ಕರಾವಳಿ

ನಾಳೆ (ಮೇ.26) ಕಡಬದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಮೇ.25. ಕಡಬ ಸೈಂಟ್ ಜೋಕಿಮ್ಸ್ ಚರ್ಚ್ ನ ಇಂಡಿಯನ್ ಕ್ಯಾಥೊಲಿಕ್ ಯೂತ್ ಮೂವ್ ಮೆಂಟ್ ಘಟಕ ಹಾಗೂ ಐಸಿವೈಎಂ ಪುತ್ತೂರು ಪೂರ್ವ ವಿಭಾಗದ ಆಶ್ರಯದಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಯ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ನಾಳೆ (ಮೇ.26) ಕಡಬದಲ್ಲಿ ನಡೆಯಲಿದೆ. ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್‌ನ ಸಭಾಂಗಣದಲ್ಲಿ ಆರಂಭಗೊಂಡು ಮಧ್ಯಾಹ್ನದ ವರೆಗೆ ರಕ್ತದಾನ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕಾಗಿ ಸಂಸ್ಥೆಯ […]

ನಾಳೆ (ಮೇ.26) ಕಡಬದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ Read More »

ಕರಾವಳಿ

ಮಾಣಿ: ಕೆಎಸ್ಸಾರ್ಟಿಸಿ ಬಸ್ – ಬುಲೆಟ್ ನಡುವೆ ಢಿಕ್ಕಿ ➤ ಬುಲೆಟ್ ಸವಾರ ಕಡಬ ನಿವಾಸಿ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಮೇ.25. ಕೆಎಸ್ಸಾರ್ಟಿಸಿ ಬಸ್ ಹಾಗೂ ಬುಲ್ಲೆಟ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬುಲ್ಲೆಟ್ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಗಾಯಗೊಂಡ ಬುಲ್ಲೆಟ್ ಸವಾರ‌ನನ್ನು ಕಡಬ ತಾಲೂಕಿನ ನೆಟ್ಟಣ ನಿವಾಸಿ ಸಂಜಿತ್ ಸದಾನಂದನ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಕಡಬ ಕಡೆಗೆ ತೆರಳುತ್ತಿದ್ದ ಬುಲೆಟ್ ಹಾಗೂ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ಬುಡೋಳಿ ಸಮೀಪದ ಬೊಳ್ಳುಕಳ್ಳು ಎಂಬಲ್ಲಿ ಢಿಕ್ಕಿ ಸಂಭವಿಸಿದೆ.

ಮಾಣಿ: ಕೆಎಸ್ಸಾರ್ಟಿಸಿ ಬಸ್ – ಬುಲೆಟ್ ನಡುವೆ ಢಿಕ್ಕಿ ➤ ಬುಲೆಟ್ ಸವಾರ ಕಡಬ ನಿವಾಸಿ ಗಂಭೀರ Read More »

ಕರಾವಳಿ

ಕಡಬ: ವಿವಾಹಿತ ಮಹಿಳೆ ನೇಣುಬಿಗಿದು ಆತ್ಮಹತ್ಯೆ ➤ 24 ಗಂಟೆಯೊಳಗೆ ಕಡಬ ವ್ಯಾಪ್ತಿಯಲ್ಲಿ ಮೂವರಿಂದ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಮೇ.25. ವಿವಾಹಿತ ಮಹಿಳೆಯೋರ್ವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಠಾಣಾ ವ್ಯಾಪ್ತಿಯ ಅರ್ಪಾಜೆ ಎಂಬಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಅರ್ಪಾಜೆ ನಿವಾಸಿ ಶ್ರೀಮತಿ ವೇದಾವತಿ ಎಂದು ಗುರುತಿಸಲಾಗಿದೆ. ವೇದಾವತಿಯವರ ಗಂಡ ಸುಮಾರು 5 ತಿಂಗಳ ಹಿಂದೆ ಖಾಯಿಲೆಯಿಂದ ಮೃತಪಟ್ಟಿದ್ದು, ಇದರಿಂದಾಗಿ ಮನನೊಂದ ವೇದಾವತಿಯವರು ಶುಕ್ರವಾರ ಅಪರಾಹ್ನದಿಂದ ರಾತ್ರಿಯ ನಡುವೆ ಮನೆಯಲ್ಲಿ ಯಾರೂ ಇಲ್ಲದ ವೇಳೆ

ಕಡಬ: ವಿವಾಹಿತ ಮಹಿಳೆ ನೇಣುಬಿಗಿದು ಆತ್ಮಹತ್ಯೆ ➤ 24 ಗಂಟೆಯೊಳಗೆ ಕಡಬ ವ್ಯಾಪ್ತಿಯಲ್ಲಿ ಮೂವರಿಂದ ಆತ್ಮಹತ್ಯೆ Read More »

ಕರಾವಳಿ

ಗಡಿಯಾರ: ನಿಂತಿದ್ದ ರಿಕ್ಷಾಕ್ಕೆ ಹಿಂದಿನಿಂದ ಕಾರು ಢಿಕ್ಕಿ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಾಣಿ, ಮೇ.25. ನಿಲ್ಲಿಸಿದ್ದ ರಿಕ್ಷಾಕ್ಕೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಓರ್ವ ಗಂಭೀರ ಗಾಯಗೊಂಡು, ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಶನಿವಾರದಂದು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಾರದಲ್ಲಿ ಸಂಭವಿಸಿದೆ. ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟೊಯೋಟಾ ಎಟಿಯೋಸ್ ಕಾರು ರಸ್ತೆಯಲ್ಲಿ ನಿಲ್ಲಿಸಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾ ಚಾಲಕ ಆಪತ್ಬಾಂಧವ ಗಡಿಯಾರ ಪುತ್ತಾಕ, ಗಡಿಯಾರ ನಿವಾಸಿಗಳಾದ ಪದ್ಮಾವತಿ ಹಾಗೂ ಕಾವ್ಯ ಗಾಯಗೊಂಡಿದ್ದು, ತುಂಬೆ

ಗಡಿಯಾರ: ನಿಂತಿದ್ದ ರಿಕ್ಷಾಕ್ಕೆ ಹಿಂದಿನಿಂದ ಕಾರು ಢಿಕ್ಕಿ ➤ ಮೂವರಿಗೆ ಗಾಯ Read More »

ಕರಾವಳಿ

ನೂಜಿಬಾಳ್ತಿಲ ಗ್ರಾ.ಪಂ. ಉದ್ಯೋಗಿ ವಿಕ್ರಮ್ ರೈ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಮೇ.25. ಅನಾರೋಗ್ಯದಿಂದ ಬಳಲುತ್ತಿದ್ದ ಪಂಚಾಯತ್ ಸಿಬ್ಬಂದಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಉದ್ಯೋಗಿ ವಿಕ್ರಮ್ ರೈ(39) ಎಂದು ಗುರುತಿಸಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಶನಿವಾರದಂದು ಬೆಳಿಗ್ಗೆ ತನ್ನ ಮನೆಯ ಪಕ್ಕದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೂಜಿಬಾಳ್ತಿಲ ಗ್ರಾ.ಪಂ. ಉದ್ಯೋಗಿ ವಿಕ್ರಮ್ ರೈ ಆತ್ಮಹತ್ಯೆ Read More »

ಕರಾವಳಿ

ಲೋಕಸಭಾ ಚುನಾವಣೆ ಅವಧಿಯಲ್ಲಿ ಅಮಾನತು ಗೊಳಿಸಲಾದ ಶಸ್ತ್ರಾಸ್ತ್ರಗಳ ತಾತ್ಕಾಲಿಕ ಅವಧಿ ಮುಂದುಡುವಂತೆ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.25. ಲೋಕಸಭಾ ಚುನಾವಣೆ-2019ರ ಪ್ರಯುಕ್ತ ಮಂಗಳೂರು ಪೊಲೀಸು ಕಮಿಷನರೇಟ್ ವ್ಯಾಪ್ತಿಯಲ್ಲಿ ಆತ್ಮ ರಕ್ಷಣೆಗಾಗಿ ಮಂಜೂರು ಮಾಡಲಾಗಿರುವ ಎಲ್ಲಾ ಆಯುಧ ಪರವಾನಿಗೆಗಳನ್ನು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ-1959 ಕಲಂ 17(3)(ಬಿ) ರನ್ವಯ 2019ನೇ ಮಾರ್ಚ್ 11 ರಿಂದ ಮೇ 31 ರವರೆಗೆ ತಾತ್ಕಾಲಿಕ ಅವಧಿಗೆ ಅಮಾನತಿನಲ್ಲಿರಿಸಿ ಆದೇಶಿಸಲಾಗಿದೆ. ಪ್ರಸ್ತುತ ಮೂಡಬಿದ್ರೆ ಪುರಸಭೆ ಹಾಗೂ ಮುಲ್ಕಿ ಪಟ್ಟಣ ಪಂಚಾಯತ್‍ನ ಚುನಾವಣೆಯ ಅವಧಿಯಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಜೂನ್ 6

ಲೋಕಸಭಾ ಚುನಾವಣೆ ಅವಧಿಯಲ್ಲಿ ಅಮಾನತು ಗೊಳಿಸಲಾದ ಶಸ್ತ್ರಾಸ್ತ್ರಗಳ ತಾತ್ಕಾಲಿಕ ಅವಧಿ ಮುಂದುಡುವಂತೆ ಆದೇಶ Read More »

ಕರಾವಳಿ

ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರಾತಿಗಾಗಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.25.ಮಂಗಳೂರು ಮೇ 24 ಕರ್ನಾಟಕ ವಾರ್ತೆ:- 2018-19ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ, ಅಂತಿಮ ಪದವಿ, ಅಂತಿಮ ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರಾತಿಗಾಗಿ ಅಂತರ್ಜಾಲದ ಮೂಲಕ ಅರ್ಜಿಗಳನ್ನು ಇಲಾಖಾ ವೆಬ್‍ಸೈಟ್ www.sw.kar.nic.in ನಲ್ಲಿ ಸಲ್ಲಿಸಲು ತಿಳಿಸಿದೆ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಂಡಕ್ಕೆ ಸೇರಿದವರಾಗಿರಬೇಕು ಕರ್ನಾಟಕ ರಾಜ್ಯದವರಾಗಿರಬೇಕು.

ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರಾತಿಗಾಗಿ ಅರ್ಜಿ ಆಹ್ವಾನ Read More »

ಕರಾವಳಿ

ದುಡಿಯುವ ಮಹಿಳೆಯರಿಗಾಗಿ ಆಂತರಿಕ ದೂರು ಸಮಿತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.25.“ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ-2013” ರನ್ವಯ ಸರ್ಕಾರಿ, ಖಾಸಗಿ, ನಿಗಮ ಮಂಡಳಿ, ಸಾರ್ವಜನಿಕ ಉದ್ಯಮಗಳು, ಫ್ಯಾಕ್ಟರಿಗಳು ಇತ್ಯಾದಿ 10 ಅಥವಾ 10ಕ್ಕಿಂತ ಹೆಚ್ಚಿನ ಸಿಬ್ಬಂದಿಗಳಿರುವ ಸ್ಥಳಗಳಲ್ಲಿ “ಆಂತರಿಕ ದೂರು ಸಮಿತಿ”ಯನ್ನು ರಚನೆ ಮಾಡುವುದು ಕಡ್ಡಾಯವಾಗಿರುತ್ತದೆ. ಸದರಿ “ಆಂತರಿಕ ದೂರು ಸಮಿತಿ”ಯನ್ನು ಪ್ರತಿ 3 ವರ್ಷಗಳಿಗೊಮ್ಮೆ ಪುನರಚಿಸಬೇಕು. ಇದಕ್ಕೆ ಸಂಬಂಧಿಸಿದ ಆದೇಶವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ವೆಬ್‍ಸೈಟ್: kscw.kar.nic.in ಡೌನ್ ಲೋಡ್ ಮಾಡಿಕೊಳ್ಳಬೇಕು.

ದುಡಿಯುವ ಮಹಿಳೆಯರಿಗಾಗಿ ಆಂತರಿಕ ದೂರು ಸಮಿತಿ Read More »

ಕರಾವಳಿ

ಕನ್ನಡ ವಿಶ್ವವಿದ್ಯಾಲಯ ಹಂಪಿ ಬಾದಾಮಿ ಕೇಂದ್ರದಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲೆ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.25.ಕನ್ನಡ ವಿಶ್ವವಿದ್ಯಾಲಯ ಹಂಪಿ ಬಾದಾಮಿ ಕೇಂದ್ರದಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಹಾಗೂ ಶಿಲ್ಪಕಲೆ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ 2019-20ನೇ ಸಾಲಿಗೆ ಪ್ರವೇಶಗಳು ಪ್ರಾರಂಭವಾಗಿದ್ದು ಪಿ.ಯು.ಸಿ/ಐ.ಟಿ.ಐ/ಜೆ.ಓ.ಡಿ.ಸಿ ಹಾಗೂ ತತ್ಸಮಾನ (10+2) ಪರೀಕ್ಷೆಯಲ್ಲಿ ಪಾಸಾದ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ವಿಶ್ವವಿದ್ಯಾನಿಲಯ ಹಂಪಿಯ ವಿಸ್ತರಣಾ ಕೇಂದ್ರವಾದ ಬಾದಾಮಿ ಬನಶಂಕರಿಯಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಮತ್ತು ಶಿಲ್ಪಕಲೆಯ 4 ವರ್ಷದ ಪದವಿ ತರಗತಿಗಳು ಇನ್ನಿತರ ಸಾಮಾನ್ಯ ಪದವಿಗಳಾದ ಬಿ.ಎ/ಬಿ.ಕಾಂ/ಬಿ.ಎಸ್.ಡಬ್ಲೂ ಇನ್ನಿತರ ತತ್ಸಮಾನ ಪದವಿಗಳಂತೆ ಪದವಿ ಹಂತದ ಯಾವುದೇ ಸ್ಪರ್ಧಾತ್ಮಕ

ಕನ್ನಡ ವಿಶ್ವವಿದ್ಯಾಲಯ ಹಂಪಿ ಬಾದಾಮಿ ಕೇಂದ್ರದಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲೆ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

ಕೊಯಿಲ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಮೇ.24. ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಅರ್ಬಿ ಎಂಬಲ್ಲಿ ಶುಕ್ರವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಅರ್ಬಿ ಸುರೇಶ ಎಂಬವರ ಪತ್ನಿ ನೇತ್ರಾವತಿ(32) ಎಂದು ಗುರುತಿಸಲಾಗಿದೆ. ಸುರೇಶ್ ಅವರು ಸುಮಾರು ಹತ್ತು ತಿಂಗಳ ಹಿಂದೆ ಮದುವೆಯಾಗಿದ್ದು, ಮದುವೆಯಾದ ಆರಂಭದಿಂದಲೇ ಮಾನಸಿಕವಾಗಿ ಖಿನ್ನತೆಯಿಂದ ಇದ್ದ ಮೃತ ಮಹಿಳೆ ಇತ್ತೀಚೆಗೆ ತೀವ್ರವಾಗಿ ನೊಂದಿದ್ದರು. ಇದೇ ಕಾರಣಕ್ಕೆ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಶುಕ್ರವಾರ ಮಧ್ಯಾಹ್ನದ

ಕೊಯಿಲ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ Read More »

ಕರಾವಳಿ
Scroll to Top