ಕರಾವಳಿ

ಮರ್ಧಾಳ: ಮರಕ್ಕೆ ಢಿಕ್ಕಿ ಹೊಡೆದ ಕಾರು ➤ ಇಬ್ಬರು ಗಂಭೀರ, ನಾಲ್ವರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಡಬ, ಫೆ. 21. ಚಾಲಕನ ನಿಯಂತ್ರಣ ತಪ್ಪಿದ ಮಹೀಂದ್ರಾ ಎಕ್ಸ್ ಯುವಿ ಕಾರೊಂದು ಹೆದ್ದಾರಿ ಬದಿಯ ಬೃಹತ್ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಅಳೇರಿ ಎಂಬಲ್ಲಿ ಗುರುವಾರದಂದು ಸಂಭವಿಸಿದೆ. ಬೆಂಗಳೂರು ಮೂಲದ ಯಾತ್ರಿಕರಿದ್ದ ಕಾರು ಧರ್ಮಸ್ಥಳ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದಾಗ ಅಳೇರಿ ತಿರುವಿನಲ್ಲಿ ಚಾಲಕಬ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದು, […]

ಮರ್ಧಾಳ: ಮರಕ್ಕೆ ಢಿಕ್ಕಿ ಹೊಡೆದ ಕಾರು ➤ ಇಬ್ಬರು ಗಂಭೀರ, ನಾಲ್ವರು ಅಪಾಯದಿಂದ ಪಾರು Read More »

ಕರಾವಳಿ

➤➤ Breaking News ಕೊನೆಗೂ ಕಡಬ ತಾಲೂಕು ಉದ್ಘಾಟನೆಗೆ ಮುಹೂರ್ತ ಫಿಕ್ಸ್ ➤ ಮಾರ್ಚ್ 01 ರಂದು ಕಡಬ, ಮೂಡುಬಿದಿರೆ ನೂತನ ತಾಲೂಕುಗಳಿಗೆ ಅಧಿಕೃತ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.20. ನೂತನ ತಾಲೂಕಾಗಿ ಘೋಷಣೆಯಾಗಿರುವ ಕಡಬ ಹಾಗೂ ಮೂಡುಬಿದಿರೆ ತಾಲೂಕುಗಳ ಅಧಿಕೃತ ಉದ್ಘಾಟನೆಯನ್ನು ಮಾರ್ಚ್ 01 ರಂದು ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.   ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ರಾಜ್ಯದ ಕಂದಾಯ ಸಚಿವರಾದ ಆರ್.ವಿ‌.ದೇಶಪಾಂಡೆ ನೂತನ ಕಡಬ ಹಾಗೂ ಮೂಡಬಿದಿರೆ ತಾಲೂಕುಗಳನ್ನು ಉದ್ಘಾಟಿಸಲಿದ್ದಾರೆ ಎಂದರು. ಅದೇ ದಿನ ಸಂಜೆ ಮಂಗಳೂರಿನಲ್ಲಿ ಕಂದಾಯ ಸಚಿವರಿಂದ ಜಿಲ್ಲಾ ಮಟ್ಟದಲ್ಲಿ ಪ್ರಗತಿ

➤➤ Breaking News ಕೊನೆಗೂ ಕಡಬ ತಾಲೂಕು ಉದ್ಘಾಟನೆಗೆ ಮುಹೂರ್ತ ಫಿಕ್ಸ್ ➤ ಮಾರ್ಚ್ 01 ರಂದು ಕಡಬ, ಮೂಡುಬಿದಿರೆ ನೂತನ ತಾಲೂಕುಗಳಿಗೆ ಅಧಿಕೃತ ಚಾಲನೆ Read More »

ಕರಾವಳಿ

➤➤ Breaking News ಮರ್ಧಾಳ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಓರ್ವ ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಫೆ.16. ದ್ವಿಚಕ್ರ ವಾಹನಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರನೋರ್ವ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ಶನಿವಾರ ರಾತ್ರಿ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಐತ್ತೂರು ಗ್ರಾಮದ ಶಿವಾಜಿನಗರ ನಿವಾಸಿ ದಿ| ಅಹಮದ್ ಕುಂಞಿ ಎಂಬವರ ಪುತ್ರ ಇಲ್ಯಾಸ್(43) ಎಂದು ಗುರುತಿಸಲಾಗಿದೆ. ಕೊಣಾಜೆ ಗ್ರಾಮದ ಕೆರ್ನಡ್ಕ ನಿವಾಸಿ ಪೂವಪ್ಪ(38) ಎಂಬವರು ಗಂಭೀರ ಗಾಯಗೊಂಡಿದ್ದು, ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ

➤➤ Breaking News ಮರ್ಧಾಳ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಓರ್ವ ಮೃತ್ಯು, ಓರ್ವ ಗಂಭೀರ Read More »

ಕರಾವಳಿ

ಸುಂಕದಕಟ್ಟೆ: ಮರದಲ್ಲಿ ನೇತಾಡುತ್ತಿದ್ದ ರೀತಿಯಲ್ಲಿ ಮಂಗದ ಮೃತದೇಹ ಪತ್ತೆ ➤ ಮಂಗನ ಖಾಯಿಲೆ ಭೀತಿಯಲ್ಲಿ ನಾಗರಿಕರು..!?

(ನ್ಯೂಸ್ ಕಡಬ) newskadaba.com ಕಡಬ, ಫೆ. 14. ಮರದಲ್ಲಿ ನೇತಾಡಿದ ಸ್ಥಿತಿಯಲ್ಲಿ ಮಂಗನ ಮೃತದೇಹವೊಂದು ಇಲ್ಲಿನ ಸುಂಕದಕಟ್ಟೆ ಸಮೀಪ ಗುರುವಾರದಂದು ಕಂಡುಬಂದಿದೆ. ಸುಂಕದಕಟ್ಟೆಯಿಂದ ಕೊಂಬಾರು ರಸ್ತೆಯ ಬದಿಯಲ್ಲಿನ ಮರದಲ್ಲಿ ನೇತಾಡುತ್ತಿದ್ದು, ಮೂರ್ನಾಲ್ಕು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ ಭೇಟಿ ನೀಡಿ ಉಜಿರೆಯ ಮಂಗನ ಖಾಯಿಲೆ ಕ್ಷೇತ್ರ ಘಟಕದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಸುಂಕದಕಟ್ಟೆ: ಮರದಲ್ಲಿ ನೇತಾಡುತ್ತಿದ್ದ ರೀತಿಯಲ್ಲಿ ಮಂಗದ ಮೃತದೇಹ ಪತ್ತೆ ➤ ಮಂಗನ ಖಾಯಿಲೆ ಭೀತಿಯಲ್ಲಿ ನಾಗರಿಕರು..!? Read More »

ಕರಾವಳಿ

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದು ಮದುವೆಗೆ ನಿರಾಕರಣೆ ➤ ಕಡಬ ನಿವಾಸಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.14. ಮದುವೆ ಆಗುತ್ತೇನೆಂದು ನಂಬಿಸಿ ದೈಹಿಕ ಸಂಪರ್ಕ ನಡೆಸಿ ಎಂಟು ತಿಂಗಳ ನಂತರ ಇದೀಗ ಮದುವೆಯಾಗಲು ನಿರಾಕರಿಸಿದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ ಜಾರಪ್ಪ ಪೂಜಾರಿ ಎಂಬವರ ಪುತ್ರ ಸುಜಿತ್ ಎಂದು ಗುರುತಿಸಲಾಗಿದೆ. ಆರೋಪಿಯು ಬಂಟ್ವಾಳದ ಕಲ್ಲಿನ ಕೋರೆಯೊಂದರಲ್ಲಿ ಹಿಟಾಚಿ ಆಪರೇಟರ್ ಆಗಿ ಕರ್ತವ್ಯದಲ್ಲಿದ್ದು, ಅಲ್ಲೇ ಕೂಲಿ ಕಾರ್ಮಿಕಳಾಗಿದ್ದ ಬಾಗಲಕೋಟೆ ಮೂಲದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ಇದೀಗ

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದು ಮದುವೆಗೆ ನಿರಾಕರಣೆ ➤ ಕಡಬ ನಿವಾಸಿಯ ಬಂಧನ Read More »

ಕರಾವಳಿ

ಕಡಬ: ಬೆಳ್ಳಂಬೆಳಗ್ಗೆ ಅಗ್ನಿಗಾಹುತಿಯಾದ ಟಾಟಾ ಮ್ಯಾಜಿಕ್ ಐರಿಸ್ ➤ ಸಂಪೂರ್ಣ ಸುಟ್ಟು ಕರಕಲು

(ನ್ಯೂಸ್ ಕಡಬ) newskadaba.com ಕಡಬ, ಫೆ.14. ಟಾಟಾ ಮ್ಯಾಜಿಕ್ ಐರಿಸ್ ವಾಹನದಲ್ಲಿ ಆಕಸ್ಮಿಕ ಬೆಂಕಿಯುಂಟಾದ ಪರಿಣಾಮ ಹೊತ್ತಿ ಉರಿದ ಘಟನೆ ಕಡಬ ಕಲ್ಲುಗುಡ್ಡೆ ರಸ್ತೆಯ ಮುಲಿಮಜಲು ಎಂಬಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.   ಕಲ್ಲುಗುಡ್ಡೆ ಕಡೆಯಿಂದ ಕಡಬ ಕಡೆಗೆ ತೆರಳುತ್ತಿದ್ದ ಜಗ್ಗ ಎಂಬವರಿಗೆ ಸೇರಿದ ವಾಹನದಲ್ಲಿ ಮುಳಿಮಜಲು ತಲುಪಿದಾಗ ಬೆಂಕಿ ಕಂಡುಬಂದಿದ್ದು, ಪ್ರಯಾಣಿಕರು ಹೊರ ಬಂದಿದ್ದರಿಂದಾಗಿ ಪ್ರಾಣಾಪಾಯ ಸಂಭವಿಸಿಲ್ಲ‌. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿರಬಹುದೆಂದು ಶಂಕಿಸಲಾಗಿದೆ.

ಕಡಬ: ಬೆಳ್ಳಂಬೆಳಗ್ಗೆ ಅಗ್ನಿಗಾಹುತಿಯಾದ ಟಾಟಾ ಮ್ಯಾಜಿಕ್ ಐರಿಸ್ ➤ ಸಂಪೂರ್ಣ ಸುಟ್ಟು ಕರಕಲು Read More »

ಕರಾವಳಿ

ಕಡಬ: ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಜೀಪು ಚಾಲಕ ➤ ಫೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಫೆ.12. ಅಪ್ರಾಪ್ತ ಬಾಲಕಿಗೆ ಜೀಪು ಚಾಲಕನೋರ್ವ ಅತ್ಯಾಚಾರಗೈದುದರಿಂದ ಬಾಲಕಿ ಗರ್ಭಿಣಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಿರುವ ಕಡಬ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ರೆಂಜಿಲಾಡಿ‌ ಗ್ರಾಮದ ಪೇರಡ್ಕ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಕಡಬದಲ್ಲಿ ಜೀಪು ಚಾಲಕನಾಗಿದ್ದ ಸದ್ದಾಂ (25) ಎಂದು ಗುರುತಿಸಲಾಗಿದೆ. ಆರೋಪಿಯು ತಾಲೂಕಿನ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದು, ಬಾಲಕಿ ಎಂಟು ತಿಂಗಳ

ಕಡಬ: ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಜೀಪು ಚಾಲಕ ➤ ಫೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ Read More »

ಕರಾವಳಿ

ಸರಸ್ವತೀ ವಿದ್ಯಾಲಯ ಕಡಬ ರಥಸಪ್ತಮಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.comಕಡಬ,ಫೆ.12. ರಥಸಪ್ತಮಿ ಕಾರ್ಯಕ್ರಮವನ್ನುದಿನಾಂಕ 12.02.2019ನೇ ಮಂಗಳವಾರದಂದು  ಸರಸ್ವತೀ ಸಮೂಹ ಸಂಸ್ಥೆಯಲ್ಲಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದ ಮಹತ್ವವನ್ನು ಶ್ರೀ ಮಹೇಶ್ ನಿಟಿಲಾಪುರ ಇವರು “ಭೂಮಿಗೆ ಬೆಳಕನ್ನೂ ಜೀವರಾಶಿಗಳಿಗೆ ಚೈತನ್ಯವನ್ನೂ ನೀಡುವ ಸೂರ್ಯನ ಉತ್ತರಾಯಣದ ಚಲಿಸುವ ಪರ್ವ”. ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಶ್ರೀಮತಿ ಪ್ರಮೀಳಾ ಲೋಕೇಶ್ ನಿರ್ದೇಶಕರು ಸರಸ್ವತೀ ಸಮೂಹ ಸಂಸ್ಥೆ ಕಡಬ ಇವರು ವಹಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಪ್ರಶಾಂತ್ ಆಚಾರ್ಯ ಶ್ರೀದೇವಿ ಜುವ್ಯೆಲರಿ ಕಡಬ. ದಿವ್ಯ ಉಪಸ್ಥಿತಿಯಲ್ಲಿ ಸಂಚಾಲಕರು ಶ್ರೀ ವೆಂಕಟರಮಣ ರಾವ್ ಮಂಕುಡೆ.

ಸರಸ್ವತೀ ವಿದ್ಯಾಲಯ ಕಡಬ ರಥಸಪ್ತಮಿ ಕಾರ್ಯಕ್ರಮ Read More »

ಕರಾವಳಿ

ಕಡಬ: ಸರಸ್ವತೀ ವಿದ್ಯಾಲಯ ಸಾಮರಸ್ಯ ಭೋಜನ

(ನ್ಯೂಸ್ ಕಡಬ) newskadaba.comಕಡಬ,ಫೆ.12.ಕಡಬ ಸರಸ್ವತೀ ವಿದ್ಯಾಲಯ ಸಾಮರಸ್ಯ ದಿನಾಚರಣೆ ಅಂಗವಾಗಿ ಸಾಮರಸ್ಯ ಭೋಜನ ನಡೆಯಿತು. ಗ್ರಾಮ ವಿಕಾಸ ಸಾಮರಸ್ಯ ವಿಭಾಗ ಪುತ್ತೂರು ಜಿಲ್ಲಾ ಸಂಚಾಲಕ ಉಮೇಶ್ ವೇಣೂರು ಮಾತನಾಡಿ, ಜಾತಿ, ಮತಗಳ ಭೇದವಿಲ್ಲದೇ ಪರೋಪಕಾರಿಯಾಗಿ ಬಾಳಬೇಕು ಆಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಜಾತಿಗಳ ಒಗ್ಗಟ್ಟು ಸಮಾಜದ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿರಬೇಕು ಹೊರತು ಜಾತಿಗಳ ನಡುವೆ ಕಂದಕಕ್ಕೆ ಎಡೆಮಾಡಿ ಕೊಡಬಾರದು ಎಂದರು. ಕಡಬ ಗ್ರಾಮ ಪಂಚಾಯಿತಿ ಸದಸ್ಯೆ ಕಾರ್ಯಕ್ರಮ ಉದ್ಘಾಟಿಸಿ, ಅದ್ಯಕ್ಷತೆ ವಹಿಸಿ ಶುಭಹಾರೈಸಿದರು. ಶಾಲಾ ಸಂಚಾಲಕ ವೆಂಕಟ್ರಮಣ

ಕಡಬ: ಸರಸ್ವತೀ ವಿದ್ಯಾಲಯ ಸಾಮರಸ್ಯ ಭೋಜನ Read More »

ಕರಾವಳಿ

ಕಡಬ ಸಂತ ಪೌಲರ ಸೀರೋ ಮಲಂಕರ ಕಥೋಲಿಕ್ ದೇವಾಲಯದ ವಾರ್ಷಿಕ ಹಬ್ಬ ಸಮಾಪನ ➤ ನಾವು ಏಸು ಕ್ರಿಸ್ತರ ಪ್ರತಿರೂಪವಾಗಬೇಕು-ಫಾ| ರೊನಾಲ್ಡ್ ಲೋಬೊ

(ನ್ಯೂಸ್ ಕಡಬ) newskadaba.comಕಡಬ,ಫೆ.12. ನಾವು ಏಸು ಕ್ರಿಸ್ತರ ಅನುಯಾಯಿ ಮಾತ್ರ ಆಗದೆ ಅವರ ಪ್ರತಿರೂಪವಾಗಬೇಕು ಎಂದು ಕಡಬ ಸಂತ ಜೋಕಿಮರ ಚರ್ಚಿನ ಧರ್ಮಗುರು ಫಾ| ರೊನಾಲ್ಡ್ ಲೋಬೊ ಹೇಳಿದರು. ಸಂತ ಪೌಲರ ಸೀರೋ ಮಲಂಕರ ಕಥೋಲಿಕ್ ದೇವಾಲಯದ ವಾರ್ಷಿಕ ಹಬ್ಬದ ಮೆರವಣಿಗೆ ಬಳಿಕ ಕಡಬ ಸಂತ ಜೋಕಿಮರ ಚರ್ಚ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಂತ ಪೌಲರು ಏಸು ಕ್ರಿಸ್ತರ ಕಟ್ಟಾ ಅನುಯಾಯಿಯಾಗಿದ್ದರು, ಅವರ ಆದರ್ಶ ನಡೆ ನುಡಿಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.   ಬೆಳಿಗ್ಗೆ ದೇವಾಲಯದಲ್ಲಿ

ಕಡಬ ಸಂತ ಪೌಲರ ಸೀರೋ ಮಲಂಕರ ಕಥೋಲಿಕ್ ದೇವಾಲಯದ ವಾರ್ಷಿಕ ಹಬ್ಬ ಸಮಾಪನ ➤ ನಾವು ಏಸು ಕ್ರಿಸ್ತರ ಪ್ರತಿರೂಪವಾಗಬೇಕು-ಫಾ| ರೊನಾಲ್ಡ್ ಲೋಬೊ Read More »

ಕರಾವಳಿ
Scroll to Top