ಕರಾವಳಿ

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ – ಕಾರು ಢಿಕ್ಕಿ ► ಯುವ ವಕೀಲೆ ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.01. ವ್ಯಾಗನರ್ ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಯುವ ವಕೀಲೆ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸಂಪ್ಯದಲ್ಲಿ ಶನಿವಾರದಂದು ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಕಂಟ್ರಮಜಲು ನಿವಾಸಿ ಜಿನ್ನಪ್ಪ‌ ಗೌಡ ಎಂಬವರ ಪುತ್ರಿ ಮಂಗಳೂರಿನ ಯುವ ವಕೀಲೆ ಗಾಯತ್ರಿ (23) ಎಂದು ಗುರುತಿಸಲಾಗಿದೆ. ಇವರು ಪುತ್ತೂರಿನಿಂದ ಕುಂಬ್ರ ಕಡೆಗೆ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಇವರಿದ್ದ […]

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ – ಕಾರು ಢಿಕ್ಕಿ ► ಯುವ ವಕೀಲೆ ಮೃತ್ಯು, ಓರ್ವ ಗಂಭೀರ Read More »

ಕರಾವಳಿ

ಕಡಬ: ನೆಲ್ಯಾಡಿಗೆಂದು ತೆರಳಿದ್ದ ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಕೆಲಸಕ್ಕೆಂದು ತೆರಳಿದ ಯುವಕನೋರ್ವ ಮೂರು ದಿನಗಳಾದರೂ ಮನೆಗೆ ಬರದೆ ನಾಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ. ನಾಪತ್ತೆಯಾಗಿರುವ ಯುವಕನನ್ನು ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕಾರ್ಕಳ ನಿವಾಸಿ ಮಣಿ ಎಂಬವರ ಪುತ್ರ ಶ್ರೀಜಿತ್(24) ಎಂದು ಗುರುತಿಸಲಾಗಿದೆ. ಈತ ಬುಧವಾರದಂದು ನೆಲ್ಯಾಡಿಗೆಂದು ಕೆಲಸಕ್ಕೆ ತೆರಳಿದ್ದು, ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾರೆ ಎಂದು ಮಣಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ: ನೆಲ್ಯಾಡಿಗೆಂದು ತೆರಳಿದ್ದ ಯುವಕ ನಾಪತ್ತೆ Read More »

ಕರಾವಳಿ

ಸವಣೂರು: ಮತದಾನದ ಮಹತ್ವ ಮತ್ತು ಜಾಗೃತಿ ಕಾರ್ಯಕ್ರಮ ► ವಿಧಾನಸಭಾ ಚುನಾವಣೆಗೆ ಪೊಲೀಸ್ ಇಲಾಖೆ ಸರ್ವ ಸನ್ನದ್ಧ: ಎಸ್ಪಿ ಡಾ. ರವಿಕಾಂತೇ ಗೌಡ

(ನ್ಯೂಸ್ ಕಡಬ) newskadaba.com ಸವಣೂರು, ಮಾ.23. ಪೊಲೀಸ್ ಠಾಣೆಯೆಂದರೆ ಅದು ಅಧಿಕಾರ ಚಲಾಯಿಸೋ ಕೇಂದ್ರವಲ್ಲ. ಬದಲಾಗಿ ಸಾರ್ವಜನಿಕರ ಸೇವೆ ಮಾಡೋ ಕೇಂದ್ರಗಳು. ವಿಧಾನ ಸಭಾ ಚುನಾವಣೆ ಸುಸೂತ್ರವಾಗಿ ನಡೆಯಲು ಚುನಾವಣಾ ಆಯೋಗದ ಸೂಚನೆಯಂತೆ ಪೊಲೀಸ್ ಇಲಾಖೆ ಸನ್ನಧವಾಗಿದೆ. ಚುನಾವಣೆ ಹಿನನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆ 22 ಕಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕಾಂತೇ ಗೌಡ ಹೇಳಿದರು. ಅವರು ಶನಿವಾರ ಸವಣೂರಿನ ವಿನಾಯಕ ಸಭಾಭವನದಲ್ಲಿ ದ.ಕ.ಜಿಲ್ಲಾ ಪೊಲೀಸ್, ಬೆಳ್ಳಾರೆ

ಸವಣೂರು: ಮತದಾನದ ಮಹತ್ವ ಮತ್ತು ಜಾಗೃತಿ ಕಾರ್ಯಕ್ರಮ ► ವಿಧಾನಸಭಾ ಚುನಾವಣೆಗೆ ಪೊಲೀಸ್ ಇಲಾಖೆ ಸರ್ವ ಸನ್ನದ್ಧ: ಎಸ್ಪಿ ಡಾ. ರವಿಕಾಂತೇ ಗೌಡ Read More »

ಕರಾವಳಿ

ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ(ರಿ) ಪುತ್ತೂರು ಘಟಕ ಇದರ ಆರನೆ ಮಾಸಿಕ ಸಹಾಯಹಸ್ತ

(ನ್ಯೂಸ್ ಕಡಬ) newskadaba.com ಸವಣೂರು, ಮಾ.31. ಉದಯ ಪೂಜಾರಿ ಸಾರಥ್ಯದ ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ(ರಿ) ಪುತ್ತೂರು ಘಟಕ ಇದರ ಆರನೆ ಮಾಸಿಕ ಸಹಾಯಹಸ್ತವನ್ನು ಮಾ.31 ರಂದು ಕಡಬ ನೂಜಿಬಾಳ್ತಿಲ ನಿವಾಸಿಯಾದ ಶ್ರೀಮತಿ ಜಯಂತಿಯವರ ಮಗಳ ಮದುವೆಗೆ ಧನ ಸಹಾಯವನ್ನು ನೀಡಲಾಯಿತು. ಬಡ ಕುಟುಂಬವಾದ ಇವರು ತಮ್ಮ ಆರ್ಥಿಕ ಮಗ್ಗಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದು ಬಿರುವೆರ್ ಕುಡ್ಲ ಪುತ್ತೂರು ಘಟಕಕ್ಕೆ ತಮ್ಮ ಪರಿಸ್ಥಿತಿಯನ್ನು ವಿವರಿಸಿ ಅರ್ಜಿಯನ್ನು ಸಲ್ಲಿಸದ ಪರಿಣಾಮವಾಗಿ ಪುತ್ತೂರು ಘಟಕ ಸಭೆಯಲ್ಲಿ ಸಹಾಯ ನೀಡುವುದೆಂದು ತೀರ್ಮಾನಿಸಿ

ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ(ರಿ) ಪುತ್ತೂರು ಘಟಕ ಇದರ ಆರನೆ ಮಾಸಿಕ ಸಹಾಯಹಸ್ತ Read More »

ಕರಾವಳಿ

ಉಪ್ಪಿನಂಗಡಿ ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಅಡಿಕೆ ಕಳ್ಳರು ಅಂದರ್ ► ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಅಡಿಕೆ ವಶ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.31. ಕೆಲ ದಿನಗಳ ಹಿಂದೆ ನಡೆದ ಅಡಿಕೆ ಕಳವು ಪ್ರಕರಣವೊಂದನ್ನು ವಾರದೊಳಗೆ ಬೇಧಿಸಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸುವ ಮೂಲಕ ಮತ್ತೊಮ್ಮೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬಂಧಿತ ಆರೋಪಿಯನ್ನು ಕೌಕ್ರಾಡಿ ಗ್ರಾಮದ ನೆಲ್ಯಾಡಿ ಬಳಿಯ ಕುಂಡಡ್ಕ ನಿವಾಸಿ ಸರ್ಫ್‌ರಾಜ್ ಯಾನೆ ಹುಸೈನ್ ಸರ್ಫ್‌ರಾಜ್(30) ಎಂದು ಗುರುತಿಸಲಾಗಿದೆ. ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ ಸರ್ಫ್‌ರಾಜ್‌ನ ನೆರೆಮನೆಯವನಾದ ಅಶ್ಫಾಕ್ ಎಂಬಾತ ಪೊಲೀಸರ ಕಾರ್ಯಾಚರಣೆ ವೇಳೆ ಓಡಿ ತಪ್ಪಿಸಿಕೊಂಡಿದ್ದಾನೆ. ಆರೋಪಿಗಳು ನೆಲ್ಯಾಡಿಯಲ್ಲಿರುವ ಎಚ್.ಎನ್. ಸುಪಾರಿ ಟ್ರೇಡರ್ಸ್

ಉಪ್ಪಿನಂಗಡಿ ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಅಡಿಕೆ ಕಳ್ಳರು ಅಂದರ್ ► ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಅಡಿಕೆ ವಶ Read More »

ಕರಾವಳಿ

ಅಕ್ರಮ ಮರಳು ಅಡ್ಡೆಗೆ ದಾಳಿ ► ಯಾಂತ್ರೀಕೃತ ದೋಣಿ ಸಹಿತ 10 ಲಕ್ಷ ರೂ. ಮೌಲ್ಯದ ಸ್ವತ್ತು ವಶ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.30. ಅಕ್ರಮ ಮರಳುಗಾರಿಕೆ ಅಡ್ಡೆಯೊಂದಕ್ಕೆ ದಾಳಿ ನಡೆಸಿರುವ ಬಂಟ್ವಾಳ ಪೊಲೀಸರು ಯಾಂತ್ರೀಕೃತ ದೋಣಿ ಸಹಿತ ಲಕ್ಷಾಂತರ ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡ ಘಟನೆ ಸಜೀಪ ಮುನ್ನೂರು ಗ್ರಾಮದ ಕೊಪ್ಪಳ ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಸಜೀಪ ಮುನ್ನೂರು ಗ್ರಾಮದ ಕೊಪ್ಪಳ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ನದಿ ತೀರದಲ್ಲಿ ದಾಸ್ತಾನು ಇರಿಸಲಾಗಿದ್ದ ಮರಳು, ಯಾಂತ್ರೀಕೃತ ದೋಣಿ ಹಾಗೂ ಲಾರಿ ಸೇರಿದಂತೆ ಹಲವು ಸಾಮಗ್ರಿಗಳನ್ನು

ಅಕ್ರಮ ಮರಳು ಅಡ್ಡೆಗೆ ದಾಳಿ ► ಯಾಂತ್ರೀಕೃತ ದೋಣಿ ಸಹಿತ 10 ಲಕ್ಷ ರೂ. ಮೌಲ್ಯದ ಸ್ವತ್ತು ವಶ Read More »

ಕರಾವಳಿ

ಬೀರಂತಡ್ಕ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ರಾಜನ್ ದೈವಸ್ಥಾನದಲ್ಲಿ ಪ್ರತಿಷ್ಠೆ ಹಾಗೂ ಕಲಶಾಭಿಷೇಕ

(ನ್ಯೂಸ್ ಕಡಬ) newskadaba.com ಕಡಬ,ಮಾ.31. ಕುಂತೂರು ಗ್ರಾಮದ ಪೆರಾಬೆ ಬೀರಂತಡ್ಕ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ರಾಜನ್ ದೈವಸ್ಥಾನದಲ್ಲಿ ಎ.24ರಿಂದ ಎ.27ರವರೆಗೆ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ ಹಾಗೂ ರಾಜನ್ ದೈವ(ಶಿರಾಡಿ ದೈವ)ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಕಾರ್ಯಕ್ರಮಗಳು ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಬೈಪಡಿತ್ತಾಯ ಮತ್ತು ಶ್ರೀ ಕೃಷ್ಣಪ್ರಸಾದ್ ಉಪಾಧ್ಯಾಯ ಅರ್ಬಿ ರವರ ನೇತೃತ್ವದಲ್ಲಿ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದ್ದು ಜೀಣೋದ್ಧಾರ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ. ಶ್ರೀಕ್ಷೇತ್ರದ ಪರಿಚಯ ‘ಬೀರಂತಡ್ಕ’ ಹೆಸರೇ ಸೂಚಿಸುವಂತೆ ವೀರರ ಬಯಲು

ಬೀರಂತಡ್ಕ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ರಾಜನ್ ದೈವಸ್ಥಾನದಲ್ಲಿ ಪ್ರತಿಷ್ಠೆ ಹಾಗೂ ಕಲಶಾಭಿಷೇಕ Read More »

ಕರಾವಳಿ

ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲೇ ಕಾಲೇಜು‌ ವಿದ್ಯಾರ್ಥಿಗಳ ಲವ್ವಿ – ಡವ್ವಿ ► ಕ್ಯಾಮೆರಾದಲ್ಲಿ ಸೆರೆಯಾಯ್ತು ಅಸಭ್ಯ ದೃಶ್ಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ.31. ಕಾಲೇಜೊಂದರ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳದಲ್ಲೇ ಮುತ್ತಿನ ಮಳೆಗರೆಯುತ್ತಾ ಮೈ ಮೇಲೆ ಕೈ ಹಾಕುತ್ತಾ ಅಶ್ಲೀಲವಾಗಿ ವರ್ತಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದ್ದು, ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬೆಳ್ತಂಗಡಿಯ ಖಾಸಗಿ ತಾಂತ್ರಿಕ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಕಾಲೇಜಿನ ಹಿಂಭಾಗದಲ್ಲಿನ ಖಾಲಿ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಅಸಭ್ಯವಾಗಿ ವರ್ತಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಕಾಲೇಜು ಪ್ರಿನ್ಸಿಪಾಲರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದ್ದು, ಕೊನೆಗೆ ಸಾರ್ವಜನಿಕರೇ ಅಸಭ್ಯ ವರ್ತನೆಯ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ

ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲೇ ಕಾಲೇಜು‌ ವಿದ್ಯಾರ್ಥಿಗಳ ಲವ್ವಿ – ಡವ್ವಿ ► ಕ್ಯಾಮೆರಾದಲ್ಲಿ ಸೆರೆಯಾಯ್ತು ಅಸಭ್ಯ ದೃಶ್ಯ Read More »

ಕರಾವಳಿ

ಉಪ್ಪಿನಂಗಡಿ: ಮಗುವಿಗೆ ಆಟವಾಡಲೆಂದು ಕಟ್ಟಿದ್ದ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕಿ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.30. ಮಗುವಿಗೆ ಆಟವಾಡಲೆಂದು ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ಬಾಲಕಿಯೋರ್ವಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಉಪ್ಪಿನಂಗಡಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತ ಬಾಲಕಿಯನ್ನು ಉಪ್ಪಿನಂಗಡಿ ಶ್ರೀ ರಾಮ ವಿದ್ಯಾಲಯದ 7 ನೇ ತರಗತಿಯ ವಿದ್ಯಾರ್ಥಿನಿ, ಮೂಲತಃ ಉತ್ತರ ಪ್ರದೇಶ ನಿವಾಸಿ ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸ್ತವ್ಯವಿರುವ ರಾಜಕುಮಾರ್ ಚೌಹಾನ್ ಎಂಬವರ ಪುತ್ರಿ ಅಂಜಲಿ ಚೌಹಾನ್(13) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ತನ್ನ ತಮ್ಮ ಹಾಗೂ ಅಮ್ಮನ ಜೊತೆ ಆಟವಾಡಿದ್ದ ಅಂಜಲಿ ವೇಗವಾಗಿ ಮನೆಯೊಳಗೆ

ಉಪ್ಪಿನಂಗಡಿ: ಮಗುವಿಗೆ ಆಟವಾಡಲೆಂದು ಕಟ್ಟಿದ್ದ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕಿ ಮೃತ್ಯು Read More »

ಕರಾವಳಿ

ರಾಮಕುಂಜ: ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ ► ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಜಾಗೃತಿ ಜಾಥಾ

(ನ್ಯೂಸ್ ಕಡಬ) newskadaba.com ಕಡಬ, ಮಾ.30. ಪ್ರಕೃತಿಗೆ ವಿರುದ್ಧವಾಗಿ ನಡೆಯುವುದರಿಂದ ಪರಿಸರ ಹಾನಿಯಾಗುದಷ್ಟೇ ಅಲ್ಲ, ಮಾನವನ ಬದುಕಿಗೇ ಮಾರಕ. ಪ್ಲಾಸ್ಟಿಕ್ ಅತೀ ಅಪಾಯಕಾರಿ ವಸ್ತು. ಅದರ ಉಪಯೋಗದಲ್ಲಿ ನಿಯಂತ್ರಣ ಬೇಕು ಎಂದು ರಾಮಕುಂಜ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಹೇಳಿದರು. ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರಾಮಕುಂಜ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಜಗತ್ತಿನಲ್ಲಿ ಮಾನವ ಅತೀ ಹೆಚ್ಚು ಬುದ್ದಿಶಕ್ತಿ  ಹೊಂದಿರುವ ಜೀವಿ.  ಆದರೆ ಮನುಷ್ಯನಿಗೆ ಪರಿಸರದ ವಿರುದ್ಧ

ರಾಮಕುಂಜ: ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ ► ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಜಾಗೃತಿ ಜಾಥಾ Read More »

ಕರಾವಳಿ
Scroll to Top