ಕರಾವಳಿ

ಕೇಂದ್ರ ಸರಕಾರದ ಚಿಂತನೆಗೆ ಯುವ ಸಂಸ್ಥೆಗಳ ಸಾಥ್

ಬೃಂದಾ ಪಿ.ಮುಕ್ಕೂರು,ವಿವೇಕಾನಂದ ಕಾಲೇಜು ಪುತ್ತೂರು ಯುವಶಕ್ತಿ ದೇಶದ ಅಮೂಲ್ಯ ಸಂಪತ್ತು, ಶಕ್ತಿ. ೧೬ ರಿಂದ ೩೫ ವರ್ಷದೊಳಗಿನ ಪ್ರಾಯ ಅತ್ಯಂತ ಹುರುಪಿನ, ಉತ್ಸಾಹದ, ಸಾಽಸುವ ಛಲ ಹೊಂದಿರುವ ವಯಸ್ಸು. ಈ ವಯಸ್ಸಿನ ಯುವಕರು ಪರಸ್ಪರ ಸಂಘಟಿತರಾಗಿ ಯುವಕ-ಯುವತಿ ಮಂಡಲಗಳ ಮೂಲಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹೀಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನಿಸ್ವಾರ್ಥವಾಗಿ ಶ್ರಮಿಸುತ್ತಿರುವುದು ಉತ್ತಮ ವಿಚಾರ. ಯುವಕ ಯುವತಿ ಮಂಡಲಗಳು ಬಲಿಷ್ಠವಾಗಿದ್ದಲ್ಲಿ ಸಮಾಜ ಸುಸ್ಥಿತಿಯಲ್ಲಿರಲಿದೆ. ಸಮಾಜದ ಅಭಿವೃದ್ಧಿ, ಬದಲಾವಣೆಯಲ್ಲಿ ಇಂತಹ ಸಂಘಟನೆಗಳ ಪಾತ್ರ ಮಹತ್ವವಾದುದು, ಅವಿಸ್ಮರಣೀಯವಾದುದು.   […]

ಕೇಂದ್ರ ಸರಕಾರದ ಚಿಂತನೆಗೆ ಯುವ ಸಂಸ್ಥೆಗಳ ಸಾಥ್ Read More »

ಕರಾವಳಿ

ಸವಣೂರು ವಿದ್ಯಾರಶ್ಮಿ ಪ್ರ.ದ.ಕಾಲೇಜು : ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

ಸವಣೂರು : ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿಲ್ಲಿ  ಕಂಪ್ಯೂಟರ್ ಲ್ಯಾಬ್‌ನಉದ್ಘಾಟನೆ ನಡೆಯಿತು. ಸಂಸ್ಥೆಯ ಸಂಚಾಲಕರಾದ  ಕೆ. ಸೀತಾರಾಮ ರೈ ಸವಣೂರು ಪ್ಯೂಟರ್ ಲ್ಯಾಬ್ ನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿ ಎನ್.ಸುಂದರ ರೈ ಮತ್ತು ಉದ್ಯಮಿ ಜೆರಿ ಪಿಂಟೋ ರವರು ಕಂಪ್ಯೂಟರ್, ಉದ್ಯಮಿ  ವಿಕ್ರಮ್ ಶೆಟ್ಟಿ ಯವರು ಪ್ರಾಜೆಕ್ಟರ್ ನ್ನು ಸಂಸ್ಥೆಗೆ ಕೊಡುಗೆಯಾಗಿ ನೀಡಿದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಽಕಾರಿ  ಆಶ್ವಿನ್. ಎಲ್ ಶೆಟ್ಟಿ , ಮಂಗಳೂರು ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ

ಸವಣೂರು ವಿದ್ಯಾರಶ್ಮಿ ಪ್ರ.ದ.ಕಾಲೇಜು : ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ Read More »

ಕರಾವಳಿ

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೀತ ಸಂಗೀತ

ಸವಣೂರು: ಇಲ್ಲಿನ  ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ  ಗೀತಸಂಗೀತ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪೆರ್ನಾಜೆ ಸೀತಾರಾಘವ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಆರ್.ಗೋಪಾಲಕೃಷ್ಣ  ಅವರು, ಶಾಸ್ತ್ರೀಯ ಸಂಗೀತ, ಭಾವಗೀತ, ಜನಪದಗೀತೆ ಹಾಗೂ ಸುಗಮ ಸಂಗೀತವನ್ನು ಹಾಡಿದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ    ಕೆ. ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಽಕಾರಿ ಅಶ್ವಿನ್ ಎಲ್. ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿಶೆಟ್ಟಿ,

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೀತ ಸಂಗೀತ Read More »

ಕರಾವಳಿ

ಅಂಕತ್ತಡ್ಕ:ಶಾಲಾಭಿವೃದ್ಧಿ ಸಮಿತಿ ಸಭೆ,ನೂತನ ಸಮಿತಿ ರಚನೆ

ಸವಣೂರು : ಗ್ರಾ.ಪಂ.ವ್ಯಾಪ್ತಿಯ  ಅಂಕತ್ತಡ್ಕ ಹಿ.ಪ್ರಾ.ಶಾಲಾಭಿವೃದ್ಧಿ  ಸಮಿತಿಯ ಸಭೆಯು ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ವಿಶ್ವನಾಥ ಪೂಜಾರಿ ,ಉಪಾಧ್ಯಕ್ಷರಾಗಿ  ಶಹನಾಝ್ ಬಾನು , ಸದಸ್ಯರಾಗಿ ಬಾಬು,ಚಿತ್ರಾವತಿ ಕೆ.ಎಂ,ಕುಸುಮಾ,ಸುಂದರಿ,ಗೀತಾ ಕೆ,ನಾರಾಯಣ ಪೂಜಾರಿ,ಎ.ಎಸ್.ರಝಾಕ್,ಲಲಿತಾ,ವಸಂತಿ,ರೇಷ್ಮಾ,ಶಬೀನಾ ಬಾನು,ಲತಾ.ಬಿ.ಕೆ,ನಳಿನಿ ರೈ,ಸುಮಲತಾ,ಕಿಟ್ಟಣ್ಣ ರೈ,ವಿಶ್ವನಾಥ  ಇವರನ್ನು ಆಯ್ಕೆ ಮಾಡಲಾಯಿತು. ನಾಮ ನಿರ್ದೇಶನ ಸದಸ್ಯರಾಗಿ ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್, ,ಶಿಕ್ಷಕ ಪ್ರತಿನಿಽಯಾಗಿ ಸಂದ್ಯಾ ಜಿ.ಕೆ,ವಿದ್ಯಾರ್ಥಿ ಪ್ರತಿನಿಽಯಾಗಿ ಆಯಿಷತುಲ್ ಫಾಯಿಝಾ,ಪದನಿಮಿತ್ತ ಸದಸ್ಯರಾಗಿ ಆರೋಗ್ಯ ಕಾರ್ಯಕರ್ತೆ ವಾಗೀಶ್ವರಿ, ಅಂಗನವಾಡಿ ಕಾರ್ಯಕರ್ತೆ ಪ್ರೇಮ,ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ಶಾರದಾ ಆಯ್ಕೆಯಾದರು.  

ಅಂಕತ್ತಡ್ಕ:ಶಾಲಾಭಿವೃದ್ಧಿ ಸಮಿತಿ ಸಭೆ,ನೂತನ ಸಮಿತಿ ರಚನೆ Read More »

ಕರಾವಳಿ

ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ- ಬೆಳ್ಳಾರೆ ಪಿಎಸೈ ಈರಯ್ಯ

ಸವಣೂರು :ಗಣೇಶೋತ್ಸವಗಳ ಮೆರವಣಿಗೆಯಲ್ಲಿ  ಡಿ.ಜೆ.ಸೌಂಡ್ಸ್‌ಗೆ ಅವಕಾಶವಿಲ್ಲ.ಈ ನಿಟ್ಟಿನಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಿ ,ಕಾನೂನು ಪಾಲನೆಗೆ ಸಹರಿಸಬೇಕು ಎಂದು ಬೆಳ್ಳಾರೆ ಠಾಣಾ ಉಪನಿರೀಕ್ಷಕ ಡಿ.ಎನ್ ಈರಯ್ಯ ಹೇಳಿದರು. ಅವರು  ಬೆಳ್ಳಾರೆಯ ಅಂಬೇಡ್ಕರ್ ಭವನದಲ್ಲಿ ನಡೆದ  ವಿವಿಧ ಕಡೆಗಳ ಗಣೇಶೋತ್ಸವ ಸಮಿತಿಗಳ ಪದಾಽಕಾರಿಗಳ ಹಾಗೂ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಹೇಳಿದರು. ಕಾರ್ಯಕ್ರಮಗಳಲ್ಲಿ  ಅನ್ಯಧರ್ಮದ ವ್ಯಕ್ತಿಗಳಿ,ಧರ್ಮಕ್ಕೆ  ನೋವು ತರುವಂತಹ ಕೆಲಸ ಮಾಡಬೇಡಿ. ಶಾಂತಿ,ಸಂಯಮ,ಮಾನವೀಯತೆಯನ್ನು ಮೈಗೂಡಿಸಿಕೊಂಡು .ಶಾಂತಿಸುವ್ಯವಸ್ಥೆ ಕಾಪಾಡಲು  ಇಲಾಖೆಯೊಂದಿಗೆ ಕೈಜೋಡಿಸಬೇಕು. ಇಲಾಖೆಯ ಮೇಲೆ ಸಾರ್ವಜನಿಕರ ನಂಬಿಕೆ ಹಾಗೂ ಸಹಕಾರ ಬೇಕು ಎಂದರು.

ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ- ಬೆಳ್ಳಾರೆ ಪಿಎಸೈ ಈರಯ್ಯ Read More »

ಕರಾವಳಿ

ಸವಣೂರು : ಈಡೇರದ ಹೋಬಳಿ ಕೇಂದ್ರ ಬೇಡಿಕೆ

ಸವಣೂರು :ವೇಗವಾಗಿ ಬೆಳೆಯುತ್ತಿರುವ ಪುತ್ತೂರು ತಾಲೂಕಿನ ಸವಣೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂಬ ಕೂಗು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.ಇಲ್ಲಿನ ವಿಶೇಷತೆ ಎಂದರೆ ತಾಲೂಕು ಪುತ್ತೂರು ,ವಿಧಾನ ಸಭೆ ಸುಳ್ಯ ,ಕಂದಾಯ ಹೋಬಳಿ ಕಡಬ,ಪೊಲೀಸ್ ಠಾಣೆ ಬೆಳ್ಳಾರೆ ಹೀಗೆ ಸವಣೂರಿಗೆ ವಿವಿಧ ರೀತಿಯ ಸಂಪರ್ಕಗಳಿವೆ. ಸುಮಾರು ಮೂರು ದಶಕಗಳಿಂದ ಶ್ರವಣರ ಊರು ಸವಣೂರು ಎಂಬ ಪುಟ್ಟಹಳ್ಳಿ ವಿವಿಧ ಕಾರಣಗಳಿಂದ ಸವಣೂರು ವೇಗವಾಗಿ ಬೆಳೆಯುತ್ತಿದೆ.ಸರಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು,ಕಂದಾಯ ಕಛೇರಿ,ಗ್ರಾ.ಪಂ., ವಸತಿ ಸಮುಚ್ಚಯ ,ಗ್ರಾ.ಪಂ ,ಪೆಟ್ರೋಲ್

ಸವಣೂರು : ಈಡೇರದ ಹೋಬಳಿ ಕೇಂದ್ರ ಬೇಡಿಕೆ Read More »

ಕರಾವಳಿ

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರಕ್ಷಕ – ಶಿಕ್ಷಕ ಸಂಘದ ಮಹಾಸಭೆ

ಸವಣೂರು : ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ಷಕ – ಶಿಕ್ಷಕ ಸಂಘದ  ಮಹಾಸಭೆ  ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಮಾತನಾಡಿ,ಕಾಲೇಜಿನ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಜೊತೆಗೆ ಪೋಷಕರ ಪಾತ್ರ ಮುಖ್ಯ ಎಂದರು. ಮುಖ್ಯ ಅತಿಥಿ ಮಂಗಳೂರು ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮನೋವೈದ್ಯ ಶಾಸ್ತ್ರ ವಿಭಾಗದ ಡಾ. ಶಿಶಿರ್ ಕುಮಾರ್,ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನದಿಂದ ಅವರ ಮಾನಸಿಕ ಸ್ಥೈರ್ಯ ಬೆಳೆಸಿ

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರಕ್ಷಕ – ಶಿಕ್ಷಕ ಸಂಘದ ಮಹಾಸಭೆ Read More »

ಕರಾವಳಿ

►► Big Breaking ಆಲಂಕಾರು: ಮಗನಿಗೆ ಕತ್ತಿಯಿಂದ ಕಡಿದ ತಂದೆ ► ಬಳಿಕ ಮರ್ಮಾಂಗ ಕಡಿದು ಕುತ್ತಿಗೆ ಸೀಳಿ ತಾನೂ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಸೆ.12. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ತನ್ನ ಮಗನಿಗೆ ಕತ್ತಿಯನ್ನು ಕಡಿದು ಬಳಿಕ ತನ್ನ ಕುತ್ತಿಗೆ ಹಾಗೂ ಮರ್ಮಾಂಗಕ್ಕೆ ಚಾಕುವಿನಿಂದ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರದಂದು ಆಲಂಕಾರಿನಲ್ಲಿ ನಡೆದಿದೆ. ಆಲಂಕಾರು ಗ್ರಾಮದ ಪಟ್ಟೆಮಜಲು ನಿವಾಸಿ ಶೀನಪ್ಪ ಪೂಜಾರಿ ಎಂಬವರ ಪುತ್ರ ರಾಜೀವ್ ಪೂಜಾರಿ (45) ತನ್ನ ಪುತ್ರ ರತನ್ ಗೆ ಕತ್ತಿಯಿಂದ ಕಡಿದಿದ್ದು, ಬಳಿಕ ಕತ್ತಿಯಿಂದ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಯಾಳು ರತನ್ ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

►► Big Breaking ಆಲಂಕಾರು: ಮಗನಿಗೆ ಕತ್ತಿಯಿಂದ ಕಡಿದ ತಂದೆ ► ಬಳಿಕ ಮರ್ಮಾಂಗ ಕಡಿದು ಕುತ್ತಿಗೆ ಸೀಳಿ ತಾನೂ ಆತ್ಮಹತ್ಯೆ Read More »

ಕರಾವಳಿ

ಬೆಳಂದೂರು ಕಾಲೇಜಿಗೆ ಕಾಣಿಯೂರು ಶ್ರೀ ಭೇಟಿ

ಬೆಳಂದೂರು : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಸೋಮವಾರ ಭೇಟಿ ನೀಡಿದರು. ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ ಮನೆಯಿಂದಲೇ ಮಕ್ಕಳ ಸಂಸ್ಕಾರ ರೂಪುಗೊಳ್ಳುವುದು. ವಿದ್ಯಾರ್ಥಿಗಳು ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಗಿಡ ನೆಡುವ ಕಾರ್ಯವನ್ನೂ ಮಾಡಬೇಕು. ಈ ಮೂಲಕ ಉತ್ತಮ ವಾತಾವರಣವನ್ನು ನಿರ್ಮಿಸಬೇಕು. ಬೆಳಂದೂರು ಕಾಲೇಜಿನ ವಿದ್ಯಾರ್ಥಿಗಳು ಪಠ್ಯ ಹಾಗೂ ಇನ್ನಿತರ ವಿಚಾರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿ ಬೆಳಗಬೇಕೆಂದು ಸ್ವಾಮೀಜಿ ಆಶಿಸಿದರು. ಪೂರ್ಣಕುಂಭ ಸ್ವಾಗತ ಸ್ವಾಮೀಜಿಯವರನ್ನು ವಿದ್ಯಾರ್ಥಿಗಳು ಪೂರ್ಣಕುಂಭ

ಬೆಳಂದೂರು ಕಾಲೇಜಿಗೆ ಕಾಣಿಯೂರು ಶ್ರೀ ಭೇಟಿ Read More »

ಕರಾವಳಿ

ಪಾಲ್ತಾಡಿ ಮಂಜುನಾಥನಗರ ;ಶ್ರೀಕೃಷ್ಣ ಜನ್ಮಾಷ್ಟಮಿ

ಸವಣೂರು : ಪಾಲ್ತಾಡಿ ಗ್ರಾಮದ ಮಂಜುನಾಥನಗರ ಸಿದ್ದಿವಿನಾಯಕ ಸೇವಾ ಸಂಘ ಇದರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯು  ಮಂಜುನಾಥನಗರ ಸಿದ್ದಿವಿನಾಯಕಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ  ಇಡ್ಯಡ್ಕ ಶಾಲಾ ಮುಖ್ಯಶಿಕ್ಷಕ ಜಯಂತ್ ವೈ ಅವರು ಧಾರ್ಮಿಕ ಉಪನ್ಯಾಸ ನೀಡಿ,ಪ್ರತೀ ಮನೆಮನೆಯಲ್ಲೂ  ಸಂಸ್ಕಾರ,ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಬೇಕು.ಸಂಸ್ಕಾರ ಬೋಧನೆಯಲ್ಲಿ ಭಜನೆ ಉತ್ತಮ ಮಾಧ್ಯಮ.ಭಜನೆಯಿಂದ ವಿಭಜನೆ ದೂರವಾಗಲು ಸಾಧ್ಯ.ಮಕ್ಕಳಿಗೆ ಎಳವೆಯಲ್ಲೇ ಸದ್ವಿಚಾರಗಲನ್ನು ತಿಳಿಸುವ ಕಾರ್ಯವಾಗಬೇಕಿದೆ ಎಂದರು. ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ವಹಿಸಿದ್ದರು.

ಪಾಲ್ತಾಡಿ ಮಂಜುನಾಥನಗರ ;ಶ್ರೀಕೃಷ್ಣ ಜನ್ಮಾಷ್ಟಮಿ Read More »

ಕರಾವಳಿ
Scroll to Top