ಕರಾವಳಿ

ಏಪ್ರಿಲ್ 1 ರಿಂದ ನಗದು ಟೋಲ್ ಪಾವತಿ ಬಂದ್: ಸಂಪೂರ್ಣ ಡಿಜಿಟಲ್ ವ್ಯವಸ್ಥೆಗೆ NHAI ಮುಂದು!

(ನ್ಯೂಸ್‌ ಕಡಬ) newskadaba.com,  ಫೆ.21 :   ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಏಪ್ರಿಲ್ 1ರಿಂದ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟನ್ನು ಸ್ಥಗಿತಗೊಳಿಸಲು ಯೋಜನೆ ರೂಪಿಸಿದೆ. ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಹೊಸ ನಿಯಮ ಜಾರಿಗೆ ಬಂದರೆ, ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಮಾತ್ರ ಟೋಲ್ ಪಾವತಿ ಸಾಧ್ಯವಾಗುತ್ತದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಯುಪಿಐ ಮೂಲಕ ಪಾವತಿಸಿದರೆ 1.25% ಹೆಚ್ಚುವರಿ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಈ ನಿರ್ಧಾರದಿಂದ ಟೋಲ್ ಪ್ಲಾಜಾಗಳಲ್ಲಿ ದಟ್ಟಣೆ ಕಡಿಮೆ ಆಗುವುದರ ಜೊತೆಗೆ […]

ಏಪ್ರಿಲ್ 1 ರಿಂದ ನಗದು ಟೋಲ್ ಪಾವತಿ ಬಂದ್: ಸಂಪೂರ್ಣ ಡಿಜಿಟಲ್ ವ್ಯವಸ್ಥೆಗೆ NHAI ಮುಂದು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಸರಗೋಡಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ಅಪಘಾತ: ಕಾರು ಸವಾರ ಸಾವು

(ನ್ಯೂಸ್‌ ಕಡಬ) newskadaba.com,  ಫೆ.21 :   ಬದಿಯಡ್ಕದ ನೆಲ್ಲಿಕಟ್ಟೆ ಬಳಿ ಇಂದು ಮುಂಜಾನೆ ಕಾರು ಮತ್ತು ಕರ್ನಾಟಕ ಕೆಎಸ್ ಆರ್ ಟಿಸಿ ಬಸ್ ಪರಸ್ಪರ ಬಡಿದು ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮೃತಪಟ್ಟು, ಸಹ ಪ್ರಯಾಣಿಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ನೆಲ್ಲಿಕಟ್ಟೆ ಸಂಶುದ್ದೀನ್ (68) ಮೃತ ವ್ಯಕ್ತಿಯಾಗಿದ್ದಾರೆ. ಇವರ ಮಗ ಸಲ್ಮಾನ್ ಹಾರಿಸ್(22)ಎಂಬವರು ಗಂಭೀರ ಗಾಯಗೊಂಡಿದ್ದು, ಕಾಸರಗೋಡು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮುಂಜಾನೆ ಆರು ಗಂಟೆಗೆ ಬದಿಯಡ್ಕ ಠಾಣಾ ವ್ಯಾಪ್ತಿಯ ಕೆಳಗಿನ ನೆಲ್ಲಿಕಟ್ಟೆಯಲ್ಲಿ ಅಪಘಾತ ಸಂಭವಿಸಿದೆ.

ಕಾಸರಗೋಡಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ಅಪಘಾತ: ಕಾರು ಸವಾರ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೇವಸ್ಥಾನದಲ್ಲಿ ರೀಲ್ಸ್‌ ಮಾಡೋರಿಗೆ ಬಿಗ್‌ ರೂಲ್ಸ್‌!

(ನ್ಯೂಸ್‌ ಕಡಬ) newskadaba.com,  ಫೆ.21   ರಾಜ್ಯದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ರೀಲ್ಸ್ ಮತ್ತು ವೀಡಿಯೋ ಶೂಟಿಂಗ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹತ್ವದ ನಿಯಮಗಳನ್ನು ಜಾರಿಗೆ ತರುವ ನಿರ್ಧಾರ ಮಾಡಿದೆ. ಇನ್ಮುಂದೆ, ದೇವಸ್ಥಾನಗಳಲ್ಲಿ ಚಿತ್ರೀಕರಣ ಮಾಡಬೇಕಾದರೆ ಆಯ್ಕೆ ಮಾಡಿದ ಸ್ಥಳಗಳಲ್ಲಿ ಮಾತ್ರ ಅವಕಾಶ ದೊರೆಯಲಿದೆ ಮತ್ತು ಅದಕ್ಕಾಗಿ ಶುಲ್ಕ ಕಡ್ಡಾಯವಾಗಲಿದೆ. ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಈ ಬಗ್ಗೆ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಎ ಮತ್ತು ಬಿ ವರ್ಗದ ಮುಜರಾಯಿ ದೇವಾಲಯಗಳಲ್ಲಿ ಈ ನಿಯಮ ಅನ್ವಯವಾಗಲಿದೆ.

ದೇವಸ್ಥಾನದಲ್ಲಿ ರೀಲ್ಸ್‌ ಮಾಡೋರಿಗೆ ಬಿಗ್‌ ರೂಲ್ಸ್‌! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ಪೊಲೀಸ್ ಇಲಾಖೆಗೆ ಕೊಂಕಣ ರೈಲ್ವೆಯಿಂದ ಬೊಲೆರೋ ಜೀಪ್ ಹಸ್ತಾಂತರ

(ನ್ಯೂಸ್‌ ಕಡಬ) newskadaba.com,  ಫೆ.21  ಉಡುಪಿ : ಸಿಎಸ್‌ಆರ್ ಅಡಿಯಲ್ಲಿ ಪೊಲೀಸ್ ಇಲಾಖೆಗೆ ಜೀಪು ಹಸ್ತಾಂತರ..ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಸಂಸ್ಥೆಯ ಸಿಎಸ್‌ಆರ್ ಅಡಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಬೊಲೆರೋ ಜೀಪ್ ವಾಹನವನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಈ ವಾಹನವನ್ನು ಕಾರವಾರ ರೀಜನಲ್ ರೈಲ್ವೆ ಮ್ಯಾನೇಜರ್ ಆಶಾ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ವಾಹನವನ್ನು

ಉಡುಪಿ: ಪೊಲೀಸ್ ಇಲಾಖೆಗೆ ಕೊಂಕಣ ರೈಲ್ವೆಯಿಂದ ಬೊಲೆರೋ ಜೀಪ್ ಹಸ್ತಾಂತರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರ್ಕಳ : ಕೆಮ್ಮುವಿನಿಂದ ಬಳಲುತ್ತಿದ್ದ ಯುವಕನೋರ್ವ ಕುಸಿದು ಬಿದ್ದು ಮೃತ್ಯು

(ನ್ಯೂಸ್‌ ಕಡಬ) newskadaba.com,  ಫೆ.21: ಮನೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡಿದ್ದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಕಾರ್ಕಳದ ಯರ್ಲಪಾಡಿ ಎಂಬಲ್ಲಿ ನಡೆದಿದೆ. ಮೃತರನ್ನು ಯರ್ಲಪಾಡಿ ಗ್ರಾಮದ ಹೇಮಲತಾ ಎಂಬವರ ಮಗ ಸುಹೇಶ್(22) ಎಂದು ಗುರುತಿಸಲಾಗಿದೆ. ಕಳೆದ 15 ದಿನಗಳಿಂದ ಕೆಮ್ಮುವಿನಿಂದ ಬಳಲುತ್ತಿದ್ದ ಇವರು ಔಷಧಿ ಸೇವಿಸುತ್ತಿದ್ದರು. ಫೆ.19ರಂದು ಮಧ್ಯಾಹ್ನ ಮನೆಯ ಡೈನಿಂಗ್ ರೂಮ್‌ನ ಕುರ್ಚಿಯಲ್ಲಿ ಕುಳಿತು ಕೊಂಡಿದ್ದ ಸುಹೇಶ್, ಒಮ್ಮೆಲೆ ಬೊಬ್ಬೆ ಹಾಕುತ್ತಾ ಕೆಳಗೆ ಬಿದ್ದರೆನ್ನಲಾಗಿದೆ. ಬಳಿಕ ನರಳಾಡಿ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಕೂಡಲೇ ಕಾರ್ಕಳದ ಖಾಸಗಿ

ಕಾರ್ಕಳ : ಕೆಮ್ಮುವಿನಿಂದ ಬಳಲುತ್ತಿದ್ದ ಯುವಕನೋರ್ವ ಕುಸಿದು ಬಿದ್ದು ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ

(ನ್ಯೂಸ್‌ ಕಡಬ) newskadaba.com,  ಫೆ.21: ಚಿಕ್ಕಮುಡ್ನೂರು ಗ್ರಾಮದ ಏಕ ಬಳಕ್ಕ ಪರಿಸರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ. ಸ್ಥಳೀಯರಾದ ಲ್ಯಾನ್ಸಿ ಬಳಕ್ಕ ಅಜಿತ್ ಪ್ರಸಾದ್ ರೈ ಮತ್ತು ಉಮೇಶ್ ದೇವಾಡಿಗ ಅವರಿಗೆ ಸೇರಿದ ಗದ್ದೆಯು ಬೆಂಕಿಗೆ ಆಹುತಿಯಾಗಿದೆ.ಲ್ಯಾನ್ಸಿ ಬಳಕ್ಕ ಅವರಿಗೆ ಸೇರಿದ ಗದ್ದೆಯಲ್ಲಿ 40 ಫೀಟ್ ಉದ್ದದ ಪಿವಿಸಿ ಪೈಪು, ವೀಳ್ಯ ಕೃಷಿಗೆ ಹಾನಿ ಉಂಟಾಗಿದೆ. ಬೆಂಕಿ‌ ನಂದಿಸಲು ಸ್ಥಳೀಯರು ಶ್ರಮಿಸಿದರು.

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಫೆ.21: ರಾಜ್ಯದಲ್ಲಿ ಮುಂದಿನ 7 ದಿನಗಳ ಒಣಹವೆ ಇರಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಸುಡುತ್ತಿರುವ ಬಿಸಿಲಿಂದ ಹೈರಾಣಾಗಿರುವ ಜನರಿಗೆ ಮಳೆಯ ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡಲ್ಲಿ ಮುಂದಿನ 2-3 ದಿನಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಂದ್ಯದ ವೇಳೆ ಜೇನು ದಾಳಿ: ಕ್ರಿಕೆಟ್ ಅಂಪೈರ್ ಮಾಣಿಕ್ ಗುಪ್ತಾ ಮೃತ್ಯು

(ನ್ಯೂಸ್‌ ಕಡಬ) newskadaba.com,  ಫೆ.20 : ಕ್ರಿಕೆಟ್ ಪಂದ್ಯದ ವೇಳೆ ಜೇನು ದಾಳಿಯಿಂದ ಅನುಭವಿ ಕ್ರಿಕೆಟ್ ಅಂಪೈರ್ ಮಾಣಿಕ್ ಗುಪ್ತಾ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಉನ್ನಾವೊದ ಸಪ್ರು ಕ್ರೀಡಾಂಗಣದಲ್ಲಿ ನಡೆದಿದೆ. ಮಾಣಿಕ್ ಕಾನ್ಪುರ ಕ್ರಿಕೆಟ್ ಸರ್ಕ್ಯೂಟ್‌ನಲ್ಲಿ ಗಣ್ಯ ಅಂಪೈರ್ ಆಗಿದ್ದರು. ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ಸಹ ಸಂಬಂಧ ಹೊಂದಿದ್ದರು. ಪಂದ್ಯ ಮುಗಿಸಿದ ನಂತರ, ಮಾಣಿಕ್ ಪಾನೀಯ ವಿರಾಮದ ಸಮಯದಲ್ಲಿ ಸಹ ಅಂಪೈರ್ ಅವರನ್ನು ಭೇಟಿಯಾಗಲು ಹೋದಾಗ, ಜೇನು ಹಿಂಡು ಇದ್ದಕ್ಕಿದ್ದಂತೆ ಅಲ್ಲಿದ್ದವರ ಮೇಲೆ ದಾಳಿ ಮಾಡಿತು.

ಪಂದ್ಯದ ವೇಳೆ ಜೇನು ದಾಳಿ: ಕ್ರಿಕೆಟ್ ಅಂಪೈರ್ ಮಾಣಿಕ್ ಗುಪ್ತಾ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಇಂದಿನ ಚಿನ್ನದ ಬೆಲೆ

(ನ್ಯೂಸ್‌ ಕಡಬ) newskadaba.com,  ಫೆ.20: ಬೆಂಗಳೂರು: ನಿನ್ನೆ ಏರಿಕೆ ಕಂಡು ಬಂದಿದ್ದ ಚಿನ್ನದ ಬೆಲೆಯಲ್ಲಿ ಇಂದು (ಶುಕ್ರವಾರ) ಕೊಂಚ ಇಳಿಕೆಯಾಗಿದೆ.ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂ. ಇಳಿಕೆಯಾಗಿ 14,315 ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂನಲ್ಲಿ 32 ರೂ. ಇಳಿಕೆಯಾಗಿ 15,617 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,14,520 ರೂ. ಹಾಗೂ 10 ಗ್ರಾಂಗೆ ನೀವು 1,43,150 ರೂ. ಮತ್ತು 100 ಗ್ರಾಂಗೆ ನೀವು 14,31,500

ಇಂದಿನ ಚಿನ್ನದ ಬೆಲೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಮನೆ

(ನ್ಯೂಸ್‌ ಕಡಬ) newskadaba.com,  ಫೆ.20: ನಗರದ ಕೊಟ್ಟಾರ ಬಳಿಯ ಕಾಲ್ಬಾವಿ ರಸ್ತೆಯ ಸಾಗರ್ ಕೋರ್ಟ್ಸ್ ಬಳಿ ಮನೆಯೊಂದು ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಘಟನೆ ನಡೆದಿದೆ. ಕೊಟ್ಟಾರ ಬಳಿಯ ಕಾಲ್ಬಾವಿ ರಸ್ತೆಯ ಸಾಗರ್ ಕೋರ್ಟ್ಸ್ ನಲ್ಲಿರುವ ಉದಯ ಕುಮಾರ್ ಎನ್ನುವವರಿಗೆ ಸೇರಿದ ಮನೆಯಾಗಿದ್ದು , ಮುಂಜಾನೆ 3.15 ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಂಡು ಮನೆಯಲ್ಲಿ ಮಲಗಿದ್ದ ಉದಯ್ ಕುಮಾರ್ ದಂಪತಿ ಹಾಗು ಇಬ್ಬರು ಮಕ್ಕಳು ಮನೆಯಿಂದ ಹೊರಬಂದಿದ್ದಾರೆ.

ಮಂಗಳೂರು : ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಮನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top