Big Breaking News ಉಪ್ಪಿನಂಗಡಿ: ನದಿಗಿಳಿದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರುಪಾಲು ► ಹುಟ್ಟುಹಬ್ಬ ಆಚರಿಸಲು ತೆರಳಿದ್ದ ವೇಳೆ ದುರ್ಘಟನೆ



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.01. ನದಿಯಲ್ಲಿ ಈಜಲು ತೆರಳಿದ ಮೂವರು ವಿದ್ಯಾರ್ಥಿಗಳು ಮೃತಪಟ್ಟ ದಾರುಣ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಸೋಮವಾರದಂದು ನಡೆದಿದೆ.







 

ಮೃತರನ್ನು ಉಪ್ಪಿನಂಗಡಿ ದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ನೆಲ್ಯಾಡಿ ನಿವಾಸಿ ಮಹಮ್ಮದ್ ಸುಹೈದ್, ಪೆರ್ನೆ ನಿವಾಸಿ ಸಹೀರ್, ಉಪ್ಪಿನಂಗಡಿ ನಿವಾಸಿ ಫಿರ್ಝಾನ್ ಎಂದು ಗುರುತಿಸಲಾಗಿದೆ. ಐ ಸೋಮವಾರದಂದು ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದು, ಆ ಬಳಿಕ ಕಣ್ಮರೆಯಾಗಿದ್ದರು. ಇವರು ಫಿರ್ಝಾನ್ ನ ಹುಟ್ಟುಹಬ್ಬ ಪಾರ್ಟಿ ಆಚರಿಸಲು ಕಾಲೇಜಿನ ಸನಿಹದಲ್ಲಿರುವ ನೇತ್ರಾವತಿ ನದಿಗೆ ಸೋಮವಾರ ಸಂಜೆ ತೆರಳಿದ್ದು, ಆ ಬಳಿಕ ಕಣ್ಮರೆಯಾಗಿದ್ದರು. ನಾಪತ್ತೆಯಾಗಿದ್ದ ವಿದ್ಯಾರ್ಥಿಗಳಿಗಾಗಿ ಪಾಲಕರು ರಾತ್ರಿಯಿಡೀ ಶೋಧ ನಡೆಸಿದ್ದು, ಮಂಗಳವಾರದಂದು ಬೆಳಗ್ಗೆ ನೇತ್ರಾವತಿ ನದಿಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top