ಪುತ್ತೂರು: ನಗ, ನಗದಿನೊಂದಿಗೆ ನವ ವಿವಾಹಿತೆ ನಾಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.20. ನವ ವಿವಾಹಿತೆಯೋರ್ವಳು ನಗ ಹಾಗೂ ನಗದಿನೊಂದಿಗೆ ನಾಪತ್ತೆಯಾಗಿರುವ ಘಟನೆ ಪುತ್ತೂರಿನ ಹಾರಾಡಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ನಾಪತ್ತೆಯಾಗಿರುವ ನವವಧುವನ್ನು ಪುತ್ತೂರು ಹಾರಾಡಿ ನಿವಾಸಿ ಫಯಾಝ್‌ ಎಂಬವರ ಪತ್ನಿ ಅಫ್ರೀನಾ(19.ವ) ಎಂದು ಗುರುತಿಸಲಾಗಿದೆ. ಸುಮಾರು ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಈಕೆ ಎಂದಿನಂತೆ ಊಟ ಮಾಡಿ ಮಲಗಿದ್ದು, ತಡರಾತ್ರಿ ವೇಳೆಗೆ ನೋಡಿದಾಗ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಹದಿಮೂರು ಸಾವಿರ ನಗದು ಹಾಗೂ ಹನ್ನೆರಡು ಪವನ್ ಚಿನ್ನಾಭರಣ ಕಾಣೆಯಾಗಿದ್ದು, ಆಕೆ ತೆಗೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಫಯಾಝ್ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top