ಕರಾವಳಿ

ಉಡುಪಿ: 13 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಮೇ 30: ಜಿಲ್ಲೆಯಲ್ಲಿಂದು 13 ಹೊಸ ಕೊರೋನ ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಇಂದಿನ ಪ್ರಕರಣಗಳ ಪೈಕಿ ಒಬ್ಬರು ತೆಲಂಗಾಣದಿಂದ ಬಂದಿದ್ದರೆ, ಉಳಿದವರೆಲ್ಲಾ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಮಹಾರಾಷ್ಟ್ರದಿಂದ ಪುಣೆಯಿಂದ ಆಗಮಿಸಿದ ಕೋಟದ ಬಾರಿಕೆರೆಯ ಮಹಿಳೆ 14 ದಿನದಿಂದ ಕುಂದಾಪುರದಲ್ಲಿ ಕ್ವಾರಂಟೈನ್ ನಲ್ಲಿದ್ದರು. ಆದರೆ ರಿಪೋರ್ಟ್ ಲಭ್ಯವಾಗುವ ಮುನ್ನವೇ ಮೇ 28 ರಂದು ಸಂಜೆ ಮನೆಗೆ ಬಂದಿದ್ದು, ಮೇ 29ರ ರಾತ್ರಿಯ ವೇಳೆಗೆ ಪಾಸಿಟಿವ್‌ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಶುಕ್ರವಾರ 15 […]

ಉಡುಪಿ: 13 ಮಂದಿಗೆ ಕೊರೋನ ಪಾಸಿಟಿವ್ Read More »

ಕರಾವಳಿ

ಜೂನ್ 15 ರಿಂದ ಮೀನುಗಾರಿಕೆ ನಿಷೇಧ ➤ ಪರಿಷ್ಕೃತ ಆದೇಶ ಪ್ರಕಟ

(ನ್ಯೂಸ್ ಕಡಬ) newskadaba.com ಉಡುಪಿ, ಮೇ .30: ಕರ್ನಾಟಕ ಕರಾವಳಿ ಮೀನುಗಾರಿಕೆ ನಿಯಂತ್ರಣ ಕಾಯ್ದೆ, ಹಾಗೂ ಕರ್ನಾಟಕ ಸರ್ಕಾರದ ಮೇ 29 ರ ಅಧಿಸೂಚನೆ ಯಂತೆ, ಉಡುಪಿ ಜಿಲ್ಲೆಯನ್ನು ಸೇರಿದಂತೆ ಕರ್ನಾಟಕದ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಎಲ್ಲಾ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ (ಹೆಚ್.ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್ಬೋರ್ಡ್ ಅಥವಾ ಔಟ್ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯ ನಿಷೇಧವನ್ನು ಪ್ರಸಕ್ತ ವರ್ಷಕ್ಕೆ ಮಾತ್ರ ಅನ್ವಯಿಸುವಂತೆ

ಜೂನ್ 15 ರಿಂದ ಮೀನುಗಾರಿಕೆ ನಿಷೇಧ ➤ ಪರಿಷ್ಕೃತ ಆದೇಶ ಪ್ರಕಟ Read More »

ಕರಾವಳಿ, ಕರ್ನಾಟಕ

ಕೊರೊನಾ ವಾರಿಯರ್ಸ್‌ಗೆ ಸಂಬಳ ನೀಡದೆ ನಿರ್ಲಕ್ಷ್ಯ ➤ ಯು.ಟಿ ಖಾದರ್‌ ಆಕ್ರೋಶ

(ನ್ಯೂಸ್ ಕಡಬ) newskadaba.com ಮಂಗಳೂರು,ಮೇ.30: ಕೊರೊನಾ ವಾರಿಯರ್ಸ್‌ಗೆ ಸಂಬಳ ನೀಡದೆಯೇ ಸರ್ಕಾರ ನಿರ್ಲಕ್ಷಿಸಿದೆ ಎಂದು ಮಾಜಿ ಸಚಿವ, ಶಾಸಕ ಯುಟಿ ಖಾದರ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಗಂಭೀರತೆ ಇಲ್ಲ. ಡಾಕ್ಟರ್ ಮತ್ತು ನರ್ಸ್‌ಗಳಿಗೆ ಎರಡು ತಿಂಗಳಿನಿಂದ ಸಂಬಳವಾಗಿಲ್ಲ. ಕೊರೊನಾ ಸೋಂಕಿನ ವಿರುದ್ಧವಾಗಿ ಈ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್‌ಗಳಿಗೆ ವೇತನ ನೀಡದೆ ಸತಾಯಿಸಿದ್ದಾರೆ. ಸರ್ಕಾರ ಕೊರೊನಾ ವಾರಿಯರ್ಸ್‌ನ್ನು ನಿರ್ಲಕ್ಷ್ಯ ಮಾಡಿದೆ

ಕೊರೊನಾ ವಾರಿಯರ್ಸ್‌ಗೆ ಸಂಬಳ ನೀಡದೆ ನಿರ್ಲಕ್ಷ್ಯ ➤ ಯು.ಟಿ ಖಾದರ್‌ ಆಕ್ರೋಶ Read More »

ಕರಾವಳಿ, ಕರ್ನಾಟಕ

ಕಡಬ ತಾಲೂಕು ಪಂಚಾಯತ್ ಪ್ರಥಮ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಮೇ. 30, ನೂತನವಾಗಿ ರಚನೆಯಾದ ಕಡಬ ತಾಲೂಕು ಪಂಚಾಯತ್ ನ ಪ್ರಥಮ ಸಭೆಯು ಕಡಬದ ಅಂಬೇಡ್ಕರ್ ಭವನದಲ್ಲಿ ಇಂದು ನಡೆಯಿತು. ಸುಳ್ಯ ಶಾಸಕರಾದ ಎಸ್.ಅಂಗಾರ ದೀಪವನ್ನು ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಕಡಬ ತಾ.ಪಂ. ಪ್ರಭಾರ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್, ಆಡಳಿತಾಧಿಕಾರಿ ಕೆ.ಆನಂದ ಕುಮಾರ್, ತಾ.ಪಂ. ಸದಸ್ಯರಾದ ಪಝಲ್ ಕೋಡಿಂಬಾಳ, ಗಣೇಶ್ ಕೈಕುರೆ, ಪಿ.ವೈ ಕುಸುಮಾ, ಆಶಾ ಲಕ್ಷ್ಮಣ್, ತೇಜಶ್ವಿನಿ, ಲಲಿತಾ

ಕಡಬ ತಾಲೂಕು ಪಂಚಾಯತ್ ಪ್ರಥಮ ಸಭೆ Read More »

ಕರಾವಳಿ

ಉಡುಪಿ ಜಿಲ್ಲೆಯಲ್ಲಿ 3 ದಿನ ಭಾರೀ ಮಳೆ ➤ ಹಳದಿ ಅಲರ್ಟ್ ಘೋಷಣೆ

(ನ್ಯೂಸ್ ಕಡಬ) newskadaba.com ಉಡುಪಿ ,ಮೇ.30: ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮೇ 31 ರಿಂದ ಮುಂದಿನ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆಯೆಂದು ಸೂಚಿಸಿರುತ್ತಾರೆ, ಉಡುಪಿ ಜಿಲ್ಲೆಯಲ್ಲಿ, ಹಳದಿ ಅಲರ್ಟ್ ಘೋಷಿಸಲಾಗಿದೆ.     ಅಂದರೆ ಸುಮಾರು 6.5 ಸೆಂ.ಮೀ ದಿಂದ 11.5 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆಯಿರುತ್ತದೆ, ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು

ಉಡುಪಿ ಜಿಲ್ಲೆಯಲ್ಲಿ 3 ದಿನ ಭಾರೀ ಮಳೆ ➤ ಹಳದಿ ಅಲರ್ಟ್ ಘೋಷಣೆ Read More »

ಕರಾವಳಿ, ಕರ್ನಾಟಕ

ಜೂ. 15ರವರೆಗೆ ಮೀನುಗಾರಿಕೆಗೆ ಕೇಂದ್ರ ಅಸ್ತು ➤ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು,ಮೇ.30: ವಿದ್ಯುತ್ ಗ್ರಾಹಕರಿಗೆ ಅಧಿಕ ಬಿಲ್ ಬಂದಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಂದಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿ, ಎರಡು ತಿಂಗಳ ಬಿಲ್ಗಳನ್ನು ಒಟ್ಟಿಗೆ ನೀಡಿದ್ದರೂ, ನಿಗದಿತ ಸರಾಸರಿ ದರಕ್ಕಿಂದ ಹೆಚ್ಚು ಮೊತ್ತದ ಬಿಲ್ ಮೆಸ್ಕಾಂ ನೀಡಿರುವುದರ ಬಗ್ಗೆ ಸಾರ್ವಜನಿಕರ ಅಸಮಾಧಾನ ತನ್ನ

ಜೂ. 15ರವರೆಗೆ ಮೀನುಗಾರಿಕೆಗೆ ಕೇಂದ್ರ ಅಸ್ತು ➤ ಕೋಟ ಶ್ರೀನಿವಾಸ ಪೂಜಾರಿ Read More »

ಕರಾವಳಿ, ಕರ್ನಾಟಕ

ಕುಕ್ಕೆಯತ್ತ ಭಕ್ತರ ಆಗಮನ ➤ ಹೊರಗಿಂದಲೇ ಕೈ ಮುಗಿಯುತ್ತಿರುವ ಭಕ್ತರು

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ,ಮೇ.30: ಕೊರೋನಾ ಮಾಹಮಾರಿ ಗೆ ತತ್ತರಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಆದ್ರೇ ಈಗ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ದೂರದ ಊರುಗಳಿಂದ ಭಕ್ರರು ಆಗಮಿಸಲು ಆರಂಭಿಸಿದ್ದಾರೆ. ಲಾಕ್ ಡೌನ್ ಘೋಷಣೆಯಾದ ಬಳಿಕ ಸಾರ್ವಜನಿಕರಿಗೆ ಮುಚ್ಚಿದ್ದ ದೇವಸ್ಥಾನ ಇನ್ನೂ ತೆರೆದಿಲ್ಲವಾದರೂ ಭಕ್ತರು ಮಾತ್ರ ಬರಲಾರಂಭಿಸಿದ್ದಾರೆ.   ಇನ್ನು, ಜೂನ್ 1 ರ ಬಳಿಕ ದೇವಸ್ಥಾನಗಳು ಮತ್ತೇ ಭಕ್ತರಿಗೆ ತೆರೆದುಕೊಳ್ಳಲಿದ್ದರೂ ಕಳೆದ ಒಂದು ವಾರದಿಂದ ಭಕ್ತರು ಬರುತ್ತಿದ್ದು ಹೊರಗಿಂದಲೇ ಕೈ

ಕುಕ್ಕೆಯತ್ತ ಭಕ್ತರ ಆಗಮನ ➤ ಹೊರಗಿಂದಲೇ ಕೈ ಮುಗಿಯುತ್ತಿರುವ ಭಕ್ತರು Read More »

ಕರಾವಳಿ, ಕರ್ನಾಟಕ

ರಾಜ್ಯದಲ್ಲಿ ನಾಳೆ ಕಫ್ರ್ಯೂ ಇರಲ್ಲ ➤ ಬಿಎಸ್ ವೈ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.30., ಕೊರೊನಾ ಹಿನ್ನಲೆಯಲ್ಲಿ ಪ್ರತಿ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡಬೇಕೆಂದು ಮುಖ್ಯಮಂತ್ರಿ ಬಿಎಸ್ ವೈ ಆದೇಶಿಸಿದ್ದರು. ಆದರೆ ಇದೀಗ ಸಾರ್ವಜನಿಕರ ಒತ್ತಾಯ ಮೇರೆಗೆ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಮೇ 31 ಭಾನುವಾರದ ಸಂಪೂರ್ಣ ಲಾಕ್‍ಡೌನ್ ಇರುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಪ್ರತಿ ದಿನದಂತೆ ಭಾನುವಾರವೂ ವಾಹನ ಸಂಚಾರ ಮಾಡಲಿದೆ. ಹೊಟೇಲ್, ಸೆಲೂನ್, ತರಕಾರಿ, ದಿನಸಿ ಅಂಗಡಿಗಳು, ಮದ್ಯದಂಗಡಿಗಳು ತೆರೆದಿರುತ್ತದೆ. ಎಂದಿನಂತೆ ರಾತ್ರಿ 7

ರಾಜ್ಯದಲ್ಲಿ ನಾಳೆ ಕಫ್ರ್ಯೂ ಇರಲ್ಲ ➤ ಬಿಎಸ್ ವೈ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಕೊರೊನಾ ವಿರುದ್ಧ ಹೋರಾಡಿ ಸಾವನ್ನು ಗೆದ್ದು ಬಂದ ಅಸ್ತಮಾ ರೋಗಿ..!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.30., ಕೊರೊನಾ… ಕೊರೊನಾ….  ಕೊರೊನಾ….. ಎಲ್ಲಿ ಹೋದರೂ ಅಲ್ಲಿ ಕೊರೊನಾದೆ ಸುದ್ಧಿ… ಅದೆಷ್ಟೋ ಮಂದಿ ಕೊರೊನಾಗೆ ಬಲಿಯಾಗಿದ್ದು, ಮತ್ತೆ ಕೆಲವರೂ ಸಾವನ್ನೂ ಗೆದ್ದು ಬಂದವರೂ ಇದ್ದಾರೆ. ಅಂತಹುದೇ ಪವಾಡ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 68 ವರ್ಷದ ವೃದ್ಧೆಯೊಬ್ಬರು ಕೊರೊನಾ ಗೆದ್ದು ಬಂದಿದ್ದಾರೆ. ಸುರತ್ಕಲ್ ಮೂಲದ 68 ವರ್ಷದ ಮಹಿಳೆ ಹೃದಯ ಸಂಬಂಧಿ ಖಾಯಿಲೆಂಯಿಂದ ಬಳಲುತ್ತಿದ್ದ ಇವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಮೇ 15ರಂದು ರಿಪೋರ್ಟಲ್ಲಿ

ಮಂಗಳೂರು: ಕೊರೊನಾ ವಿರುದ್ಧ ಹೋರಾಡಿ ಸಾವನ್ನು ಗೆದ್ದು ಬಂದ ಅಸ್ತಮಾ ರೋಗಿ..!!! Read More »

ಕರಾವಳಿ

ಉದ್ಯಾವರ ಸೇತುವೆಗೆ ಕೆಎಸ್ ಆರ್ ಟಿಸಿ ಡಿಕ್ಕಿ ➤ ಪ್ರಯಾಣಿಕರು ಅಪಾಯದಿಂದ ಪಾರು..!!!

(ನ್ಯೂಸ್ ಕಡಬ) newskadaba.com ಉಡುಪಿ, ಮೇ.29., ಕೆ.ಎಸ್‍ಆರ್. ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಉಡುಪಿ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶುಕ್ರವಾರ ನಡೆದಿದೆ. ಮಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಕೆ.ಎಸ್‍ಆರ್. ಟಿಸಿ ಬಸ್ಸು ಚಾಲಕನ ನಿಯತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸದ್ಯ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದೆ.

ಉದ್ಯಾವರ ಸೇತುವೆಗೆ ಕೆಎಸ್ ಆರ್ ಟಿಸಿ ಡಿಕ್ಕಿ ➤ ಪ್ರಯಾಣಿಕರು ಅಪಾಯದಿಂದ ಪಾರು..!!! Read More »

ಕರಾವಳಿ
Scroll to Top