ಕರಾವಳಿ

ಮೇ 18ರಂದು ಯುಎಇಯಿಂದ 2ನೇ ವಿಮಾನ ಮಂಗಳೂರಿಗೆ

ಮಂಗಳೂರು, ಮೇ 15: ದುಬೈನಿಂದ ಅನಿವಾಸಿ ಕನ್ನಡಿಗರನ್ನು ಹೊತ್ತ ವಿಮಾನವು ಮೇ 18ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಜಿಲ್ಲಾಧಿಕಾರಿ ಪ್ರಾಥಮಿಕ ವರದಿಯ ಪ್ರಕಾರ 171 ಮಂದಿ ಪ್ರಯಾಣಿಕರು ಈ ವಿಮಾನದಲ್ಲಿ ಆಗಮಿಸಲಿದ್ದು, ಅವರೆಲ್ಲ ಯಾವ ಜಿಲ್ಲೆಗೆ ಸೇರಿದ್ದಾರೆಂದು ತಿಳಿದಿಲ್ಲ. ಆದರೆ ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ನಿಯಮದ ಪ್ರಕಾರ ತಮ್ಮದೆ ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್‌ಗೊಳಪಡುವ ಷರತ್ತಿಗೆ ಒಪ್ಪಿಕೊಂಡೇ ಆಗಮಿಸುತ್ತಿದ್ದಾರೆ ಎಂದು […]

ಮೇ 18ರಂದು ಯುಎಇಯಿಂದ 2ನೇ ವಿಮಾನ ಮಂಗಳೂರಿಗೆ Read More »

ಕರಾವಳಿ

ಖ್ಯಾತ ವೈದ್ಯ ಡಾ| ಸುಗುಣ ಗೌಡ ಮಿತ್ತಮಜಲು ನಿಧನ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.15. ಸುಳ್ಯದ ಖ್ಯಾತ ವೈದ್ಯರಾಗಿದ್ದ ಡಾ. ಸುಗುಣ ಗೌಡ ಮಿತ್ತಮಜಲು (75) ಇಂದು ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸುಳ್ಯದ ಶ್ರೀರಾಮ ಪೇಟೆಯಲ್ಲಿ ಕ್ಲಿನಿಕ್ ಹೊಂದಿದ್ದ ಅವರು ಜನಪ್ರಿಯ ವೈದ್ಯರಾಗಿದ್ದರು. ಲಯನ್ಸ್ ಕ್ಲಬ್ ನಲ್ಲಿ ಸಕ್ರಿಯರಾಗಿದ್ದ ಅವರು ಲಯನ್ ಸುಗುಣ ಗೌಡ ರೆಂದೇ ಹೆಸರು ವಾಸಿಯಾಗಿದ್ದರು. ಇತ್ತೀಚೆಗಿನ ಹಲವು ವರ್ಷಗಳಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಮೃತರು ಪುತ್ರರಾದ ಹರ್ಷವರ್ಧನ್, ವಿಷ್ಣುವರ್ಧನ್, ಪುತ್ರಿ ಗೀತಾ

ಖ್ಯಾತ ವೈದ್ಯ ಡಾ| ಸುಗುಣ ಗೌಡ ಮಿತ್ತಮಜಲು ನಿಧನ Read More »

ಕರಾವಳಿ

Breaking news ದುಬೈಯಿಂದ ಉಡುಪಿಗೆ ಬಂದ 6 ಮಂದಿಗೆ ಕೊರೋನ ಸೋಂಕು ದೃಢ: ಡಿಎಚ್ಒ

ಉಡುಪಿ, ಮೇ 15: ದುಬೈಯಿಂದ ಮೇ 12 ರಂದು ಉಡುಪಿಗೆ ಆಗಮಿಸಿದ 49 ಮಂದಿಯ ಪೈಕಿ ಆರು ಮಂದಿಗೆ ಕೊರೋನ ಸೋಂಕು ದೃಢಪಟ್ಟಿರುವುದಾಗಿ ಉಡುಪಿ ಡಿಎಚ್ಒ ಡಾ.ಸುದೀರ್ ಚಂದ್ರ ಚೂಡ ತಿಳಿಸಿದ್ದಾರೆ. ಕೊರೋನ-ಲಾಕ್‌ಡೌನ್‌ನಲ್ಲಿ ಅತಂತ್ರರಾದ ಹಿನ್ನೆಲೆಯಲ್ಲಿ ದುಬೈಯಿಂದ 176 ಮಂದಿ ಅನಿವಾಸಿ ಕನ್ನಡಿಗರನ್ನು  ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಕರೆತರಲಾಗಿತ್ತು. ಈ ಪೈಕಿ ಉಡುಪಿಯ 49 ಮಂದಿ ಇದ್ದರು. ಇವರನ್ನು ಉಡುಪಿಯ ಹೊಟೇಲ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಆರು ಮಂದಿಯ ವರದಿ ಪಾಸಿಟಿವ್ ಬಂದಿರುವುದರಿಂದ ಉಡುಪಿಯ ಟಿಎಂಪೈ ಕೋವಿಡ್

Breaking news ದುಬೈಯಿಂದ ಉಡುಪಿಗೆ ಬಂದ 6 ಮಂದಿಗೆ ಕೊರೋನ ಸೋಂಕು ದೃಢ: ಡಿಎಚ್ಒ Read More »

ಕರಾವಳಿ

ಉಡುಪಿ: ಮೇ 18ರಿಂದ ಸೆಲೂನ್ ಆರಂಭ

ಉಡುಪಿ, ಮೇ 14: ಜಿಲ್ಲೆಯಾದ್ಯಂತ ಮೇ 18ರಿಂದ ಸೆಲೂನುಗಳನ್ನು ಪುನರಾರಂಭಿಸಲು ಷರತ್ತು ಬದ್ದ ಅನುಮತಿ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆಯಂಗಡಿ ತಿಳಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ 13ರಂದು ಜಿಲ್ಲಾ ಸವಿತಾ ಸಮಾಜದ ನಿಯೋಗವು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸದ್ಯದ ಪರಿಸ್ಥಿತಿಗಳನ್ನು ವಿವರಿಸಿದೆ. ಕೊರೋನ ಸಮಸ್ಯೆಯಿಂದ ದೇಶವೇ ತತ್ತರಿಸುತ್ತಿದ್ದಾಗ ಲಾಕ್‌ಡೌನ್ ಮಾಡುವ ಮೂರು ದಿನಗಳ ಹಿಂದೆಯೇ ಕ್ಷೌರಿಕ ಬಂಧುಗಳು ಅಂಗಡಿಗಳನ್ನು ಮುಚ್ಚಿ ಬೆಂಬಲವನ್ನು

ಉಡುಪಿ: ಮೇ 18ರಿಂದ ಸೆಲೂನ್ ಆರಂಭ Read More »

ಕರಾವಳಿ

ಮೂಡುಬಿದಿರೆ: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ಮೂಡುಬಿದಿರೆ, ಮೇ 14: ತಾಲೂಕಿನ ತೋಡಾರಿನಲ್ಲಿ ನಿರ್ಮಾಣ ಹಂತದ ಕಟ್ಟಡದ 5ನೇ ಮಹಡಿಯಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವಕನನ್ನು ತೋಡಾರು ಪಡೀಲ್ ಬಾಕಿಯಾರು ನಿವಾಸಿ ವಿನಯ್ ಪೂಜಾರಿ (32) ಎಂದು ಗುರುತಿಸಲಾಗಿದೆ. ಈತ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ವೇಳೆ, 5ನೇ ಮಹಡಿಯಿಂದ ಆಯ ತಪ್ಪಿಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಮೂಡುಬಿದಿರೆ: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಕೊರೋನಾ ಸೋಂಕಿಗೆ ಐದನೇ ಬಲಿ ➤ 80 ವರ್ಷದ ವೃದ್ಧೆ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.14. ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಐದನೇ ಬಲಿಯಾಗಿದ್ದು, ಮಂಗಳೂರಿನ ಕುಲಶೇಖರ ನಿವಾಸಿ 80 ವರ್ಷದ ಮಹಿಳೆ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮಹಿಳೆಯು ಅನಾರೋಗ್ಯದ‌ ಹಿನ್ನೆಲೆಯಲ್ಲಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಫಸ್ಟ್ ನ್ಯೂರೋ ಸಂಪರ್ಕದಿಂದ ಮಹಿಳೆಗೆ ಕೊರೋನಾ ಹರಡಿದ್ದರಿಂದ ಆ ಬಳಿಕ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರವಷ್ಟೇ 58 ವರ್ಷದ ಮಹಿಳೆಯೋರ್ವರು ಮೃತಪಟ್ಟಿದ್ದು, ಇದರೊಂದಿಗೆ ದಕ್ಷಿಣ ಕನ್ನಡದಲ್ಲಿ ಐವರ ಬಲಿಯಾಗಿದೆ.

ಮಂಗಳೂರಿನಲ್ಲಿ ಕೊರೋನಾ ಸೋಂಕಿಗೆ ಐದನೇ ಬಲಿ ➤ 80 ವರ್ಷದ ವೃದ್ಧೆ ಮೃತ್ಯು Read More »

ಕರಾವಳಿ

ಅಧಿಕಾರಿಗಳ, ರಾಜಕೀಯ ವ್ಯಕ್ತಿಗಳ ಹೆಸರೇಳಿ ಹಣ ವಸೂಲಿ: ವಾಟ್ಸ್‌ಆ್ಯಪ್ ಅಡ್ಮಿನ್ ಬಂಧನ

ಮಂಗಳೂರು, ಮೇ 13: ಪೊಲೀಸ್ ಅಧಿಕಾರಿಗಳು, ಮಾಧ್ಯಮದವರ ಹಾಗೂ ರಾಜಕೀಯ ವ್ಯಕ್ತಿಗಳ ಹೆಸರನ್ನು ಹೇಳಿ ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಕನಕ ವಾಟ್ಸ್‌ಆ್ಯಪ್ ಗ್ರೂಪ್‌ನ ಅಡ್ಮಿನ್‌ನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳ್ತಂಗಡಿಯ ಪುತ್ತಿಲ ಗ್ರಾಮದ ಕುಂಡಡ್ಕ ಮನೆ ನಿವಾಸಿ ಅಬ್ದುರ್ರಶೀದ್ ಯಾನೆ ರಶೀದ್ ಕುಂಡಡ್ಕ (39) ಎಂದು ಗುರುತಿಸಲಾಗಿದೆ. ಈತ ಕುಖ್ಯಾತ ರೌಡಿ ಹಾಗೂ ಜ್ಯುವೆಲ್ಲರಿ ದರೋಡೆ ಪ್ರಕರಣವೊಂದರಲ್ಲಿನ ಪ್ರಮುಖ ಆರೋಪಿ ಮುತ್ತಾಸಿಮ್ ಯಾನೆ ತಸ್ಲಿಂ ಎಂಬಾತನ ಕೊಲೆ ಪ್ರಕರಣದಲ್ಲಿರುವ ವ್ಯಕ್ತಿಯೊಬ್ಬನ ಹೆಸರನ್ನು

ಅಧಿಕಾರಿಗಳ, ರಾಜಕೀಯ ವ್ಯಕ್ತಿಗಳ ಹೆಸರೇಳಿ ಹಣ ವಸೂಲಿ: ವಾಟ್ಸ್‌ಆ್ಯಪ್ ಅಡ್ಮಿನ್ ಬಂಧನ Read More »

ಕರಾವಳಿ

ಕಡಬದ ಮದ್ಯದಂಗಡಿಯಲ್ಲಿ ಹೆಚ್ಚುವರಿ ದರ ವಸೂಲಿ ➤ ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ದಾಳಿ ➤ ಮಾರುವೇಶದಲ್ಲಿ ಕಾರ್ಯಾಚರಣೆ ನಡೆಸಿದ ಕಡಬದ ಪತ್ರಕರ್ತ

(ನ್ಯೂಸ್ ಕಡಬ) newskadaba.com ಕಡಬ, ಮೇ.13. ಸರಕಾರಿ ಸ್ವಾಮ್ಯದ ಮದ್ಯದಂಗಡಿಯಲ್ಲಿ ಹೆಚ್ಚುವರಿ ದರ ವಸೂಲು ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ದಾಳಿ ನಡೆಸಿದ ಅಬಕಾರಿ‌ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಕಡಬದ ಪಂಜ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಎಂಎಸ್ಐಲ್ ಮದ್ಯ ಮಾರಾಟ ಮಳಿಗೆಯಲ್ಲಿ ಅಧಿಕ ದರ ವಸೂಲಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕಡಬದ ಪತ್ರಕರ್ತರೋರ್ವರು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಾರುವೇಷದಲ್ಲಿ ಮದ್ಯ ಖರೀದಿಸಿದ್ದರು. ಪತ್ರಕರ್ತನಿಂದ ಅಧಿಕ ದರ ವಸೂಲಿ ಮಾಡಿದ ವೇಳೆ ದಾಳಿ‌ ನಡೆಸಿದ

ಕಡಬದ ಮದ್ಯದಂಗಡಿಯಲ್ಲಿ ಹೆಚ್ಚುವರಿ ದರ ವಸೂಲಿ ➤ ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ದಾಳಿ ➤ ಮಾರುವೇಶದಲ್ಲಿ ಕಾರ್ಯಾಚರಣೆ ನಡೆಸಿದ ಕಡಬದ ಪತ್ರಕರ್ತ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬೆಳ್ಳಾರೆ ಪಂಚಾಯತ್ ನಿರ್ಣಯ ಮದ್ಯದಂಗಡಿಗಳಿಗೆ ಅನ್ವಯವಿಲ್ಲವೇ..? ➤ ದಲಿತ ಮುಖಂಡ ಆನಂದ ಬೆಳ್ಳಾರೆ ಆಕ್ಷೇಪ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.13. ಬೆಳ್ಳಾರೆ ಗ್ರಾಮ ಪಂಚಾಯತ್ ನ‌ ನಿರ್ಣಯದಂತೆ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಗ್ಗೆ 6 ರಿಂದ ಅಪರಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿಗಳು ತೆರೆಯುತ್ತಿದ್ದು, ಆದರೆ ಪೇಟೆಯ ಹೃದಯಭಾಗದಲ್ಲಿರುವ ಮದ್ಯದಂಗಡಿಗಳಿಗೆ ಈ ನಿರ್ಣಯ ಅನ್ವಯವಾಗುವುದಿಲ್ಲವೇ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ವ್ಯಂಗವಾಡಿದ್ದಾರೆ. ವರ್ತಕರನ್ನು ಕರೆಯದೆ ಗ್ರಾಮ ಪಂಚಾಯತ್ ತನ್ನ ಏಕ ನಿರ್ಧಾರವನ್ನು ತೆಗೆದುಕೊಂಡರೂ ಕೂಡ ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸದೆ ಬೆಳ್ಳಾರೆ ಗ್ರಾಮದಲ್ಲಿ

ಬೆಳ್ಳಾರೆ ಪಂಚಾಯತ್ ನಿರ್ಣಯ ಮದ್ಯದಂಗಡಿಗಳಿಗೆ ಅನ್ವಯವಿಲ್ಲವೇ..? ➤ ದಲಿತ ಮುಖಂಡ ಆನಂದ ಬೆಳ್ಳಾರೆ ಆಕ್ಷೇಪ Read More »

ಕರಾವಳಿ

ಹಣ ಪಾವತಿಸಿ ಹೊಟೇಲ್ ಕ್ವಾರಂಟೈನ್ ಗೆ ಬಲವಂತದ ಒತ್ತಾಯ ಆರೋಪ ➤ ಅನಿವಾಸಿ ಕನ್ನಡಿಗರನ್ನು ಕರೆಸಿ ಕಮಿಷನ್ ದಂಧೆಗಿಳಿದರೇ ಅಧಿಕಾರಿಗಳು..?

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.13. ದುಬೈಯಿಂದ ಮಂಗಳೂರಿಗೆ ತಲುಪಿದ ವಿಮಾನ ಯಾತ್ರಿಕರನ್ನು ಏರ್‌ಪೋರ್ಟ್ ನಲ್ಲಿ ಬಲವಂತದ ಹೋಟೆಲ್ ಕ್ವಾರೈಂಟೇನ್ ಗೆ ಒತ್ತಾಯಿಸಿದ ಬಗ್ಗೆ ಆರೋಪಗಳು ಕೇಳಿಬಂದಿದ್ದು, ಇದರಿಂದ ಜಿಲ್ಲಾಡಳಿತದ ವೈಫಲ್ಯದ ಬಗ್ಗೆ ಅನುಮಾನ ಮೂಡಿದೆ. ಸರಕಾರ ಗುರುತಿಸಿರುವ ಉಚಿತ ಹಾಸ್ಟೆಲ್ ನಲ್ಲಿ ತಂಗಲು ನಿರ್ಧರಿಸಿದ್ದ ಸುಮಾರು 30 ರಷ್ಟು ಯಾತ್ರಾರ್ಥಿಗಳಿಂದ ಒಂದು ದಿನಕ್ಕೆ 2000/- ರೂಪಾಯಿಯಂತೆ ನೀಡಿ ಹೋಟೆಲ್ ಕ್ವಾರೈಂಟೇನ್ ಸೌಲಭ್ಯವನ್ನು ಪಡೆಯಬೇಕೆಂಬ ಕಟ್ಟುನಿಟ್ಟಿನ ಆದೇಶವನ್ನು ಪಾಲಿಸಲು ಒತ್ತಾಯಪಡಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಡಳಿತ ನಿಗದಿಪಡಿಸಿದ

ಹಣ ಪಾವತಿಸಿ ಹೊಟೇಲ್ ಕ್ವಾರಂಟೈನ್ ಗೆ ಬಲವಂತದ ಒತ್ತಾಯ ಆರೋಪ ➤ ಅನಿವಾಸಿ ಕನ್ನಡಿಗರನ್ನು ಕರೆಸಿ ಕಮಿಷನ್ ದಂಧೆಗಿಳಿದರೇ ಅಧಿಕಾರಿಗಳು..? Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top