ಕರಾವಳಿ

ದೀಪಕ್ ರಾವ್ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ► ದೀಪಕ್ ಸಹೋದರನಿಗೆ MRPL ನಲ್ಲಿ ಕೆಲಸ ನೀಡುವಂತೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.07, ಇತ್ತೀಚೆಗೆ ದುಷ್ಕರ್ಮಿಗಳ ಇರಿತಕ್ಕೊಳಗಾಗಿ ಮೃತಪಟ್ಟಿದ್ದ ದೀಪಕ್ ರಾವ್ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ದೀಪಕ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸುರತ್ಕಲ್ ನ ಕಾಟಿಪಳ್ಳದಲ್ಲಿರುವ ದೀಪಕ್ ಮನೆಗೆ ಭಾನುವಾರ ರಾತ್ರಿ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೀಪಕ್ ರಾವ್ ತಾಯಿಯನ್ನು ಸಂತೈಸಿದರು. ಜೊತೆಗೆ ದೀಪಕ್ ಸಹೋದರನಿಗೆ ಎಂ.ಆರ್.ಪಿ.ಎಲ್.ನಲ್ಲಿ ಕೆಲಸ ನೀಡುವಂತೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  

ದೀಪಕ್ ರಾವ್ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ► ದೀಪಕ್ ಸಹೋದರನಿಗೆ MRPL ನಲ್ಲಿ ಕೆಲಸ ನೀಡುವಂತೆ ಸೂಚನೆ Read More »

ಕರಾವಳಿ

ಫೆ. 24, 25 ರಂದು ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ► ನೇತ್ರಾವತಿ ನದಿ ಕಿನಾರೆಯಲ್ಲಿ ಕಂಬಳಕ್ಕಾಗಿ ನಡೆಯಿತು ಕರೆ ಮುಹೂರ್ತ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.07. ವಿಜಯ-ವಿಕ್ರಮ ಜೋಡುಕರೆ ಕಂಬಳವು ಫೆ.24 ಮತ್ತು ಫೆ.25ರಂದು ನಡೆಯಲಿರುವುದರಿಂದ ಹಳೆಗೇಟು ದಡ್ಡುವಿನ ಶ್ರೀ ರಾಜನ್ ದೈವ ಕಲ್ಕುಡಕಟ್ಟೆಯ ಬಳಿ ಇರುವ  ನೇತ್ರಾವತಿ ನದಿ ಕಿನಾರೆಯ ಕಂಬಳ ಕರೆಯಲ್ಲಿ ಭಾನುವಾರ ಕಂಬಳಕ್ಕಾಗಿ ಕರೆ ಮುಹೂರ್ತ ನಡೆಯಿತು. ಕರೆ ಮುಹೂರ್ತ ನೆರವೇರಿಸಿ ಮಾತನಾಡಿದ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಕಂಬಳ ಪರ ಕಾನೂನು ಹೋರಾಟಗಾರ ಅಶೋಕ್ ಕುಮಾರ್ ರೈ ಕೋಡಿಂಬಾಡಿ ರಾಜ್ಯ ಹಾಗೂ ಕೇಂದ್ರ ಸರಕಾರದ ಸ್ಪಂದನೆಯಿಂದಾಗಿ ಕಳೆದ ಎರಡು ವರ್ಷಗಳಿಂದ

ಫೆ. 24, 25 ರಂದು ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ► ನೇತ್ರಾವತಿ ನದಿ ಕಿನಾರೆಯಲ್ಲಿ ಕಂಬಳಕ್ಕಾಗಿ ನಡೆಯಿತು ಕರೆ ಮುಹೂರ್ತ Read More »

ಕರಾವಳಿ

ಆತೂರು ದಿಕ್ರ್‌ ಹಲ್ಕಾ ವಾರ್ಷಿಕೋತ್ಸವ ► ದ್ಸಿಕ್ರ್‌, ಸ್ವಲಾತ್ ನಿಂದ ಹೃದಯ ಪರಿಪೂರ್ಣತೆ: ತ್ವಾಖಾ ಅಹ್ಮದ್ ಮೌಲವಿ

(ನ್ಯೂಸ್ ಕಡಬ) newskadaba.com ಕಡಬ, ಜ.07. ದಿಕ್ರ್‌, ಸ್ವಲಾತ್ ಹೇಳುವ ಮೂಲಕ ನಮ್ಮ ಆತ್ಮ ಶುದ್ಧೀಕರಣದೊಂದಿಗೆ ಹೃದಯ ಪರಿಪೂರ್ಣತೆ ಆಗುವುದರ ಜೊತೆಗೆ ಪುಣ್ಯ ಸಂಪಾದನೆ ಲಭಿಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮೌಲವಿ ಅಲ್ಖಾಸಿಮಿ ಅಲ್ಅಝ್ಹರಿ ಹೇಳಿದರು. ಅವರು ಗುರುವಾರ ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಪ್ರತಿ ತಿಂಗಳ ಮೊದಲ ಗುರುವಾರ ರಾತ್ರಿ ಆಚರಿಸಿಕೊಂಡು ಬರುತ್ತಿರುವ ದಿಕ್ರ್‌ ಹಲ್ಕಾ ಇದರ 17ನೇ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೈಜ ಮುಸ್ಲಿಂ ಆಗಿರುವಾತ,

ಆತೂರು ದಿಕ್ರ್‌ ಹಲ್ಕಾ ವಾರ್ಷಿಕೋತ್ಸವ ► ದ್ಸಿಕ್ರ್‌, ಸ್ವಲಾತ್ ನಿಂದ ಹೃದಯ ಪರಿಪೂರ್ಣತೆ: ತ್ವಾಖಾ ಅಹ್ಮದ್ ಮೌಲವಿ Read More »

ಕರಾವಳಿ

ಬದುಕಿನ ಅರ್ಥ ತಿಳಿಯದ ಜೀವನ ವ್ಯರ್ಥ: ಧರ್ಮಪಾಲನಾಥ ಶ್ರೀ ► ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಜ.07.  ಶ್ರೇಷ್ಠವಾದ ಮನುಷ್ಯ ಜನ್ಮದಲ್ಲಿ ಬದುಕಿನ ಅರ್ಥ ತಿಳಿಯದೆ ಬಾಳುವುದು ವ್ಯರ್ಥ, ಧರ್ಮದ ಹಾದಿಯಲ್ಲಿ ಬದುಕಿ ಇನ್ನೊಬ್ಬರಿಗೆ ಮಾದರಿಯಾದಾಗ ಜೀವನ ಸಾರ್ಥಕ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುತ್ತಿದ್ದರು. ಮನುಷ್ಯ ಸ್ವಾರ್ಥ ಬಿಟ್ಟು

ಬದುಕಿನ ಅರ್ಥ ತಿಳಿಯದ ಜೀವನ ವ್ಯರ್ಥ: ಧರ್ಮಪಾಲನಾಥ ಶ್ರೀ ► ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ Read More »

ಕರಾವಳಿ

ಸವಣೂರು: ಜಿಲ್ಲಾ ಯುವ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಸಂಘ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಸವಣೂರು, ಜ.07. ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಮೇಳ ಸಂಘಟನಾ ಸಮಿತಿ ಇದರ ವತಿಯಿಂದ ಕೊಡಮಾಡುವ ಜಿಲ್ಲಾ ಯುವಜನ ಒಕ್ಕೂಟದ ಪ್ರಶಸ್ತಿಯನ್ನು ಸವಣೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಯುವಜನಮೇಳದ ಸಂದರ್ಭ ಪ್ರದಾನಿಸಲಾಯಿತು. ಯುವಜನ ಚಟುವಟಿಕೆ, ಕಲೆ, ಸಾಮಾಜಿಕ ಬದ್ಧತೆ, ಸಂಘಟನೆ ಮೂಲಕ ಗಣನೀಯ ಸೇವೆ ಸಲ್ಲಿಸುತ್ತಿರುವ ದ.ಕ. ಜಿಲ್ಲೆಯ 5 ಯುವಕ ಮಂಡಲಗಳನ್ನು ಅತ್ಯುತ್ತಮ ಸಂಘ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬೆಳ್ಳಾರೆ ಸ್ನೇಹಿತರ ಕಲಾ

ಸವಣೂರು: ಜಿಲ್ಲಾ ಯುವ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಸಂಘ ಪ್ರಶಸ್ತಿ ಪ್ರದಾನ Read More »

ಕರಾವಳಿ

ಕೋಮುವಾದವನ್ನು ಬೆಂಬಲಿಸುತ್ತಾರೆಂಬ ಆರೋಪ ► ಪಬ್ಲಿಕ್ ಟಿವಿಯವರನ್ನು ತರಾಟೆಗೆತ್ತಿಕೊಂಡ ಮುಸ್ಲಿಮರು

(ನ್ಯೂಸ್ ಕಡಬ) newskadaba.com ಮಂಗಳೂರು, ಜ.07. ಕೋಮುವಾದಿ ವರದಿಗಳನ್ನು ಬೆಂಬಲಿಸಿ ಪ್ರಕಟಿಸುತ್ತಾರೆ ಎಂದು ಆರೋಪಿಸಿ ಪಬ್ಲಿಕ್ ಟಿವಿಯ ಪ್ರತಿನಿಧಿಗಳನ್ನು ಮುಸ್ಲಿಮರು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರದಂದು ಮಂಗಳೂರಿನಲ್ಲಿ ನಡೆದಿದೆ. ದೀಪಕ್‌ ರಾವ್ ಹತ್ಯೆಯಂದು ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಭಾನುವಾರದಂದು ಮೃತಪಟ್ಟ ಆಕಾಶ ಭವನ ನಿವಾಸಿ ಅಹಮದ್ ಬಶೀರ್ ರವರ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದ ಸ್ಥಳಕ್ಕೆ ವರದಿ ಮಾಡಲೆಂದು ತೆರಳಿದ್ದ ಪಬ್ಲಿಕ್ ಟಿವಿಯ ಪ್ರತಿನಿಧಿಗಳಿಗೆ ಘೇರಾವ್ ಹಾಕಿದ ಸಾರ್ವಜನಿಕರು ಸ್ಥಳದಿಂದ ಕಳುಹಿಸಿದ್ದು ಇದೀಗ ಆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ

ಕೋಮುವಾದವನ್ನು ಬೆಂಬಲಿಸುತ್ತಾರೆಂಬ ಆರೋಪ ► ಪಬ್ಲಿಕ್ ಟಿವಿಯವರನ್ನು ತರಾಟೆಗೆತ್ತಿಕೊಂಡ ಮುಸ್ಲಿಮರು Read More »

ಕರಾವಳಿ

ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಬಶೀರ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.07. ದೀಪಕ್‌ ರಾವ್ ಹತ್ಯೆಯಂದು ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಭಾನುವಾರದಂದು ಮೃತಪಟ್ಟ ಆಕಾಶ ಭವನ ನಿವಾಸಿ ಅಹಮದ್ ಬಶೀರ್ ಕುಟಂಬಕ್ಕೆ ಸರಕಾರ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ದೀಪಕ್ ರಾವ್ ಕುಟುಂಬಕ್ಕೆ ನೀಡಿದಂತೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತದಿಂದ ತಲಾ 5 ಲಕ್ಷ ರೂ. ಪರಿಹಾರವನ್ನು ಬಶೀರ್ ಕುಟುಂಬಕ್ಕೂ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಬಶೀರ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ Read More »

ಕರಾವಳಿ

ಅಮಾಯಕರ ಹತ್ಯೆ ಮಾಡುವವರನ್ನು ಸಹಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ► ಬೆಳ್ತಂಗಡಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ.07. ದೇವರು ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಅಮಾಯಕ ಜನರನ್ನು ಹತ್ಯೆ ಮಾಡುವಂತಹ, ಹಿಂಸಾಚಾರ ನಡೆಸುವಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಭಾನುವಾರದಂದು ಬೆಳ್ತಂಗಡಿಯಲ್ಲು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಅಧಿಕಾರದ ಆಸೆಯಿಂದ ಕೆಲವರು ಹೆಣವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ

ಅಮಾಯಕರ ಹತ್ಯೆ ಮಾಡುವವರನ್ನು ಸಹಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ► ಬೆಳ್ತಂಗಡಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ Read More »

ಕರಾವಳಿ

ದುಷ್ಕರ್ಮಿಗಳಿಂದ ತೀವ್ರ ಇರಿತಕ್ಕೊಳಗಾಗಿದ್ದ ಬಶೀರ್ ಮೃತ್ಯು ► ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ನಡೆದಿದ್ದ ಕೊಲೆಯತ್ನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.07. ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಕೊಟ್ಟಾರ ಚೌಕಿಯಲ್ಲಿ ಜನವರಿ 03 ರಂದು ರಾತ್ರಿ ದುಷ್ಕರ್ಮಿಗಳಿಂದ ಬರ್ಬರ ಹಲ್ಲೆಗೀಡಾಗಿ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಆಕಾಶಭವನ ನಿವಾಸಿ ಬಶೀರ್ ಭಾನುವಾರದಂದು ಕೊನೆಯುಸಿರೆಳೆದರು. ತನ್ನ ಫಾಸ್ಟ್ ಫುಡ್ ಅಂಗಡಿಯನ್ನು ಮುಚ್ಚುವಷ್ಟರಲ್ಲಿ ದುಷ್ಕರ್ಮಿಗಳು ತಲ್ವಾರು ದಾಳಿ ನಡೆಸಿದ ಪರಿಣಾಮ ಬಶೀರ್ ರವರು ಗಂಭೀರ ಗಾಯಗೊಂಡು ಬಿದ್ದಿದ್ದರು. ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಭಾನುವಾರದಂದು ಕೊನೆಯುಸಿರೆಳೆದಿದ್ದಾರೆ‌.

ದುಷ್ಕರ್ಮಿಗಳಿಂದ ತೀವ್ರ ಇರಿತಕ್ಕೊಳಗಾಗಿದ್ದ ಬಶೀರ್ ಮೃತ್ಯು ► ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ನಡೆದಿದ್ದ ಕೊಲೆಯತ್ನ Read More »

ಕರಾವಳಿ

ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ► ವಾರದೊಳಗೆ 31,800 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್: ಉನ್ನತ ಶಿಕ್ಷಣ ಸಚಿವ ರಾಯರೆಡ್ಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.07. ರಾಜ್ಯದಾದ್ಯಂತ 412 ಸರಕಾರಿ ಪದವಿ, 85 ಪಾಲಿಟೆಕ್ನಿಕ್ ಮತ್ತು 14 ಸರಕಾರಿ ಇಂಜಿನಿಯರ್ ಕಾಲೇಜುಗಳ ಒಟ್ಟು 31,800 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಒಂದು ವಾರದೊಳಗೆ ಉಚಿತ ಲ್ಯಾಪ್‍ಟಾಪ್ ವಿತರಿಸಲಾಗುವುದು ಎಂದು  ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು. ಅವರು ನಗರದ ಪುರಭವನದಲ್ಲಿ 2016-17 ಸಾಲಿನ ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆಯ ಅಡಿಯಲ್ಲಿ ದ.ಕ ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರಕಾರಿ ಪಾಲಿಟೆಕ್ನಿಕ್‍ಗಳ ಪರಿಶಿಷ್ಟ ಜಾತಿ

ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ► ವಾರದೊಳಗೆ 31,800 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್: ಉನ್ನತ ಶಿಕ್ಷಣ ಸಚಿವ ರಾಯರೆಡ್ಡಿ Read More »

ಕರಾವಳಿ
Scroll to Top