ಕರಾವಳಿ

ಎಸ್.ಎಸ್.ಎಲ್.ಸಿ. ಮರುಮೌಲ್ಯಮಾಪನ➤ ಮನೋಜ್‍ಗೆ ಹೆಚ್ಚುವರಿ ಅಂಕ

  (ನ್ಯೂಸ್ ಕಡಬ) newskadaba.com ,ಕಲ್ಲುಗುಡ್ಡೆ  ಜೂನ್.1.ಕಳೆದ 2019ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನದ ಬಳಿಕ ಎಂಡೋಪೀಡಿತ ವಿದ್ಯಾರ್ಥಿ ಮನೋಜ್ ಕುಮಾರ್ ಕನ್ನಡದಲ್ಲಿ ಹೆಚ್ಚುವರಿ ಅಂಕಗಳನ್ನು ಪಡೆದಿದ್ದಾರೆ. ಕನ್ನಡ ವಿಷಯದಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇವರು ಈ ಮೊದಲು ಕನ್ನಡದಲ್ಲಿ 67 ಅಂಕ ಪಡೆದಿದ್ದು, ಮರುಮೌಲ್ಯಮಾಪನದ ಬಳಿಕ ಹೆಚ್ಚುವರಿ 14 ಅಂಕ ಸೇರ್ಪಡೆಗೊಂಡಿದ್ದು ಇದೀಗ ಕನ್ನಡದಲ್ಲಿ ಒಟ್ಟು 81 ಅಂಕ ಪಡೆದಿದ್ದಾರೆ. ಇವರ ಒಟ್ಟು ಅಂಕ ಇದೀಗ 406 ಆಗಿದೆ. ಮನೋಜ್ ಕುಮಾರ್ ಎಂಡೋಪೀಡಿತನಾಗಿದ್ದು, ಕೊೈಲ […]

ಎಸ್.ಎಸ್.ಎಲ್.ಸಿ. ಮರುಮೌಲ್ಯಮಾಪನ➤ ಮನೋಜ್‍ಗೆ ಹೆಚ್ಚುವರಿ ಅಂಕ Read More »

ಕರಾವಳಿ

ನರೇಂದ್ರ ಮೋದಿ ಪ್ರಮಾನವಚನ ➤ನೂಜಿಬಾಳ್ತಿಲದಲ್ಲಿ ದೀಪಹಚ್ಚಿ ಸಂಭ್ರಮಿಸಿದ ಮೋದಿ ಅಭಿಮಾನಿಗಳು

(ನ್ಯೂಸ್ ಕಡಬ) newskadaba.com , ಕಲ್ಲುಗುಡ್ಡೆ, ಜೂನ್.1. ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾನವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ನೂಜಿಬಾಳ್ತಿಲದಲ್ಲಿ ದೀಪಹಚ್ಚಿ ಸಂಭ್ರಮಿಸಲಾಯಿತು. ಸತತ ಎರಡನೇ ಬಾರಿಗೆ ಬಿಜೆಪಿ ಅಧಿಕಾರ ಪಡೆದು ಪದಗ್ರಹಣ ಸಮಾರಂಭ ನಡೆಯುತ್ತಿರುವ ಸಂಭ್ರಮದಲ್ಲಿ ನೂಜಿಬಾಳ್ತಿಲ ಗ್ರಾಮದ ನೀರಾರಿ ಛತ್ರಪತಿ ವೃತ್ತದ ಬಳಿ ಸೇರಿದ ಮೋದಿ ಅಭಿಮಾನಿಗಳು, ಕಾರ್ಯಕರ್ತರು ದೀಪ ಬೆಳಗಿ ಸಂಭ್ರಮಿಸಿ, ಬೈಠಕ್ ನಡೆಸಿದರು. ಈ ಸಂದರ್ಭದಲ್ಲಿ ಹಲವರು ಉಪಸ್ಥಿತರಿದ್ದರು.ಛತ್ರಪತಿ ವೃತ್ತದ ಬಳಿ ದೀಪ ಹಚ್ಚಿ ಮೋದಿ ಅಭಿಮಾನಿಗಳು ಸಂಭ್ರಮಿಸಿದರು.

ನರೇಂದ್ರ ಮೋದಿ ಪ್ರಮಾನವಚನ ➤ನೂಜಿಬಾಳ್ತಿಲದಲ್ಲಿ ದೀಪಹಚ್ಚಿ ಸಂಭ್ರಮಿಸಿದ ಮೋದಿ ಅಭಿಮಾನಿಗಳು Read More »

ಕರಾವಳಿ

ಮರಳು ದಿಬ್ಬ ತೆರವು ಹಾಗೂ ಮರಳು ಸಾಗಾಟ ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ➤ ಜಿಲ್ಲಾಡಳಿತ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.1.ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ (CRZ) 2018-19 ನೇ ಸಾಲಿನಲ್ಲಿ ಗುರುತಿಸಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ಸಾಂಪ್ರದಾಯಿಕವಾಗಿ ಮರಳು ತೆಗಯುವವರಿಗೆ ಅವಕಾಶ ನೀಡಲಾಗಿರುತ್ತದೆ. ಅದರಂತೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸರ್ಕಾರಿ ಹಾಗೂ ಇತರೆ ಕಾಮಗಾರಿಗಳಿಗೆ ಮರಳನ್ನು ಪರವಾನಿಗೆಯೊಂದಿಗೆ ಪೂರೈಸಲಾಗುತ್ತಿದೆ.ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಮೀನುಗಳ ಸಂತಾನೋತ್ಪತ್ತಿ ಕ್ರಿಯೆ ನಡೆಯುತ್ತದೆ. ಈ ಅವಧಿಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸುವುದರಿಂದ ಮೀನುಗಳ ಸಂತಾನೋತ್ಪತ್ತಿಗೆ ಅಡಚಣೆ ಉಂಟಾಗುತ್ತದೆ. ಆದ್ದರಿಂದ ದಿನಾಂಕ:01-06-2019 ರಿಂದ 31-08-2019

ಮರಳು ದಿಬ್ಬ ತೆರವು ಹಾಗೂ ಮರಳು ಸಾಗಾಟ ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ➤ ಜಿಲ್ಲಾಡಳಿತ ಆದೇಶ Read More »

ಕರಾವಳಿ

ವಿಶ್ವ ತಂಬಾಕು ರಹಿತ ದಿನಾಚರಣೆ-2019

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.1.ಮನುಕುಲಕ್ಕೆ ಮಾರಕವಾದ ತಂಬಾಕು ಸೇವನೆ ಬಗ್ಗೆ ಜಾಗೃತಿ ಮೂಡಿಸಲು ನಾವು ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ನ್ಯಾಯಮೂರ್ತಿ ಎ.ಜಿ. ಗಂಗಾಧರರವರು ಹೇಳಿದರು. ನಗರದ ಪುರಭವನದಲ್ಲಿ ಆಯೋಜಿಸಿದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ

ವಿಶ್ವ ತಂಬಾಕು ರಹಿತ ದಿನಾಚರಣೆ-2019 Read More »

ಕರಾವಳಿ

ಒಳಚರಂಡಿ ಯೋಜನೆಗಳ ಕುರಿತು ಸಾರ್ವಜನಿಕ ಸಮಾಲೋಚನಾ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.1.ಎಡಿಬಿ ನೆರವಿನೊಂದಿಗೆ ಮಂಗಳೂರು ನಗರಕ್ಕೆ ಕ್ವಿಮಿಪ್ ಟ್ರಾಂಚ್-2ರಡಿಯಲ್ಲಿ ಒಳಚರಂಡಿ ಯೋಜನೆಗಳ ಕುರಿತು ಜೂನ್ 3 ರಂದು ಪೂರ್ವಾಹ್ನ 11 ಗಂಟೆಗೆ ವಾರ್ಡ್ ನಂ 23 ರ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಕೊಟ್ಟಾರ ಚೌಕಿ ಬಳಿ ಆಯೋಜಿಸಲಾಗಿದೆ. ಅಪರಾಹ್ನ 4 ಗಂಟೆಗೆ ವಾರ್ಡ್ ನಂ 18 ರ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಕಾವೂರು ಮಾರ್ಕೆಟ್ ಬಳಿ ಕೆಯುಐಡಿಎಫ್ ಸಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಿಂದ ಆಯೋಜಿಸಲಾಗಿದೆ

ಒಳಚರಂಡಿ ಯೋಜನೆಗಳ ಕುರಿತು ಸಾರ್ವಜನಿಕ ಸಮಾಲೋಚನಾ ಕಾರ್ಯಾಗಾರ Read More »

ಕರಾವಳಿ

ಡಿ ದೇವರಾಜ ಅರಸುರವರ ಮೆಟ್ರಿಕ್ ಪೂರ್ವ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.1.ಬಂಟ್ವಾಳ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ನಡೆಸಲ್ಪಡುವ ಡಿ ದೇವರಾಜ ಅರಸುರವರ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಪಾಣೆಮಂಗಳೂರು ಮತ್ತು ವಾಮದಪದವು ಹಾಗೂ ಡಿ ದೇವರಾಜ ಅರಸುರವರ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಗಳಾದ ಕಲ್ಲಡ್ಕ ಮತ್ತು ವಿಟ್ಲ ಇಲ್ಲಿಗೆ 5ನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನಲ್ಲಿ ಹೊಸ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಯೊಂದಿಗೆ ಹಿಂದಿನ ತರಗತಿಯಲ್ಲಿ ತೇರ್ಗಡೆಯಾದ ಅಂಕ

ಡಿ ದೇವರಾಜ ಅರಸುರವರ ಮೆಟ್ರಿಕ್ ಪೂರ್ವ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

ಜೂನ್ 3 ರಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವು ಎಂದಿನಂತೆ ತೆರೆದಿರುತ್ತವೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.1.ಜೂನ್ 3 ರಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಎಲ್ಲಾ ವಿಭಾಗಗಳು,ಸಾರ್ವಜನಿಕರ ವೀಕ್ಷಣೆಗೆಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ.   ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್ ಮತ್ತು ಸಂಸ್ಕೃತಿ ಗ್ರಾಮ ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಇವರ ಪ್ರಕಟಣೆ ತಿಳಿಸಿದೆ.

ಜೂನ್ 3 ರಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವು ಎಂದಿನಂತೆ ತೆರೆದಿರುತ್ತವೆ. Read More »

ಕರಾವಳಿ

ಕಡಬದ ‘ಡ್ರೆಸ್ ಕೋಡ್’ನಲ್ಲಿ ಪೆರ್ನಾಳ್ ಹಬ್ಬಕ್ಕೆ ಸಂಭ್ರಮಕ್ಕೆ ಸಿದ್ಧತೆ ➤ ಪುರುಷರ ಸಿದ್ಧ ಉಡುಪುಗಳ ಅಪೂರ್ವ ಸಂಗ್ರಹದೊಂದಿಗೆ ವಿಶೇಷ ರಿಯಾಯಿತಿ

(ನ್ಯೂಸ್ ಕಡಬ) newskadaba.com ಕಡಬ, ಮೇ.31. ಮುಸಲ್ಮಾನರ ಪವಿತ್ರ ತಿಂಗಳಾದ ರಂಝಾನ್ ಕೊನೆಗೊಳ್ಳುತ್ತಿದ್ದಂತೆ ಈದ್ – ಉಲ್ – ಫಿತರ್ ಹಬ್ಬಕ್ಕೆ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಶ್ರೀ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿರುವ ಪುರುಷರ ಸಿದ್ಧ ಉಡುಪುಗಳ ಮಳಿಗೆ ‘ಡ್ರೆಸ್ ಕೋಡ್’ ನಲ್ಲಿ ವಿನೂತನ ಮಾದರಿಯ ಬಟ್ಟೆ ಬರೆಗಳ ಅಪಾರ ಸಂಗ್ರಹವಿದೆ. ಪುರುಷರ ನೂತನ ವಿನ್ಯಾಸದ, ಅತ್ಯಾಧುನಿಕ ಶೈಲಿಯ ಜೀನ್ಸ್, ಫಾರ್ಮಲ್ಸ್, ಹಾಗೂ ಕ್ಯಾಶುವಲ್ಸ್ ಮಾದರಿಯ ಪ್ಯಾಂಟ್ಸ್, ಶರ್ಟ್ಸ್, ಟಿ – ಶರ್ಟ್ಸ್ ಮೊದಲಾದ ಸಿದ್ಧ

ಕಡಬದ ‘ಡ್ರೆಸ್ ಕೋಡ್’ನಲ್ಲಿ ಪೆರ್ನಾಳ್ ಹಬ್ಬಕ್ಕೆ ಸಂಭ್ರಮಕ್ಕೆ ಸಿದ್ಧತೆ ➤ ಪುರುಷರ ಸಿದ್ಧ ಉಡುಪುಗಳ ಅಪೂರ್ವ ಸಂಗ್ರಹದೊಂದಿಗೆ ವಿಶೇಷ ರಿಯಾಯಿತಿ Read More »

ಕರಾವಳಿ

ಕಡಬ: ಸುಸಜ್ಜಿತ ಇಲೆಕ್ಟ್ರಾನಿಕ್ ಮಳಿಗೆ ‘ನ್ಯೂ ಅಶ್ವಿನಿ ಟ್ರೇಡರ್ಸ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮೇ.31. ಸುಮಾರು ಎರಡು ದಶಕಗಳಿಂದ ಉಪ್ಪಿನಂಗಡಿಯಲ್ಲಿ ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಗ್ರಾಹಕರ ಜನಮನ್ನಣೆಯನ್ನು ಗಳಿಸಿ ತೃಪ್ತಿದಾಯಕ ಸೇವೆಯನ್ನು ನೀಡುತ್ತಾ ಬಂದಿರುವ ‘ನ್ಯೂ ಅಶ್ವಿನ್ ಟ್ರೇಡರ್ಸ್’ ಸಂಸ್ಥೆಯ ನೂತನ ಸುಸಜ್ಜಿತ ಎಲೆಕ್ಟ್ರಾನಿಕ್ ಮಳಿಗೆಯು ಕಡಬದ ಅನುಗ್ರಹ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಶುಕ್ರವಾರದಂದು ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಉಪ್ಪಿನಂಗಡಿಯ ಅಶ್ವಿನಿ ಹೋಮ್ ಅಪ್ಲಯನ್ಸ್ ಮಾಲಕರಾದ ಶ್ರೀಮತಿ ಮತ್ತು ಶ್ರೀ ಪ್ರಕಾಶ್ ಬಿ. ದ್ವೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಕಡಬ ಒಕ್ಕಲಿಗ ಗೌಡ ಸೇವಾ ಸಂಘದ

ಕಡಬ: ಸುಸಜ್ಜಿತ ಇಲೆಕ್ಟ್ರಾನಿಕ್ ಮಳಿಗೆ ‘ನ್ಯೂ ಅಶ್ವಿನಿ ಟ್ರೇಡರ್ಸ್’ ಶುಭಾರಂಭ Read More »

ಕರಾವಳಿ

32ನೇ ರಾಜ್ಯ ಮಟ್ಟದ ಕನ್ನಡ ವಿಜ್ಞಾನ ಬರಹಗಾರರ ತರಬೇತಿ ಶಿಬಿರ

  (ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30. 32ನೇ ರಾಜ್ಯ ಮಟ್ಟದ ವಿಜ್ಞಾನ ಲೇಖಕರ ಶಿಬಿರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ 32ನೇ ರಾಜ್ಯ ಮಟ್ಟದ ಉದಯೋನ್ಮುಖ ಕನ್ನಡ ವಿಜ್ಞಾನ ಬರಹಗಾರರ ತರಬೇತಿ ಶಿಬಿರವನ್ನು ಜೂನ್ 21 ರಿಂದ 24 ರವರೆಗೆ ಬೆಂಗಳೂರಿನ ಎಚ್.ಕೆ.ಇ.ಎಸ್ ಶ್ರೀ ವೀರೇಂದ್ರ ಪಾಟೀಲ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ತು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

32ನೇ ರಾಜ್ಯ ಮಟ್ಟದ ಕನ್ನಡ ವಿಜ್ಞಾನ ಬರಹಗಾರರ ತರಬೇತಿ ಶಿಬಿರ Read More »

ಕರಾವಳಿ
Scroll to Top