ಕರಾವಳಿ

ಹೆಬ್ರಿ: ಬ್ರೇಕ್ ವೈಫಲ್ಯಕ್ಕೀಡಾಗಿ ಚೆಕ್ ಪೋಸ್ಟ್ ಗೆ ನುಗ್ಗಿದ ಟೆಂಪೋ ಟ್ರಾವೆಲ್ಲರ್ ► ತಪ್ಪಿದ ಸಂಭಾವ್ಯ ಅನಾಹುತ

(ನ್ಯೂಸ್ ಕಡಬ) newskadaba.com ಕಾರ್ಕಳ, ಮೇ‌.01. ಬ್ರೇಕ್ ವೈಫಲ್ಯಕ್ಕೀಡಾದ ಟೆಂಪೋ ಟ್ರಾವೆಲ್ಲರೊಂದು ವಿಧಾನಸಭಾ ಚುನಾವಣಾ ದೃಷ್ಟಿಯಿಂದ ನಿರ್ಮಿಸಲಾದ ಚೆಕ್‌ಪೋಸ್ಟ್ ನಲ್ಲಿ ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಮುನ್ನುಗ್ಗುತ್ತಿರುವ ಘಟನೆಯ ವೀಡಿಯೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ  ಸೋಮೇಶ್ವರದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ಸೋಮವಾರ ಸಂಜೆ ವೇಳೆಗೆ ಅಧಿಕಾರಿಗಳು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಆಗುಂಬೆ ಘಾಟಿಯಿಂದ ಬರುತ್ತಿದ್ದ ಟೆಂಪೋ ಟ್ರಾವೆಲರೊಂದು ಬ್ರೇಕ್ ವೈಫಲ್ಯಕ್ಕೀಡಾಗಿ ವೇಗವಾಗಿ ಬಂದು ಚೆಕ್‌ಪೋಸ್ಟ್ ನಲ್ಲಿ ನಿಂತಿದ್ದ ವಾಹನಗಳ ಮಧ್ಯೆ ಬ್ಯಾರಿಕೇಡ್ ತಳ್ಳಿಕೊಂಡು ಮುಂದೆ ಸಾಗಿದೆ. ಇದರಿಂದಾಗಿ […]

ಹೆಬ್ರಿ: ಬ್ರೇಕ್ ವೈಫಲ್ಯಕ್ಕೀಡಾಗಿ ಚೆಕ್ ಪೋಸ್ಟ್ ಗೆ ನುಗ್ಗಿದ ಟೆಂಪೋ ಟ್ರಾವೆಲ್ಲರ್ ► ತಪ್ಪಿದ ಸಂಭಾವ್ಯ ಅನಾಹುತ Read More »

ಕರಾವಳಿ

ಕಡಬ: ಸಿ.ಸಿ.ಕ್ಯಾಮರಾ ಹಾಗೂ ಕಂಪ್ಯೂಟರ್ ಮಳಿಗೆ ‘ಡಿಜಿಟಲ್ ಸಿಸ್ಟಮ್ಸ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮೇ.01. ಇಲ್ಲಿನ ಮುಖ್ಯ ರಸ್ತೆಯ ಟೋಮ್ ಬಜಾರ್ ಬಿಲ್ಡಿಂಗ್‌ನಲ್ಲಿ ಕಂಪ್ಯೂಟರ್ ಮತ್ತು ಸಿ.ಸಿ.ಟಿವಿ ಮಳಿಗೆ “ಡಿಜಿಟಲ್ ಸಿಸ್ಟಮ್ಸ್” ಸೋಮವಾರದಂದು ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಆಲಂಕಾರು ಹಾಗೂ ಕಟ್ಟಡದ ಮಾಲಕ ತೋಮ್ಸನ್ ಕೆ.ಟಿ. ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಕೃಪಾ ಕನ್‌ಸ್ಟ್ರಕ್ಷನ್ ನ ಮಾಲಕ ಶಾಜಿ ಜೋನ್ ಮೊದಲ ಗ್ರಾಹಕರಾಗಿ ಖರೀದಿಸಿದರು. ಈ ಸಂದರ್ಭದಲ್ಲಿ ಮಳಿಗೆಯ ಮಾಲಕರ ತಾಯಿ ಸೂಸಮ್ಮ, ಅನ್ನಮ್ಮ, ಎಲಿಯಮ್ಮ,

ಕಡಬ: ಸಿ.ಸಿ.ಕ್ಯಾಮರಾ ಹಾಗೂ ಕಂಪ್ಯೂಟರ್ ಮಳಿಗೆ ‘ಡಿಜಿಟಲ್ ಸಿಸ್ಟಮ್ಸ್’ ಶುಭಾರಂಭ Read More »

ಕರಾವಳಿ

ಮೇ 02 ಹಾಗೂ ಮೇ 05 ರಂದು ವಿದ್ಯುತ್ ಮಾರ್ಗದ ಕಾಮಗಾರಿಯ ಹಿನ್ನೆಲೆ ► ಪುತ್ತೂರು, ಸುಳ್ಯ, ಕಡಬ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಗಿತ

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.01. ಪ್ರಸ್ತುತ ನೆಟ್ಲಮುಡ್ನೂರು – ಪುತ್ತೂರು ಮಾರ್ಗದಲ್ಲಿರುವ ಕರಾಯ ವಿದ್ಯುತ್ ಕೇಂದ್ರದ ಹೊರೆಯನ್ನು ಪ್ರತ್ಯೇಕಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಮೇ 02 ಬುಧವಾರ ಹಾಗೂ ಮೇ 05 ಶನಿವಾರದಂದು ಬೆಳಿಗ್ಗೆ 08 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು ಎಂದು ಮೆಸ್ಕಾಂ ತಿಳಿಸಿದೆ. ಆದುದರಿಂದ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕು ವ್ಯಾಪ್ತಿಯ 110/33/11 ಕೆವಿ ಪುತ್ತೂರು ಹಾಗೂ 33/11 ಕೆವಿ ಕ್ಯಾಂಪ್ಕೋ, ಕುಂಬ್ರ, ಬೆಳ್ಳಾರೆ, ಸುಳ್ಯ, ಸವಣೂರು, ನೆಲ್ಯಾಡಿ, ಕಡಬ

ಮೇ 02 ಹಾಗೂ ಮೇ 05 ರಂದು ವಿದ್ಯುತ್ ಮಾರ್ಗದ ಕಾಮಗಾರಿಯ ಹಿನ್ನೆಲೆ ► ಪುತ್ತೂರು, ಸುಳ್ಯ, ಕಡಬ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಗಿತ Read More »

ಕರಾವಳಿ

ನಿರ್ಭೀತ ಹಾಗೂ ಮುಕ್ತ ಮತ ಚಲಾವಣೆಗಾಗಿ ಪೊಲೀಸರಿಂದ ಜಾಗೃತಿ ► ಬೆಳ್ಳಾರೆ ಹಾಗೂ ಸವಣೂರಿನಲ್ಲಿ CRPF ಪಡೆಯಿಂದ ಪಥ ಸಂಚಲನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ.30. ವಿಧಾನಸಭಾ ಚುನಾವಣಾ ಕಾವು ಏರಿರುವಂತೆಯೇ ನಿರ್ಭೀತ ಹಾಗೂ ಮುಕ್ತ ಮತ ಚಲಾವಣೆಗೆ ಸಂಬಂದಿಸಿದಂತೆ ಪೊಲೀಸ್ ಇಲಾಖೆಯು ಸರ್ವ ಸನ್ನದ್ಧವಾಗಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಬೆಳ್ಳಾರೆ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಸವಣೂರಿನಲ್ಲಿ ಬೆಳ್ಳಾರೆ ಪೊಲೀಸರು ಹಾಗೂ ಸಿಆರ್ ಪಿಎಫ್ ಪಡೆಯಿಂದ ಸೋಮವಾರದಂದು ಪಥಸಂಚಲನ ನಡೆಯಿತು. ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರಿನ ಮಾಂತೂರಿನಿಂದ ಸವಣೂರು ಜಂಕ್ಷನ್ ವರೆಗೆ ಸೋಮವಾರ ಸಂಜೆ ಪಥ ಸಂಚಲನ ನಡೆದಿದ್ದು, ಆ ಬಳಿಕ ಬೆಳ್ಳಾರೆ ಕೆಳಗಿನ ಪೇಟೆಯಿಂದ

ನಿರ್ಭೀತ ಹಾಗೂ ಮುಕ್ತ ಮತ ಚಲಾವಣೆಗಾಗಿ ಪೊಲೀಸರಿಂದ ಜಾಗೃತಿ ► ಬೆಳ್ಳಾರೆ ಹಾಗೂ ಸವಣೂರಿನಲ್ಲಿ CRPF ಪಡೆಯಿಂದ ಪಥ ಸಂಚಲನ Read More »

ಕರಾವಳಿ

ಮರ್ಧಾಳ: NIIYF ವತಿಯಿಂದ ಬಡ ಯತೀಂ ಹೆಣ್ಣಿನ ವಿವಾಹ ಸಮಾರಂಭ ► ನೂತನ ಇಸ್ಲಾಮಿಕ್ ಶರೀಅತ್ ಕಾಲೇಜಿನ ದಾಖಲಾತಿಗೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಎ.30. ವಿವಾಹ ಎನ್ನುವುದು ಜೀವನದ ಮಹತ್ವದ ಕರ್ಮವಾಗಿದ್ದು, ಆಡಂಬರಗಳಿಲ್ಲದೆ, ಸರಳವಾಗಿ ನಡೆಯುವ ಮದುವೆಯಲ್ಲಿ ಅಲ್ಲಾಹನ ಅನುಗ್ರಹ ಇರುತ್ತದೆ ಎಂದು ಕಾಜೂರಿನ ಸಯ್ಯದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಹೇಳಿದರು. ಅವರು ಮರ್ಧಾಳದ ಪ್ರವಾಸಿ ಸಂಘಟನೆಯಾದ ನುಸ್ರತ್ತುಲ್ ಇಸ್ಲಾಂ ಇಂಟರ್ನ್ಯಾಷನಲ್ ಯೂತ್ ಫೆಡರೇಶನ್ ವತಿಯಿಂದ ಭಾನುವಾರದಂದು ಮರ್ಧಾಳ ತಕ್ವೀಯತ್ತುಲ್ ಇಸ್ಲಾಂ ಮಸೀದಿಯಲ್ಲಿ ನಡೆದ ಮರ್ಧಾಳ ಜಮಾಅತಿಗೊಳಪಟ್ಟ ಬಡ ಯತೀಮ್ ಹೆಣ್ಣಿನ ಮದುವೆಯ ನಿಖಾಹ್ ನೆರವೇರಿಸಿ ಮಾತನಾಡಿದರು. ವಿವಾಹ ಸಮಾರಂಭದಲ್ಲಿ ನಮ್ಮ ಅರ್ಹತೆಗೆ ತಕ್ಕಷ್ಟು

ಮರ್ಧಾಳ: NIIYF ವತಿಯಿಂದ ಬಡ ಯತೀಂ ಹೆಣ್ಣಿನ ವಿವಾಹ ಸಮಾರಂಭ ► ನೂತನ ಇಸ್ಲಾಮಿಕ್ ಶರೀಅತ್ ಕಾಲೇಜಿನ ದಾಖಲಾತಿಗೆ ಚಾಲನೆ Read More »

ಕರಾವಳಿ

ದ್ವಿತೀಯ ಪಿಯುಸಿ ಫಲಿತಾಂಶ ► ಕಡಬ ಸರಕಾರಿ ಪದವಿ ಪುರ್ವ ಕಾಲೇಜಿಗೆ 88% ಫಲಿತಾಂಶ

  (ನ್ಯೂಸ್ ಕಡಬ) newskadaba.com ಕಡಬ, ಎ.30. ಕಡಬ ತಾಲೂಕಿನ ಸರ್ಕಾರಿ ಪದವಿ ಪುರ್ವ ಕಾಲೇಜಿನಿಂದ ಒಟ್ಟು 114 ವಿದ್ಯಾರ್ಥಿಗಳು ಹಾಜರಾಗಿದ್ದು , ಈ ಪೈಕಿ ಒಟ್ಟು 100 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ (ಪಿ.ಸಿಎಂ.ಬಿ) ವಿಭಾಗದಲ್ಲಿ ಒಟ್ಟು 23 ಮಂದಿ ವಿದ್ಯಾರ್ಥಿಗಳ ಪೈಕಿ 22 ಮಂದಿ ಉತ್ತೀರ್ಣರಾಗಿ ಶೇಕಡಾ 96 ಫಲಿತಾಂಶ ದಾಖಲಾಗಿರುತ್ತದೆ. ಈ ಪೈಕಿ 16 ಮಂದಿ ಪ್ರಥಮ ಶ್ರೇಣಿಯಲ್ಲಿ, 05 ಮಂದಿ ದ್ವಿತೀಯ ಶ್ರೇಣಿಯಲ್ಲಿ ಹಾಗೂ 01 ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 505 ಅಂಕ ಗಳಿಸುವ ಮೂಲಕ ಕು.ಮಂಜುಳಾ.ಕೆ. ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ವಾಣಿಜ್ಯ (ಹೆಚ್.ಇ.ಬಿ.ಎ)ವಿಭಾಗದಲ್ಲಿ

ದ್ವಿತೀಯ ಪಿಯುಸಿ ಫಲಿತಾಂಶ ► ಕಡಬ ಸರಕಾರಿ ಪದವಿ ಪುರ್ವ ಕಾಲೇಜಿಗೆ 88% ಫಲಿತಾಂಶ Read More »

ಕರಾವಳಿ

ಆಯಿಶಾ ಕಾಲೇಜು ಆತೂರು ಶೇ. 100 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಎ.30. ಕಡಬ ತಾಲೂಕಿನ ಆಯಿಶಾ ಆತೂರು ಹೆಣ್ಣುಮಕ್ಕಳ ಪದವಿ ಪೂರ್ವ ಕಾಲೇಜಿನಿಂದ ಪಿಯುಸಿ ಪರೀಕ್ಷೆಗೆ ಕಲಾ ಮತ್ತು ವಾಣಿಜ್ಯ ವಿಭಾಗದಿಂದ ಹಾಜರಾದ ಒಟ್ಟು 30 ವಿದ್ಯಾರ್ಥಿಗಳೂ ಉತ್ತೀರ್ಣರಾಗುವುದರೊಂದಿಗೆ ಶೇ.100 ಫಲಿತಾಂಶ ದೊರೆತಿದೆ. ವಾಣಿಜ್ಯ ವಿಭಾಗದಿಂದ 18 ವಿದ್ಯಾರ್ಥಿಗಳ ಪೈಕಿ ಸಹದಾ (57), ಫಾಹಿಮಾ(565), ಮೈನಾಝ್( 524), ರಮೀಝಾ (516) ಉನ್ನತ ಶ್ರೇಣಿಯಲ್ಲಿ , 14 ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಿಂದ 12 ವಿದ್ಯಾರ್ಥಿಗಳ ಪೈಕಿ 8 ಪ್ರಥಮ, 4 ದ್ವಿತೀಯ ಸ್ಥಾನದಲ್ಲಿ ಉತ್ತಿರ್ಣರಾಗಿದ್ದಾರೆ.

ಆಯಿಶಾ ಕಾಲೇಜು ಆತೂರು ಶೇ. 100 ಫಲಿತಾಂಶ Read More »

ಕರಾವಳಿ

ದ್ವಿತೀಯ ಪಿಯುಸಿ ಫಲಿತಾಂಶ ► ಕಡಬ ಸೈಂಟ್ ಜೋಕಿಮ್ಸ್‌ ಪದವಿ ಪೂರ್ವ ಕಾಲೇಜಿಗೆ ಶೇ. 94 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಎ.30. ಕಡಬ ತಾಲೂಕಿನ ಸೈಂಟ್ ಜೋಕಿಮ್ಸ್‌ ಪದವಿಪುರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ. 94.20 ಲಭಿಸಿದೆ. ಕಲಾವಿಭಾಗ ಶೇ.91.66 ಕಲಾ ವಿಭಾಗದಿಂದ ಒಟ್ಟು 12 ವಿದ್ಯಾರ್ಥಿಗಳು ಪರೀಕ್ಷೆಗ ಹಾಜರಾಗಿದ್ದು, ಈ ಪೈಕಿ 3 ಪ್ರಥಮ, 3 ದ್ವಿತೀಯ, 5 ತೃತೀಯ ಸ್ಥಾನದೊಂದಿಗೆ ಒಟ್ಟು 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗ ವಾಣಿಜ್ಯ ವಿಭಾಗದಿಂದ ಪರೀಕ್ಷೆಗೆ ಹಾಜರಾದ 84 ವಿದ್ಯಾರ್ಥಿಗಳ ಪೈಕಿ 79 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಡಿಸ್ಟಿಂಕ್ಷನ್ 11, ಪ್ರಥಮ 52,

ದ್ವಿತೀಯ ಪಿಯುಸಿ ಫಲಿತಾಂಶ ► ಕಡಬ ಸೈಂಟ್ ಜೋಕಿಮ್ಸ್‌ ಪದವಿ ಪೂರ್ವ ಕಾಲೇಜಿಗೆ ಶೇ. 94 ಫಲಿತಾಂಶ Read More »

ಕರಾವಳಿ

ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಿನ ಭೀತಿ- ಸೈಮನ್ ಸಿ.ಜೆ.

(ನ್ಯೂಸ್ ಕಡಬ) newskadaba.com ಕಡಬ, ಎ.30. ಡಾ| ರಘುರವರು ಮೂರು ಅವಧಿಯಲ್ಲಿ ಸ್ಪರ್ದಿಸಿ ಕಳೆದ ಚುನಾವಣೆಯಲ್ಲಿ ಅಲ್ಪಮತದಿಂದ ಸೋತರು. 15 ವರ್ಷಗಳಿಂದ ಕ್ಷೇತ್ರ ಬಿಡದೆ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸುಳ್ಯ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಸರಕಾರದಿಂದ ಹಲವು ಅಭಿವೃದ್ಧಿ ಕೆಲಸಮಾಡಿರುವುದೇ ಈ ಬಾರಿ ಡಾ| ರಘು ಅವರಿಗೆ ಶ್ರೀರಕ್ಷೆಯಾಗಲಿದೆ ನಮ್ಮ ಅಭ್ಯರ್ಥಿ ಅವರು ಒಬ್ಬ ಸರಳ ವ್ಯಕ್ತಿತ್ವದ ವಿದ್ಯಾವಂತ ಅಭ್ಯರ್ಥಿಯಾಗಿದ್ದು ಈ ಬಾರಿ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ಪತಾಕೆ ಹಾಕುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸೈಮನ್

ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಿನ ಭೀತಿ- ಸೈಮನ್ ಸಿ.ಜೆ. Read More »

ಕರಾವಳಿ

ಕಡಬ: ಬಿಜೆಪಿ ಚುನಾವಣಾ ಕಛೇರಿ ಉದ್ಘಾಟಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ► ದಕ್ಷಿಣ ಭಾರತದ ಪ್ರಮುಖ ಹೆಬ್ಬಾಗಿಲು ಕರ್ನಾಟಕದ ಮೂಲಕ ಬಿಜೆಪಿ ಅಧಿಕಾರಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.30. ಮುಂದಿನ ವಿಧಾನಸಭಾ ಚುನಾವಣೆಯು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮಹತ್ವದ್ದಾಗಿದ್ದು, ಬಿಜೆಪಿಗೆ ದಕ್ಷಿಣ ಭಾರತದ ಪ್ರಮುಖ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಪ್ರವೇಶಿಸಲು ಪ್ರಮುಖವಾದರೆ, ಕಾಂಗ್ರೆಸ್ ಗೆ ಹೆಬ್ಬಾಗಿಲು ಮುಚ್ಚುವಲ್ಲಿ ಮಹತ್ವದ್ದಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು. ಅವರು ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಡಬ ಮಹಾ ಶಕ್ತಿ ಕೇಂದ್ರದ ನೂತನ ಚುನಾವಣಾ ಕಛೇರಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು

ಕಡಬ: ಬಿಜೆಪಿ ಚುನಾವಣಾ ಕಛೇರಿ ಉದ್ಘಾಟಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ► ದಕ್ಷಿಣ ಭಾರತದ ಪ್ರಮುಖ ಹೆಬ್ಬಾಗಿಲು ಕರ್ನಾಟಕದ ಮೂಲಕ ಬಿಜೆಪಿ ಅಧಿಕಾರಕ್ಕೆ Read More »

ಕರಾವಳಿ
Scroll to Top