ಕರಾವಳಿ

ಗೋಳಿಯಡ್ಕ ಧರ್ಮಶಿಖರದಲ್ಲಿ ಗಣೇಶೋತ್ಸವ ಸಂಭ್ರಮ ► ಶೋಭಾಯಾತ್ರೆ

(ನ್ಯೂಸ್ ಕಡಬ) newskadaba.com ಕಡಬ, ಆ.31. ರೆಂಜಿಲಾಡಿ ನೂಜಿಬಾಳ್ತಿಲ ಗ್ರಾಮದ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 21ನೇ ವರ್ಷದ ಶ್ರೀ ಗಣೇಶೋತ್ಸವ ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮಶಿಖರದಲ್ಲಿ ನಡೆಯಿತು. ಬೆಳಿಗ್ಗೆ ಸುಪ್ರಭಾತ, ಗಣಹೋಮ, ಶ್ರೀ ಮಹಾಗಣಪತಿ ದೇವರ ಪ್ರತಿಷ್ಟೆ, ಭಜನಾಕಾರ್ಯಕ್ರಮ ನಡೆದು ಬಳಿಕ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಸಂಜೆ ಓಕುಳಿ ಏಲಂ ಬಳಿಕ ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮಶಿಖರದ ಎದುರು ಅಶ್ವಥ ಕಟ್ಟೆಯಲ್ಲಿ ಶ್ರೀದೇವರ ಪೂಜೆ ನಡೆಸಲಾಯಿತು. ಗೋಳಿಯಡ್ಕದಿಂದ […]

ಗೋಳಿಯಡ್ಕ ಧರ್ಮಶಿಖರದಲ್ಲಿ ಗಣೇಶೋತ್ಸವ ಸಂಭ್ರಮ ► ಶೋಭಾಯಾತ್ರೆ Read More »

ಕರಾವಳಿ

ಎಲೆಕ್ಷನ್ ಹೊತ್ತಲ್ಲಿ ಟಿಕೆಟ್ ಪಡೆಯೋಕೆ ಹೊಸ ಪ್ಲ್ಯಾನ್ ► ಬೆಳಗ್ಗಿನ ಉಪಹಾರ ಉಚಿತ ► ಶೆಟ್ಟಿ ಕ್ಯಾಂಟೀನ್

(ನ್ಯೂಸ್ ಕಡಬ) newskadaba.com ಕೋಲಾರ, ಆ.31. ಕರ್ನಾಟಕದ ಮೂಲೆ ಮೂಲೆಯಿಂದಲೂ ಕ್ಯಾಂಟೀನ್ ಸದ್ದು ಜೋರಾಗಿದೆ. ಕಾಂಗ್ರೆಸ್ ಪಕ್ಷದಿಂದ “ಇಂದಿರಾ ಕ್ಯಾಂಟೀನ್”,  ಜೆಡಿಎಸ್‍ನ “ಅಪ್ಪಾಜಿ ಕ್ಯಾಂಟೀನ್”  ಇದೀಗ ಬಿಜೆಪಿ ಮುಖಂಡರ “ಕೃಷ್ಣಯ್ಯ ಶೆಟ್ಟಿ ಕ್ಯಾಂಟೀನ್” ಹೀಗೆ ಕ್ಯಾಂಟೀನ್ ಗಳ ಕಾರುಬಾರು ಜೋರಾಗಿಯೇ ಇದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ಬಿಜೆಪಿ ಮುಖಂಡ ಕೃಷ್ಣಯ್ಯ ಶೆಟ್ಟಿಯವರು, ತಮ್ಮದೇ ಹೆಸರಿನಲ್ಲಿ ಕ್ಯಾಂಟೀನ್ ಶುರು ಮಾಡಿದ್ದಾರೆ. ಕೆಲವು ಸಮಯದಿಂದ ಕ್ಷೇತ್ರದಿಂದ ದೂರ ಉಳಿದಿದ್ದ ಕೃಷ್ಣಯ್ಯಶೆಟ್ಟಿಯವರು ಮತ್ತೆ ಮಾಲೂರು ಕ್ಷೇತ್ರದಲ್ಲಿ

ಎಲೆಕ್ಷನ್ ಹೊತ್ತಲ್ಲಿ ಟಿಕೆಟ್ ಪಡೆಯೋಕೆ ಹೊಸ ಪ್ಲ್ಯಾನ್ ► ಬೆಳಗ್ಗಿನ ಉಪಹಾರ ಉಚಿತ ► ಶೆಟ್ಟಿ ಕ್ಯಾಂಟೀನ್ Read More »

ಕರಾವಳಿ

ಸಹಪಾಠಿ ವಿದ್ಯಾರ್ಥಿನಿ ಜೊತೆ ಟಾಯ್ಲೆಟ್‍ನಲ್ಲಿ ಸರಸ ಸಲ್ಲಾಪ ► ವಿಟ್ಲದ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾದ ವಿಡಿಯೋ

(ನ್ಯೂಸ್ ಕಡಬ) newskadaba.com ವಿಟ್ಲ, ಆ.31. ಇಲ್ಲಿನ ಸ್ಥಳೀಯ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿ ಜೊತೆ ಪಬ್ಲಿಕ್ ಟಾಯ್ಲೆಟ್ ಒಳಗೆ ಸರಸವಾಡುತ್ತಿದ್ದ ವೇಳೆ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಪ್ರಸಂಗ ವಿಟ್ಲ ಪೇಟೆಯಲ್ಲಿ ನಡೆದಿದೆ. ಸಾರ್ವಜನಿಕರು ಅನುಮಾನಗೊಂಡು ಬಾಗಿಲು ತಟ್ಟಿದಾಗ ವಿದ್ಯಾರ್ಥಿ ಹೊರಬಂದಿದ್ದಾನೆ. ಆ ಬಳಿಕ ಮುಖಕ್ಕೆ ಬಟ್ಟೆ ಹಾಕಿಕೊಂಡಿದ್ದ ವಿದ್ಯಾರ್ಥಿನಿಯೂ ಹೊರಬಂದು ಓಡಿ ಪರಾರಿಯಾಗಿದ್ದಾಳೆ. ಇಬ್ಬರೂ ಸಾರ್ವಜನಿಕರ ಕೈಗೆ ಸಿಕ್ಕಿರುವ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ವೈರಲ್

ಸಹಪಾಠಿ ವಿದ್ಯಾರ್ಥಿನಿ ಜೊತೆ ಟಾಯ್ಲೆಟ್‍ನಲ್ಲಿ ಸರಸ ಸಲ್ಲಾಪ ► ವಿಟ್ಲದ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾದ ವಿಡಿಯೋ Read More »

ಕರಾವಳಿ

ಆಲಂಕಾರು ವಿಶೇಷ ಗ್ರಾಮ ಸಭೆ ► ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ, ಆ.31. ಒಂದೆಡೆ ಅಬಕಾರಿ ಅಧಿಕಾರಿಗಳು ಕಾನೂನಿನ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದರೆ ಇನ್ನೊಂದೆಡೆ ಮದ್ಯದಂಗಡಿ ಮುಚ್ಚಿಸುವಂತೆ ಏರು ಧ್ವನಿಯಲ್ಲಿ ಆಗ್ರಹಿಸಿದ ನಾಗರೀಕರು ಈ ಮದ್ಯೆ ಜಿಲ್ಲಾಧಿಕಾರಿಗೆ ಗ್ರಾಮಸ್ಥರಿಂದ ಎಚ್ಚರಿಕೆಯ ನಿರ್ಣಯ ಅಂಗಿಕಾರ ವಾಗ್ವದ, ಆಣೆಪ್ರಮಾಣದ ಸನ್ನಿವೇಶ ಆಲಂಕಾರು ಗ್ರಾಮ ಪಂಚಾಯಿತಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಬುಧವಾರ ವ್ಯಕ್ತವಾಯಿತು. ಸಭೆಯು ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದ ಬಾರ್ಕುಳಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಆಲಂಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಕಾರು ಪೇಟೆಯಲ್ಲಿ ಗ್ರಾಮಸ್ಥರ ಆಕ್ಷೇಪಗಳ

ಆಲಂಕಾರು ವಿಶೇಷ ಗ್ರಾಮ ಸಭೆ ► ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ Read More »

ಕರಾವಳಿ

ಅಪಘಾತವನ್ನು ಆಹ್ವಾನಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಹೊಂಡಗಳು ► ಪಾದಚಾರಿಗಳ, ವಾಹನ ಚಾಲಕರ ಸಮಸ್ಯೆಯನ್ನು ಕೇಳುವವರು ಯಾರು..?

(ನ್ಯೂಸ್ ಕಡಬ) newskadaba.com ಮಾಣಿ, ಆ.31. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಿಂದ ಕಲ್ಲಡ್ಕವರೆಗಿನ ಹಳೀರ, ಸೂರಿಕುಮೇರು, ಕುದ್ರೆಬೆಟ್ಟು ಎಂಬಲ್ಲಿ ಅಪಾಯಕಾರಿ ಹೊಂಡಗಳು ತಲೆ ಎತ್ತಿದ್ದು ಹಲವಾರು ಅಪಘಾತಗಳಿಗೆ ಕಾರಣವಾಗುತ್ತಿದೆ. ಮಳೆಗಾಲದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರೆಲ್ಲಾ ರಸ್ತೆಗಳಲ್ಲೇ ಹೋಗುತ್ತಿರುವುದರಿಂದ ವಾಹನ ಚಾಲಕರಿಗೆ ರಸ್ತೆಯು ಸರಿಯಾಗಿ ಗೋಚರಿಸದೆ ಇಂತಹಾ ಹೊಂಡಗಳಿಗೆ ಬಿದ್ದು ಹಾಗೂ ಕೆಲವೊಂದು ಹೊಂಡಗಳು ಹತ್ತಿರ ತಲುಪಿದ ನಂತರ ಗೋಚರಿಸುವುದರಿಂದ ಕೂಡಲೇ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುವ ವಾಹನಗಳು ಡಿಕ್ಕಿಯಾಗಿ ಹಲವಾರು

ಅಪಘಾತವನ್ನು ಆಹ್ವಾನಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಹೊಂಡಗಳು ► ಪಾದಚಾರಿಗಳ, ವಾಹನ ಚಾಲಕರ ಸಮಸ್ಯೆಯನ್ನು ಕೇಳುವವರು ಯಾರು..? Read More »

ಕರಾವಳಿ

ಬಕ್ರೀದ್ ಪ್ರಯುಕ್ತ ದ.ಕ. ಜಿಲ್ಲೆಯಲ್ಲಿ ಸೆ. 01ರಂದು ರಜೆ ಘೋಷಣೆ ► ಶನಿವಾರ ಎಂದಿನಂತೆ ತೆರೆದಿರಲಿವೆ ಶಾಲಾ ಕಾಲೇಜುಗಳು, ಸರಕಾರಿ ಕಛೇರಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಆ.30. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬವು ಸೆಪ್ಟೆಂಬರ್ 1ರಂದು ನಡೆಯುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶುಕ್ರವಾರದಂದು ರಜೆ ಘೋಷಿಸಲಾಗಿದೆ ಎಂದು ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. ಸೆ.2ರಂದು ನಿಗದಿಯಾಗಿದ್ದ ಬಕ್ರೀದ್ ರಜೆಯನ್ನು ಬದಲಾಯಿಸಿ, ದ.ಕ. ಜಿಲ್ಲೆಯಲ್ಲಿ ಸೆಪ್ಟೆಂಬರ್ 1 ರಂದು ಸರಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ರಜೆ ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಸೆಪ್ಟೆಂಬರ್‌ 2ರಂದು ಎಂದಿನಂತೆ ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳು

ಬಕ್ರೀದ್ ಪ್ರಯುಕ್ತ ದ.ಕ. ಜಿಲ್ಲೆಯಲ್ಲಿ ಸೆ. 01ರಂದು ರಜೆ ಘೋಷಣೆ ► ಶನಿವಾರ ಎಂದಿನಂತೆ ತೆರೆದಿರಲಿವೆ ಶಾಲಾ ಕಾಲೇಜುಗಳು, ಸರಕಾರಿ ಕಛೇರಿಗಳು Read More »

ಕರಾವಳಿ

ಸುಳ್ಯ ನಿವಾಸಿ ವಿಚಾರಣಾಧೀನ ಖೈದಿ ಮೃತ್ಯು ► ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಘಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.30. ಜೈಲಿನಲ್ಲಿದ್ದ ವಿಚಾರಣಾಧೀನ ಖೈದಿಯೊಬ್ಬರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ. ಮೃತರನ್ನು ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದ ವಿಚಾರಣಾಧೀನ ಖೈದಿ ಸುಳ್ಯ ನಿವಾಸಿ ಶಿವಪ್ಪ (47) ಎಂದು ಗುರುತಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶಿವಪ್ಪರನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸುಳ್ಯ ನಿವಾಸಿ ವಿಚಾರಣಾಧೀನ ಖೈದಿ ಮೃತ್ಯು ► ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಘಟನೆ Read More »

ಕರಾವಳಿ

ಶ್ರೀ ಮಹಾಗಣಪತಿ ಸೇವಾ ಸಮಿತಿ► ಕೊೖಲ-ರಾಮಕುಂಜ ಗಣೇಶೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಆ.30, ಶ್ರೀ ಮಹಾಗಣಪತಿ ಸೇವಾ ಸಮಿತಿ ಕೊೖಲ-ರಾಮಕುಂಜ ವತಿಯಿಂದ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ರಾಮಕುಂಜ ಗಣೇಶನಗರ ಶ್ರೀ ಮಹಾಗಣಪತಿ ಓಂ ಕ್ರೀಡಾಂಗಣದ ದಿ.ಆರ್ವಾರ ಸುಬ್ಬಣ್ಣ ಶೆಟ್ಟಿ ನಿರ್ಮಿತ ಶ್ರೀ ಮಹಾಗಣಪತಿ ಕಟ್ಟೆಯಲ್ಲಿ ನಡೆಯಿತು. ಶುಕ್ರವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಉಷ:ಕಾಲ ಪೂಜೆ ನಡೆಯಿತು. ಬಳಿಕ ದ್ವಾದಶ ನಾಳಿಕೇಳ ಗಣಯಾಗ ನಡೆಯಿತು. ಶಾರದನಗರ ಶ್ರೀ ಶಾರದಾಂಬ ಭಜನಾ ಮಂಡಳಿ ಮತ್ತು ಕುಂಡಾಜೆ ಶ್ರೀ ನಾಗಬ್ರಹ್ಮ ಭಜನಾ

ಶ್ರೀ ಮಹಾಗಣಪತಿ ಸೇವಾ ಸಮಿತಿ► ಕೊೖಲ-ರಾಮಕುಂಜ ಗಣೇಶೋತ್ಸವ Read More »

ಕರಾವಳಿ

ಕೊಂಬಾರು ಸ್ಮಶಾನ ಜಾಗದ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಆ.30, ಕೊಂಬಾರು ಗ್ರಾಮ ಪಂಚಾಯಿತಿ ಹಾಗೂ ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರ ಜಂಟಿ ಆಶ್ರಯದಲ್ಲಿ ಕೊಂಬಾರು ಗ್ರಾಮದ ಸ್ಮಶಾನ ಜಾಗದ ಸ್ವಚ್ಚತಾ ಕಾರ್ಯ ನಡೆಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್ ಕುಮಾರ್, ಪಿಡಿಓ ರಾಘವೇಂದ್ರ, ಯೋಜನೆಯ ಕೊಂಬಾರು ಒಕ್ಕೂಟ ಅಧ್ಯಕ್ಷ ಲಿಂಗಪ್ಪ ಗೌಡ ಪೊರ್ದೇಲು, ಸೇವಾಪ್ರತಿನಿಧಿಪರಮೇಶ್ವರ ಉರುಂಬಿ, ಸಿರಿಬಾಗಿಲು ಮತ್ತು ಬಿಳಿನೆಲೆ ಸೇವಾಪ್ರತಿನಿಧಿ ವಿನೋದ್ ಕೆ ಸಿ ಮೊದಲಾದವರು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಕೊಂಬಾರು ಸ್ಮಶಾನ ಜಾಗದ ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ

ಮಂಗಳೂರು: ಪೊಲೀಸ್ ಸರ್ಪಗಾವಲು ನಡುವೆಯೂ ಐಜಿಪಿ ಬಂಗಲೆಯಿಂದ ಕಳ್ಳತನ ► ತಿಂಗಳು ಕಳೆದರೂ ಕಳ್ಳರ ಪತ್ತೆ ಮಾಡಲಾಗದೆ ಪೊಲೀಸರ ನಿರ್ಲಕ್ಷ್ಯತನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.30. ಪೊಲೀಸರು ಎಂದರೆ ಜನರ ರಕ್ಷಣೆಗೆಂದು ಇರುವ ಇಲಾಖೆಯಾಗಿದ್ದು, ಸಮಾಜದ ರಕ್ಷಣೆಯ ಹೊಣೆಗಾರಿಕೆ ಪೊಲೀಸ್ ಇಲಾಖೆಯ ಮೇಲಿದೆ. ಆದರೆ ಬರೋಬ್ಬರಿ 15 ಪೊಲೀಸರನ್ನು ಸೇವೆಗೆಂದು ನಿಯೋಜಿಸಲ್ಪಟ್ಟಿರುವ ಐಜಿಪಿ ಬಂಗಲೆಯಲ್ಲಿ ಕಳ್ಳತನ ನಡೆದಿದೆ ಎಂದರೆ ನಂಬಬಹುದಾ..? ನಂಬಲೇ ಬೇಕು… ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ ಪಕ್ಕದಲ್ಲಿರುವ ಪಶ್ಚಿಮ ವಲಯ ಐಜಿಪಿಯವರ ನಿವಾಸದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ಎಕರೆ ವ್ಯಾಪ್ತಿಯಲ್ಲಿರುವ ಈ ಬಂಗಲೆಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆಯಾ ಎನ್ನುವ

ಮಂಗಳೂರು: ಪೊಲೀಸ್ ಸರ್ಪಗಾವಲು ನಡುವೆಯೂ ಐಜಿಪಿ ಬಂಗಲೆಯಿಂದ ಕಳ್ಳತನ ► ತಿಂಗಳು ಕಳೆದರೂ ಕಳ್ಳರ ಪತ್ತೆ ಮಾಡಲಾಗದೆ ಪೊಲೀಸರ ನಿರ್ಲಕ್ಷ್ಯತನ Read More »

ಕರಾವಳಿ
Scroll to Top