ಕರಾವಳಿ

ಇಲೆಕ್ಟ್ರಾನಿಕ್ ವಸ್ತು, ಮೊಬೈಲ್ ಖರೀದಿದಾರರಿಗೆ ಸಿಹಿಸುದ್ದಿ ► ಇನ್ಮುಂದೆ ಕಡಬದಲ್ಲಿ ಹಣ ಕೊಡದೆಯೇ ಸಿಗಲಿದೆ ಈ ವಸ್ತುಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ.06. ಇಲೆಕ್ಟ್ರಾನಿಕ್ ವಸ್ತು, ಮೊಬೈಲ್ ಖರೀದಿದಾರರಿಗೆ ಸಿಹಿ ಸುದ್ದಿಯೊಂದಿದ್ದು, ಇನ್ಮುಂದೆ ಕಡಬದಲ್ಲಿ ಹಣ ಕೊಡದೆಯೇ ಈ ವಸ್ತುಗಳು ಗ್ರಾಹಕರ ಕೈಗೆ ಸಿಗಲಿದೆ. ಇಷ್ಟರವರೆಗೆ ದೂರದ ಪುತ್ತೂರು, ಸುಳ್ಯದಲ್ಲಿ ಮಾತ್ರವೇ ಸಿಗುತ್ತಿದ್ದ ಇಎಂಐ ವ್ಯವಸ್ಥೆ ಕಡಬಕ್ಕೂ ಕಾಲಿಟ್ಟಿದ್ದು, ಇನ್ಮುಂದೆ ನಿಮಗಿಷ್ಟದ ಕಂಪೆನಿಗಳ ಮೊಬೈಲ್, ಗೃಹೋಪಯೋಗಿ ವಸ್ತುಗಳಾದ ಟಿ.ವಿ., ಫ್ರಿಡ್ಜ್, ವಾಷಿಂಗ್ ಮೆಷಿನ್ ಸೇರಿದಂತೆ ಹಲವು ವಸ್ತುಗಳನ್ನು ಸುಲಭ ಕಂತುಗಳಲ್ಲಿ ಖರೀದಿಸಬಹುದಾಗಿದೆ. ಈ ಯೋಜನೆಯ ಬಗೆಗಿನ ಹೆಚ್ಚಿನ ವಿವರಗಳಿಗಾಗಿ ಗೃಹೋಪಯೋಗಿ ವಸ್ತುಗಳ ಮಾರಾಟ ಕೇಂದ್ರ […]

ಇಲೆಕ್ಟ್ರಾನಿಕ್ ವಸ್ತು, ಮೊಬೈಲ್ ಖರೀದಿದಾರರಿಗೆ ಸಿಹಿಸುದ್ದಿ ► ಇನ್ಮುಂದೆ ಕಡಬದಲ್ಲಿ ಹಣ ಕೊಡದೆಯೇ ಸಿಗಲಿದೆ ಈ ವಸ್ತುಗಳು Read More »

ಕರಾವಳಿ

ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ► ಪ್ರಳಯ‌ ಬಾಧಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಸ್ತಾಂತರ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.06. ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ವತಿಯಿಂದ ಪ್ರಳಯ ಬಾಧಿತ ಪ್ರದೇಶಗಳ ವಿದ್ಯಾರ್ಥಿಗಳಿಗಾಗಿ ಸಂಗ್ರಹಿಸಿದ ನೋಟ್ ಪುಸ್ತಕ ಮತ್ತು ಪಠ್ಯೋಪಕರಣಗಳ ಹಸ್ತಾಂತರ ಸಮಾರಂಭವು ಇತ್ತೀಚೆಗೆ ಗಾಂಧಿನಗರ ಸುನ್ನಿ ಸೆಂಟರ್’ನಲ್ಲಿ ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಉಪಾಧ್ಯಕ್ಷರಾದ ಅಬ್ದುಲ್ಲ ಝುಹ್ರಿ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಅಧ್ಯಕ್ಷರಾದ ಹಾರಿಸ್

ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ► ಪ್ರಳಯ‌ ಬಾಧಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಸ್ತಾಂತರ Read More »

ಕರಾವಳಿ

ಎಡಮಂಗಲ: ಅಕ್ರಮ ಜಾನುವಾರು ಸಾಗಾಟ ► ಓರ್ವ ಆರೋಪಿಯ ಬಂಧನ, ಇಬ್ಬರು ಪರಾರಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ.05. ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಬೆಳ್ಳಾರೆ ಪೊಲೀಸರು ಓರ್ವನನ್ನು ಬಂಧಿಸಿದ್ದು, ಇಬ್ಬರು ಪರಾರಿಯಾದ ಘಟನೆ ಠಾಣಾ ವ್ಯಾಪ್ತಿಯ ಎಡಮಂಗಲ ಎಂಬಲ್ಲಿ ಮಂಗಳವಾರ ಸಂಜೆ‌ ನಡೆದಿದೆ. ಬಂಧಿತ ಆರೋಪಿಯನ್ನು ಪಿಕಪ್ ಚಾಲಕ ಸುಳ್ಯ ತಾಲೂಕಿನ ಮುಪ್ಪೇರಿಯ ಗ್ರಾಮದ ಕಾಪಡ್ಕ ನಿವಾಸಿ ಗಿರಿಧರ ಗೌಡ ಎಂಬವರ ಪುತ್ರ ರಾಧಾಕೃಷ್ಣ ಕೆ. (36) ಎಂದು ಗುರುತಿಸಲಾಗಿದೆ. ಮಹಮ್ಮದ್ ಯಾನೆ ಮೈಮು ಹಾಗೂ ಇನ್ನೋರ್ವ ಓಡಿ ತಪ್ಪಿಸಿಕೊಂಡಿದ್ದಾರೆ. ಆರೋಪಿಗಳು ಸುಳ್ಯ

ಎಡಮಂಗಲ: ಅಕ್ರಮ ಜಾನುವಾರು ಸಾಗಾಟ ► ಓರ್ವ ಆರೋಪಿಯ ಬಂಧನ, ಇಬ್ಬರು ಪರಾರಿ Read More »

ಕರಾವಳಿ

ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ► ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಂತರ ರಜೆ ಕಡಿತ..!!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.04. ಕಳೆದ ಆಗಸ್ಟ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕ ಮಳೆಯಾದ ಕಾರಣ ಶಾಲಾ ಮಕ್ಕಳಿಗೆ ಹೆಚ್ಚುವರಿಯಾಗಿ ರಜೆ ನೀಡಲಾಗಿದ್ದ ಕಾರಣ ಮಧ್ಯಂತರ ರಜೆಗಳನ್ನು ಕಡಿತಗೊಳಿಸಲು ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶಿಸಿದ್ದಾರೆ. ಆಗಸ್ಟ್ ನಲ್ಲಿ ಎಡೆಬಿಡದೆ ಮಳೆ ಸುರಿದಿದ್ದರಿಂದ ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಆಧರಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಒಟ್ಟು 09 ದಿನಗಳ ಕಾಲ ರಜೆಯನ್ನು ನೀಡಲಾಗಿತ್ತು. ಶಾಲಾ ಶೈಕ್ಷಣಿಕ ಅವಧಿಗಳು ಕಡಿಮೆಯಾಗುವ ಹಾಗೂ ವಿದ್ಯಾರ್ಥಿಗಳಿಗೆ

ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ► ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಂತರ ರಜೆ ಕಡಿತ..!! Read More »

ಕರಾವಳಿ

ಸುಬ್ರಹ್ಮಣ್ಯ: ಎಂಟನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ► ಗರ್ಭಿಣಿಯಾದ ಬಾಲಕಿ – ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.04. ಎಂಟನೇ ತರಗತಿಯ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪರಿಣಾಮ ಬಾಲಕಿ ಗರ್ಭಿಣಿಯಾದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಸುಮಾರು ಐದು ತಿಂಗಳ ಹಿಂದೆ ಸುಬ್ರಹ್ಮಣ್ಯ ನಿವಾಸಿ ಯತೀಶ(28) ಎಂಬಾತ ತನ್ನ ಪರಿಚಯದ ಬಾಲಕಿಯು ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ಬಂದು ಪ್ರೀತಿಸುವುದಾಗಿ ಹೇಳಿ ನಂಬಿಸಿದ್ದಲ್ಲದೆ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಬಾಲಕಿ ಗರ್ಭವತಿಯಾಗಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಬಾಲಕಿಯ ತಾಯಿ ಮಂಗಳವಾರದಂದು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ

ಸುಬ್ರಹ್ಮಣ್ಯ: ಎಂಟನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ► ಗರ್ಭಿಣಿಯಾದ ಬಾಲಕಿ – ಆರೋಪಿಯ ಬಂಧನ Read More »

ಕರಾವಳಿ

ಬಲ್ಯ: ಮದುವೆಯಾಗದ ಬಗ್ಗೆ ಮನನೊಂದ ವ್ಯಕ್ತಿ ► ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಸೆ.04. ಮದುವೆಯಾಗದೆ ಮನನೊಂದ ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಠಾಣಾ ವ್ಯಾಪ್ತಿಯ ಬಲ್ಯದಲ್ಲಿ ಮಂಗಳವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಬಲ್ಯದ ಹೊಸ್ಮಠ ನಿವಾಸಿ ಅಣ್ಣು ಗೌಡ ಎಂಬವರ ಪುತ್ರ ಜಯಾನಂದ ಗೌಡ(43) ಎಂದು ಗುರುತಿಸಲಾಗಿದೆ. ವಿವಾಹವಾಗದೆ ಮನನೊಂದು ವಿಪರೀತ ಮದ್ಯ ಸೇವನೆ ಮಾಡಿದ ಈತ ತನ್ನ ತಾಯಿ ಹಾಗೂ ತಂಗಿಯನ್ನು ಮನೆಯಿಂದ ಹೊರಹಾಕಿ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು

ಬಲ್ಯ: ಮದುವೆಯಾಗದ ಬಗ್ಗೆ ಮನನೊಂದ ವ್ಯಕ್ತಿ ► ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ

ಇಚಿಲಂಪಾಡಿ: ರೇಬೀಸ್ ವೈರಾಣುವಿಗೆ ತುತ್ತಾಗಿ ಯುವಕ ಮೃತ್ಯು ► ಅಂತಿಮ ದರ್ಶನಕ್ಕೆ ತೆರಳಿದ್ದ ಗ್ರಾಮಸ್ಥರಲ್ಲಿ ವೈರಾಣು ಹರಡುವ ಆತಂಕ ► ಆ್ಯಂಟಿ ರೇಬೀಸ್ ಇಂಜೆಕ್ಷನ್ ಚುಚ್ಚಿಸಿಕೊಂಡ ಇನ್ನೂರಕ್ಕೂ ಮಿಕ್ಕಿದ ಜನ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.03. ಇಲ್ಲಿನ ಇಚಿಲಂಪಾಡಿ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಕಳೆದ ಆರು ದಿನಗಳ ಹಿಂದೆ ಮೃತಪಟ್ಟ ಯುವಕನ ಅಂತಿಮ ದರ್ಶನದಲ್ಲಿ ಭಾಗವಹಿಸಿದ್ದ ನೂರಾರು ಮಂದಿ‌ ಇದೀಗ ಆತಂಕಗೊಂಡಿದ್ದು, ಆಂಟಿ ರೇಬಿಸ್ ಇಂಜೆಕ್ಷನ್ ಚುಚ್ಚಿಸಿಕೊಳ್ಳುತ್ತಿದ್ದಾರೆ‌. ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಇಚ್ಲಂಪಾಡಿಯ ಕಾಯರ್ತಡ್ಕ ನಿವಾಸಿ ಆನಂದ ಪೂಜಾರಿ ಎಂಬವರ ಪುತ್ರ ಆಶಿತ್ ಪೂಜಾರಿ(24) ಹಠಾತ್ ಅನಾರೋಗ್ಯಕ್ಕೀಡಾಗಿ ಆಗಸ್ಟ್ 28 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಶಿತ್

ಇಚಿಲಂಪಾಡಿ: ರೇಬೀಸ್ ವೈರಾಣುವಿಗೆ ತುತ್ತಾಗಿ ಯುವಕ ಮೃತ್ಯು ► ಅಂತಿಮ ದರ್ಶನಕ್ಕೆ ತೆರಳಿದ್ದ ಗ್ರಾಮಸ್ಥರಲ್ಲಿ ವೈರಾಣು ಹರಡುವ ಆತಂಕ ► ಆ್ಯಂಟಿ ರೇಬೀಸ್ ಇಂಜೆಕ್ಷನ್ ಚುಚ್ಚಿಸಿಕೊಂಡ ಇನ್ನೂರಕ್ಕೂ ಮಿಕ್ಕಿದ ಜನ Read More »

ಕರಾವಳಿ

ಪುತ್ತೂರು ನಗರಸಭೆ ಫಲಿತಾಂಶ ► ಬಿಜೆಪಿ ಭರ್ಜರಿ ಗೆಲುವು, ಮಂಡಿಯೂರಿದ ಕಾಂಗ್ರೆಸ್, ಎಸ್ಡಿಪಿಐಗೆ 1 ಸ್ಥಾನ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.03. ಪುತ್ತೂರು ನಗರಸಭೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 31 ವಾರ್ಡ್‌ಗಳ ಪೈಕಿ ಬಿಜೆಪಿ 25 ರಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 5 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಎಸ್‌ಡಿಪಿಐ ಒಂದು ವಾರ್ಡ್‌ನಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್ಸನ್ನು ಬಿಜೆಪಿ ಧೂಳೀಪಟಗೊಳಿಸಿದೆ.

ಪುತ್ತೂರು ನಗರಸಭೆ ಫಲಿತಾಂಶ ► ಬಿಜೆಪಿ ಭರ್ಜರಿ ಗೆಲುವು, ಮಂಡಿಯೂರಿದ ಕಾಂಗ್ರೆಸ್, ಎಸ್ಡಿಪಿಐಗೆ 1 ಸ್ಥಾನ Read More »

ಕರಾವಳಿ

ಬೆಳ್ತಂಗಡಿ: ಸ್ನಾನಕ್ಕೆಂದು ನದಿಗಿಳಿದ ಯುವಕ ನೀರುಪಾಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.02. ಸ್ನಾನಕ್ಕೆಂದು ತನ್ನ ಗೆಳೆಯರ ಜೊತೆ ನದಿಗಿಳಿದಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರದಂದು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ‌ ಯುವಕನನ್ನು ಕಳಿಯ ಗ್ರಾಮದ ಹರ್ಮಾಡಿ ನಿವಾಸಿ ಕೇಶವ ಪೂಜಾರಿ ಎಂಬವರ ಪುತ್ರ ಹರಿಪ್ರಸಾದ್ (18) ಎಂದು ಗುರುತಿಸಲಾಗಿದೆ. ಈತ ಭಾನುವಾರದಂದು ತನ್ನ ಗೆಳೆಯರೊಂದಿಗೆ ಗೇರುಕಟ್ಟೆ ಎರುಕಡಪು ಎಂಬಲ್ಲಿ ಸ್ನಾನಕ್ಕೆಂದು ನದಿಗೆ ಇಳಿದಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದು, ಸ್ಥಳೀಯರ ನೆರವಿನೊಂದಿಗೆ ಕೂಡಲೇ ಆತನನ್ನು ನೀರಿನಿಂದ ಮೇಲಕ್ಕೆತ್ತಿದರಾದರೂ

ಬೆಳ್ತಂಗಡಿ: ಸ್ನಾನಕ್ಕೆಂದು ನದಿಗಿಳಿದ ಯುವಕ ನೀರುಪಾಲು Read More »

ಕರಾವಳಿ

ಸೆ.09: ಕಡಬದಲ್ಲಿ ಅದ್ದೂರಿ ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ, ಧಾರ್ಮಿಕ ಸಭೆ ► ದಿಕ್ಸೂಚಿ ಭಾಷಣಕಾರರಾಗಿ ಅಕ್ಷತಾ ಬಜಪೆ ಕಡಬಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.02. ಕಡಬ ಪ್ರಖಂಡ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಆಶ್ರಯದಲ್ಲಿ ವಿಶ್ವಹಿಂದು ಪರಿಷತ್‍ನ ಸ್ಥಾಪನಾ ದಿನಾಚರಣೆ ಅಂಗವಾಗಿ ಅದ್ದೂರಿ ಮೊಸರು ಕುಡಿಕೆ ಉತ್ಸವ, ಬೃಹತ್ ಶೋಭಾಯಾತ್ರೆ ಮತ್ತು ಧಾರ್ಮಿಕ ಸಭೆ ಸೆ.9 ನೇ ಭಾನುವಾರ ಕಡಬ ಶ್ರೀದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡ ಗೌರವಾಧ್ಯಕ್ಷ ಜನಾರ್ಧನ ರಾವ್ ಹೇಳಿದರು. ಅವರು ಮಂಗಳವಾರ ಕಡಬ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ವಿಚಾರ ತಿಳಿಸಿದರು.

ಸೆ.09: ಕಡಬದಲ್ಲಿ ಅದ್ದೂರಿ ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ, ಧಾರ್ಮಿಕ ಸಭೆ ► ದಿಕ್ಸೂಚಿ ಭಾಷಣಕಾರರಾಗಿ ಅಕ್ಷತಾ ಬಜಪೆ ಕಡಬಕ್ಕೆ Read More »

ಕರಾವಳಿ
Scroll to Top