ಕರಾವಳಿ

ಪದವು: ಕುಮಾರಧಾರಾ ನದಿಗೆ ಸ್ನಾನಕ್ಕಿಳಿದು ಸುಸ್ತಾದ 8 ಮಂದಿ ಬಾಲಕರನ್ನು ರಕ್ಷಿಸಿದ ಸ್ಥಳೀಯರು ► ಊರವರ ಸಮಯಪ್ರಜ್ಞೆಯಿಂದಾಗಿ ತಪ್ಪಿತು ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಕಡಬ, ಫೆ.13. ಸ್ನಾನಕ್ಕೆಂದು ನದಿಗೆ ಇಳಿದಿದ್ದ ಎಂಟು ಮಂದಿ ಬಾಲಕರು ಹಿಂತಿರುಗಿ ಬರಲಾಗದೆ ಒದ್ದಾಡುತ್ತಿದ್ದಾಗ ಸ್ಥಳೀಯರು ರಕ್ಷಿಸಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದ ಘಟನೆ ಮಂಗಳವಾರದಂದು ಕುಂತೂರಿನಲ್ಲಿ ನಡೆದಿದೆ. ಹತ್ತನೇ ತರಗತಿಯ ಎಂಟು ಮಂದಿ ಬಾಲಕರು ಸ್ನಾನ ಮಾಡುವ ಸಲುವಾಗಿ ಪದವು ಸಮೀಪದ ಉರುಂಬಿ ಎಂಬಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಗೆ‌ ಇಳಿದಿದ್ದರು. ನದಿ ನೀರಿನಲ್ಲಿ ಆಟವಾಡುತ್ತಾ ಮುಂದೆ ಸಾಗಿದ ಬಾಲಕರು ನದಿಯ ಮಧ್ಯ ಭಾಗಕ್ಕೆ ತಲುಪಿದಾಗ ಸುಸ್ತಾಗಿದ್ದು, ಈಜುವ ಪರಿಸ್ಥಿತಿಯಲ್ಲಿ ಇರಲಿಲ್ಲವೆನ್ನಲಾಗಿದೆ. ಇವರು […]

ಪದವು: ಕುಮಾರಧಾರಾ ನದಿಗೆ ಸ್ನಾನಕ್ಕಿಳಿದು ಸುಸ್ತಾದ 8 ಮಂದಿ ಬಾಲಕರನ್ನು ರಕ್ಷಿಸಿದ ಸ್ಥಳೀಯರು ► ಊರವರ ಸಮಯಪ್ರಜ್ಞೆಯಿಂದಾಗಿ ತಪ್ಪಿತು ಭಾರೀ ಅನಾಹುತ Read More »

ಕರಾವಳಿ

ಅರಂತೋಡು: ಶಾಲಾ ಬಸ್ ಢಿಕ್ಕಿ ಹೊಡೆದು 6 ವರ್ಷದ ಬಾಲಕಿ ಮೃತ್ಯು ► ಬಸ್ಸಿನಿಂದ ಇಳಿದು ಟಿಫಿನ್ ಪಡೆಯುತ್ತಿದ್ದಾಗ ಘಟನೆ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.13. ಶಾಲಾ ಬಸ್ಸೊಂದು ಢಿಕ್ಕಿ ಹೊಡೆದು ಆರು ವರ್ಷ ವಯಸ್ಸಿನ ಬಾಲಕಿ ಮೃತಪಟ್ಟ ಘಟನೆ ಸುಳ್ಯ ಸಮೀಪದ ಅರಂತೋಡಿನಲ್ಲಿ ಸೋಮವಾರ ಸಂಜೆ ನಡೆದಿದೆ. ಮೃತ ಬಾಲಕಿಯನ್ನು ಸುಳ್ಯ ತಾಲೂಕು ಅರಂತೋಡು ಗ್ರಾಮದ ಬಿಳಿಯಾರು ನಿವಾಸಿ ಅಪ್ಪಕುಂಜಿ ಎಂಬವರ ಪುತ್ರಿ, ಕೆವಿಜಿ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ಆಗ್ನೇಯ ಬಾಲು(6) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಬಾಲಕಿ ಸ್ಕೂಲ್ ಬಸ್ಸಿನಿಂದ ಇಳಿದಿದ್ದು ಆ ಸಮಯ ಆಕೆಯ ಟಿಫಿನ್ ಬಾಕ್ಸ್ ಬಸ್ಸಿನಲ್ಲಿ ಉಳಿದಿದ್ದರಿಂದ ಅದನ್ನ

ಅರಂತೋಡು: ಶಾಲಾ ಬಸ್ ಢಿಕ್ಕಿ ಹೊಡೆದು 6 ವರ್ಷದ ಬಾಲಕಿ ಮೃತ್ಯು ► ಬಸ್ಸಿನಿಂದ ಇಳಿದು ಟಿಫಿನ್ ಪಡೆಯುತ್ತಿದ್ದಾಗ ಘಟನೆ Read More »

ಕರಾವಳಿ

ಮೃತ ದೀಪಕ್ ಸಹೋದರನಿಗೆ ಸಿದ್ಧವಾಯಿತು ಸರಕಾರಿ ನೌಕರಿಯ ಆಫರ್ ► ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯಿಂದ ಮಾನವೀಯ ನೆಲೆಯಲ್ಲಿ ಉದ್ಯೋಗ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.13. ಇತ್ತೀಚೆಗೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಸುರತ್ಕಲ್ ನ ದೀಪಕ್ ರಾವ್ ಕುಟುಂಬದ ಜೀವನಕ್ಕೆ ಕೇಂದ್ರ ಸರ್ಕಾರ ಆಧಾರವಾಗಿ ನಿಲ್ಲಲು ಮುಂದಾಗಿದ್ದು, ದೀಪಕ್ ಸೋದರ ಸತೀಶ್ ಗೆ ಕೇಂದ್ರ ಸರಕಾರಿ ಸ್ವಾಮ್ಯದ ಕುದುರೆಮುಖ ಕಬ್ಬಿಣ ಅದಿರು ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಆಫರ್ ಬಂದಿದೆ. ಹುಟ್ಟಿನಿಂದಲೇ ಮಾತೂ ಬರದ, ಕಿವಿಯೂ ಕೇಳದ 28 ರ ಹರೆಯದ ಅನಕ್ಷರಸ್ಥ ಸತೀಶ್ ನಿಗೆ ಪಣಂಬೂರಿನಲ್ಲಿರುವ ಕೆಐಒಸಿಎಲ್ ಕಂಪನಿಯಲ್ಲಿ ಮಾನವೀಯ ನೆಲೆಯಲ್ಲಿ ಕೆಲಸ ನೀಡಲು ಆಫರ್ ನೀಡಲಾಗಿದೆ.

ಮೃತ ದೀಪಕ್ ಸಹೋದರನಿಗೆ ಸಿದ್ಧವಾಯಿತು ಸರಕಾರಿ ನೌಕರಿಯ ಆಫರ್ ► ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯಿಂದ ಮಾನವೀಯ ನೆಲೆಯಲ್ಲಿ ಉದ್ಯೋಗ Read More »

ಕರಾವಳಿ

ಬಂಟ್ವಾಳ: ನಕಲಿ ದಾಖಲೆ ಸೃಷ್ಟಿಸಿ 70 ಲಕ್ಷಕ್ಕೂ ಅಧಿಕ ಹಣ ಬ್ಯಾಂಕಿಗೆ ವಂಚನೆ ► ಉಂಡ ಮನೆಗೇ ದ್ರೋಹ ಬಗೆದ ಬ್ಯಾಂಕ್ ಮ್ಯಾನೇಜರ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.12. ಬ್ಯಾಂಕ್ ಮ್ಯಾನೇಜರೋರ್ವರೇ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ.ಗಳನ್ನು ಸಾಲವಾಗಿ ತೆಗೆದು ವಂಚಿಸುವ ಮೂಲಕ ಉಂಡ ಮನೆಗೇ ದ್ರೋಹ ಬಗೆದ ಘಟನೆ ಬುದ್ಧಿವಂತರ ಜಿಲ್ಲೆಯಾದ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಬೆಳಕಿಗೆ ಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಡಿಕೇಟ್ ಬ್ಯಾಂಕ್ ವಗ್ಗ ಶಾಖೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಾಖಾ ಮ್ಯಾನೇಜರ್ ತಮಿಳುನಾಡು ಮೂಲದ ಟಿ. ದುರೈ ಎಂಬಾತ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಬಂಗಾರದ ಅಡಮಾನ ಸಾಲ ಮತ್ತು

ಬಂಟ್ವಾಳ: ನಕಲಿ ದಾಖಲೆ ಸೃಷ್ಟಿಸಿ 70 ಲಕ್ಷಕ್ಕೂ ಅಧಿಕ ಹಣ ಬ್ಯಾಂಕಿಗೆ ವಂಚನೆ ► ಉಂಡ ಮನೆಗೇ ದ್ರೋಹ ಬಗೆದ ಬ್ಯಾಂಕ್ ಮ್ಯಾನೇಜರ್ Read More »

ಕರಾವಳಿ

ಚಾರ್ಮಾಡಿ: 60 ಅಡಿ ಆಳದ ಪ್ರಪಾತಕ್ಕೆ ಬಿದ್ದ ಬೊಲೇರೋ ► ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.12. ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ಕಾರೊಂದು ರಸ್ತೆ ಬದಿಯ 60 ಅಡಿಯ ಕಮರಿಗೆ ಉರುಳಿಬಿದ್ದ ಘಟನೆ ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ಘಟನೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದ ಕಾರ್ಟಗಿ ನಿವಾಸಿಗಳಾದ ಬೊಲೆರೋ ಚಾಲಕ ಶ್ರೀಧರ್(38), ಶರಣಪ್ಪ(34), ತೇಜಶ್ವಿನಿ(9) ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ 60 ಅಡಿ ಪ್ರಪಾತಕ್ಕೆ ಬಿದ್ದು ಜಖಂಗೊಂಡಿದೆ.

ಚಾರ್ಮಾಡಿ: 60 ಅಡಿ ಆಳದ ಪ್ರಪಾತಕ್ಕೆ ಬಿದ್ದ ಬೊಲೇರೋ ► ಮೂವರಿಗೆ ಗಾಯ Read More »

ಕರಾವಳಿ

ಬೆಳ್ತಂಗಡಿ: ವ್ಯಕ್ತಿಯ ಕೊಲೆಗೈದ ತಂದೆ, ಸಹೋದರನ ಬಂಧನ ► ಹತ್ಯೆಗೈದು 24 ಗಂಟೆಗಳೊಳಗೆ ಆರೋಪಗಳನ್ನು ಬಂಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.12. ತನ್ನ ಮಗನನ್ನು ಚೂರಿಯಿಂದ ಇರಿದು ಕೊಲೆ‌ ಮಾಡಿ ಪರಾರಿಯಾಗಿದ್ದ ಬೆಳ್ತಂಗಡಿಯ ಜ್ಯೋತಿಷಿಗಳಾದ ಮಂಜುನಾಥ ಹಾಗೂ ಆತನ ಮತ್ತೋರ್ವ ಪುತ್ರ ರಾಘವೇಂದ್ರನನ್ನು ಜಿಲ್ಲಾ ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ. ತಂದೆ ಮಗ ಸೇರಿ ನವೀನ್‌ನನ್ನು ಕೊಲೆಗೈದು ರಾತ್ರಿಯೇ ಕಾರಿನಲ್ಲಿ ಪರಾರಿಯಾಗಿದ್ದರು. ಇದರ ಸುಳಿವು ಅರಿತ ಪೊಲೀಸರು ನೆರೆ ಜಿಲ್ಲೆಗಳಲ್ಲಿ ನಾಕಾಬಂಧಿ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ತಾಲೂಕಿನ ಕಸಬಾ ಗ್ರಾಮದ ಮಟ್ಲ ಎಂಬಲ್ಲಿ ನವೀನ್‌ನನ್ನು ಆತನ ತಂದೆ ಮಂಜುನಾಥ ಹಾಗೂ

ಬೆಳ್ತಂಗಡಿ: ವ್ಯಕ್ತಿಯ ಕೊಲೆಗೈದ ತಂದೆ, ಸಹೋದರನ ಬಂಧನ ► ಹತ್ಯೆಗೈದು 24 ಗಂಟೆಗಳೊಳಗೆ ಆರೋಪಗಳನ್ನು ಬಂಧಿಸಿದ ಪೊಲೀಸರು Read More »

ಕರಾವಳಿ

ಬಂಟ್ವಾಳ: ಪಲ್ಟಿಯಾದ ಕಂಟೈನರ್ ತೆರೆದಾಗ ಪೊಲೀಸರಿಗೆ ಕಾದಿತ್ತು ಶಾಕಿಂಗ್ ನ್ಯೂಸ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.12. ಠಾಣಾ ವ್ಯಾಪ್ತಿಯ ವಗ್ಗ ಎಂಬಲ್ಲಿ ಕಂಟೈನರ್ ಲಾರಿಯೊಂದು ಸೋಮವಾರ ಬೆಳಿಗ್ಗೆ ಉರುಳಿ ಬಿದ್ದ ಪರಿಣಾಮ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಿದೆ. ವಗ್ಗದ ಬಳಿಯ ಅಂಚಿಕಟ್ಟೆ ತಿರುವಿನಲ್ಲಿ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕಂಟೇನರ್ ಲಾರಿ ಉರುಳಿ ಬಿದ್ದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಅದರ ಕಂಟೇನರ್ ತೆರೆದು ನೋಡಿದಾಗ ಅದರ ಒಳಗೆ ಅಕ್ರಮವಾಗಿ ದನ ಮತ್ತು ಎಮ್ಮೆಗಳನ್ನು ಸಾಗಿಸುತ್ತಿದ್ದದ್ದು ಕಂಡು ಬಂದಿದೆ. ಅದರಲ್ಲಿದ್ದ 09 ಎತ್ತು

ಬಂಟ್ವಾಳ: ಪಲ್ಟಿಯಾದ ಕಂಟೈನರ್ ತೆರೆದಾಗ ಪೊಲೀಸರಿಗೆ ಕಾದಿತ್ತು ಶಾಕಿಂಗ್ ನ್ಯೂಸ್ Read More »

ಕರಾವಳಿ

ಇಂದು (ಫೆ.12) ಅಂತರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ಖ್ ಹುದವಿ ಆತೂರಿಗೆ

(ನ್ಯೂಸ್ ಕಡಬ) newskadaba.com ಕಡಬ, ಫೆ.12. ಆತೂರು ಬದ್ರಿಯಾ ಜುಮಾ ಮಸ್ಜಿದ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಆತೂರು ಶಾಖಾ ವತಿಯಿಂದ ಇಂದು (ಫೆ.12) ಸುಲ್ತಾನುಲ್ ಹಿಂದ್ ವೇದಿಕೆಯಲ್ಲಿ ಅಂತರಾಷ್ಟ್ರೀಯ ವಾಗ್ಮಿ ಬಹು| ಉಸ್ತಾದ್ ಸಿಂಸಾರುಲ್ ಹಖ್ಖ್ ಹುದವಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಬಹು| ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಪೊಸೋಟು ದುಃಆ ನೆರವೇರಿಸಲಿದ್ದಾರೆ. ದ.ಕ ಖಾಝಿ ತ್ವಾಖ ಅಹಮ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆತೂರು ಬಿ.ಜೆಎಂ ಖತೀಬರಾದ ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಫೈಝಿ ಅಧ್ಯಕ್ಷತೆ

ಇಂದು (ಫೆ.12) ಅಂತರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ಖ್ ಹುದವಿ ಆತೂರಿಗೆ Read More »

ಕರಾವಳಿ

ಬೆಳ್ತಂಗಡಿ: ತಂದೆ, ಸಹೋದರನಿಂದ ಚೂರಿ ಇರಿದು ವ್ಯಕ್ತಿಯ ಕೊಲೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.12. ತಂದೆ ಹಾಗೂ ಸಹೋದರ ಸೇರಿಕೊಂಡು ವ್ಯಕ್ತಿಯೋರ್ವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಮಟ್ಲ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. ಮೃತಪಟ್ಟವರನ್ನು ಮೂಲತಃ ಹಾಸನದ ಪ್ರಸ್ತುತ ಬೆಳ್ತಂಗಡಿಯ ಕಸಬಾ ಗ್ರಾಮದ ಮಟ್ಲ ನಿವಾಸಿ ಮಂಜುನಾಥ ಎಂಬವರ ಪುತ್ರ ನವೀನ್(28) ಎಂದು ಗುರುತಿಸಲಾಗಿದೆ. ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ತನ್ನ ತಂದೆ ಮಂಜುನಾಥ ಹಾಗೂ ಸಹೋದರ ರಾಘವೇಂದ್ರ ಸೇರಿಕೊಂಡು ಚೂರಿಯಿಂದ

ಬೆಳ್ತಂಗಡಿ: ತಂದೆ, ಸಹೋದರನಿಂದ ಚೂರಿ ಇರಿದು ವ್ಯಕ್ತಿಯ ಕೊಲೆ Read More »

ಕರಾವಳಿ

‘ರಾಜ್ಯದ ಸ್ವಚ್ಛ ಗ್ರಾಮ’ ಖ್ಯಾತಿಯ ಕಡಬದಲ್ಲೀಗ ಮರೀಚಿಕೆಯಾಗಿರುವ ಸ್ವಚ್ಛತೆ ► ಬಯಲು ಶೌಚದ ದುರ್ನಾಥದಿಂದ ಮೂಗು ಮುಚ್ಚಿಕೊಂಡು ತೆರಳಬೇಕಾದ ಅನಿವಾರ್ಯತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.11. ಸ್ವಚ್ಛ ಗ್ರಾಮವೆಂದು ರಾಜ್ಯದ ಗಮನ ಸೆಳೆದಿದ್ದ ಕಡಬ ತಾಲೂಕಿನ ಕೇಂದ್ರ ಸ್ಥಾನವಾದ ಕಡಬದಲ್ಲಿ ಇದೀಗ ಸ್ವಚ್ಛತೆಯ ವಿಚಾರದಲ್ಲಿ ಮೂಗು ಮುಚ್ಚಿ ಕೊಳ್ಳುವಂತಾಗಿದೆ. ಕಡಬ ತಾಲೂಕಾಗಿ ಘೋಷಣೆಯಾಗಿದ್ದು ಈಗಾಗಲೇ ತಾಲೂಕು ಕೇಂದ್ರದ ಕಾರ್ಯವೈಖರಿಗಳು ಭರದಿಂದ ಸಾಗುತ್ತಿದ್ದರೂ ಇಲ್ಲಿನ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮಾತ್ರ ಅಧೋಗತಿ ತಲುಪಿದ್ದು, ಎರಡು ಶೌಚಾಲಯಗಳನ್ನು ಬಂದ್ ಮಾಡಿದ್ದರ ಪರಿಣಾಮವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ದ್ರವ ತ್ಯಾಜ್ಯ ಮತ್ತು ಘನ ತಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ರಾಜ್ಯದಲ್ಲಿ ಮಾದರಿ ಗ್ರಾಮವೆಂಬ ಹೆಗ್ಗಳಿಕೆಗೆ

‘ರಾಜ್ಯದ ಸ್ವಚ್ಛ ಗ್ರಾಮ’ ಖ್ಯಾತಿಯ ಕಡಬದಲ್ಲೀಗ ಮರೀಚಿಕೆಯಾಗಿರುವ ಸ್ವಚ್ಛತೆ ► ಬಯಲು ಶೌಚದ ದುರ್ನಾಥದಿಂದ ಮೂಗು ಮುಚ್ಚಿಕೊಂಡು ತೆರಳಬೇಕಾದ ಅನಿವಾರ್ಯತೆ Read More »

ಕರಾವಳಿ
Scroll to Top