ಕರಾವಳಿ

ಪುತ್ತೂರು: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ➤ ಆರೋಪಿ ಪ್ರಭಾರ ಮುಖ್ಯ ಶಿಕ್ಷಕ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.16. ಪರೀಕ್ಷೆ ಶುಲ್ಕ ಪಾವತಿಸಲು ಬಂದ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕನನ್ನು ಬಂಧಿಸಿದ ಘಟನೆ ಬುಧವಾರದಂದು ನಡೆದಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ಪರೀಕ್ಷಾ ಶುಲ್ಕ ಪಾವತಿಸಲೆಂದು ಸೋಮವಾರದಂದು ಶಾಲೆಗೆ ತೆರಳಿದ ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿನಿಗೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕನಾಗಿದ್ದ ಪುತ್ತೂರು ತಾಲೂಕು ಒಳಮೊಗ್ರು ನಿವಾಸಿ ನಾಸಿರ್ (40) ಲೈಂಗಿಕ ಕಿರುಕುಳ ನೀಡಿದ್ದಾನೆನ್ನಲಾಗಿದ್ದು, […]

ಪುತ್ತೂರು: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ➤ ಆರೋಪಿ ಪ್ರಭಾರ ಮುಖ್ಯ ಶಿಕ್ಷಕ ಬಂಧನ Read More »

ಕರಾವಳಿ

ಬೆಳ್ಳಾರೆ: ಆರೋಗ್ಯ ಮಾಹಿತಿ ಶಿಬಿರ, ಸನ್ಮಾನ ಕಾರ್ಯಕ್ರಮ

ಬೆಳ್ಳಾರೆ : ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ , ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಆರೋಗ್ಯ ಮಾಹಿತಿ ಶಿಬಿರ ,ಸನ್ಮಾನ ಕಾರ್ಯ ಕ್ರಮ ಅಕ್ಟೋಬರ್ 12 ರಂದು ನಡೆಯಿತು. ಸುಳ್ಯ ತಾಲೂಕು ಎಸ್ಕೆ ಎಸ್ ಎಸ್ ಎಫ್ ಅಧ್ಯಕ್ಷ ತ್ವಬೀಬ್ ಹಸನ್ ಅರ್ಶದಿ ಬೆಳ್ಳಾರೆ ಉದ್ಘಾಟಿಸಿ, ದುವಾ ಕೆ ನೇತೃತ್ವ ನೀಡಿ ಮಾತನಾಡಿದರು. ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಯು.ಹೆಚ್. ಅಬೂಬಕ್ಕರ್ ಸಭೆಯ ಅಧ್ಯಕ್ಷ ತೆ ವಹಿಸಿದ್ದರು. ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ

ಬೆಳ್ಳಾರೆ: ಆರೋಗ್ಯ ಮಾಹಿತಿ ಶಿಬಿರ, ಸನ್ಮಾನ ಕಾರ್ಯಕ್ರಮ Read More »

ಕರಾವಳಿ

ಕೊಣಾಜೆ: ಮಂಗಳೂರಿಗೆ ತೆರಳಿದ ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.14. ಮಂಗಳೂರಿಗೆಂದು ಮನೆಯಿಂದ ಹೋದ ಯುವತಿಯೋರ್ವಳು ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಅಕ್ಟೋಬರ್ 08 ರಂದು ಕೊಣಾಜೆಯಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಯುವತಿಯನ್ನು ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಪ್ರಾನ್ಸಿಸ್ ಕುಟಿನ್ಹೋ ಎಂಬವರ ಪುತ್ರಿ ಫಿಯೋನಾ ಸ್ವೀಡಲ್ ಕುಟಿನ್ಹೋ(16) ಎಂದು ಗುರುತಿಸಲಾಗಿದೆ. ಈಕೆ ಅಕ್ಟೋಬರ್ 08 ರಂದು ಮನೆಯಿಂದ ತೆರಳಿದ್ದು, ಈವರೆಗೆ ಹಿಂತಿರುಗಿಲ್ಲ ಎನ್ನಲಾಗಿದೆ. ಕಾಣೆಯಾದ ಯುವತಿಯ ಚಹರೆ ಇಂತಿವೆ:- ಎತ್ತರ-4 ಅಡಿ 5 ಇಂಚು, ಗೋಧಿ

ಕೊಣಾಜೆ: ಮಂಗಳೂರಿಗೆ ತೆರಳಿದ ಯುವತಿ ನಾಪತ್ತೆ Read More »

ಕರಾವಳಿ

ಕೊಯಿಲ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ವರ್ಗಾವಣೆಗೆ ತಡೆ ➤ ಕೆಡಿಪಿ ಸಭೆಯಲ್ಲಿ ಆಕ್ಷೇಪ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.14. ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಡಬದಿಂದ ವೈದ್ಯಾಧಿಕಾರಿಯವರ ವರ್ಗಾವಣೆಗೆ ಆದೇಶವಾಗಿದ್ದರೂ ಸಹ ಜಿಲ್ಲಾ ಆರೋಗ್ಯಾಧಿಕಾರಿಗಳು ತಡೆ ನೀಡಿರುವುದು ಸರಿಯಲ್ಲ ಎಂದು ಕೊಯಿಲ ಗ್ರಾ.ಪಂ.ನ ಕೆಡಿಪಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಕೊಯಿಲ ಗ್ರಾ.ಪಂ. ಅಧ್ಯಕ್ಷೆ ಹೇಮಾ ಎಂ.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರೋರ್ವರು, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆ ಖಾಲಿಯಿದ್ದು, ಇಲ್ಲಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಿಂದ ವೈದ್ಯಾಧಿಕಾರಿಯ ವರ್ಗಾವಣೆ ಆದೇಶವಾಗಿದೆ. ಆದರೆ ಜಿಲ್ಲಾ

ಕೊಯಿಲ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ವರ್ಗಾವಣೆಗೆ ತಡೆ ➤ ಕೆಡಿಪಿ ಸಭೆಯಲ್ಲಿ ಆಕ್ಷೇಪ Read More »

ಕರಾವಳಿ

ಸುಳ್ಯ: ಸ್ನಾನಕ್ಕೆಂದು ಸ್ನೇಹಿತರೊಂದಿಗೆ ನದಿಗಿಳಿದ ಬಾಲಕ ➤ ನೀರಿನಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಅ.13. ಸ್ನಾನಕ್ಕೆಂದು ನದಿಯ ನೀರಿಗೆ ಇಳಿದ ನಾಲ್ವರ ಪೈಕಿ ಓರ್ವ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಭಾನುವಾರದಂದು ಸುಳ್ಯದಲ್ಲಿ ನಡೆದಿದೆ. ಮೃತ ಬಾಲಕನನ್ನು ಸುಳ್ಯ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ದುಗಲಡ್ಕ ಬಳಿಯ ಕಮಿಲ ನಿವಾಸಿ ಹರೀಶ್ ಗೌಡ ಎಂಬವರ ಪುತ್ರ ಯಶ್ವಿತ್ ಎಂದು ಗುರುತಿಸಲಾಗಿದೆ. ಯಶ್ವಿತ್ ಭಾನುವಾರದಂದು ತನ್ನ ಮೂವರು ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಉಬರಡ್ಕ ನದಿಗೆ ತೆರಳಿದ್ದು, ಈ ವೇಳೆ ಕಿರಣ್ ಎಂಬ ಬಾಲಕ

ಸುಳ್ಯ: ಸ್ನಾನಕ್ಕೆಂದು ಸ್ನೇಹಿತರೊಂದಿಗೆ ನದಿಗಿಳಿದ ಬಾಲಕ ➤ ನೀರಿನಲ್ಲಿ ಮುಳುಗಿ ಮೃತ್ಯು Read More »

ಕರಾವಳಿ

ಮಿತ್ತೂರು: ಬಸ್ – ಟಿಪ್ಪರ್ ಢಿಕ್ಕಿ ➤ ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.12. ಖಾಸಗಿ ಬಸ್ ಹಾಗೂ ಟಿಪ್ಪರ್ ನಡುವೆ ಢಿಕ್ಕಿಯುಂಟಾದ ಪರಿಣಾಮ ಹಲವರು ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಿತ್ತೂರು ಬಳಿ ಶನಿವಾರದಂದು ಸಂಭವಿಸಿದೆ. ಪುತ್ತೂರಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟಿಪ್ಪರ್ ಮಧ್ಯೆ ಮಿತ್ತೂರು ಬಳಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬಸ್ ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಮಿತ್ತೂರು: ಬಸ್ – ಟಿಪ್ಪರ್ ಢಿಕ್ಕಿ ➤ ಹಲವರಿಗೆ ಗಾಯ Read More »

ಕರಾವಳಿ

ಕಡಬ: ಭವಿಷ್ಯ ನುಡಿಯುವ ನೆಪದಲ್ಲಿ ಮಗುವನ್ನು ಅಪಹರಿಸಿದ ವದಂತಿ ➤ ವಿಚಾರಣೆ ನಡೆಸಿದಾಗ ಬೆಚ್ಚಿಬಿದ್ದ ಸಾರ್ವಜನಿಕರು ➤ ಕೆಲಕಾಲ ಆತಂಕ ಸೃಷ್ಟಿ

(ನ್ಯೂಸ್ ಕಡಬ) newskadaba.com ಕಡಬ, ಅ.11. ಭವಿಷ್ಯ ನುಡಿಯುವ ಖಾವಿಧಾರಿ ಸನ್ಯಾಸಿಗಳಿಬ್ಬರು ಪಂಜದಿಂದ ಮಗುವೊಂದನ್ನು ಅಪಹರಿಸಿ ಸರಕಾರಿ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂಬ ವದಂತಿಯಿಂದ ಕೆಲಕಾಲ ಆತಂಕ ಸೃಷ್ಠಿಯಾದ ಘಟನೆ ಆಲಂಕಾರಿನಲ್ಲಿ ಶುಕ್ರವಾರದಂದು ಸಂಭವಿಸಿದೆ. ಇಬ್ಬರು ವ್ಯಕ್ತಿಗಳು ಭವಿಷ್ಯ ಹೇಳುವ ನೆಪದಲ್ಲಿ ಪಂಜ ಪೇಟೆಯಿಂದ ಮಗುವನ್ನು ಅಪಹರಿಸಿ ಸರಕಾರಿ ಬಸ್ಸಿನ ಮೂಲಕ ಕಡಬಕ್ಕೆ ಬಂದು ಉಪ್ಪಿನಂಗಡಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಶುಕ್ರವಾರ ಅಪರಾಹ್ನ ಕಡಬದ ಜನತೆಗೆ ಲಭ್ಯವಾಗಿದ್ದು, ಹುಡುಕಾಡಿದಾಗ ಕಡಬದಲ್ಲಿ ವಿಚಾರಿಸಲಾಗಿ ಬಸ್ ಕಡಬದಿಂದ ಉಪ್ಪಿನಂಗಡಿ

ಕಡಬ: ಭವಿಷ್ಯ ನುಡಿಯುವ ನೆಪದಲ್ಲಿ ಮಗುವನ್ನು ಅಪಹರಿಸಿದ ವದಂತಿ ➤ ವಿಚಾರಣೆ ನಡೆಸಿದಾಗ ಬೆಚ್ಚಿಬಿದ್ದ ಸಾರ್ವಜನಿಕರು ➤ ಕೆಲಕಾಲ ಆತಂಕ ಸೃಷ್ಟಿ Read More »

ಕರಾವಳಿ

ಅ.12 ಮತ್ತು 13 ರಂದು ನೆಟ್ಟಣ CPCRI ನಲ್ಲಿ ಕೃಷಿ ಮೇಳ ➤ ಆಕರ್ಷಣೆಯ ಕೇಂದ್ರ ಬಿಂದುವಾದ ವಸ್ತು ಪ್ರದರ್ಶನ, ಕೃಷಿ ಸಂಬಂಧಿತ 100 ಕ್ಕೂ ಹೆಚ್ಚಿನ ಮಳಿಗೆಗಳು

ಕಡಬ, ಅ.11. ನೆಟ್ಟಣದ ಕಿದು ಅಂತರ್ರಾಷ್ಟ್ರೀಯ ಕೇಂದ್ರಿಯ ತೋಟಗಳ ಸಂಶೋಧನಾ ಕೇಂದ್ರದಲ್ಲಿ ಅಕ್ಟೋಬರ್ 12 ಮತ್ತು 13 ರಂದು ಎರಡು ದಿನಗಳ ಕೃಷಿ ಮೇಳ ಮತ್ತು ಕೃಷಿ ಬೆಳೆಗಳ ವಸ್ತು ಪ್ರದರ್ಶನ ಹಾಗೂ ರೈತರಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ. ದೇಶದ ವಿವಿಧೆಡೆಯಿಂದ ಸಂಶೋಧಕರು, ಕೃಷಿ ತಂತ್ರಜ್ಞರು ಆಗಮಿಸಲಿದ್ದು ಸುಮಾರು 2 ರಿಂದ 3 ಸಾವಿರ ರೈತರು ಭಾಗವಹಿಸಲಿದ್ದಾರೆ. ಒಟ್ಟು ಎರಡು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದು, ವಸ್ತು

ಅ.12 ಮತ್ತು 13 ರಂದು ನೆಟ್ಟಣ CPCRI ನಲ್ಲಿ ಕೃಷಿ ಮೇಳ ➤ ಆಕರ್ಷಣೆಯ ಕೇಂದ್ರ ಬಿಂದುವಾದ ವಸ್ತು ಪ್ರದರ್ಶನ, ಕೃಷಿ ಸಂಬಂಧಿತ 100 ಕ್ಕೂ ಹೆಚ್ಚಿನ ಮಳಿಗೆಗಳು Read More »

ಕರಾವಳಿ

ವ್ಯಕ್ತಿ ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.11.ಯುವಕ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಮ್ಮರ್ ಫಾರೂಕ್ (24) ಎಂಬ ಯುವಕ ಮಂಗಳೂರು ತಾಲೂಕು, ಹರೇಕಳ ಗ್ರಾಮದಲ್ಲಿರುವ ಮನೆಯಿಂದ ಕಾಣೆಯಾಗಿದ್ದಾರೆ. ಕಾಣೆಯಾದ ವ್ಯಕ್ತಿಯ ಎತ್ತರ 5 ಅಡಿ 6 ಇಂಚು, ಕೋಲು ಮುಖ, ಸಪೂರ ಶರೀರ, ಎಣ್ಣೆಗಪ್ಪು ಮೈಬಣ್ಣ, ಕುರುಚಲು ಗಡ್ಡ, ಧರಿಸಿದ ಬಟ್ಟೆ ಬಿಳಿ ಬಣ್ಣದ ತುಂಬು ತೋಳಿನ ಅಂಗಿ, ಖಾಕಿ ಬಣ್ಣದ ಕಾಟನ್ ಪ್ಯಾಂಟ್, ಮಾತಾನಾಡುವ ಭಾಷೆ- ತುಳು, ಕನ್ನಡ, ಬ್ಯಾರಿ. ಕಾಣೆಯಾದ ಯುವಕನ

ವ್ಯಕ್ತಿ ಕಾಣೆಯಾಗಿದ್ದಾರೆ Read More »

ಕರಾವಳಿ
Scroll to Top