ಕರಾವಳಿ

ವಿಕಲತೆ ಸಾಧನೆಗೆ ಅಡ್ಡಿಯಾಗಬಾರದು- ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.4   ವಿಕಲಚೇತನರು ಎಂಬುದನ್ನು ಮನಸ್ಸಿನಿಂದ ದೂರವಿಟ್ಟು, ಸಾಧನೆಯ ಹಾದಿಯಲ್ಲಿ ಸಾಗುವ ಮನೋಭಾವ ಬೆಳಿಸಿಕೊಳ್ಳಬೇಕು. ವಿಕಲತೆ ಸಾಧನೆಗೆ ಅಡ್ಡಿಯಾಗಬಾರದು ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹೇಳಿದರು. ಮಂಗಳವಾರ ಪುರಭವನದಲ್ಲಿ ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಯನ್ಸ್ ಕ್ಲಬ್ ಗಾಂಧನಗರ, ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ […]

ವಿಕಲತೆ ಸಾಧನೆಗೆ ಅಡ್ಡಿಯಾಗಬಾರದು- ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ Read More »

ಕರಾವಳಿ

ಕಡಬ: ಪೇರಡ್ಕದಲ್ಲಿ ಕಳ್ಳರ ಕೈಚಳಕ ➤ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳರು

(ನ್ಯೂಸ್ ಕಡಬ) newskadaba.com ಕಡಬ, ಡಿ.04. ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ಸಮಯಗಳಿಂದ ಸುಮ್ಮನಿದ್ದ ಕಳ್ಳರು ಇದೀಗ ಮತ್ತೆ ತಮ್ಮ ಕೈಚಳಕವನ್ನು ತೋರಿದ್ದಾರೆ. ಕಡಬ ಸಮೀಪದ ಪೇರಡ್ಕ ಎಂಬಲ್ಲಿ ಉಮ್ಮರ್ ಪೊಸವಳಿಕೆ ಹಾಗೂ ಮಹಮ್ಮದ್ ಪೆಲತ್ರಾಣೆ ಎಂಬವರಿಗೆ ಸೇರಿದ ಅಂಗಡಿಗೆ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗಿನ ನಡುವೆ ನುಗ್ಗಿರುವ ಕಳ್ಳರು ಅಂಗಡಿಯೊಳಗಿದ್ದ ಅಕ್ಕಿ, ಎಣ್ಣೆ ಸೇರಿದಂತೆ ದಿನಸಿ ಸಾಮಾನುಗಳನ್ನು ಕದ್ದೊಯ್ದಿದ್ದಾರೆ.

ಕಡಬ: ಪೇರಡ್ಕದಲ್ಲಿ ಕಳ್ಳರ ಕೈಚಳಕ ➤ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳರು Read More »

ಕರಾವಳಿ

ಉಚಿತ ಕಂಪ್ಯೂಟರ್ ತರಬೇತಿ

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.4   ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದಿಂದ ಮುಖ್ಯಮಂತ್ರಿ ಕರ್ನಾಟಕ ಕೌಶಲ್ಯ ಯೋಜನೆಯಡಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ನಿರುದ್ಯೋಗಿ ಯುವಕ/ಯುವತಿಯರಿಗೆ ವಿಶೇಷವಾಗಿ ದೈಹಿಕ ವಿಕಲಚೇತನರಿಗೂ ಕೂಡಾ ಉಚಿತವಾಗಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಕಂಪ್ಯೂಟರ್ ಹಾರ್ಡ್‍ವೇರ್ ಆ್ಯಂಡ್ ನೆಟ್ವರ್ಕಿಂಗ್ ತರಬೇತಿಗಳನ್ನು ನೀಡಲಾಗುತ್ತದೆ. ಯಶಸ್ವಿಯಾಗಿ ತರಬೇತಿ ಮುಗಿಸಿದವರಿಗೆ ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗವಕಾಶವನ್ನು ಕಲ್ಪಿಸಿ ಕೊಡಲಾಗುತ್ತದೆ. ಉಚಿತ ತರಬೇತಿಗಳು 90 ದಿವಸಗಳವರೆಗೆ ಇರುತ್ತದೆ. ಕನಿಷ್ಟ 18 ರಿಂದ 35 ವಯಸ್ಸಿನವರು ತರಬೇತಿಗೆ ಅರ್ಹರಾಗಿರುತ್ತಾರೆ.

ಉಚಿತ ಕಂಪ್ಯೂಟರ್ ತರಬೇತಿ Read More »

ಕರಾವಳಿ

ಜಾಗತಿಕ ತಾಪಮಾನ ಜಾಗೃತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.4  ದ.ಕ ಜಿಲ್ಲಾಡಳಿತ ಹಾಗೂ ಲಯನ್ಸ್ ಕ್ಲಬ್ ವೆಲೆನ್ಸಿಯಾ ವತಿಯಿಂದ ಡಿಸೆಂಬರ್ 5 ರಂದು ಬೆಳಿಗ್ಗೆ 9 ಗಂಟೆಯಿಂದ 10 ಗಂಟೆಯವರೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳ ಸಹಕಾರದೊಂದಿಗೆ ಜಾಗತಿಕ ತಾಪಮಾನ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಸಾಂಕೇತಿಕವಾಗಿ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಆಯ್ದ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಮ್ಮುಖದಲ್ಲಿ ದ.ಕ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಉದ್ಘಾಟಿಸಿ ಪ್ರಮಾಣ ವಚನ ಬೋಧಿಸಲಿದ್ದಾರೆ. ಜಿಲ್ಲಾ ಗವರ್ನರ್

ಜಾಗತಿಕ ತಾಪಮಾನ ಜಾಗೃತಿ ಕಾರ್ಯಕ್ರಮ Read More »

ಕರಾವಳಿ

ವೈದ್ಯಕೀಯ ವೃತ್ತಿಯ ತಿರುಳು ಇರುವುದೇ ತ್ಯಾಗದಲ್ಲಿ: ಡಾ|| ಬನಾರಿ

(ನ್ಯೂಸ್ ಕಡಬ) newskadaba.com, ಹೊಸಂಗಡಿ, ಡಿ.3  ತ್ಯಾಗವಿಲ್ಲದೆ ಬದುಕಿಲ್ಲ ಅದರಲ್ಲೂ ಜನರ ಸೇವೆಯಲ್ಲಿಯೇ ನಿರತರಾಗಿರುವ ವೈದ್ಯರಲ್ಲಿ ತ್ಯಾಗದ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ಹಿರಿಯ ಸಾಹಿತಿ ಡಾ|| ರಮಾನಂದ ಬನಾರಿ ಅಭಿಪ್ರಾಯಪಟ್ಟರು. ಹೊಸಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಹೈಲ್ಯಾಂಡ್ ಕಾಂಪ್ಲೆಕ್ಸ್‍ಗೆ ಸ್ಥಳಾಂತರಗೊಂಡ ಸುರಕ್ಷ ದಂತ ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಭಗವದ್ಗೀತೆಯಲ್ಲಿ ಯಜ್ಞ, ದಾನ ಹಾಗೂ ತಪಸ್ಸು ಆದರ್ಶ ಮನುಷ್ಯ ಜೀವನದಲ್ಲಿರಬೇಕೆಂದು ತಿಳಿಸಲಾಗಿದೆ. ಆದರೆ ಈ ಮೂರರಲ್ಲಿಯೂ ದಾನವೊಂದೇ ಅಂತರ್ಗತವಾಗಿರುತ್ತದೆ. ವೃತ್ತಿಯೊಂದಿಗೆ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಡಾ|| ಮುರಲೀಮೋಹನ ಚೂಂತಾರು

ವೈದ್ಯಕೀಯ ವೃತ್ತಿಯ ತಿರುಳು ಇರುವುದೇ ತ್ಯಾಗದಲ್ಲಿ: ಡಾ|| ಬನಾರಿ Read More »

ಕರಾವಳಿ

ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com, ಪುತ್ತೂರು , ಡಿ.3  ಪ್ರಥಮ ಪಿ.ಯು.ಸಿ ವಿದ್ಯಾರ್ಥಿಯೋರ್ವಳು ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ಪುತ್ತೂರು ತಾಲೂಕಿನಲ್ಲಿ ನಿನ್ನೆ ನಡೆದಿದೆ. ಮೃತ ಬಾಲಕಿಯನ್ನು ಪುತ್ತೂರು ಕಸಬಾ ಗ್ರಾಮದ ಗೀತಾರವರ ಮಗಳು ಉಷಾ ಎಂದು ಗುರುತಿಸಲಾಗಿದೆ. ಕಾಲೇಜಿಗೆ ರಜೆ ಇದ್ದುದರಿಂದ ಮಗಳು ಉಷಾ ಮನೆಯಲ್ಲಿಯೇ ಇದ್ದು , ಸಂಜೆ ಸುಮಾರು 6.00 ಗಂಟೆಯ ವೇಳೆಗೆ ಪರಿಚಯದ ವ್ಯಕ್ತಿಯೋರ್ವರು ಫೋನು ಮಾಡಿ ಕೂಡಲೇ ಮನೆಗೆ ಬರುವಂತೆ ಗೀತಾರವರಿಗೆ ತಿಳಿಸಿದರು. ಮನೆಗೆ ಬಂದಾಗ ಉಷಾ ತನ್ನ ಚಿಕ್ಕಮ್ಮನ ರೂಮಿನೊಳಗೆ

ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ

ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com, ಪುತ್ತೂರು , ಡಿ.3  ಹಣಕಾಸಿನ ಸಮಸ್ಯೆಯಿಂದ ಮನನೊಂದುಕೊಂಡು ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ  ಸೋಮವಾರದಂದು ನಡೆದಿದೆ. ಮೃತ ವ್ಯಕ್ತಿಯನ್ನು ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಪಿ. ನಾರಾಯಣ ರಾವ್ (35 ವರ್ಷ)ಎಂದು ಗುರುತಿಸಲಾಗಿದೆ. ಅವರನ್ನು ಮಧ್ಯಾಹ್ನ ಊಟಕ್ಕೆಂದು ಕರೆದಾಗ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದುದರಿಂದ, ತಾಯಿ ಕೋಣೆಯ ಬಾಗಿಲನ್ನು ತೆರೆದಾಗ ಅಡ್ಡವೊಂದಕ್ಕೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದು ನೇತಾಡುತ್ತಿದ್ದುದು ಕಂಡುಬಂದಿದೆ. ಜೀವನ್ಮರಣ ಸ್ಥಿತಿಯಲ್ಲಿದ್ದವರನ್ನು, ನೆರೆಯವರ ಸಹಾಯದಿಂದ ಕೆಳಗಿಸಿ ಚಿಕಿತ್ಸೆಗಾಗಿ

ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ

ಬಸ್ಸುಗಳ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com, ಪುತ್ತೂರು , ಡಿ.3  ಬಸ್ಸುಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬಸ್ಸಿನ ಗಾಳಿತಡೆ ಗಾಜು ಒಡೆದು, ಸೈಡ್ ಮಿರರ್ ಮತ್ತು ಬಲಬದಿಯ ಮೂಲೆ ಜಖಂಗೊಂಡ ಘಟನೆ ಪುತ್ತೂರು ತಾಲೂಕು ಉಪ್ಪಿನಂಗಡಿ ಎಂಬಲ್ಲಿ ಸೋಮವಾರದಂದು ನಡೆದಿದೆ. ಈ ಅಪಘಾತದಿಂದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ಸುಗಳ ನಡುವೆ ಢಿಕ್ಕಿ Read More »

ಕರಾವಳಿ

ಪಾದಚಾರಿಗೆ ಅಟೋರಿಕ್ಷಾ ಢಿಕ್ಕಿ

(ನ್ಯೂಸ್ ಕಡಬ) newskadaba.com, ಪುತ್ತೂರು , ಡಿ.3  ಪಾದಚಾರಿಗೆ ಅಟೋರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ಘಟನೆ ಪುತ್ತೂರು ತಾಲೂಕು ಕಸ್ಬಾ ಗ್ರಾಮದ ಬೊಳ್ವಾರು ಎಂಬಲ್ಲಿ ಸುಝುಕಿ ಶೋರೂಂನ ಎದುರು ಸೋಮವಾರದಂದು ನಡೆದಿದೆ. ಗಾಯಗೊಂಡ ಸತೀಶ್ ರಾವ್ ರವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಅಟೋರಿಕ್ಷಾ ಢಿಕ್ಕಿ Read More »

ಕರಾವಳಿ

ಗೃಹರಕ್ಷಕರ ಪಶ್ವಿಮ ವಲಯ ವೃತ್ತಿಪರ ಕ್ರೀಡಾಕೂಟದ ಉಧ್ಥಾಟನಾ ಸಮಾರಂಭ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.3  ಗೃಹರಕ್ಷಕರ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ 2019 ಇದರ ಉದ್ಘಾಟನಾ ಸಮಾರಂಭ ಭಾನುವಾರದಂದು ಸಂಜೆ 5.00 ಗಂಟೆಗೆ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಿತು. ತುಕಡಿ ನಾಯಕರಾದ ಶ್ರೀ ವಸಂತ್ ಕುಮಾರ್ ಇವರ ನೇತೃತ್ವದಲ್ಲಿ ಅತಿಥಿಗಳಿಗೆ ಗೌರವ ವಂದನೆಯನ್ನು ನೀಡಲಾಯಿತು. ಕ್ರೀಡಾ ಜ್ಯೋತಿಯ ಆಗಮನವನ್ನು ಶ್ರೀ ಚೇತನ್, ಮೆಟಲ್ ಸಂಖ್ಯೆ 5, ಮಂಗಳೂರು ಘಟಕ ಇವರು ನಿರ್ವಹಿಸಿದರು. ಉಪ ಸಮಾದೇಷ್ಟರಾದ ಶ್ರೀ ರಮೇಶ್ ಇವರು ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು

ಗೃಹರಕ್ಷಕರ ಪಶ್ವಿಮ ವಲಯ ವೃತ್ತಿಪರ ಕ್ರೀಡಾಕೂಟದ ಉಧ್ಥಾಟನಾ ಸಮಾರಂಭ Read More »

ಕರಾವಳಿ
Scroll to Top