ಕರಾವಳಿ

ಕಡಬದ SES ಫ್ರೂಟ್ಸ್ & ವೆಜಿಟಬಲ್ಸ್ ನಲ್ಲಿ ಭರ್ಜರಿ ‘ಫ್ರೂಟ್ಸ್ ಮೇಳ’ ➤ 100 ರೂ.ಗೆ 5 ಕಲ್ಲಂಗಡಿ, ದಾಳಿಂಬೆ ಕೆಜಿಗೆ 40 ರೂ.

(ನ್ಯೂಸ್ ಕಡಬ) newskadaba.com ಕಡಬ, ಮೇ.07. ಕಡಬದ ಪೋಸ್ಟ್ ಆಫೀಸ್ ಬಳಿಯ ಎಸ್.ಇ.ಎಸ್. ಫ್ರೂಟ್ಸ್ & ವೆಜಿಟೇಬಲ್ಸ್ ನಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಆದಾಯವಿಲ್ಲದಿರುವ ಜನರಿಗಾಗಿ ಕನಿಷ್ಟ ಲಾಭದ ಹಣ್ಣು ಹಂಪಲು ವ್ಯಾಪಾರ ನಡೆಯಲಿದೆ. ಕಪ್ಪು ದ್ರಾಕ್ಷಿ – 2 ಕೆಜಿಗೆ 100 ರೂ., ಕಲ್ಲಂಗಡಿ 5ಕ್ಕೆ 100 ರೂ., ದ್ರಾಕ್ಷಿ ಸೀಡ್ಲೆಸ್ 2 ಕೆಜಿಗೆ 100 ರೂ., ಮೂಸಂಬಿ 5 ಕೆಜಿಗೆ 100 ರೂ., ಶಮಾಮ್ 4 ಕೆಜಿಗೆ 100 ರೂ., ದಾಳಿಂಬೆ -1 ಕೆಜಿಗೆ […]

ಕಡಬದ SES ಫ್ರೂಟ್ಸ್ & ವೆಜಿಟಬಲ್ಸ್ ನಲ್ಲಿ ಭರ್ಜರಿ ‘ಫ್ರೂಟ್ಸ್ ಮೇಳ’ ➤ 100 ರೂ.ಗೆ 5 ಕಲ್ಲಂಗಡಿ, ದಾಳಿಂಬೆ ಕೆಜಿಗೆ 40 ರೂ. Read More »

ಕರಾವಳಿ

ತಪ್ಪು ಮಾಹಿತಿಯಿಂದ ನಡೆದುಕೊಂಡೇ ಊರಿಗೆ ಹೊರಟ ಜಾರ್ಖಂಡ್ ನ ಕಾರ್ಮಿಕರು ➤ ಮನವೊಲಿಸಿ ಮರಳಿ ಕಳುಹಿಸಿದ ಕಡಬ ಆರ್.ಐ. ಅವಿನ್ ರಂಗತ್ತಮಲೆ

(ನ್ಯೂಸ್ ಕಡಬ) newskadaba.com ಕಡಬ, ಮೇ.07. ಸುಬ್ರಹ್ಮಣ್ಯದಲ್ಲಿ ತಂಗಿದ್ದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರ ಪೈಕಿ ಸುಮಾರು‌ ಹತ್ತು ಜನರ ತಂಡವೊಂದು ನಡೆದುಕೊಂಡು ತೆರಳುತ್ತಿರುವ ಮಾಹಿತಿ ಅರಿತ ಕಡಬದ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆಯವರು ತಕ್ಷಣವೇ ಊಟದ ವ್ಯವಸ್ಥೆ ಕಲ್ಪಿಸಿ ಮರಳಿ ಸುಬ್ರಹ್ಮಣ್ಯಕ್ಕೆ ಕರೆದೊಯ್ದು ಬಿಟ್ಟ ಘಟನೆ ಬುಧವಾರದಂದು ನಡೆದಿದೆ. ಮಂಗಳೂರಿನಿಂದ‌ ಜಾರ್ಖಂಡ್ ಗೆ ರೈಲು ತೆರಳಲಿದೆ‌ ಎಂಬ ತಪ್ಪು ಮಾಹಿತಿಯಿಂದಾಗಿ ಸುಬ್ರಹ್ಮಣ್ಯದಲ್ಲಿ ತಂಗಿದ್ದ‌ ಹತ್ತರಷ್ಟು ವಲಸೆ ಕಾರ್ಮಿಕರು ನಡೆದುಕೊಂಡೇ ಮಂಗಳೂರಿಗೆಂದು ತೆರಳುತ್ತಿದ್ದರು. ಈ ವೇಳೆ ಮಾಹಿತಿ

ತಪ್ಪು ಮಾಹಿತಿಯಿಂದ ನಡೆದುಕೊಂಡೇ ಊರಿಗೆ ಹೊರಟ ಜಾರ್ಖಂಡ್ ನ ಕಾರ್ಮಿಕರು ➤ ಮನವೊಲಿಸಿ ಮರಳಿ ಕಳುಹಿಸಿದ ಕಡಬ ಆರ್.ಐ. ಅವಿನ್ ರಂಗತ್ತಮಲೆ Read More »

ಕರಾವಳಿ

ಆತೂರು: ಮೆಸ್ಕಾಂ ಮೀಟರ್ ರೀಡರ್ ಗೆ ಹಲ್ಲೆ ➤ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ,‌ ಮೇ.07. ಉಪ್ಪಿನಂಗಡಿ ಮೆಸ್ಕಾಂ ಕಛೇರಿಯ ಗುತ್ತಿಗೆ ಅಧಾರದಲ್ಲಿ ಮೀಟರ್ ರೀಡರ್ ಓರ್ವರಿಗೆ ವೃತ್ತಿ ನಿರ್ವಹಿಸುತ್ತಿದ್ದ ಸಂದರ್ಭ ವ್ಯಕ್ತಿಯೋರ್ವರು ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದ್ದು ಬುಧವಾರ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಆಲಂಕಾರು ಕಕ್ವೆ ನಿವಾಸಿ ಶಿವಣ್ಣ ಗೌಡ ಹಲ್ಲೆಗೊಳಗಾದವರು. ಕೊಯಿಲ ಗ್ರಾಮದ ಆತೂರು ನಿವಾಸಿ ಯೂಸುಫ್ ಎಂಬವರ ಮನೆಯ ಮೀಟರ್ ರೀಡಿಂಗ್ ನಡೆಸಿ ರಸೀದಿಯನ್ನು ಮನೆಯಲ್ಲಿದ್ದ ಹಮೀದ್ ಎಂಬವರಿಗೆ ನೀಡಿದ್ದು, ಈ ಸಂದರ್ಭ ಬಿಲ್ಲು ಹೆಚ್ಚು ನೀಡಿದ್ದೀರಿ ಎಂದು

ಆತೂರು: ಮೆಸ್ಕಾಂ ಮೀಟರ್ ರೀಡರ್ ಗೆ ಹಲ್ಲೆ ➤ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಆಲಂಕಾರು: ಗಾಳಿ – ಮಳೆಗೆ ನೆಲಕಚ್ಚಿದ ಬಾಳೆ ತೋಟ ➤ 1500 ಬಾಳೆ ಗಿಡಗಳು ನಾಶ – ಲಕ್ಷಾಂತರ ರೂ.‌ ನಷ್ಟ

ಆಲಂಕಾರು, ಮೇ.06. ಮಂಗಳವಾರ ಬೀಸಿದ ಭಾರಿ ಗಾಳಿ ಮಳೆಗೆ ಆಲಂಕಾರು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಕೃಷಿ ಹಾಗೂ ಮನೆಗಳಿಗೆ ಹಾನಿ ಉಂಟಾಗಿದೆ. ಸಂಜೆ ವೇಳೆ ಸುಮಾರು ಅರ್ಧ ಗಂಟೆ ಬೀಸಿದ ಗಾಳಿ ಅಪಾರ ಪ್ರಮಾಣದ ಅಡಿಕೆ ಮರಗಳನ್ನು ತೆಂಗಿನ ಮರ ಸೇರಿದಂತೆ ವಿದ್ಯುತ್ ಕಂಬಗಳನ್ನು ಧರೆಗೆ ಉರುಳಿಸಿದ್ದು ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.   ಆಲಂಕಾರು ಗ್ರಾಮದ ಕೊಂಡಾಡಿ ಅವಿನಾಶ್ ಭಟ್‍ಗೆ ಸೇರಿದ ಬಾಳೆ ತೋಟದ 1500 ಅಧಿಕ ಬಾಳೆ ಗಿಡಗಳು ನೆಲಕ್ಕುರುಳಿದ್ದು ಲಕ್ಷಾಂತರ ರೂಪಯಿ ನಷ್ಟ ಸಂಭವಿಸಿದೆ.

ಆಲಂಕಾರು: ಗಾಳಿ – ಮಳೆಗೆ ನೆಲಕಚ್ಚಿದ ಬಾಳೆ ತೋಟ ➤ 1500 ಬಾಳೆ ಗಿಡಗಳು ನಾಶ – ಲಕ್ಷಾಂತರ ರೂ.‌ ನಷ್ಟ Read More »

ಕರಾವಳಿ

ಮಂಗಳೂರಿನಲ್ಲಿ ಮತ್ತೆ ಮೂವರಿಗೆ ಕೊರೋನಾ ಪಾಸಿಟಿವ್ ➤ ಕರಾವಳಿಯಲ್ಲಿ ನಿಲ್ಲದ ಕೊರೋನಾ ಆತಂಕ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.06. ಮಂಗಳೂರಿನಲ್ಲಿ ಕೊರೋನಾ ಆತಂಕ ಮತ್ತೆ ಮುಂದುವರಿದಿದ್ದು, ಇಂದು ಮೂರು ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಇಬ್ಬರು ಬಾಲಕಿಯರು ಮತ್ತು ಓರ್ವ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಬಂಟ್ವಾಳ ಕಸಬಾದ P-390 ಮೃತ ಮಹಿಳೆಯ 16 ವರ್ಷದ ಪುತ್ರಿಗೆ ಸೋಂಕು ಧೃಡಪಟ್ಟಿದೆ. ಮಂಗಳೂರಿನ ಬೋಳೂರಿನ P-536 ಸಂಪರ್ಕದಿಂದ 11 ವರ್ಷದ ಬಾಲಕಿ ಮತ್ತು 35 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಇನ್ನು ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಮಂಗಳೂರಿನಲ್ಲಿ ಕೊರೊನಾ

ಮಂಗಳೂರಿನಲ್ಲಿ ಮತ್ತೆ ಮೂವರಿಗೆ ಕೊರೋನಾ ಪಾಸಿಟಿವ್ ➤ ಕರಾವಳಿಯಲ್ಲಿ ನಿಲ್ಲದ ಕೊರೋನಾ ಆತಂಕ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕುಡಿದ ಮತ್ತಿನಲ್ಲಿ ಹಾವನ್ನು ಕಚ್ಚಿ ಕೊಂದ ಭೂಪ

? ವೀಡಿಯೋ | Video ?? ಕುಡಿದ ಮತ್ತಿನಲ್ಲಿ ಹಾವನ್ನು ಕಚ್ಚಿ ಕೊಂದ ಭೂಪ ➤ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ವೀಡಿಯೋ ನೋಡಲು??ಕ್ಲಿಕ್‌ ಮಾಡಿ

ಕುಡಿದ ಮತ್ತಿನಲ್ಲಿ ಹಾವನ್ನು ಕಚ್ಚಿ ಕೊಂದ ಭೂಪ Read More »

ಕರಾವಳಿ

ಪುತ್ತೂರು: 407 ಟೆಂಪೋ ಮೇಲೆ ಉರುಳಿ ಬಿದ್ದ ಬೃಹತ್ ಮರ ➤ ಸಾಲಾಗಿ ಉರುಳಿ ಬಿದ್ದ ವಿದ್ಯುತ್ ಕಂಬಗಳು

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.05. 407 ಟೆಂಪೋವೊಂದರ ಮೇಲೆ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದ ಪರಿಣಾಮ ಟೆಂಪೋ ಜಖಂಗೊಂಡ ಘಟನೆ ಸುಬ್ರಹ್ಮಣ್ಯ – ಪುತ್ತೂರು ಹೆದ್ದಾರಿಯ ಬೆದ್ರಾಳ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಪುತ್ತೂರು ಕಡೆಗೆ ಅಡುಗೆ ಅನಿಲದ ಸಿಲಿಂಡರ್ ಹೇರಿಕೊಂಡು ಹೋಗುತ್ತಿದ್ದ ಟೆಂಪೋದ ಮೇಲೆ ಬೆದ್ರಾಳ ರೈಲ್ವೇ ಮೇಲ್ಸೇತುವೆ ಸಮೀಪ ಮರ ಬಿದ್ದಿದೆ. ಘಟನೆಯಲ್ಲಿ ವಿದ್ಯುತ್ ಕಂಬಗಳು ಸಾಲಾಗಿ ರಸ್ತೆಗೆ ಉರುಳಿವೆ. ಟೆಂಪೋ ಚಾಲಕ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.  

ಪುತ್ತೂರು: 407 ಟೆಂಪೋ ಮೇಲೆ ಉರುಳಿ ಬಿದ್ದ ಬೃಹತ್ ಮರ ➤ ಸಾಲಾಗಿ ಉರುಳಿ ಬಿದ್ದ ವಿದ್ಯುತ್ ಕಂಬಗಳು Read More »

ಕರಾವಳಿ

ಕಡಬ ತಾಲೂಕಿನಲ್ಲಿ ಗಾಳಿ – ಮಳೆಯ ರೌದ್ರಾವತಾರ ➤ ಅಪಾರ ಕೃಷಿ ನಾಶ, ಧರೆಗುರುಳಿದ ವಿದ್ಯುತ್ ಕಂಬಗಳು

(ನ್ಯೂಸ್ ಕಡಬ) newskadaba.com ಕಡಬ, ಮೇ.05. ಮಂಗಳವಾರ ಸಂಜೆ ಸುರಿದ‌ ಗುಡುಗು ಸಹಿತ ಭಾರೀ ಮಳೆಗೆ ಕಡಬ ತಾಲೂಕಿನ ವಿವಿಧೆಡೆ ಹಲವು ಮನೆಗಳಿಗೆ, ವಿದ್ಯುತ್ ಕಂಬಗಳು ಸೇರಿದಂತೆ ಅಪಾರ ಕೃಷಿ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಕಡಬ ತಾಲೂಕಿನ ಪೆರಾಬೆ ಗ್ರಾಮದ ಕೋಚಕಟ್ಟೆ ಎಂಬಲ್ಲಿನ ಮೈಮೂನ, ಹಂಝ ಕೋಚಕಟ್ಟೆ, ಹಮೀದ್, ಅಶ್ರಫ್ ಚಿಕನ್, ಮೈಮೂನ ಎಂಬವರ ಮನೆಗೆ ಹಾನಿಯಾಗಿದೆ. ಆಲಂಕಾರು ಜಂಕ್ಷನ್ ನಲ್ಲಿನ ಅಂಗಡಿಯೊಂದರ ಮೇಲ್ಛಾವಣಿ ಹಾರಿ ಹೋಗಿದೆ. ಕೋಚಕಟ್ಟೆ ನೂರುಲ್‌ ಹುದಾ ಮದರಸದ ಶೆಡ್

ಕಡಬ ತಾಲೂಕಿನಲ್ಲಿ ಗಾಳಿ – ಮಳೆಯ ರೌದ್ರಾವತಾರ ➤ ಅಪಾರ ಕೃಷಿ ನಾಶ, ಧರೆಗುರುಳಿದ ವಿದ್ಯುತ್ ಕಂಬಗಳು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಸುಳ್ಯ, ಬೆಳ್ಳಾರೆ ಪರಿಸರದಲ್ಲೂ ಗುಡುಗು ಮಿಶ್ರಿತ ಭಾರೀ ಗಾಳಿ ಮಳೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.05. ಮಂಗಳವಾರ ಸಂಜೆ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧೆಡೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆಯಾಗಿದೆ.   ಸುಳ್ಯ, ಬೆಳ್ಳಾರೆ, ಸವಣೂರು, ಕಡಬ, ಮರ್ಧಾಳ, ಬಿಳಿನೆಲೆ, ಪಂಜ, ನೆಲ್ಯಾಡಿ, ಇಚಿಲಂಪಾಡಿ, ‌ಆಲಂಕಾರು, ಆತೂರು ಪರಿಸರದಲ್ಲಿ ಭಾರೀ ಗಾಳಿ ಬೀಸಿದ್ದು, ಹಲವೆಡೆ ಹಾನಿಯಾಗಿರುವ ಸಂಭವವಿದೆ. ಸುಬ್ರಹ್ಮಣ್ಯದಲ್ಲಿ ಗುಡುಗು ಮಿಶ್ರಿತ ಮಳೆಯಾಗಿದ್ದು ಗಾಳಿಯ ರಭಸವು ಕಡಿಮೆಯಾಗಿತ್ತು.

ಸುಳ್ಯ, ಬೆಳ್ಳಾರೆ ಪರಿಸರದಲ್ಲೂ ಗುಡುಗು ಮಿಶ್ರಿತ ಭಾರೀ ಗಾಳಿ ಮಳೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ, ನೆಲ್ಯಾಡಿ ಪರಿಸರದಲ್ಲಿ ಗುಡುಗು ಮಿಶ್ರಿತ ಭಾರೀ ಗಾಳಿ ಮಳೆ ➤ ಸುಬ್ರಹ್ಮಣ್ಯದಲ್ಲಿ ಸಾಧಾರಣ ಮಳೆ

(ನ್ಯೂಸ್ ಕಡಬ) newskadaba.com ಕಡಬ, ಮೇ.05. ಮಂಗಳವಾರ ಸಂಜೆ ಕಡಬ ತಾಲೂಕಿನ ವಿವಿಧೆಡೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆಯಾಗಿದೆ. ಕಡಬ, ಮರ್ಧಾಳ, ಬಿಳಿನೆಲೆ, ಪಂಜ, ನೆಲ್ಯಾಡಿ, ಇಚಿಲಂಪಾಡಿ, ‌ಆಲಂಕಾರು, ಆತೂರು ಪರಿಸರದಲ್ಲಿ ಭಾರೀ ಗಾಳಿ ಬೀಸಿದ್ದು, ಹಲವೆಡೆ ಹಾನಿಯಾಗಿರುವ ಸಂಭವವಿದೆ. ಹಾನಿಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಸುಬ್ರಹ್ಮಣ್ಯದಲ್ಲಿ ಗುಡುಗು ಮಿಶ್ರಿತ ಮಳೆಯಾಗಿದ್ದು ಗಾಳಿಯ ರಭಸವು ಕಡಿಮೆಯಾಗಿತ್ತು.

ಕಡಬ, ನೆಲ್ಯಾಡಿ ಪರಿಸರದಲ್ಲಿ ಗುಡುಗು ಮಿಶ್ರಿತ ಭಾರೀ ಗಾಳಿ ಮಳೆ ➤ ಸುಬ್ರಹ್ಮಣ್ಯದಲ್ಲಿ ಸಾಧಾರಣ ಮಳೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top