ಕರಾವಳಿ

ನೆಟ್ಟಣ: ರೈಲಿನಡಿಗೆ ತಲೆಯಿಟ್ಟು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ನ.11. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದ ಬಳಿ ಸೋಮವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕುಂದಾಪುರ ಮೂಲದ ಮನೋಜ್(43) ಎಂದು ಗುರುತಿಸಲಾಗಿದೆ. ಕಿಡ್ನಿ ಹಾಗೂ ಲಿವರ್ ಖಾಯಿಲೆಯಿಂದ ಬಳಲುತ್ತಿದ್ದ ಇವರು ನೋವನ್ನು ಸಹಿಸಲಾಗದೆ ಪತ್ರ ಬರೆದಿಟ್ಟು ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೆಟ್ಟಣ: ರೈಲಿನಡಿಗೆ ತಲೆಯಿಟ್ಟು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ

ಪಾಲೆತ್ತಡ್ಕ: ಈದ್ ಮಿಲಾದ್ ಮೆರವಣಿಗೆ

ಈದ್ ಮಿಲಾದ್ ಪ್ರಯುಕ್ತ ಪಾಲೆತ್ತಡ್ಕ ತರ್ಬಿಯತ್ತುಲ್ ಇಸ್ಲಾಂ ಮದರಸದಿಂದ ಮರ್ಧಾಳದವರೆಗೆ ಮೆರವಣಿಗೆ ನಡೆಯಿತು.  

ಪಾಲೆತ್ತಡ್ಕ: ಈದ್ ಮಿಲಾದ್ ಮೆರವಣಿಗೆ Read More »

ಕರಾವಳಿ

ಖ್ಯಾತ ಯುವ ವಾಗ್ಮಿ ಇಕ್ಬಾಲ್ ಬಾಳಿಲ ಇಂದು (ನ.10) ಅಜ್ಜಾವರಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ನ.10. ಅಲ್ ಅಮೀನ್ ಯಂಗ್ ಮೆನ್ಸ್ಎ ಸೋಸಿಯೇಶನ್ (ರಿ) ಅಡ್ಕ ಇದರ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ಅಡ್ಕದಲ್ಲಿ ನವೆಂಬರ್ 10ರಂದು ಆದಿತ್ಯವಾರ ನಡೆಯಲಿರುವ ಬೃಹತ್ ಮೀಲಾದ್ ಸ್ನೇಹ ಸಂಗಮದಲ್ಲಿ ಖ್ಯಾತ ಯುವ ವಾಗ್ಮಿ, ಚಿಂತಕ, ಟ್ರೆಂಡ್ ರಾಜ್ಯ ತರಬೇತುದಾರ ಕೆ.ಎಂ. ಇಕ್ಬಾಲ್ ಬಾಳಿಲ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಮಿಲಾದ್ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಗೇರುಮುಟ್ಟೆ ಸಭಾದ್ಯಕ್ಷತೆ ವಹಿಸಲಿದ್ದು, ಸಿದ್ದೀಖ್ ಅಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಝೈನಿಯಾ ಕಾಲೇಜು ಪ್ರಾಂಶುಪಾಲ ಅಬ್ದುಲ್ಲ ನಿಝಾಮಿ

ಖ್ಯಾತ ಯುವ ವಾಗ್ಮಿ ಇಕ್ಬಾಲ್ ಬಾಳಿಲ ಇಂದು (ನ.10) ಅಜ್ಜಾವರಕ್ಕೆ Read More »

ಕರಾವಳಿ

ಕಲ್ಲುಗುಡ್ಡೆ ಅಂಗನವಾಡಿ ಮೇಲ್ಚಾವಣಿ ಕಾಮಗಾರಿ ಪರಿಶೀಲನೆ

 (ನ್ಯೂಸ್ ಕಡಬ) newskadaba.com  ಕಲ್ಲುಗುಡ್ಡೆ,  ನ.9  ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಗುರುವಾರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು. ಜಿ.ಪಂ. ಅನುದಾನದಲ್ಲಿ ಮಂಜುರಾದ ರೂ.2 ಲಕ್ಷ ಅನುದಾನದಲ್ಲಿ ಅಂಗನವಾಡಿ ಕಟ್ಟಡದ ಮೇಲ್ಚಾವಣಿ ಕಾಮಗಾರಿ ನಡೆಸಲಾಗುತ್ತಿದ್ದು, ಈಗಾಗಲೇ ಗುಣಮಟ್ಟದ ಮೇಲ್ಚಾವಣಿ ಹಾಗೂ ಸ್ಟೇರ್ ಕೇಸ್( ಏಣಿ) ನಿರ್ಮಿಸಲಾಗಿದೆ. ಕಾಮಗಾರಿ ಪರಿಶೀಲಿಸಿ ಮಾತನಾಡಿದ, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಕಡೆಗಳಲ್ಲೂ ಅತ್ಯುತ್ತಮ

ಕಲ್ಲುಗುಡ್ಡೆ ಅಂಗನವಾಡಿ ಮೇಲ್ಚಾವಣಿ ಕಾಮಗಾರಿ ಪರಿಶೀಲನೆ Read More »

ಕರಾವಳಿ

ನೂಜಿಬಾಳ್ತಿಲ ಬೆಥನಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

 (ನ್ಯೂಸ್ ಕಡಬ) newskadaba.com  ಕಲ್ಲುಗುಡ್ಡೆ,  ನ.9  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ಕಾವೂರು ಬಿ.ಜಿ.ಎಸ್. ವಿದ್ಯಾಸಂಸ್ಥೆ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿತೇಶ್ 3 ಸಾವಿರ ಮೀಟರ್ ಓಟದಲ್ಲಿ ಪ್ರಥಮ, 1500 ಮೀಟರ್ ಓಟದಲ್ಲಿ ದ್ವಿತೀಯ, ಸ್ವಪ್ನ 3 ಕಿ.ಮೀ. ವೇಗದ ನಡಿಗೆಯಲ್ಲಿ ಪ್ರಥಮ ಸ್ಥಾನ, ಸೌಮ್ಯ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಉಷಾ 600 ಮೀಟರ್

ನೂಜಿಬಾಳ್ತಿಲ ಬೆಥನಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ Read More »

ಕರಾವಳಿ

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನೂಜಿಬಾಳ್ತಿಲದ ಪ್ರಜ್ಞಾ ಎನ್

 (ನ್ಯೂಸ್ ಕಡಬ) newskadaba.com  ಕಲ್ಲುಗುಡ್ಡೆ,  ನ.9  ಗುಡ್ಡಗಾಡು ಓಟದಲ್ಲಿ ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಎನ್. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಉಪನಿರ್ದೇಶಕರ ಕಛೇರಿ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಶಿವಮೊಗ್ಗ ಇದರ ಸಹಯೋಗದಲ್ಲಿ ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನೂಜಿಬಾಳ್ತಿಲ ಬೆಥನಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಜ್ಞಾ ಎನ್. 4 ಕಿ.ಮೀ. ಗುಡ್ಡಗಾಡು ಓಟದಲ್ಲಿ 4ನೇ

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನೂಜಿಬಾಳ್ತಿಲದ ಪ್ರಜ್ಞಾ ಎನ್ Read More »

ಕರಾವಳಿ

ಶಿರಾಡಿ ಗ್ರಾ.ಪಂ. ಮಾಜಿ ಸದಸ್ಯ ನದಿಯಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ನ.07. ಶಿರಾಡಿ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ಉದನೆ‌ ನಿವಾಸಿ ಜೇಕಬ್ ಎಂಬವರು ಉದನೆ ಗುಂಡ್ಯ ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಹೊಳೆಯಲ್ಲಿ ಸ್ನಾನಕ್ಕೆಂದು ತೆರಳಿದ್ದ ವೇಳೆ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ.

ಶಿರಾಡಿ ಗ್ರಾ.ಪಂ. ಮಾಜಿ ಸದಸ್ಯ ನದಿಯಲ್ಲಿ ಮುಳುಗಿ ಮೃತ್ಯು Read More »

ಕರಾವಳಿ

ಈದ್ ಮೀಲಾದ್ , ಅಯೋಧ್ಯೆ ತೀರ್ಪು , ಟಿಪ್ಪು ಜಯಂತಿ ಹಿನ್ನೆಲೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ ;ಶಾಂತಿಯುತವಾಗಿ ಹಬ್ಬವನ್ನ ಆಚರಿಸಿ; ಅಯೋಧ್ಯೆ ತೀರ್ಪನ್ನ ಸಮಾನವಾಗಿ ಸ್ವೀಕರಿಸಿ ;ಈರಯ್ಯ ಡಿ ಎನ್ ಕರೆ

ಬೆಳ್ಳಾರೆ (ನ್ಯೂಸ್ ಕಡಬ ನ:07) : ಈದ್ ಮೀಲಾದ್ ,ಅಯೋಧ್ಯೆ ತೀರ್ಪು,ಟಿಪ್ಪು ಜಯಂತಿ ಹಿನ್ನೆಲೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಲ್ಲಾ ಮಸೀದಿ ,ಚರ್ಚ್, ದೇವಸ್ಥಾನ ,ಸಂಘ ಸಂಸ್ಥೆಗಳ ಪ್ರಮುಖರು ,ಜನಪ್ರತಿನಿಧಿಗಳು ,ಗ್ರಾಮಸ್ಥರೊಂದಿಗೆ ಶಾಂತಿ ಸಭೆಯು ನವಂಬರ್ 7 ರಂದು ರಾಜೀವ್ ಗಾಂಧೀ ಸಭಾಭವನದಲ್ಲಿ ನಡೆಯಿತು . ಈದ್ ಮೀಲಾದ್ ಹಬ್ಬವನ್ನ ಯಾರಿಗೂ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಆಚರಣೆ ಮಾಡಿ,ಯಾವುದೇ ಅಹಿತಕರ ಘಟನೆಗೆ ಎಡೆಮಾಡಿಕೊಡದೆ,ಮೀಲಾದ್ ಜಾಥಾ ನಡೆಸುವವರೇ ಇದ್ದರೆ ಅನುಮತಿ ಪಡೆಯಿರಿ ,ವಾಹನ ಜಾಥಕ್ಕೆ ಅವಕಾಶ ವಿರಲ್ಲ ಎಂದು ಹೇಳಿದರು.

ಈದ್ ಮೀಲಾದ್ , ಅಯೋಧ್ಯೆ ತೀರ್ಪು , ಟಿಪ್ಪು ಜಯಂತಿ ಹಿನ್ನೆಲೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ ;ಶಾಂತಿಯುತವಾಗಿ ಹಬ್ಬವನ್ನ ಆಚರಿಸಿ; ಅಯೋಧ್ಯೆ ತೀರ್ಪನ್ನ ಸಮಾನವಾಗಿ ಸ್ವೀಕರಿಸಿ ;ಈರಯ್ಯ ಡಿ ಎನ್ ಕರೆ Read More »

ಕರಾವಳಿ

ಸಂಚಾರಿ ನಿಯಮಗಳ ಜನಜಾಗೃತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com   ನೆಲ್ಯಾಡಿ, ನ.7    ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಸಿಲ್ವರ್ ಜೂಬಿಲಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಜ್ಞಾನೋದಯದ ಸ್ಕೌಟ್ ಗೈಡ್ಸ್ ನ ವತಿಯಿಂದ ಸೋಮವಾರ ಸಂಚಾರಿ ನಿಯಮಗಳ ಜನಜಾಗೃತಿ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ. ಯವರು ಹದಿಹರೆಯದ ಯುವಕ ಯುವತಿಯರು ರಸ್ತೆ ಕಾನೂನುಗಳನ್ನು ಉಲಂಘನೆ ಮಾಡುತ್ತಾರೆ. ಸುರಕ್ಷಿತ ಚಾಲನೆಯನ್ನು ನಿರ್ವಹಿಸಿದರೆ ಅಪಘಾತ ನಡೆಯುವುದಿಲ್ಲ. ಈ ಸುರಕ್ಷತೆಯ

ಸಂಚಾರಿ ನಿಯಮಗಳ ಜನಜಾಗೃತಿ ಕಾರ್ಯಾಗಾರ Read More »

ಕರಾವಳಿ
Scroll to Top