ಕರಾವಳಿ

ರಾಜಕೀಯ ಪಕ್ಷಗಳ ಬಂದ್ ಕರೆ ಸರಕಾರಿ ಕಛೇರಿಗಳಿಗೂ ಅನ್ವಯವೇ..? ► ಕಛೇರಿಗೆ ಬೀಗ ಜಡಿದ ಬಿಳಿನೆಲೆ ಮತ್ತು ನೂಜಿಬಾಳ್ತಿಲ ಗ್ರಾ.ಪಂ. ಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ.10. ಭಾರತ್ ಬಂದ್ ಗೆ ಬಿಳಿನೆಲೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಛೇರಿಯನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದು, ವಿಚಾರ ತಿಳಿದ ಗ್ರಾಮಸ್ಥರು ಜಮಾವಣೆಗೊಳ್ಳುತ್ತಿದ್ದಂತೆ ವಾಪಾಸ್ ತೆರೆದ ಘಟನೆ ಸೋಮವಾರದಂದು ನಡೆದಿದೆ. ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಪಂಚಾಯತ್ ಸಿಬ್ಬಂದಿಗಳ ಮೇಲೆ ಒತ್ತಡ ಹೇರಿ ಪಂಚಾಯತನ್ನು ಬಂದ್ ಮಾಡಿಸಿದ್ದಾರೆ. ಕೊಳೆ ರೋಗದ ಆರ್ಜಿ ನೀಡಲು ಬಂದ ಕೆಲ ಗ್ರಾಮಸ್ಥರು ವಾಪಾಸು ಹೋಗಿದ್ದು ಬಳಿಕ ಗ್ರಾಮಸ್ಥರು ಜಮಾವಣೆಗೊಳ್ಳುತ್ತಿದ್ದಂತೆ ಪಂಚಾಯತ್ ತೆರೆದುಕೊಂಡಿದೆ ಎಂದು ಬಿಜೆಪಿ […]

ರಾಜಕೀಯ ಪಕ್ಷಗಳ ಬಂದ್ ಕರೆ ಸರಕಾರಿ ಕಛೇರಿಗಳಿಗೂ ಅನ್ವಯವೇ..? ► ಕಛೇರಿಗೆ ಬೀಗ ಜಡಿದ ಬಿಳಿನೆಲೆ ಮತ್ತು ನೂಜಿಬಾಳ್ತಿಲ ಗ್ರಾ.ಪಂ. ಗಳು Read More »

ಕರಾವಳಿ

ದೇಶದಲ್ಲಿ ದಿನಬಳಕೆಯ ವಸ್ತುಗಳು, ಔಷಧಿಗಳು ಕೈಗೆಟುಕುವ ದರದಲ್ಲಿದೆ ► ಪೆಟ್ರೋಲ್ ಬೆಲೆಯೇರಿಕೆ ವಿರುದ್ಧ ‘ಭಾರತ ಬಂದ್’ ಹಾಸ್ಯಾಸ್ಪದ: ಕೃಷ್ಣ ಶೆಟ್ಟಿ ಕಡಬ

(ನ್ಯೂಸ್ ಕಡಬ) newskadaba.com ಕಡಬ, ಸೆ.10. ರಾಷ್ಟ್ರದಲ್ಲಿ ದಿನ ಬಳಕೆಯ ವಸ್ತುಗಳ ಬೆಲೆಯು ಸಂಪೂರ್ಣ ಕಡಿಮೆಯಾಗಿದ್ದರೂ ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಮಾತ್ರ ಕಾಂಗ್ರೆಸ್ ಭಾರತ ಬಂದ್ ಗೆ ಕರೆ ನೀಡಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ವ್ಯಂಗ್ಯವಾಡಿದ್ದಾರೆ. ಪೆಟ್ರೋಲ್ ಬೆಲೆಯು ಈ ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗಲೂ 80 ರ ಗಡಿಯನ್ನು ದಾಟಿತ್ತು. ಆ ಸಂದರ್ಭದಲ್ಲಿ ದಿನಬಳಕೆಯ ವಸ್ತುಗಳ ಬೆಲೆಯು ಗಗನಕ್ಕೇರಿದ್ದವಾದರೂ ಇದೀಗ ಮೋದಿ ಸರಕಾರ

ದೇಶದಲ್ಲಿ ದಿನಬಳಕೆಯ ವಸ್ತುಗಳು, ಔಷಧಿಗಳು ಕೈಗೆಟುಕುವ ದರದಲ್ಲಿದೆ ► ಪೆಟ್ರೋಲ್ ಬೆಲೆಯೇರಿಕೆ ವಿರುದ್ಧ ‘ಭಾರತ ಬಂದ್’ ಹಾಸ್ಯಾಸ್ಪದ: ಕೃಷ್ಣ ಶೆಟ್ಟಿ ಕಡಬ Read More »

ಕರಾವಳಿ

ಪೆಟ್ರೋಲ್ ಬೆಲೆಯೇರಿಕೆ ಖಂಡಿಸಿ ಭಾರತ ಬಂದ್ ಹಿನ್ನೆಲೆ ► ಕಡಬ ಸಂಪೂರ್ಣ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಸೆ.10. ಪೆಟ್ರೋಲ್ ಬೆಲೆಯೇರಿಕೆ ಖಂಡಿಸಿ ಕಾಂಗ್ರೆಸ್ ಕರೆನೀಡಿದ್ದ ಭಾರತ ಬಂದ್ ಗೆ ಕಡಬದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಅಂಗಡಿ ಮಾಲಕರು ಸ್ವಯಂ ಪ್ರೇರಿತವಾಗಿ ಅಂಗಡಿ‌ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್ ಗೆ ಬೆಂಬಲ‌ ವ್ಯಕ್ತಪಡಿಸಿದ್ದಾರೆ. ಕೆಲವು ರಿಕ್ಷಾ, ಜೀಪು ಸೇರಿದಂತೆ ಟೂರಿಸ್ಟ್ ವಾಹನಗಳು ರಸ್ತೆಗಿಳಿದರೂ ಪ್ರಯಾಣಿಕರಿಲ್ಲದೆ ಪರದಾಡಿದರು. ಉಳಿದಂತೆ ಮೆಡಿಕಲ್ ಸ್ಟೋರ್, ಹಾಲು, ಪೇಪರ್ ಅಂಗಡಿಗಳು ತೆರೆದಿದ್ದವು. ಕಡಬ, ಹೊಸ್ಮಠ, ಕುಂತೂರು, ಮರ್ಧಾಳ ಸಂಪೂರ್ಣ ಬಂದ್ ಆದರೆ ನೆಟ್ಟಣ, ಆಲಂಕಾರು ಪೇಟೆಯಲ್ಲಿ

ಪೆಟ್ರೋಲ್ ಬೆಲೆಯೇರಿಕೆ ಖಂಡಿಸಿ ಭಾರತ ಬಂದ್ ಹಿನ್ನೆಲೆ ► ಕಡಬ ಸಂಪೂರ್ಣ ಬಂದ್ Read More »

ಕರಾವಳಿ

ಬಂಟ್ವಾಳ: ಭಾರತ ಬಂದ್ ಹಿನ್ನೆಲೆ ► ಬಸ್ ಗೆ ಕಲ್ಲು ತೂರಾಟ – ಟಯರ್ ಗೆ ಬೆಂಕಿ ಹಾಕಿ ರಸ್ತೆ ತಡೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.10. ಪೆಟ್ರೋಲ್ – ಡೀಸೆಲ್‌ ದರ ಏರಿಕೆ ಖಂಡಿಸಿ ಕಾಂಗ್ರೇಸ್ ಕರೆ ನೀಡಿರುವ ಬಂದ್ ಗೆ ಮಂಗಳೂರು ಹಲವೆಡೆ ವರ್ತಕರು ಬಂದ್ ಮಾಡಿ‌ ಬೆಂಬಲ ಸೂಚಿಸಿದರೆ, ಬಂಟ್ವಾಳದಲ್ಲಿಂದು ಎರಡು ಕೆಎಸ್ಸಾರ್ಟಿಸಿ ಬಸ್ ಗಳಿಗೆ ಕಲ್ಲೆಸೆದು ಹಾನಿಗೊಳಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಬಂಟ್ವಾಳದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಬಸ್ ನ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಕಲ್ಲಡ್ಕ, ಮಾಣಿ ಬಳಿ ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಾಕಿ ರಸ್ತೆಯಲ್ಲಿಡಲಾಗಿದೆ.

ಬಂಟ್ವಾಳ: ಭಾರತ ಬಂದ್ ಹಿನ್ನೆಲೆ ► ಬಸ್ ಗೆ ಕಲ್ಲು ತೂರಾಟ – ಟಯರ್ ಗೆ ಬೆಂಕಿ ಹಾಕಿ ರಸ್ತೆ ತಡೆ Read More »

ಕರಾವಳಿ

ಬಂದ್ ಗೆ ಕರೆ ನೀಡಿದವರು ದೇಶ ದ್ರೋಹಿಗಳು: ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ► ಲೋಕಸಭಾ ಚುನಾವಣೆಗೆ ಟಿಕೆಟ್ ಸಿಕ್ಕಿದರೆ ಕಾಂಗ್ರೆಸ್ ನಿಂದಲೇ ಸ್ಪರ್ಧಿಸುವೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.09. ಬಂದ್​ಗೆ ಕರೆ ನೀಡಿದವರು ದೇಶ ವಿರೋಧಿಗಳಾಗಿದ್ದು, ಬಂದ್​ನಿಂದ ಆಗುವ ನಷ್ಟಕ್ಕೆ ಕರೆ ಕೊಟ್ಟವರೇ ಜವಾಬ್ದಾರರಾಗಿರುತ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಹೇಳಿದ್ದಾರೆ. ಅವರು ಭಾನುವಾರದಂದು ಸುದ್ದಿಗಾರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರವು ಪೆಟ್ರೋಲ್ ದರ ಏರಿಕೆಯ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದೆ. ಬಂದ್​ಗೆ ಕರೆ ನೀಡುವುದು ಸುಲಭವಾದರೂ, ಬಂದ್ ನಿಂದ ಆಗುವ ನಷ್ಟಕ್ಕೆ ಕರೆ ಕೊಟ್ಟವರೇ ಜವಾಬ್ದಾರರಾಗಿರುತ್ತಾರೆ. ಕಾಂಗ್ರೆಸ್ ಪಕ್ಷವು ತಪ್ಪು ಮಾಡುತ್ತಿದ್ದು, ಹೀಗೆ ಮುಂದುವರಿದರೆ ಒಂದು ದಿನಾನೂ

ಬಂದ್ ಗೆ ಕರೆ ನೀಡಿದವರು ದೇಶ ದ್ರೋಹಿಗಳು: ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ► ಲೋಕಸಭಾ ಚುನಾವಣೆಗೆ ಟಿಕೆಟ್ ಸಿಕ್ಕಿದರೆ ಕಾಂಗ್ರೆಸ್ ನಿಂದಲೇ ಸ್ಪರ್ಧಿಸುವೆ Read More »

ಕರಾವಳಿ

ನಾಳೆ ಭಾರತ ಬಂದ್ ಹಿನ್ನೆಲೆ ► ಜಿಲ್ಲೆಯಾದ್ಯಂತ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.09. ಕಾಂಗ್ರೆಸ್ ಪಕ್ಷವು ಸೆಪ್ಟೆಂಬರ್ 10 ರಂದು ಭಾರತ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿಪೂರ್ವ, ಪದವಿ ಕಾಲೇಜುಗಳಿಗೆ ಸೋಮವಾರದಂದು ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಭಾರತ ಬಂದ್ ಹಿನ್ನೆಲೆ ► ಜಿಲ್ಲೆಯಾದ್ಯಂತ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ Read More »

ಕರಾವಳಿ

ಕಡಬ: ರೆಫೆಲ್ ಡೀಲ್ ವಿರುದ್ದ ಮಂಗಳೂರಿನಲ್ಲಿನ ಪ್ರತಿಭಟನೆಯ ಪೂರ್ವಭಾವಿ ಸಭೆ ► ಚಹಾ ಮಾರಿ ಅಧಿಕಾರಕ್ಕೆ ಬಂದ ಮೋದಿ ಮುಂದೊಮ್ಮೆ ದೇಶವನ್ನೇ ಮಾರುತ್ತಾರೆ – ಎಂ.ಎಸ್.ಮಹಮ್ಮದ್ ವ್ಯಂಗ್ಯ

(ನ್ಯೂಸ್ ಕಡಬ) newskadaba.com ಕಡಬ, ಸೆ.09. ಕಳೆದ ನಾಲ್ಕುವರೆ ವರ್ಷದಿಂದ ಈ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರವು ದೇಶವನ್ನು ಅದಃಪತನಕ್ಕೆ ತಳ್ಳುತ್ತಿದ್ದು, ಯಾವುದೋ ಯೋಗದಿಂದ ಚಹಾ ಮಾರುತ್ತಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ. ತನ್ನ ಅನುಭವದ ಕೊರತೆಯ ಆಡಳಿತದಿಂದ ಮುಂದೊಮ್ಮೆ ಈ ದೇಶವನ್ನೇ ಮಾರಲಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ, ಕಡಬ ಕಾಂಗ್ರೇಸ್ ಉಸ್ತುವಾರಿ ಎಂ.ಎಸ್. ಮಹಮ್ಮದ್ ವ್ಯಂಗ್ಯವಾಡಿದರು. ಅವರು ಭಾನುವಾರದಂದು ಕಡಬ ಕಾಂಗ್ರೇಸ್ ಕಛೇರಿಯಲ್ಲಿ ಸೋಮವಾರ ಇಂಧನ ಬೆಲೆ ಏರಿಕೆಯ ವಿರುದ್ದ ಕಾಂಗ್ರೇಸ್ ಭಾರತ್ ಬಂದ್

ಕಡಬ: ರೆಫೆಲ್ ಡೀಲ್ ವಿರುದ್ದ ಮಂಗಳೂರಿನಲ್ಲಿನ ಪ್ರತಿಭಟನೆಯ ಪೂರ್ವಭಾವಿ ಸಭೆ ► ಚಹಾ ಮಾರಿ ಅಧಿಕಾರಕ್ಕೆ ಬಂದ ಮೋದಿ ಮುಂದೊಮ್ಮೆ ದೇಶವನ್ನೇ ಮಾರುತ್ತಾರೆ – ಎಂ.ಎಸ್.ಮಹಮ್ಮದ್ ವ್ಯಂಗ್ಯ Read More »

ಕರಾವಳಿ

ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ – ಬೆಳ್ಳಾರೆ ಪಿಎಸೈ ಈರಯ್ಯ ► ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಹಾಗೂ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಸೂಚನೆ

(ನ್ಯೂಸ್ ಕಡಬ) newskadaba.com ಸವಣೂರು, ಸೆ.09. ಗಣೇಶೋತ್ಸವಗಳ ಮೆರವಣಿಗೆಯಲ್ಲಿ ಡಿ.ಜೆ.ಸೌಂಡ್ಸ್‍ಗೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಿ, ಕಾನೂನು ಪಾಲನೆಗೆ ಸಹರಿಸಬೇಕು ಎಂದು ಬೆಳ್ಳಾರೆ ಠಾಣಾ ಉಪನಿರೀಕ್ಷಕ ಡಿ.ಎನ್ ಈರಯ್ಯ ಹೇಳಿದರು. ಅವರು ಶನಿವಾರದಂದು ಸಂಜೆ ಬೆಳ್ಳಾರೆಯ ಅಂಬೇಡ್ಕರ್ ಭವನದಲ್ಲಿ ನಡೆದ ವಿವಿಧ ಕಡೆಗಳ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಹಾಗೂ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಹೇಳಿದರು. ಕಾರ್ಯಕ್ರಮಗಳಲ್ಲಿ ಅನ್ಯಧರ್ಮದ ವ್ಯಕ್ತಿಗಳಿಗೆ, ಧರ್ಮಕ್ಕೆ ನೋವು ತರುವಂತಹ ಕೆಲಸ ಮಾಡಬೇಡಿ. ಶಾಂತಿ, ಸಂಯಮ, ಮಾನವೀಯತೆಯನ್ನು ಮೈಗೂಡಿಸಿಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡಲು ಇಲಾಖೆಯೊಂದಿಗೆ

ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ – ಬೆಳ್ಳಾರೆ ಪಿಎಸೈ ಈರಯ್ಯ ► ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಹಾಗೂ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಸೂಚನೆ Read More »

ಕರಾವಳಿ

ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ► ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು

(ನ್ಯೂಸ್ ಕಡಬ) newskadaba.com ಉಡುಪಿ, ಸೆ.08. ನಡು ರಸ್ತೆಯಲ್ಲಿ ಚಲಿಸುತ್ತಿದ್ದ ಮಾರುತಿ 800 ಕಾರೊಂದು ಹಠಾತ್ತನೆ ಉಂಟಾದ ಬೆಂಕಿಯಿಂದಾಗಿ ಸುಟ್ಟು ಭಸ್ಮವಾದ ಘಟನೆ ಉಡುಪಿಯ ಜೋಡುಕಟ್ಟೆ ಬಳಿ ಶನಿವಾರ ರಾತ್ರಿ ಸಂಭವಿಸಿದೆ. ಮಹಿಳೆಯೋರ್ವರು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಾರಿನ ಬಾನೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾಯವನ್ನರಿತು ತಕ್ಷಣವೇ ಕಾರನ್ನು ನಿಲ್ಲಿಸಿ ಹೊರಬಂದಿದ್ದಾರೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಕ್ಷಣಮಾತ್ರದಲ್ಲಿ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿದ್ದು, ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.

ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ► ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು Read More »

ಕರಾವಳಿ

ಸುಬ್ರಹ್ಮಣ್ಯ: ಒಬ್ಬಂಟಿಯಾಗಿದ್ದ ಜೀವನ ಸಾಗಿಸುತ್ತಿದ್ದ ವ್ಯಕ್ತಿಯ ಕೊಲೆ ► ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.08. ಒಬ್ಬಂಟಿಯಾಗಿ ಜೀವನ‌ ಸಾಗಿಸುತ್ತಿದ್ದ ವ್ಯಕ್ತಿಯೋರ್ವರನ್ನು ಮನೆಯ ಕೊಠಡಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಅವರ ಮೃತದೇಹವು ಶನಿವಾರದಂದು ಕಂಡು ಬಂದಿದೆ. ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕಲ್ಲಾರು ನಿವಾಸಿ ಸುಬ್ರಹ್ಮಣ್ಯ ಕೆ.(58) ಕೊಲೆಗೀಡಾದ ದುರ್ದೈವಿ. 2007 ರಲ್ಲಿ ಹೆಂಡತಿಯನ್ನು ತೊರೆದಿದ್ದ ಇವರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸುಬ್ರಹ್ಮಣ್ಯರು ಕೆಲವು ದಿನಗಳಿಂದ ಕಾಣದೆ ಇದ್ದುದರಿಂದ ಅನುಮಾನಗೊಂಡ ನೆರೆಯ ನಿವಾಸಿ ರಾಮಚಂದ್ರ ಎಂಬವರು ಮೃತರ ಸಹೋದರನಿಗೆ ಕರೆ‌ಮಾಡಿ ವಿಚಾರ ತಿಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರದಂದು ಮನೆಗೆ

ಸುಬ್ರಹ್ಮಣ್ಯ: ಒಬ್ಬಂಟಿಯಾಗಿದ್ದ ಜೀವನ ಸಾಗಿಸುತ್ತಿದ್ದ ವ್ಯಕ್ತಿಯ ಕೊಲೆ ► ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ Read More »

ಕರಾವಳಿ
Scroll to Top