ಕರಾವಳಿ

ಗುಂಡ್ಯ ಸಮೀಪ ಗುಡ್ಡ ಜರಿತ ► ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.19. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪ ಗುಡ್ಡ ಜರಿದು ರಸ್ತೆಗೆ ಬಿದ್ದಿದ್ದರಿಂದಾಗಿ ರಸ್ತೆ ತಡೆಯುಂಟಾಗಿದ್ದು, ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಗುಡ್ಡ ಜರಿದಿದೆ. ಇದರಿಂದಾಗಿ ಮಂಗಳೂರು ಹಾಗೂ ಬೆಂಗಳೂರು ಕಡೆಗೆ ತೆರಳುವ ಪ್ರಯಾಣಿಕರು ಪರದಾಡಿದರು.

ಗುಂಡ್ಯ ಸಮೀಪ ಗುಡ್ಡ ಜರಿತ ► ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು Read More »

ಕರಾವಳಿ

ಆಲಂಕಾರು: ಮದ್ಯ ಸೇವನೆಗೆ ಅವಕಾಶ ನೀಡಿದ ಅಂಗಡಿಗಳಿಗೆ ದಾಳಿ ► ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜು.19. ತಮ್ಮ ಅಂಗಡಿಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡುತ್ತಿದ್ದಾರೆ ಎಂಬ ಖಚಿತ ವರ್ತಮಾನದ ಮೇರೆಗೆ ಆಲಂಕಾರಿನ ಮೂರು ಅಂಗಡಿಗಳ ಮೇಲೆ ದಾಳಿ ನಡೆಸಿರುವ ಕಡಬ ಪೊಲೀಸರು ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಆಲಂಕಾರು ಗ್ರಾಮದ ಸುರುಳಿ ಬಳಿಯ ಲಕ್ಷ್ಮೀ ಚಿಕನ್ ಸೆಂಟರ್ ನ ರವೀಂದ್ರ, ಆಲಂಕಾರು ಪೇಟೆಯಲ್ಲಿರುವ ಮಯೂರ ಎಂಟರ್ ಪ್ರೈಸಸ್ ನ ವಿನಯ.ಕೆ, ಮತ್ತು ಆಲಂಕಾರು ವರ್ಕ್ ಶಾಪಿನ ತೆರೆದ ಶೆಡ್ನಲ್ಲಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ರಾಘವೇಂದ್ರ ಗೌಡ ಬಂಧಿತ

ಆಲಂಕಾರು: ಮದ್ಯ ಸೇವನೆಗೆ ಅವಕಾಶ ನೀಡಿದ ಅಂಗಡಿಗಳಿಗೆ ದಾಳಿ ► ಮೂವರು ಆರೋಪಿಗಳ ಬಂಧನ Read More »

ಕರಾವಳಿ

ಉದನೆ: ನಿಂತಿದ್ದ ಲಾರಿಗೆ ಈಚರ್ ಢಿಕ್ಕಿ ►ಉಪ್ಪಿನಂಗಡಿ ನಿವಾಸಿ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು. 19. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಎಂಬಲ್ಲಿ ನಿಂತಿದ್ದ ಕಂಟೈನರ್ ಲಾರಿಗೆ ಈಚರ್ ಲಾರಿಯೊಂದು ಢಿಕ್ಕಿಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಮೃತರನ್ನು ಈಚರ್ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಉಪ್ಪಿನಂಗಡಿಯ ಹರಿನಗರ ನಿವಾಸಿ ಇಲ್ಯಾಸ್ (40)  ಎಂದು ಗುರುತಿಸಲಾಗಿದೆ. ಹಾಸನ ಕಡೆಯಿಂದ ತರಕಾರಿ ಹೇರಿಕೊಂಡು ಬರುತ್ತಿದ್ದ ಈಚರ್ ಲಾರಿ ನಿಯಂತ್ರಣ ಕಳೆದುಕೊಂಡು, ನಿಂತಿದ್ದ ಕನ್ಟೈನರ್ ಲಾರಿಗೆ ಢಿಕ್ಕಿ ಹೊಡೆದು ಈ ಅಪಘಾತ

ಉದನೆ: ನಿಂತಿದ್ದ ಲಾರಿಗೆ ಈಚರ್ ಢಿಕ್ಕಿ ►ಉಪ್ಪಿನಂಗಡಿ ನಿವಾಸಿ ಮೃತ್ಯು Read More »

ಕರಾವಳಿ

ಕರಾವಳಿಯ ಕೆಲವು ಗ್ರಾಮಗಳಲ್ಲಿ ಇನ್ಮುಂದೆ 24 ಗಂಟೆ ವಿದ್ಯುತ್ ► ಅದರಲ್ಲಿ ನಿಮ್ಮ ಗ್ರಾಮ ಸೇರಿದೆಯೇ ಎಂದು ತಿಳಿಯಬೇಕೇ…?

(ನ್ಯೂಸ್ ಕಡಬ) newskadaba.com ಮಂಗಳೂರು, ಜು.18. ಇನ್ಮುಂದೆ ಕರಾವಳಿಯ ಕೆಲವು ಗ್ರಾಮಗಳಿಗೆ ದಿನದ 24 ಗಂಟೆಯೂ ನಿರಂತರ ವಿದ್ಯುತ್‌ ಪೂರೈಕೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದ್ದು, ಪವರ್‌ ಕಟ್‌ ಸಮಸ್ಯೆಗೆ ಮುಕ್ತಿ ಸಿಗಲಿದೆ. ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ರವರ ‘ಮಾದರಿ ವಿದ್ಯುತ್‌ ಗ್ರಾಮ’ ಆಶಯದಂತೆ ದಕ್ಷಿಣ ಕನ್ನಡ ಜಿಲ್ಲೆಯ 35 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತೀ ಗ್ರಾಮಕ್ಕೆ ಗರಿಷ್ಠ 40 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ಒಂದೂವರೆ ವರ್ಷದೊಳಗೆ ಮಾದರಿ

ಕರಾವಳಿಯ ಕೆಲವು ಗ್ರಾಮಗಳಲ್ಲಿ ಇನ್ಮುಂದೆ 24 ಗಂಟೆ ವಿದ್ಯುತ್ ► ಅದರಲ್ಲಿ ನಿಮ್ಮ ಗ್ರಾಮ ಸೇರಿದೆಯೇ ಎಂದು ತಿಳಿಯಬೇಕೇ…? Read More »

ಕರಾವಳಿ

ನಾಳೆಯಿಂದ ಕಡಬ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ

(ನ್ಯೂಸ್ ಕಡಬ) newskadaba.com ಕಡಬ, ಜು.18. ಕಡಬದ ವಿದ್ಯುತ್ ವಿತರಣಾ ಕೇಂದ್ರದಲ್ಲಿನ ಬ್ರೇಕರ್ ಗಳನ್ನು ನೂತನವಾಗಿ ಉನ್ನತೀಕರಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಜುಲೈ 19ನೇ ಬುಧವಾರದಿಂದ ಜುಲೈ 26ನೇ ಬುಧವಾರದವರೆಗೆ ಕಡಬದಿಂದ ಹೊರಡುವ ವಿದ್ಯುತ್ ಮಾರ್ಗಗಳಲ್ಲಿ ಸ್ವಲ್ಪ ಮಟ್ಟಿಗೆ ವಿದ್ಯುತ್ ವ್ಯತ್ಯಾಸವಿರುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನಾಳೆಯಿಂದ ಕಡಬ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ Read More »

ಕರಾವಳಿ

ಗದ್ದಲದಲ್ಲಿ ನಡೆದ ನೂಜಿಬಾಳ್ತಿಲ ಗ್ರಾಮ ಸಭೆ ► ಕಲ್ಲುಗುಡ್ಡೆಯಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ವ್ಯಾಪಕ ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ, ಜು.18. ಇಲ್ಲಿಗೆ ಸಮೀಪದ ನೂಜಿಬಾಳ್ತಿಲ ಗ್ರಾಮ ಸಭೆಯು ಕಲ್ಲುಗುಡ್ಡೆಯಲ್ಲಿ ನೂತನವಾಗಿ ಆರಂಭವಾಗಲಿರುವ ಮದ್ಯದಂಗಡಿ ವಿರೋಧಿಸಿ ಹಲವು ಗದ್ದಲದ ನಡುವೆ ಮಂಗಳವಾರದಂದು ನೂಜಿಬಾಳ್ತಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹೆದ್ದಾರಿ ಬದಿಯಲ್ಲಿನ ಬಾರ್ ಗಳನ್ನು ಮುಚ್ಚಬೇಕೆನ್ನುವ ಸುಪ್ರೀಂ ಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ನೆಲ್ಯಾಡಿಯಲ್ಲಿನ ಬಾರನ್ನು ಕಲ್ಲುಗುಡ್ಡೆಗೆ ವರ್ಗಾಯಿಸುವುದನ್ನು ವಿರೋಧಿಸಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಕಲ್ಲುಗುಡ್ಡೆಯಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ಗ್ರಾಮಸ್ಥರ ವಿರೋಧ ಇರುವುದರಿಂದ

ಗದ್ದಲದಲ್ಲಿ ನಡೆದ ನೂಜಿಬಾಳ್ತಿಲ ಗ್ರಾಮ ಸಭೆ ► ಕಲ್ಲುಗುಡ್ಡೆಯಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ವ್ಯಾಪಕ ಆಕ್ರೋಶ Read More »

ಕರಾವಳಿ

ಕಡಬ ಸಿ.ಎ.ಬ್ಯಾಂಕ್ ಉಪಾಧ್ಯಕ್ಷರ ಹಲ್ಲೆ ಪ್ರಕರಣ: ಆರೋಪಿಗಳಿಗೆ ಜು. 29 ರವರೆಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜು.18. ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ರಮೇಶ್ ಭಟ್ ಕಲ್ಪುರೆಗೆ ಹಲ್ಲೆ ನಡೆಸಿದ ಆರೋಪಿಗಳಾದ ಪ್ರಕಾಶ್, ಟಿನ್ಸನ್, ಸನೂಷ್, ಲಿಜೋ, ಸಂತೋಷ್, ಬಿಜು ಎಂಬವರನ್ನು ಸೋಮವಾರದಂದು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಜುಲೈ 29 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇವರ ವಿರುದ್ದ ಐಪಿಸಿ ಸೆಕ್ಷನ್ 143, 147, 341, 323, 326, 307, 395, 149 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಲ್ಲೆ ಘಟನೆಯ ಹಿನ್ನೆಲೆಯಲ್ಲಿ ಸೋಮವಾರದಂದು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಯ

ಕಡಬ ಸಿ.ಎ.ಬ್ಯಾಂಕ್ ಉಪಾಧ್ಯಕ್ಷರ ಹಲ್ಲೆ ಪ್ರಕರಣ: ಆರೋಪಿಗಳಿಗೆ ಜು. 29 ರವರೆಗೆ ನ್ಯಾಯಾಂಗ ಬಂಧನ Read More »

ಕರಾವಳಿ

ರಾಜಕೀಯ ಲಾಭಕ್ಕಾಗಿ ಮನುಷತ್ವ ಕಳೆದುಕೊಳ್ಳಬೇಡಿ: ಎಪಿ ಅಬೂಬಕ್ಕರ್ ಮುಸ್ಲಿಯಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು.17. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಧರ್ಮಾಧಾರಿತವಾಗಿ ಒಡೆಯಲು ಯತ್ನಿಸುತ್ತಿದೆ. ಅವರಿಗೆ ಓಟಿನ ಚಿಂತನೆಯಾದರೆ ಜನರಿಗೆ ಬದುಕಿನ ಚಿಂತೆ ಉಂಟಾಗಿದೆ‌. ಜನರನ್ನು ಸಮಾಧಾನ ಮತ್ತು ಸೌಹಾರ್ದತೆಯಿಂದ ಬದುಕಲು ಬಿಡಿ ಎಂದು ಸುನ್ನೀ ನಾಯಕ ಎಪಿ ಅಬೂಬಕ್ಕರ್ ಮುಸ್ಲಿಯಾರ್ ರವರು ವಿನಂತಿಸಿದ್ದಾರೆ. ಅವರು ಸೋಮವಾರದಂದು ಮಂಗಳೂರಿನಲ್ಲಿ ಕರ್ನಾಟಕ ಸುನ್ನೀ ಉಲೆಮಾಗಳ ನೇತೃತ್ವದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ಈ ದೇಶದಲ್ಲಿ ಬಹುಸಂಖ್ಯಾತ ಹಿಂದೂ ಮುಸ್ಲಿಮ್ ಕ್ರೈಸ್ತರು ಇಂದಿಗೂ ಸಹೋದರತೆಯಿಂದ ಬದುಕುತ್ತಿದ್ದಾರೆ. ಪ್ರತಿಯೊಬ್ಬರೂ ಶಾಂತಿಯನ್ನು

ರಾಜಕೀಯ ಲಾಭಕ್ಕಾಗಿ ಮನುಷತ್ವ ಕಳೆದುಕೊಳ್ಳಬೇಡಿ: ಎಪಿ ಅಬೂಬಕ್ಕರ್ ಮುಸ್ಲಿಯಾರ್ Read More »

ಕರಾವಳಿ

ಜಿಲ್ಲೆಯ ಶಾಂತಿ ಕದಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ► ಎಸ್ಪಿ ಸುಧೀರ್ ಕುಮಾರ್ ರೆಡ್ಡಿ

(ನ್ಯೂಸ್ ಕಡಬ) newskadaba.com ಕಡಬ, ಜು.17. ಜಿಲ್ಲೆಯ ಶಾಂತಿ ಕದಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅಂತಹವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಅವರು ಸೋಮವಾರದಂದು ಕಡಬಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡ ಮೇಲೆ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅಹಿತಕರ ಘಟನೆಗಳು ನಡೆಯುತ್ತಿದ್ದು, ಶಾಂತಿ ಕದಡುವವರ ಮೇಲೆ ಕಠಿಣ ಕಾನೂನು ಕ್ರಮ ಜರಗಿಸಲಾಗುತ್ತದೆ. ಕಡಬದಲ್ಲಿ ಭಾನುವಾರದಂದು ಪೂರ್ವದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿತ್ತಾದರೂ ಆರೋಪಿಗಳ

ಜಿಲ್ಲೆಯ ಶಾಂತಿ ಕದಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ► ಎಸ್ಪಿ ಸುಧೀರ್ ಕುಮಾರ್ ರೆಡ್ಡಿ Read More »

ಕರಾವಳಿ

ಕಡಬ ಸಂಪೂರ್ಣ ಬಂದ್ ► ಪೇಟೆಯಲ್ಲಿ ಪೊಲೀಸರ ಸರ್ಪಗಾವಲು

ಕಡಬ, ಜು.17. ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ರಮೇಶ್ ಭಟ್ ಕಲ್ಪುರೆಗೆ ತಂಡವೊಂದು ಭಾನುವಾರ ಸಂಜೆ ಕಡಬದ ಯಶೋದಾ ಜನರಲ್ ಸ್ಟೋರ್ ಮುಂಭಾಗದಲ್ಲಿ ಹಲ್ಲೆ ನಡೆಸಿದ ಕಾರಣದಿಂದ ಸೋಮವಾರದಂದು ಕಡಬ ಬಂದ್ ಗೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಯ ಪ್ರಮುಖರು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಕಡಬ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ಪೇಟೆಯಲ್ಲಿ ಒಂದೆರಡು ಅಂಗಡಿಗಳು ತೆರೆದಿದ್ದು ಬಿಟ್ಟರೆ ಇನ್ನುಳಿದಂತೆ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿತ್ತು. ಕಡಬ ಶ್ರೀ

ಕಡಬ ಸಂಪೂರ್ಣ ಬಂದ್ ► ಪೇಟೆಯಲ್ಲಿ ಪೊಲೀಸರ ಸರ್ಪಗಾವಲು Read More »

ಕರಾವಳಿ
Scroll to Top