ಸಹಪಾಠಿ ವಿದ್ಯಾರ್ಥಿನಿ ಜೊತೆ ಟಾಯ್ಲೆಟ್‍ನಲ್ಲಿ ಸರಸ ಸಲ್ಲಾಪ ► ವಿಟ್ಲದ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾದ ವಿಡಿಯೋ

(ನ್ಯೂಸ್ ಕಡಬ) newskadaba.com ವಿಟ್ಲ, ಆ.31. ಇಲ್ಲಿನ ಸ್ಥಳೀಯ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿ ಜೊತೆ ಪಬ್ಲಿಕ್ ಟಾಯ್ಲೆಟ್ ಒಳಗೆ ಸರಸವಾಡುತ್ತಿದ್ದ ವೇಳೆ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಪ್ರಸಂಗ ವಿಟ್ಲ ಪೇಟೆಯಲ್ಲಿ ನಡೆದಿದೆ.

ಸಾರ್ವಜನಿಕರು ಅನುಮಾನಗೊಂಡು ಬಾಗಿಲು ತಟ್ಟಿದಾಗ ವಿದ್ಯಾರ್ಥಿ ಹೊರಬಂದಿದ್ದಾನೆ. ಆ ಬಳಿಕ ಮುಖಕ್ಕೆ ಬಟ್ಟೆ ಹಾಕಿಕೊಂಡಿದ್ದ ವಿದ್ಯಾರ್ಥಿನಿಯೂ ಹೊರಬಂದು ಓಡಿ ಪರಾರಿಯಾಗಿದ್ದಾಳೆ. ಇಬ್ಬರೂ ಸಾರ್ವಜನಿಕರ ಕೈಗೆ ಸಿಕ್ಕಿರುವ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

Scroll to Top