡದ ಒಂದು ಭಾಗ ಕುಸಿದುಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ. ಗಾಯಾಳುಗಳನ್ನು ದರ್ಶನ್, ಭುವನ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಈ ಕಟ್ಟಡವನ್ನು ಒಂಬತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ದೇವನಹಳ್ಳಿಯ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ಲಲಿತಮ್ಮ ಅವರು ಮಾತನಾಡಿ, ಶಾಲೆಯ ಹೊರಗೆ ಆಟವಾಡುತ್ತಿದ್ದಾಗ ಕಿಟಕಿಯ ಮೇಲಿನ

ಶಾಲಾ ಕಟ್ಟಡ ಕುಸಿತ: ಮೂವರು ವಿದ್ಯಾರ್ಥಿಗಳಿಗೆ ಗಾಯ Read More »

ಕರಾವಳಿ

ಕಾರ್ಕಳ: ದುಷ್ಕರ್ಮಿಗಳಿಂದ ಬಡ್ಡಿ ವ್ಯಾಪಾರಿಯ ಬರ್ಬರ ಕೊಲೆ

(ನ್ಯೂಸ್‌ ಕಡಬ) newskadaba.com, ಆ.26 ಕಾರ್ಕಳ:  ಕಳೆದ ಕೆಲ ವರ್ಷಗಳಿಂದ ಕಾರ್ಕಳ ನಗರದ ಬಾಲಾಜಿ ಅರ್ಕೇಡ್ ನಲ್ಲಿ ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಮಂಗಳೂರು ಮೂಲದ ನವೀನ್ ಎಂಬವರನ್ನು ಸೋಮವಾರ ತಡರಾತ್ರಿ ದುಷ್ಕರ್ಮಿಗಳು ಕುಂಟಲ್ಪಾಡಿ ಎಂಬಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮಂಗಳವಾರ ನಸುಕಿನ ಜಾವದಲ್ಲಿ ಸ್ಥಳೀಯರಿಗೆ ಈ ಮಾಹಿತಿ ತಿಳಿದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಕಾರ್ಕಳ ನಗರ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಆಗಮಿಸಿ ತನಿಖೆ ಕಾರ್ಯ ತೀವ್ರಗೊಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ

ಕಾರ್ಕಳ: ದುಷ್ಕರ್ಮಿಗಳಿಂದ ಬಡ್ಡಿ ವ್ಯಾಪಾರಿಯ ಬರ್ಬರ ಕೊಲೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ: ಅಕ್ರಮ ಕೆಂಪು ಕಲ್ಲು ಸಾಗಾಟ ಪ್ರಕರಣ; ನಾಲ್ಕು ಲಾರಿಗಳು ವಶಕ್ಕೆ

(ನ್ಯೂಸ್‌ ಕಡಬ) newskadaba.com,ಆ.‌25 : ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಆರೋಪದಡಿ ನಾಲ್ಕು ಲಾರಿಗಳನ್ನು ಸುಳ್ಯ ಪೊಲೀಸರು ವಶ ಪಡಿಸಿಕೊಂಡ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಭಾನುವಾರ ಸಂಭವಿಸಿದೆ. ವರದಿಗಳ ಪ್ರಕಾರ, ಮಿಂಚಪದವು ಕಡೆಯಿಂದ ಸುಳ್ಯ ಕಡೆಗೆ ಲಾರಿಗಳು ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದವು ಆರೋಪಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಸುಳ್ಯ ಪೊಲೀಸರು ವಾಹನಗಳನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಲಾರಿಗಳನ್ನು ಸುಳ್ಯ ಪೊಲೀಸ್ ಠಾಣೆಗೆ ತರಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.  

ಸುಳ್ಯ: ಅಕ್ರಮ ಕೆಂಪು ಕಲ್ಲು ಸಾಗಾಟ ಪ್ರಕರಣ; ನಾಲ್ಕು ಲಾರಿಗಳು ವಶಕ್ಕೆ Read More »

ಕರಾವಳಿ

ಮಂಗಳೂರು: ಸಮುದ್ರದಲ್ಲಿ ಮುಳುಗಿ ಓರ್ವ ಯುವಕ ಸಾವು; ಮೂವರ ರಕ್ಷಣೆ

(ನ್ಯೂಸ್‌ ಕಡಬ) newskadaba.com,ಆ.‌25 : ಸುರತ್ಕಲ್ ಸಮೀಪದ ಸಸಿಹಿತ್ಲು ಮುಂಡಾ ಬೀಚ್ ಬಳಿ ಸಮುದ್ರಕ್ಕೆ ಇಳಿದಿದ್ದ ನಾಲ್ಕು ಯುವಕರ ಪೈಕಿ ಓರ್ವ ಮೃತಪಟ್ಟು ಮೂವರನ್ನು ಸ್ಥಳೀಯರು ರಕ್ಷಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತರನ್ನು ಪಡುಪಣಂಬೂರು ಕಜಕತೋಟ ನಿವಾಸಿ, ದಿ.ಅನ್ವರ್ ಅವರ ಪುತ್ರ ಮುಹಮ್ಮದ್ ಸಮೀರ್ (23) ಎಂದು ಗುರುತಿಸಲಾಗಿದೆ. ಪಡುಪಣಂಬೂರು ಕಜಕತೋಟ ನಿವಾಸಿ ಅಬೂಬಕರ್ ಅವರ ಪುತ್ರ ಐಮಾನ್ (23), ಕಜಕತೋಟ ನಿವಾಸಿ ರಯೀಸ್ (22), ಮತ್ತು ಹಳೆಯಂಗಡಿ ಬೊಳ್ಳೂರು ನಿವಾಸಿ ಹನೀಫ್ ಅವರ ಪುತ್ರ

ಮಂಗಳೂರು: ಸಮುದ್ರದಲ್ಲಿ ಮುಳುಗಿ ಓರ್ವ ಯುವಕ ಸಾವು; ಮೂವರ ರಕ್ಷಣೆ Read More »

ಕರಾವಳಿ, ಕರ್ನಾಟಕ

ಕಾರ್ಕಳ : ಕಾಳು ಪಾಣಾರ ಅವರಿಗೆ ತುಳು ಅಕಾಡೆಮಿಯ “ಚಾವಡಿ ತಮ್ಮನ” ಗೌರವಾರ್ಪಣೆ

(ನ್ಯೂಸ್‌ ಕಡಬ) newskadaba.com,ಆ.‌25 ಕಾರ್ಕಳ :  ತುಳುನಾಡಿನ ಕಂಬಳವು ಒಂದು ಕ್ರೀಡೆ ಮಾತ್ರವಲ್ಲ, ಅದು ಜಾತ್ಯತೀತವಾಗಿ ಮತ್ತು ಮೇಲುಕೀಳು ಎಂಬ ಭಾವನೆಯಿಲ್ಲದೆ, ಸಮಾಜದ ಎಲ್ಲ ಜನರು ಒಂದೆಡೆ ಸೇರುವ ತೌಳವ ಆಚರಣೆಯಾಗಿದೆ. ಕಂಬಳದಲ್ಲಿ ಗೆಲ್ಲುವ-ಸೋಲುವ ಸ್ಪರ್ಧೆ ಇದ್ದರೂ ಅಂತಿಮವಾಗಿ ಇದು ಸಮಾಜದ ಸರ್ವರನ್ನು ಒಂದಾಗಿಸುತ್ತದೆ’ ಎಂದು ಕಂಬಳದ ವಿದ್ವಾಂಸರಾದ ಗುಣಪಾಲ ಕಡಂಬ ಅವರು ಅಭಿಪ್ರಾಯ ಪಟ್ಟರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನ ಸೆಂಟರ್‌ ಫಾರ್‌ ಇಂಟರ್‌ಕಲ್ಚರಲ್‌ ಸ್ಟಡೀಸ್‌ ಆ್ಯಂಡ್‌

ಕಾರ್ಕಳ : ಕಾಳು ಪಾಣಾರ ಅವರಿಗೆ ತುಳು ಅಕಾಡೆಮಿಯ “ಚಾವಡಿ ತಮ್ಮನ” ಗೌರವಾರ್ಪಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೂಡುಬಿದಿರೆ : ರಸ್ತೆ ವಿಭಾಜಕಕ್ಕೆ ಕಾರು ಡಿಕ್ಕಿ – ಚಿಕಿತ್ಸೆ ಫಲಿಸದೆ ಯುವಕ ಮೃತ್ಯು

(ನ್ಯೂಸ್‌ ಕಡಬ) newskadaba.com,ಆ.‌25 ಮೂಡುಬಿದಿರೆ : ರಾಷ್ಟ್ರೀಯ ಹೆದ್ದಾರಿ 169ರ ಮೂಡಬಿದ್ರೆಯ ಬೆಳುವಾಯಿ ಪೇಟೆಯಲ್ಲಿ ಆ. 16ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಂದೀಪ್‌ ಸಿದ್ದಕಟ್ಟೆ (25) ಅವರು ಆದಿತ್ಯವಾರ ಮೃತಪಟ್ಟಿದ್ದಾರೆ. ಕಾರೊಂದು ರಸ್ತೆ ವಿಭಾಜಕಕ್ಕೆ ಬಡಿದು ಸಂಭವಿಸಿದ್ದ ಅಪಘಾತದಲ್ಲಿ ಮಂಗಳೂರಿನ ಹೊಟೇಲೊಂದರ ಕಾರ್ಮಿಕ ವೇಣೂರು ಪೆರ್ಮುಡೆ ನಿವಾಸಿ ಸುಮಿತ್‌ ಮೃತಪಟ್ಟವರು. ಜತೆಗಿದ್ದ ಸಂದೀಪ್‌ ಸಹಿತ ನಾಲ್ವರು ಗಾಯಗೊಂಡಿದ್ದರು. ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮೂಡುಬಿದಿರೆ : ರಸ್ತೆ ವಿಭಾಜಕಕ್ಕೆ ಕಾರು ಡಿಕ್ಕಿ – ಚಿಕಿತ್ಸೆ ಫಲಿಸದೆ ಯುವಕ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ಹೇಳಿ ಮಹಿಳೆಗೆ 1.35 ಲಕ್ಷ ರೂ. ವಂಚನೆ

(ನ್ಯೂಸ್‌ ಕಡಬ) newskadaba.com, ಕಡಬ, ಆ.‌ 25. ಪಾರ್ಟ್ ಟೈಮ್ ಜಾಬ್ ಆಮಿಷಕ್ಕೆ ಒಳಗಾಗಿ ಕಡಬದ ಮಹಿಳೆಯೊಬ್ಬರು 1.35 ಲಕ್ಷ ರೂ. ಕಳೆದುಕೊಂಡ ಘಟನೆ ವರದಿಯಾಗಿದೆ. ಮಹಿಳೆ ಆ.20ರಂದು  ಇನ್ಸ್ಟಾಗ್ರಾಮ್  ಪೇಜ್ ನಲ್ಲಿ ವರ್ಕ್ ಫ್ರಮ್ ಹೋಮ್ ಎಂಬ ಜಾಹೀರಾತಿನೊಂದಿಗೆ ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿದಾಗ ವಾಟ್ಸಪ್ ತೆರೆದಿದ್ದು, ಅದರಲ್ಲಿ ಪಾರ್ಟ್ ಟೈಮ್ ಜಾಬ್ ನೀಡುವುದಾಗಿಯೂ ನೀವು ಮಾಡಿದ ಕೆಲಸಕ್ಕೆ 20% ಕಮಿಷನ್ ಹಣ ಗಳಿಸಬಹುದು ಎಂಬುದಾಗಿ ತಿಳಿಸಲಾಗಿತ್ತು. ಅಲ್ಲದೇ ಲಿಂಕ್ ನ್ನು ಕ್ಲಿಕ್ ಮಾಡಿ ಪ್ರಾಡಕ್ಟ್

ಕಡಬ: ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ಹೇಳಿ ಮಹಿಳೆಗೆ 1.35 ಲಕ್ಷ ರೂ. ವಂಚನೆ Read More »

ಕರಾವಳಿ, ಕ್ರೈಮ್ ನ್ಯೂಸ್

ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ, ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಗೆ ಪ್ರಶಸ್ತಿ

(ನ್ಯೂಸ್‌ ಕಡಬ) newskadaba.com, ಕಡಬ, ಆ.‌ 25. ವಿದ್ಯಾಭಾರತಿ ಕರ್ನಾಟಕ ಇವರು ಪ್ರೇರಣಾ ಅನುದಾನಿತ ಹಿ.ಪ್ರಾ. ಶಾಲೆ ಕಡಲಕೆರೆ ಮೂಡಬಿದ್ರೆಯಲ್ಲಿ ನಡೆಸಿದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಕಡಬ ಸರಸ್ವತೀ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.   ಬಾಲವರ್ಗದ ಬಾಲಕರ ವಿಭಾಗದಲ್ಲಿ ಮೃದನ್ ಎಸ್. ರೈ (7ನೇ ತರಗತಿ) ಪ್ರಥಮ ಸ್ಥಾನ ಪಡೆದಿರುತ್ತಾರೆ. ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ಪೂರ್ವಿ (9ನೇ ತರಗತಿ) ತೃತೀಯ ಸ್ಥಾನ ಪಡೆದು, ಇವರು ಮುಂದೆ ನಡೆಯುವ

ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ, ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಗೆ ಪ್ರಶಸ್ತಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top