ಕರಾವಳಿ

ಕಡಬ ಠಾಣಾ ಎಎಸ್ಐ ಸುರೇಶ್ ರಿಂದ ಬಡ ಕುಟುಂಬಕ್ಕೆ ಸಹಾಯ

(ನ್ಯೂಸ್ ಕಡಬ) newskadaba.com ಕಡಬ, ಎ.18. ಬಡ ಕುಟುಂಬವೊಂದಕ್ಕೆ ಅಕ್ಕಿ ಹಾಗೂ ದಿನಬಳಕೆಯ ವಸ್ತುಗಳನ್ನು ಸ್ವತಃ ಖರೀದಿಸಿ ತಲುಪಿಸಿ ಕಡಬ ಠಾಣಾ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಠಾಣಾ ವ್ಯಾಪ್ತಿಯ ಕುಂತೂರು ಸಮೀಪದ ಬೇಳ್ಪಾಡಿ ಎಂಬಲ್ಲಿನ ಮುಸ್ಲಿಂ ಕುಟುಂಬವೊಂದು ಬಡತನದಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದ ಕಡಬ ಠಾಣಾ ಎಎಸ್ಐ ಸುರೇಶ್ ಸಿ.ಟಿ., ಹೋಂಗಾರ್ಡ್ ಯೋಗೀಶ್ ಹಾಗೂ ಲೋಕೇಶ್ ರವರ ಜೊತೆ‌ ತೆರಳಿ ದಿನಬಳಕೆಯ ಸಾಮಾಗ್ರಿಗಳನ್ನು ವಿತರಿಸಿದರು. ಕಳೆದ ವಾರವಷ್ಟೇ ಕಡಬ ಠಾಣೆಯ ಮಹಿಳಾ ಸಿಬ್ಬಂದಿಗಳು ದಿನಬಳಕೆಯ ಸಾಮಾಗ್ರಿಗಳನ್ನು […]

ಕಡಬ ಠಾಣಾ ಎಎಸ್ಐ ಸುರೇಶ್ ರಿಂದ ಬಡ ಕುಟುಂಬಕ್ಕೆ ಸಹಾಯ Read More »

ಕರಾವಳಿ

ಎಸ್‌ಡಿಪಿಐ ರಾ.ಕಾರ್ಯದರ್ಶಿ ಅಲ್ಫೋನ್ಸ್ ಪುತ್ರ ಆಕಾಶ್ ಫ್ರಾಂಕೋ ನಿಧನ

ಮಂಗಳೂರು, ಎ.18: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ, ಕುವೆಟ್ಟು ಶಾಲೆ ಬಳಿ ನಿವಾಸಿ ಅವೀನ್ ಆಕಾಶ್ ಫ್ರಾಂಕೋ (26)ಹೃದಯಘಾತದಿಂದ ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಇವರು ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿ ಇದರ ಮಾಲಕ ಮತ್ತು ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಮತ್ತು ಎಲಿಜಾ ಫ್ರಾಂಕೋ ದಂಪತಿಯ ಪುತ್ರ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದ ಅವೀನ್ ಸ್ನೇಹಜೀವಿಯಾಗಿದ್ದರು. ಬಾಲ್ಯದಿಂದಲೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಕೆಲ ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ

ಎಸ್‌ಡಿಪಿಐ ರಾ.ಕಾರ್ಯದರ್ಶಿ ಅಲ್ಫೋನ್ಸ್ ಪುತ್ರ ಆಕಾಶ್ ಫ್ರಾಂಕೋ ನಿಧನ Read More »

ಕರಾವಳಿ

ಕೊರೋನ ಮುನ್ನಚ್ಚೆರಿಕೆ: ಮಂಗಳೂರು ಕಾರಾಗೃಹದಿಂದ ಕೈದಿಗಳ ಸ್ಥಳಾಂತರ

ಮಂಗಳೂರು, ಎ.18: ಕೊರೋನ ಸೋಂಕು ಹರಡದಂತೆ ತಪ್ಪಿಸಲು ಸುಪ್ರಿಂಕೋರ್ಟ್ ನಿರ್ದೇಶನದಂತೆ ಮಂಗಳೂರು ಕಾರಾಗೃಹದ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ. ವಿಚಾರಣಾಧೀನ ಸುಮಾರು 80 ಕೈದಿಗಳನ್ನು ಮಂಗಳೂರಿನಿಂದ ಕಾರವಾರ ಹಾಗೂ ಚಿಕ್ಕಮಗಳೂರು ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಸರಕಾರಿ ಬಸ್ ಮೂಲಕ 40 ಜನ ಕೈದಿಗಳಂತೆ ಎರಡು ಬಸ್‌ಗಳ ಮೂಲಕ ಕಾರವಾರ ಮತ್ತು ಚಿಕ್ಕಮಗಳೂರು ಜೈಲಿಗೆ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಕಲಬುರಗಿ, ಬೆಂಗಳೂರು ಜೈಲುಗಳಿಂದ ಈಗಾಗಲೇ ವಿಚಾರಣಾಧೀನ ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.

ಕೊರೋನ ಮುನ್ನಚ್ಚೆರಿಕೆ: ಮಂಗಳೂರು ಕಾರಾಗೃಹದಿಂದ ಕೈದಿಗಳ ಸ್ಥಳಾಂತರ Read More »

ಕರಾವಳಿ

Breaking news 12 ದಿನಗಳ ಬಳಿಕ ದ.ಕ. ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಸೋಂಕು ದೃಢ

ಮಂಗಳೂರು, ಎ.17: ಸತತ 12 ದಿನಗಳಿಂದ ಯಾವುದೇ ಕೊರೋನ ಪಾಸಿಟಿವ್ ಪ್ರಕರಣಗಳಿಲ್ಲದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಉಪ್ಪಿನಂಗಡಿಯ ವ್ಯಕ್ತಿಯೊಬ್ಬರಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 12 ದಿನಗಳ ಬಳಿಕ ಮತ್ತೊಂದು ಕೊರೋನ ಪ್ರಕರಣ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಕೊರೋನ ದೃಢಪಟ್ಟ 13 ನೇ ಪ್ರಕರಣ ಇದಾಗಿದೆ. ಉಪ್ಪಿನಂಗಡಿಯ 39 ವರ್ಷದ ವ್ಯಕ್ತಿ ಮಾರ್ಚ್ 28ರಂದು ದಿಲ್ಲಿಗೆ ಪ್ರಯಾಣ ಇತಿಹಾಸ ಹೊಂದಿದ್ದು, ಈಗಾಗಲೇ ಹೋಂ

Breaking news 12 ದಿನಗಳ ಬಳಿಕ ದ.ಕ. ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಸೋಂಕು ದೃಢ Read More »

ಕರಾವಳಿ

ಕೊರೋನಾ ಮಹಾಮಾರಿ ತಡೆಗಟ್ಟಲು ನಾವೇನು ಮಾಡಬಹುದು..? ➤ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ರಿಂದ ಮಹತ್ವದ ಮಾಹಿತಿ

?? ವೀಡಿಯೋ | Video ?? ಕೊರೋನಾ ಮಹಾಮಾರಿ ತಡೆಗಟ್ಟಲು ನಾವೇನು ಮಾಡಬಹುದು..? ➤?ಲಾಕ್‌ಡೌನ್ ವೇಳೆ ಮನೆಗೆ ಬರುವ ಆಶಾ ಕಾರ್ಯಕರ್ತರಿಗೆ ಹೇಗೆ ಉತ್ತರಿಸಬೇಕು..? ➤ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ರಿಂದ ಮಹತ್ವದ ಮಾಹಿತಿ ವೀಡಿಯೋ ನೋಡಲು??ಕ್ಲಿಕ್‌ ಮಾಡಿ

ಕೊರೋನಾ ಮಹಾಮಾರಿ ತಡೆಗಟ್ಟಲು ನಾವೇನು ಮಾಡಬಹುದು..? ➤ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ರಿಂದ ಮಹತ್ವದ ಮಾಹಿತಿ Read More »

ಕರಾವಳಿ

ನೇತ್ರಾವತಿ ಸೇತುವೆಯಲ್ಲಿ ಅನಾಥ ಕಾರು ಪತ್ತೆ: ಮಾಲಕ ನಾಪತ್ತೆ ಶಂಕೆ

ಮಂಗಳೂರು, ಎ.16: ನೇತ್ರಾವತಿ ಸೇತುವೆ ಬಳಿ ಹೆಡ್ ಲೈಟ್ ಉರಿಸಿ ಬಾಗಿಲು ತೆರೆದ ಸ್ಥಿತಿಯಲ್ಲಿ ಕಾರೊಂದು ಎ.15ರ ಬುಧವಾರ ರಾತ್ರಿ ಪತ್ತೆಯಾಗಿದ್ದು, ಕಾರಿನ ಮಾಲಕ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರಿನ ಮಾಲಕರ ಗುರುತನ್ನು ಪತ್ತೆ ಹಚ್ಚಿದ್ದು ಸೋಮೇಶ್ವರ ಕೊಲ್ಯ ನಿವಾಸಿ ವಿಕ್ರಂ ಗಟ್ಟಿ ಎಂದು ಗುರುತಿಸಲಾಗಿದೆ. ಕಾರಿನ ಮಾಲಕ ವಿಕ್ರಂ ಗಟ್ಟಿ ನಾಪತ್ತೆಯಾಗಿದ್ದು ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಂಕನಾಡಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ವಿಕ್ರಂ ನಾಪತ್ತೆಯಾಗಿರುವ

ನೇತ್ರಾವತಿ ಸೇತುವೆಯಲ್ಲಿ ಅನಾಥ ಕಾರು ಪತ್ತೆ: ಮಾಲಕ ನಾಪತ್ತೆ ಶಂಕೆ Read More »

ಕರಾವಳಿ

ಕೊರೋನ ವೈರಸ್: ದ.ಕ.ಜಿಲ್ಲೆಯಲ್ಲಿ ಸತತ 10 ನೇ ದಿನವೂ ಯಾವುದೇ ಪಾಸಿಟಿವ್ ಇಲ್ಲ

ಮಂಗಳೂರು, ಎ.14: ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ಮಂಗಳವಾರ ಪ್ರಯೋಗಾಲಯದಿಂದ ಸ್ವೀಕರಿಸಲಾದ 12 ಮಂದಿಯ ವರದಿಯು ನೆಗೆಟಿವ್ ಆಗಿದೆ. ಇದರೊಂದಿಗೆ ಕಳೆದ 10 ದಿನದಿಂದ ಬಂದ ವರದಿಗಳೆಲ್ಲವೂ ನೆಗೆಟಿವ್ ಆಗಿದ್ದು, ಇದು ದ.ಕ.ಜಿಲ್ಲೆಯ ಮಟ್ಟಿಗೆ ಆಶಾದಾಯಕ ಬೆಳವಣಿಗೆಯಾಗಿದೆ. 10 ದಿನದ ಹಿಂದೆ ಅಂದರೆ ಎ.4ರವರೆಗೆ 12 ನೆ  ಪಾಸಿಟಿವ್ ವರದಿ ಬಂದಿತ್ತು. ಆ ಬಳಿಕ ಬಂದ ವರದಿಗಳೆಲ್ಲವೂ ನೆಗೆಟಿವ್ ಆಗಿದೆ. 12 ಪಾಸಿಟಿವ್‌ಗಳ ಪೈಕಿ 9 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇನ್ನೂ 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನ ವೈರಸ್: ದ.ಕ.ಜಿಲ್ಲೆಯಲ್ಲಿ ಸತತ 10 ನೇ ದಿನವೂ ಯಾವುದೇ ಪಾಸಿಟಿವ್ ಇಲ್ಲ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕೊರೋನಾ ಲಾಕ್‌ಡೌನ್ ಎಫೆಕ್ಟ್ ➤ ನೆಟ್ಟಣದ ಕಲಾ ಫ್ಯಾನ್ಸಿ ವತಿಯಿಂದ 33 ಕುಟುಂಬಗಳಿಗೆ ದಿನಸಿ ಸಾಮಾಗ್ರಿ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಎ.14. ಕೊರೋನಾ ಮಹಾಮಾರಿ ದೇಶದೆಲ್ಲೆಡೆ ವ್ಯಾಪಿಸಿರುವ ನಡುವೆಯೇ ಆರ್ಥಿಕ ಸಂಕಷ್ಟದಲ್ಲಿರುವ ಬಡ ಜನತೆಗೆ ದಿನಬಳಕೆಯ ಸಾಮಾಗ್ರಿಗಳನ್ನು ನೀಡುವ ಪರ್ವ ಆರಂಭಗೊಂಡಿದೆ. ಅದರಂತೆ ಕಡಬ ತಾಲೂಕಿನ ನೆಟ್ಟಣ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಕಲಾ ಫ್ಯಾನ್ಸಿ ಸ್ಟೋರ್ ವತಿಯಿಂದ ನೆಟ್ಟಣ ಪರಿಸರದ ಕೊರೊನಾ ವೈರಸ್ ನ ಮಹಾಮಾರಿಯಿಂದಾಗಿ ಕಷ್ಟದಲ್ಲಿರುವ ಅತೀ ಕಡುಬಡವರಾದ 33 ಕುಟುಂಬಗಳಿಗೆ ಅಕ್ಕಿ ಮತ್ತು ಇತರ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಕಡಬ ಕಂದಾಯ ನಿರೀಕ್ಷಕರಾದ ಅವೀನ್ ರಂಗತ್ತಮಲೆ ಮತ್ತು ಊರಿನ ಗಣ್ಯರ ಸಮ್ಮುಖದಲ್ಲಿ

ಕೊರೋನಾ ಲಾಕ್‌ಡೌನ್ ಎಫೆಕ್ಟ್ ➤ ನೆಟ್ಟಣದ ಕಲಾ ಫ್ಯಾನ್ಸಿ ವತಿಯಿಂದ 33 ಕುಟುಂಬಗಳಿಗೆ ದಿನಸಿ ಸಾಮಾಗ್ರಿ ವಿತರಣೆ Read More »

ಕರಾವಳಿ

ಕಡಬ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಮಿತದರದ ತರಕಾರಿ ಮಾರಾಟ ➤ ಸೊಸೈಟಿ, ಬ್ಯಾಂಕುಗಳ ಮುಂದೆ ಸರತಿ ಸಾಲು

(ನ್ಯೂಸ್ ಕಡಬ) newskadaba.com ಕಡಬ, ಎ.13. ನಿರಂತರವಾಗಿ ಮೂರು ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಕಡಬದ ಪ್ರಮುಖ ಬ್ಯಾಂಕುಗಳ ಮುಂಭಾಗದಲ್ಲಿ ಜನಜಂಗುಳಿ ಇದ್ದು, ಸರತಿ ಸಾಲಿನಲ್ಲಿ ಗ್ರಾಹಕರು ಕಾಯುತ್ತಿದ್ದ ದೃಶ್ಯ ಸೋಮವಾರದಂದು ಕಂಡುಬಂತು. ಕೆಲಸವಿಲ್ಲದೆ ಗ್ರಾಹಕರು ಕಂಗಾಲಾಗಿದ್ದು, ದಿನಸಿ ಸಾಮಾಗ್ರಿಗಳ ಖರೀದಿಗೆ ಮಧ್ಯಮ ವರ್ಗದ ಜನತೆ ತಲೆ ಮೇಲೆ ಕೈ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ಜನತೆಗೆ ಸರಕಾರದಿಂದ ಪಡಿತರ, ದಾನಿಗಳಿಂದ ಸಹಾಯದ ರೂಪದಲ್ಲಿ ಪಡಿತರ ಕಿಟ್ ದೊರೆತರೆ ಮಧ್ಯಮ ವರ್ಗದ ಜನತೆ ಬ್ಯಾಂಕ್

ಕಡಬ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಮಿತದರದ ತರಕಾರಿ ಮಾರಾಟ ➤ ಸೊಸೈಟಿ, ಬ್ಯಾಂಕುಗಳ ಮುಂದೆ ಸರತಿ ಸಾಲು Read More »

ಕರಾವಳಿ

ಲಾಕ್ ಡೌನ್ ಎಫೆಕ್ಟ್ ➤ 40 ಬಡ ಕುಟುಂಬಗಳಿಗೆ ಅಗತ್ಯ ಸಾಮಗ್ರಿ ನೀಡಿದ ಪ್ರಕಾಶ್ ಎನ್.ಕೆ.

(ನ್ಯೂಸ್ ಕಡಬ) newskadaba.com ಕಡಬ, ಎ.11. ಕೊರೋನಾ ವೈರಸ್ ಮುಂಜಾಗ್ರತ ಕ್ರಮವಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಇದರ ಪರಿಣಾಮ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ. ದುಡಿದು ಜೀವನ ಸಾಗಿಸುವ ಜನರಿಗೆ ಜೀವನ ನಿರ್ವಹಣೆಗೆ ಅಡಚಣೆ ಆಗಬಾರದೆನ್ನುವ ಇರಾದೆಯಲ್ಲಿ ಕಡಬದ ಬಿಜೆಪಿ ಯುವ ಮುಖಂಡ, ಸಾಮಾಜಿಕ ಮುಂದಾಳು ಪ್ರಕಾಶ್ ಎನ್.ಕೆ. ಅವರು ಕೋಡಿಂಬಾಳ ಗ್ರಾಮದ ಬೆದ್ರಾಜೆ ಕಾಲೊನಿಯ 40 ಬಡ ಕುಟುಂಬಗಳಿಗೆ ಅಕ್ಕಿ ಮತ್ತು ಅಗತ್ಯ ವಸ್ತುಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ನೀಡಿ ತುರ್ತು ಸಂದರ್ಭದಲ್ಲಿ

ಲಾಕ್ ಡೌನ್ ಎಫೆಕ್ಟ್ ➤ 40 ಬಡ ಕುಟುಂಬಗಳಿಗೆ ಅಗತ್ಯ ಸಾಮಗ್ರಿ ನೀಡಿದ ಪ್ರಕಾಶ್ ಎನ್.ಕೆ. Read More »

ಕರಾವಳಿ
Scroll to Top