ಕರಾವಳಿ

ಬಂಟ್ವಾಳ: ಪಿಕಪ್-ರಿಕ್ಷಾ ಢಿಕ್ಕಿ ಹೊಡೆದು ಐವರಿಗೆ ಗಾಯ

ಬಂಟ್ವಾಳ, ಮಾ.5: ಪಿಕಪ್ ವಾಹನ ಮತ್ತು ರಿಕ್ಷಾ ಮುಖಾಮುಖಿ ಢಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ, ಪಿಕಪ್ ಚಾಲಕ ಸೇರಿದಂತೆ ಐವರಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಸಂಜೆ ಬಂಟ್ವಾಳ ಕೆಳಗಿನ ಪೇಟೆಯಲ್ಲಿ ನಡೆದಿದೆ. ಗಾಯಗೊಂಡವರನ್ನು ರಿಕ್ಷಾ ಚಾಲಕ ಪರ್ಲ ನಿವಾಸಿ ಜೆರಾಲ್ಡ್ ಸಾಂಕ್ತಿಸ್, ಪಿಕಪ್ ಚಾಲಕ ಗೌತಮ್ ಹಾಗೂ ರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. […]

ಬಂಟ್ವಾಳ: ಪಿಕಪ್-ರಿಕ್ಷಾ ಢಿಕ್ಕಿ ಹೊಡೆದು ಐವರಿಗೆ ಗಾಯ Read More »

ಕರಾವಳಿ

ಯುವತಿಯೊಂದಿಗೆ ನಾಪತ್ತೆಯಾದ ಸ್ವಾಮೀಜಿ ಮಂಗಳೂರಿನಲ್ಲಿ ಪತ್ತೆ

ಮಂಗಳೂರು, ಮಾ.5: ಕೋಲಾರದ ಹೊಳಲಿ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿ (40) ಪಾದಪೂಜೆ ಮಾಡುತ್ತಿದ್ದ ಯುವತಿಯೊಂದಿಗೆ ನಾಪತ್ತೆಯಾಗಿದ್ದು, ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಫೆ.27ರಂದು ಸ್ವಾಮೀಜಿ ಯುವತಿಯೊಂದಿಗೆ ನಾಪತ್ತೆಯಾಗಿದ್ದರು. ಕೋಲಾರ ತಾಲೂಕು ಹೊಳಲಿ ಗ್ರಾಮದ 20 ವರ್ಷದ ಯುವತಿಯೊಂದಿಗೆ ಸ್ವಾಮೀಜಿ ನಾಪತ್ತೆಯಾಗಿದ್ದು, ಯುವತಿಯ ಸೋದರ ಮಾವ ಶಂಕರ್ ಕೋಲಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಬಳಿಕ ಯುವತಿಯ ಅಣ್ಣನಿಗೆ ಸ್ವಾಮೀಜಿ ಕರೆ ಮಾಡಿದ್ದು, ತಿರುಪತಿಯಲ್ಲಿ ತಾವು ಮದುವೆಯಾಗಿರುವುದಾಗಿ ತಿಳಿಸಿದ್ದರು. ಮತ್ತೆ ಅವರ ಬಗ್ಗೆ ಸುಳಿವು

ಯುವತಿಯೊಂದಿಗೆ ನಾಪತ್ತೆಯಾದ ಸ್ವಾಮೀಜಿ ಮಂಗಳೂರಿನಲ್ಲಿ ಪತ್ತೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಂಗಳೂರು ಗೋಲಿಬಾರ್ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ಆಯುಕ್ತರಿಗೆ ನೋಟಿಸ್

ಮಂಗಳೂರು, ಮಾ.4: ಮಂಗಳೂರು ಗಲಭೆ ಹಾಗೂ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಮ್ಯಾಜಿಸ್ಟ್ರೀರಿಯಲ್ ವಿಚಾರಣೆಯು ನಗರದ ಎಸಿ ಕಚೇರಿ ಕೋರ್ಟ್‌ನಲ್ಲಿ ನಡೆಯಿತು. ತನಿಖಾಧಿಕಾರಿಯಾದ ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಜಗದೀಶ್ ವಿಚಾರಣೆ ನಡೆಸಿದರು. ಬುಧವಾರ 176 ಸಾಕ್ಷಿಗಳ ಪೈಕಿ ಎಸಿಪಿಗಳ ಸಹಿತ 29 ಪೊಲೀಸರು ಬಂದು ಸಾಕ್ಷ್ಯ ಹೇಳಿದರು. ಮಾ.9ಕ್ಕೆ ಹಾಜರಾಗುವಂತೆ ಡಿಸಿಪಿ ಅರುಣಾಂಶುಗಿರಿ ಹಾಗೂ ಮಾ.12ರಂದು ವಿಚಾರಣೆಗೆ ಹಾಜರಾಗುವಂತೆ ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹಾಗೂ ಗಲಭೆ

ಮಂಗಳೂರು ಗೋಲಿಬಾರ್ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ಆಯುಕ್ತರಿಗೆ ನೋಟಿಸ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ಶಂಕಿತ ಎಚ್1ಎನ್1 ಜ್ವರಕ್ಕೆ ಆಟೋ ಚಾಲಕ ಬಲಿ ➤ ಎಚ್1ಎನ್1 ಭೀತಿಯಲ್ಲಿ ಕಡಬದ ಜನತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.04. ಶಂಕಿತ ಎಚ್1ಎನ್1 ಜ್ವರಕ್ಕೆ ಆಟೋ ಚಾಲಕರೋರ್ವರು‌ ಬಲಿಯಾದ ಘಟನೆ ಕಡಬದಲ್ಲಿ ನಡೆದಿದೆ. ಮಂಗಳೂರಿನಲ್ಲಿ ಖಾಸಗಿ ಬಸ್‌ ಚಾಲಕರಾಗಿದ್ದು, ಪ್ರಸ್ತುತ ಕಡಬದಲ್ಲಿ ಆಟೋ ಓಡಿಸುತ್ತಿದ್ದ ಕಡಬ ತಾಲೂಕು 102ನೇ ನೆಕ್ಕಿಲಾಡಿ ಗ್ರಾಮದ ಕಲ್ಪುರೆ ನಿವಾಸಿ ಕುಶಾಲಪ್ಪ ಗೌಡ (50) ಅವರು ಶಂಕಿತ ಎಚ್‌1ಎನ್‌1 ಜ್ವರದಿಂದಾಗಿ ಮಂಗಳವಾರದಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಪ್ಪತ್ತು ದಿನಗಳಿಂದ ಜ್ವರ ಪೀಡಿತರಾಗಿದ್ದ ಅವರು ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಹೆಚ್ಚಿನ

ಕಡಬ: ಶಂಕಿತ ಎಚ್1ಎನ್1 ಜ್ವರಕ್ಕೆ ಆಟೋ ಚಾಲಕ ಬಲಿ ➤ ಎಚ್1ಎನ್1 ಭೀತಿಯಲ್ಲಿ ಕಡಬದ ಜನತೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ

ಬೆಂಗಳೂರು, ಮಾ.4: ರಾಜ್ಯಾದ್ಯಂತ ಇಂದಿನಿಂದ ರಾಜ್ಯದ 1,016 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, 6.80 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದ 2,01,445, ವಾಣಿಜ್ಯ ವಿಭಾಗದ 2,61,674 ಹಾಗೂ ವಿಜ್ಞಾನ ವಿಭಾಗದ ಒಟ್ಟು 2,16,930 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗಳು ಬರೆಯಲಿದ್ದಾರೆ. ಇಂದಿನಿಂದ ಆರಂಭವಾಗುವ ಪರೀಕ್ಷೆಯು ಮಾ.23ರವರೆಗೂ ನಡೆಯಲಿದೆ. ಪರೀಕ್ಷೆ ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ 40 ಪುಟಗಳ ಉತ್ತರ ಬುಕ್‌ಲೆಟ್‌ನ್ನು ನೀಡಲಾಗುತ್ತದೆ. ಇದರಲ್ಲೇ ಆತ ತನ್ನ ಉತ್ತರಗಳನ್ನು ಬರೆದು ಪರೀಕ್ಷೆಯನ್ನು ಮುಗಿಸಬಹುದು. ಯಾರಿಗಾದರೂ

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ Read More »

ಕರಾವಳಿ, ಕರ್ನಾಟಕ

ಉಡುಪಿ: 33 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸರು

ಉಡುಪಿ, ಮಾ.4: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಪಡುಬಿದ್ರೆ ನಂದಿಕೂರಿನ ಕೈಗಾರಿಕಾ ವಲಯದಲ್ಲಿರುವ ಆಯುಷ್ ಎನ್‌ವೈರ್‌ಟೆಕ್ ಪ್ರೈ.ಲಿಮಿಟೆಡ್‌ನಲ್ಲಿ ನ್ಯಾಯಾಲಯದ ಆದೇಶದಂತೆ ನಾಶಪಡಿಸಲಾಯಿತು. ಜಿಲ್ಲೆಯ ಸೆನ್ ಅಪರಾಧ ಠಾಣೆಯ 11 ಪ್ರಕರಣಗಳಲ್ಲಿ 31.84 ಕೆ.ಜಿ., ಮಣಿಪಾಲ ಠಾಣೆಯ ನಾಲ್ಕು ಪ್ರಕರಣಗಳಲ್ಲಿ 1.56 ಕೆ.ಜಿ. ಹಾಗೂ ಉಡುಪಿ ನಗರ ಠಾಣೆಯ ಎರಡು ಪ್ರಕರಣಗಳಲ್ಲಿ 1.67 ಕೆ.ಜಿ. ಸೇರಿದಂತೆ ಒಟ್ಟು 17 ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಒಟ್ಟು 32 ಕೆಜಿ 883 ಗ್ರಾಂ ಗಾಂಜಾವನ್ನು ನಾಶಪಡಿಸಲಾಯಿತು. ಈ ಪ್ರಕ್ರಿಯೆಯಲ್ಲಿ

ಉಡುಪಿ: 33 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ತಲಪಾಡಿಯಲ್ಲಿ ಸೇತುವೆ ಢಿಕ್ಕಿ ಹೊಡೆದ ಪಿಕಪ್: ಚಾಲಕನಿಗೆ ಗಾಯ

ಉಳ್ಳಾಲ, ಮಾ.3: ಚಾಲಕನ ನಿಯಂತ್ರಣ ತಪ್ಪಿದ ಮೀನು ಸಾಗಾಟದ ಪಿಕಪ್ ವಾಹನ ಸೇತುವೆಗೆ ಢಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಕೆ.ಸಿ.ರೋಡು ಉಚ್ಚಿಲ ಸೇತುವೆ ಬಳಿ ಇಂದು ಬೆಳಗ್ಗೆ ನಡೆದಿದೆ. ಚಾಲಕ ನಿದ್ರೆ ಮಂಪರಿನಲ್ಲಿದ್ದುದೇ ಘಟನೆಗೆ ಕಾರಣ ಎನ್ನಲಾಗಿದ್ದು, ಪಿಕಪ್ ಮಂಗಳೂರಿನಿಂದ ಕೇರಳಕ್ಕೆ ಮೀನು ಸಾಗಾಟ ಮಾಡುವ ಸಂದರ್ಭ ಈ ದುರ್ಘಟನೆ ನಡೆದಿದ್ದು, ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಪಿಕಪ್ ಚಾಲಕ ಗಾಯಗೊಂಡಿದ್ದಾರೆ. ಸೇತುವೆ ಕೆಳಗೆ ಹಲವು ಅಡಿ ಆಳಕ್ಕೆ ಬೀಳದೆ ಸೇತುವೆಯಲ್ಲೇ ಸಿಲುಕಿಕೊಂಡಿದ್ದರಿದ

ತಲಪಾಡಿಯಲ್ಲಿ ಸೇತುವೆ ಢಿಕ್ಕಿ ಹೊಡೆದ ಪಿಕಪ್: ಚಾಲಕನಿಗೆ ಗಾಯ Read More »

ಕರಾವಳಿ

ಕೊರೋನಾ ಭೀತಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್

ಮಂಗಳೂರು, ಮಾ.4: ಡೆಡ್ಲಿ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಆತಂಕ ಸೃಷ್ಟಿಸಿದ್ದು, ಮೂರು ಪ್ರಕರಣಗಳು ದೃಢಪಟ್ಟಿವೆ. ಈ ನಡುವೆ ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿಯಲ್ಲಿ ವೈರಸ್ ಬರದಂತೆ ತಡೆಗಟ್ಟಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಯಂತ್ರಗಳನ್ನು ಅಳವಡಿಸಲಾಗಿದೆ. ಕರಾವಳಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕುವೈತ್, ಯುಎಇ, ಸೌದಿ, ಓಮನ್, ಬಹರೈನ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿ ಸೋಂಕು ಹಬ್ಬಿರುವ ಕಾರಣ ವಿಮಾನ ನಿಲ್ದಾಣದಲ್ಲಿ

ಕೊರೋನಾ ಭೀತಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕುಂದಾಪುರ: ‘ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದ ಆರೋಪಿ ಪೊಲೀಸ್ ವಶಕ್ಕೆ

ಕುಂದಾಪುರ, ಮಾ.2: ‘ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದ ಆರೋಪದಲ್ಲಿ ಓರ್ವನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕುಂದಾಪುರದ ಕೋಡಿ ನಿವಾಸಿ ರಾಘವೇಂದ್ರ ಗಾಣಿಗ(43) ಎಂದು ಗುರುತಿಸಲಾಗಿದೆ. ಈತ ಕುಂದಾಪುರದ ಸರಕಾರಿ ಕಚೇರಿಗಳ ಸಂಕೀರ್ಣ ಮಿನಿ ವಿಧಾನ ಸೌಧದ ಒಳಗೆ ಎನ್ನುತ್ತಾ ನಿರಂತರವಾಗಿ ‘ಪಾಕಿಸ್ತಾನಕ್ಕೆ ಝಿಂದಾಬಾದ್’ ಘೋಷಣೆ ಕೂಗಿರುವ ವೀಡಿಯೊ ವೈರಲ್ ಆಗಿದೆ. ಸೋಮವಾರ ಬೆಳಗ್ಗೆ 10 ಗಂಟೆಯ ಸುಮಾರಿ ಘಟನೆ ನಡೆದಿದ್ದು, ಮಾಹಿತಿ ತಿಳಿದು ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಸೋಮವಾರ ಬೆಳಗ್ಗೆ ರಾಘವೇಂದ್ರ ಗಾಣಿಗ

ಕುಂದಾಪುರ: ‘ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದ ಆರೋಪಿ ಪೊಲೀಸ್ ವಶಕ್ಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಹಿರಿಯಡ್ಕ: ಕೀಟನಾಶಕ ಸೇವಿಸಿ ರೈತ ಆತ್ಮಹತ್ಯೆ

ಉಡುಪಿ, ಮಾ.2: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ರೈತನೋರ್ವ ಮೃತಪಟ್ಟ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ರೈತನನ್ನು ಪೆರ್ಡೂರು ಗ್ರಾಮದ ಮೂಡು ಜೆಡ್ಡು ಮನೆ ನಿವಾಸಿ ಗುಂಡು ನಾಯ್ಕಾ (58) ಎಂದು ಗುರುತಿಸಲಾಗಿದೆ. ಮೃತರು ತೋಟ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದು, ಕೃಷಿಗಾಗಿ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ. ಕೃಷಿಯಲ್ಲಿ ಸರಿಯಾದ ಆದಾಯ ಬಾರದೇ ಇದ್ದುದರಿಂದ ಸಾಲ ತೀರಿಸಲು ಸಾಧ್ಯವಿಲ್ಲದೇ ನೊಂದುಕೊಂಡಿದ್ದು, ಆಗ್ಗಾಗೆ ಸಾಯುವ ಮಾತನಾಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ

ಹಿರಿಯಡ್ಕ: ಕೀಟನಾಶಕ ಸೇವಿಸಿ ರೈತ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top