ಕರಾವಳಿ

ವಿವಿ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27. ವಿಶ್ವವಿದ್ಯಾನಿಲಯ ಕಾಲೇಜು ಹಳೆ ವಿದ್ಯಾರ್ಥಿ ಸಂಘ(ರಿ) ಹಂಪನಕಟ್ಟೆ ಮಂಗಳೂರು ಇದರ ವಿಶೇಷ ಮಹಾಸಭೆ ಮತ್ತು ವಾರ್ಷಿಕ ಮಹಾಸಭೆಯು ಜೂನ್ 23 ರಂದು ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಸಂಘದ ಅಧ್ಯಕ್ಷ ಧರ್ಮಣ್ಣ ನಾೈಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಸಭೆಯಲ್ಲಿ ವಿ.ವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಉದಯಕುಮಾರ್ ಇವರು ಚುನಾವಣಾಧಿಕಾರಿಯಾಗಿ 2019-20 ನೇ ಸಾಲಿಗೆ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.ಸಂಘದ ಅಧ್ಯಕ್ಷರಾಗಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಉಪಾಧ್ಯಕ್ಷರಾಗಿ ಶುಭೋದಯ ಕೂಡ್ಲು, […]

ವಿವಿ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ Read More »

ಕರಾವಳಿ

ಗೃಹರಕ್ಷಕ ಹಮೀದ್ ಪಾವಲರವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27. ಜೂನ್ 26 ರಂದು ಜಿಲ್ಲಾ ಗೃಹರಕ್ಷಕ ದಳದ ಕಚೇರಿ, ಮೇರಿಹಿಲ್ ಕಚೇರಿಯಲ್ಲಿ ಮಂಗಳೂರು ಘಟಕದ ಗೃಹರಕ್ಷಕರಾದ ಹಮೀದ್ ಪಾವಲ ಇವರನ್ನು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. ಹಮೀದ್ ಪಾವಲರವರು ತೊಕ್ಕೊಟ್ಟು ಬಸ್ಸ್ ಸ್ಟಾಂಡ್ ಹತ್ತಿರ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೊಪಿಯನ್ನು ಹಿಡಿಯುವಲ್ಲಿ ಸಹಕರಿಸಿ ಪೊಲೀಸ್ ಇಲಾಖೆಗೆ ನೆರವಾಗಿರುವುದರಿಂದ ಇವರ ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಸನ್ಮಾನಿಸಿದರು. ಇಂತಹ

ಗೃಹರಕ್ಷಕ ಹಮೀದ್ ಪಾವಲರವರಿಗೆ ಸನ್ಮಾನ Read More »

ಕರಾವಳಿ

ಸೆಂಟರ್ ಫಾರ್ ಕಂಟಿನ್ಯೂಯಿಂಗ್ ಪಾಲಿಟೆಕ್ನಿಕಲ್ ಎಜುಕೇಶನ್ ಕರ್ನಾಟಕ ➤ ಅಲ್ಪಾವಧಿ ತರಬೇತಿಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27.ಕರ್ನಾಟಕ ಪಾಲಿಟೆಕ್ನಿಕ್ (ಕೆಪಿಟಿ) ಯಲ್ಲಿ ಸೆಂಟರ್ ಫಾರ್ ಕಂಟಿನ್ಯೂಯಿಂಗ್ ಟೆಕ್ನಕಲ್ ಎಜುಕೇಶನ್ ಕರ್ನಾಟಕ (ಸಿಸಿಟೆಕ್) ಇದರ ವತಿಯಿಂದ ವಿದ್ಯಾಭ್ಯಾಸವನ್ನು ಅರ್ಧದಲ್ಲೆ ಮೊಟಕುಗೊಳಿಸಿದವರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಒಂದು ಉತ್ತಮ ಅವಕಾಶ. ಹಾಗೂ ಸಾರ್ವಜನಿಕರಿಗೆ ಸ್ವಯಂ ಉದ್ಯೋಗಾಭ್ಯರ್ಥಿಗಳಾಗಲು ಮತ್ತು ಉದ್ಯಮಶೀಲರಾಗಲು ಅಲ್ಪಾವಧಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಪಾವಧಿ ತರಬೇತಿಗಳು ಇಂತಿವೆ: ಕಂಪ್ಯೂಟರ್ ಬೇಸಿಕ್, ತಾಂತ್ರಿಕ ತರಬೇತಿಗಳು, ಮಹಿಳೆಯರಿಗಾಗಿ ವಿಶೇಷ ತರಬೇತಿಗಳು, ಇತರ ತರಬೇತಿಗಳಾದ ಲಘು ವಾಹನ ತರಬೇತಿ ಹಾಗೂ ಕರಾಟೆ ಟ್ರೈನಿಂಗ್.ಹೆಚ್ಚಿನ ಮಾಹಿತಿಗಾಗಿ ಸಿಸಿಟೆಕ್

ಸೆಂಟರ್ ಫಾರ್ ಕಂಟಿನ್ಯೂಯಿಂಗ್ ಪಾಲಿಟೆಕ್ನಿಕಲ್ ಎಜುಕೇಶನ್ ಕರ್ನಾಟಕ ➤ ಅಲ್ಪಾವಧಿ ತರಬೇತಿಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಹಸಿ, ಒಣ ಕಸ ವಿಂಗಡಣೆ ಮಾಡುವಂತೆ ನಾಗರೀಕರಲ್ಲಿ ಪಾಲಿಕೆ ಮನವಿ ➤ನಿಯಮ ಉಲ್ಲಂಘಿಸಿದ್ದಲ್ಲಿ ದಂಡ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27.ಮಂಗಳೂರು ನಗರ ವ್ಯಾಪ್ತಿಯಲ್ಲಿ ದಿನನಿತ್ಯ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಹಸಿ ಕಸ ಹಾಗೂ ಒಣ ಕಸವಾಗಿ ವಿಂಗಡಿಸಿ ಮಹಾನಗರಪಾಲಿಕೆಯ ವತಿಯಿಂದ ಮಾಡಲಾಗಿರುವ ಸಂಗ್ರಹಣಾ ವ್ಯವಸ್ಥೆಗೆ ನೀಡುವಂತೆ ವಿನಂತಿಸಲಾಗಿದೆ. ಜುಲೈ 1 ರಿಂದ ವಾರದ ಎಲ್ಲಾ ದಿನಗಳು (ಶುಕ್ರವಾರ ಹೊರತು ಪಡಿಸಿ) ಹಸಿ ಕಸವನ್ನು ಸಂಗ್ರಹಿಸಲಾಗುವುದು ಹಾಗೂ ಶುಕ್ರವಾರದಂದು ಒಣಕಸವನ್ನು ಮಾತ್ರ ಸಂಗ್ರಹಿಸಲಾಗುವುದು. ಮಂಗಳೂರು ಮಹಾನಗರಪಾಲಿಕೆಯು ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ 2016ನ್ನು ಅನುಷ್ಟಾನಗೊಳಿಸಲು ಕ್ರಮವಹಿಸಿದೆ. ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ 2016ರಂತೆ (Municipal

ಹಸಿ, ಒಣ ಕಸ ವಿಂಗಡಣೆ ಮಾಡುವಂತೆ ನಾಗರೀಕರಲ್ಲಿ ಪಾಲಿಕೆ ಮನವಿ ➤ನಿಯಮ ಉಲ್ಲಂಘಿಸಿದ್ದಲ್ಲಿ ದಂಡ Read More »

ಕರಾವಳಿ

ಗ್ರಾಮೀಣ ಪ್ರದೇಶದ ಜನರಿಗೆ ಒಂದು ಸುವರ್ಣ ಅವಕಾಶ ➤ಸ್ವಯಂ ಉದ್ಯೋಗ ಸೃಜನಾ ಯೋಜನೆಯಡಿಯಲ್ಲಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27.ಗ್ರಾಮೀಣ ಪ್ರದೇಶದ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಮಾಡಲು 2019-20 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನಾ ಯೋಜನೆಯಡಿಯಲ್ಲಿ ಬ್ಯಾಂಕಿನ ಆರ್ಥಿಕ ಸಾಲದ ಮೂಲಕ ಅವಕಾಶ ಕಲ್ಪಿಸಲಾಗುವುದು. ಕನಿಷ್ಠ 18 ವರ್ಷ ಹಾಗೂ ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ ಹಾಗೂ ವಿಶೇಷ ವರ್ಗದವರಿಗೆ (ಪರಿಶಿಷ್ಟ ಜಾತಿ/ ಪ.ಪಂಗಡ/ ಹಿಂದುಳಿದವರ್ಗ/ ಅಲ್ಪಸಂಖ್ಯಾತರು/ ಅಂಗವಿಕಲರು/ ಮಾಜಿಸೈನಿಕ/ ಮಹಿಳೆ) ಗರಿಷ್ಠ 45 ವರ್ಷ. ಯಾವುದೇ ಆದಾಯದ ಮಿತಿ ಇರುವುದಿಲ್ಲ. ಪ್ರಥಮ ಪೀಳಿಗೆ ಉದ್ಯಮಶೀಲರಿಗೆ

ಗ್ರಾಮೀಣ ಪ್ರದೇಶದ ಜನರಿಗೆ ಒಂದು ಸುವರ್ಣ ಅವಕಾಶ ➤ಸ್ವಯಂ ಉದ್ಯೋಗ ಸೃಜನಾ ಯೋಜನೆಯಡಿಯಲ್ಲಿ ಅರ್ಜಿ ಆಹ್ವಾನ Read More »

ಕರಾವಳಿ

ನೀವು ಡಿಗ್ರಿ ಮುಗಿಸಿ ಕೆಲಸಕ್ಕಾಗಿ ಅಲೆದಾಡುತ್ತಿದ್ದೀರಾ..? ➤ ಕಡಬದ ರತ್ನಶ್ರೀ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಮ್ಯಾನೇಜರ್ ಮತ್ತು ಕ್ಲರ್ಕ್ ಬೇಕಾಗಿದ್ದಾರೆ

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಇಲ್ಲಿನ ಮುಖ್ಯ ರಸ್ತೆಯ ರತ್ನಶ್ರೀ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ರತ್ನಶ್ರೀ ಸೌಹಾರ್ದ ಸಹಕಾರಿ ನಿಯಮಿತ (ರಿ.) ಸಂಸ್ಥೆಗೆ ಮ್ಯಾನೇಜರ್ ಮತ್ತು ಕ್ಲರ್ಕ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಕಂಪ್ಯೂಟರ್ ಪರಿಣತಿಯೊಂದಿಗೆ ಸಹಕಾರಿ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವವಿರುವ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಯಾವುದೇ ಡಿಗ್ರಿ ಮುಗಿಸಿರುವ ಆಸಕ್ತ ಅಭ್ಯರ್ಥಿಗಳು ಜುಲೈ 05 ರ ಒಳಗಾಗಿ ಸ್ವ-ವಿವರಗಳೊಂದಿಗೆ ರತ್ನಶ್ರೀ ಸೌ.ಸ.ನಿ. ಅಧ್ಯಕ್ಷ ರಾಧಾಕೃಷ್ಣ ಕೆ.ಎಸ್. 9448125133, ಇಮೇಲ್ – rathnashree11@gmail.com

ನೀವು ಡಿಗ್ರಿ ಮುಗಿಸಿ ಕೆಲಸಕ್ಕಾಗಿ ಅಲೆದಾಡುತ್ತಿದ್ದೀರಾ..? ➤ ಕಡಬದ ರತ್ನಶ್ರೀ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಮ್ಯಾನೇಜರ್ ಮತ್ತು ಕ್ಲರ್ಕ್ ಬೇಕಾಗಿದ್ದಾರೆ Read More »

ಕರಾವಳಿ

ಕಿನ್ಯಾ ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27.ಮಂಗಳೂರು ತಾಲೂಕು ಕಿನ್ಯಾ ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ ಹಂತದ 1ನೇ ವಾರ್ಡ್ ಸಭೆಯನ್ನು ಆಯೋಜಿಸಲಾಗಿದೆ. ಜುಲೈ 1 ರಂದು ಪೂರ್ವಾಹ್ನ 10.30 ಗಂಟೆಗೆ ಗ್ರಾಮ ಪಂಚಾಯತ್ ಕಚೇರಿ ಸಭಾಂಗಣ, 4 ನೇ ವಾರ್ಡ್ ಸಭೆಯು ಪೂರ್ವಾಹ್ನ 11.30 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ರಹಮತ್ ನಗರ, 2ನೇ ವಾರ್ಡ್ ಸಭೆ ಅಪರಾಹ್ನ 2 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ

ಕಿನ್ಯಾ ಗ್ರಾಮ ಸಭೆ Read More »

ಕರಾವಳಿ

ಕಡಬ: ಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿ ➤ ಪರಿಸರದಲ್ಲಿ ವ್ಯಾಪಕವಾಗಿ ಹರಡಿದ ಡೆಂಗ್ಯೂ

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಡೆಂಗ್ಯೂ ಜ್ವರಕ್ಕೆ ತುತ್ತಾದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ. ಮೃತ ಮಹಿಳೆಯನ್ನು ಕೋಡಿಂಬಾಳ ಗ್ರಾಮದ ಕುಕ್ಕರೆಬೆಟ್ಟು ನಿವಾಸಿ ಆನಂದ ನಾಯ್ಕ್ ಎಂಬವರ ಪತ್ನಿ ವೀಣಾ (43) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವೀಣಾ ರವರಿಗೆ ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಹಿಳೆಯ ದೇಹದಲ್ಲಿ ಬಿಳಿರಕ್ತದ ಕಣ ಕಡಿಮೆಯಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಡಬ: ಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿ ➤ ಪರಿಸರದಲ್ಲಿ ವ್ಯಾಪಕವಾಗಿ ಹರಡಿದ ಡೆಂಗ್ಯೂ Read More »

ಕರಾವಳಿ

ಪ್ರಾಪರ್ಟಿ ಕಾರ್ಡ್ ಗಾಗಿ ಮುಗಿಬಿದ್ದ ಜನರು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.26.ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಆದೇಶ ಅಂತಿಮಗೊಂಡ ಬಳಿಕ ಯುಪಿಒಆರ್ ಕಚೇರಿಯಲ್ಲಿ ದಿಢೀರ್ ಜನದಟ್ಟಣೆ ಕಂಡುಬಂದಿದೆ.ಪ್ರಾಪರ್ಟಿ ಕಾರ್ಡ್‌ಗೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗಿದ್ದು, ಕಚೇರಿ ಸಿಬ್ಬಂದಿ ನಿಭಾಯಿಸಲಾಗದೆ ಕಂಗಾಲಾಗಿದ್ದಾರೆ. ಕರಡು ಹಾಗೂ ಅಂತಿಮ ಪ್ರಾಪರ್ಟಿ ಕಾರ್ಡ್ ಪಡೆಯಲು ಬರುವವರು ಅವರೊಂದಿಗೆ ಕಡ್ಡಾಯ ಎಂದು ಗಾಬರಿಯಾಗಿ ಅರ್ಜಿ ಹಾಕಲು ಬರುವವರ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣ. ಕೆಲದಿನಗಳ ಹಿಂದೆಯಷ್ಟೇ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಪ್ರಾಪರ್ಟಿ ಕಾರ್ಡ್ ಬಗ್ಗೆ ಸಾರ್ವಜನಿಕರು ಆತುರಪಡುವ, ಅನಗತ್ಯ

ಪ್ರಾಪರ್ಟಿ ಕಾರ್ಡ್ ಗಾಗಿ ಮುಗಿಬಿದ್ದ ಜನರು Read More »

ಕರಾವಳಿ

ಡೆಂಗ್ಯೂ ಶಂಕಿತ ಪ್ರದೇಶದಲ್ಲಿ ಆರೋಗ್ಯತಪಾಸಣಾ ಶಿಬಿರ ಮುಂದುವರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.26.ಅನೇಕ ಕಡೆಗಳಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು ಮುಂಜಾಗೃತ ಕ್ರಮವಾಗಿ ಆರೋಗ್ಯ ತಪಾಸಣೆ ಸಹಿತ ಅಗತ್ಯ ಕ್ರಮಗಳಿಗಾಗಿ ಆರೋಗ್ಯ ಇಲಾಖೆಯು ಅರೆಕೆರೆ ಬೈಲು ಮತ್ತು ಗೋರಕ್ಷದಂಡು ಪರಿಸರದಲ್ಲಿ ಆರೋಗ್ಯ ಶಿಬಿರವನ್ನು ಮುಂದುವರಿಸಿದೆ. 100ಕ್ಕೂ ಹೆಚ್ಚು ಕಾರ್ಯಕರ್ತರು ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ.ಸೋಮವಾರದಿಂದಲೇ ಶಿಬಿರ ನಡೆಯುತ್ತಿದ್ದು, ಬುಧವಾರ ತನಕ ಮುಂದುವರಿಯಲಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ (ಪ್ರಭಾರ) ಡಾ| ನವೀನ್‌ಚಂದ್ರ ತಿಳಿಸಿದ್ದಾರೆ. 40ಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 6 ಮಂದಿಯಲ್ಲಿ ಡೆಂಗ್ಯೂ ದೃಢಪಟ್ಟಿದೆ ಎಂದು

ಡೆಂಗ್ಯೂ ಶಂಕಿತ ಪ್ರದೇಶದಲ್ಲಿ ಆರೋಗ್ಯತಪಾಸಣಾ ಶಿಬಿರ ಮುಂದುವರಿಕೆ Read More »

ಕರಾವಳಿ
Scroll to Top