ಕರಾವಳಿ

ಕಡಬದ ಸಸ್ಯಾಹಾರಿ ಹೊಟೇಲ್ ಶಾಂತಿಸಾಗರ್ ಪುನರಾರಂಭ ➤ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಹೊಟೇಲ್

(ನ್ಯೂಸ್ ಕಡಬ) newskadaba.com ಕಡಬ, ಜೂ.03. ಇಲ್ಲಿನ ಮುಖ್ಯ ರಸ್ತೆಯ ಟೋಮ್ ಬಝಾರ್ ನಲ್ಲಿ ಕಾರ್ಯಾಚರಿಸುತ್ತಿರುವ ಶುದ್ಧ ಸಸ್ಯಾಹಾರಿ ಹೊಟೇಲ್ ಶಾಂತಿಸಾಗರ್ ಇಂದಿನಿಂದ ತೆರೆದಿದೆ. ಕಳೆದ ಎರಡು ತಿಂಗಳಿನಿಂದ ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಹೊಟೇಲ್ ಪುನರಾರಂಭಗೊಂಡಿದ್ದು, ಇನ್ಮುಂದೆ ಪ್ರತೀದಿನ ತೆರೆದಿರಲಿದೆ. ಗ್ರಾಹಕರು ಎಂದಿನಂತೆ ಸಹಕರಿಸುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಬದ ಸಸ್ಯಾಹಾರಿ ಹೊಟೇಲ್ ಶಾಂತಿಸಾಗರ್ ಪುನರಾರಂಭ ➤ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಹೊಟೇಲ್ Read More »

ಕರಾವಳಿ

ಶಾಲೆಗಳ ಪುನಾರಂಭಕ್ಕೆ ಡೇಟ್‌ ಫಿಕ್ಸ್ ➤ ಜುಲೈ 1ರಿಂದ ರೀಓಪನ್‌

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ .03:  ಕೇಂದ್ರ ಸರಕಾರದ ಮಾರ್ಗಸೂಚಿಗೆ ಅನುಗುಣವಾಗಿ ರಾಜ್ಯ ಸರಕಾರ ಶಾಲೆಗಳ ಪುನಾರಂಭಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಶಾಲೆಗಳನ್ನು ಹಂತ ಹಂತವಾಗಿ ಪುನಾರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ಶಾಲೆಗಳನ್ನು ಆರಂಭಿಸುವ ಸಂಬಂಧ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಸಿ ಶಾಲೆಗಳ ಪುನಾರಂಭ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದ್ದು,

ಶಾಲೆಗಳ ಪುನಾರಂಭಕ್ಕೆ ಡೇಟ್‌ ಫಿಕ್ಸ್ ➤ ಜುಲೈ 1ರಿಂದ ರೀಓಪನ್‌ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಮಲ್ಪೆ ಬೋಟ್‌ ಮುಳುಗಡೆ ➤ 7 ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಉಡುಪಿ,ಜೂ.03: ಮಲ್ಪೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್ವೊಂದು ಗೋವಾ ಸಮೀಪ ಮುಳುಗಡೆಯಾಗಿದ್ದು, ಬೋಟ್ನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಇನ್ನು ಮುಳುಗಡೆಯಾಗಿರುವ ಬೋಟ್ನ್ನು ಮಲ್ಪೆ ವಡಭಾಂಡೇಶ್ವರದ ದೀಪಿಕಾ ಅವರ ಮಾಲೀಕತ್ವದ ಶ್ರೀ ದುರ್ಗಾ ಹನುಮ ಆಳ ಸಮುದ್ರ ಬೋಟ್ ಎಂದು ಹೇಳಲಾಗಿದೆ. ಈ ಬೋಟ್ ಮೇ 23ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು,  ಮಹಾರಾಷ್ಟ್ರದಲ್ಲಿ ಮೀನುಗಾರಿಕೆ ಮುಗಿಸಿ ಹಿಂತಿರುಗಿ ಬರುವಾಗ ಗೋವಾ ಸಮೀಪದ ರೆಡ್ಹೌಸ್ ಬಳಿ ಸುಮಾರು 27 ನಾಟಿಕಲ್

ಮಲ್ಪೆ ಬೋಟ್‌ ಮುಳುಗಡೆ ➤ 7 ಮೀನುಗಾರರ ರಕ್ಷಣೆ Read More »

ಕರಾವಳಿ, ಕರ್ನಾಟಕ

ದೇರಳಕಟ್ಟೆ: ಬಿಎಸ್ಸೆನ್ನೆಲ್ ಉಪಕೇಂದ್ರದಲ್ಲಿ ಬೆಂಕಿ; ಲಕ್ಷಾಂತರ ರೂ. ನಷ್ಟ

ಮಂಗಳೂರು, ಜೂ.2: ದೇರಳಕಟ್ಟೆ ಬಿಎಸ್ಸೆನ್ನೆಲ್ ಉಪ ಕೇಂದ್ರದಲ್ಲಿ ಸರ್ವರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಿದ್ದು, ಸ್ಥಳದಲ್ಲಿಹೊಗೆಯ ವಾತಾವರಣವಿದೆ. ಉಪಕೇಂದ್ರದಲ್ಲಿನ ಸರ್ವರ್ ರೂಂನಲ್ಲಿ ಕೂಲಿಂಗ್ ವ್ಯವಸ್ಥೆಯ ತಾಂತ್ರಿಕ ತೊಂದರೆಯಿಂದ ಉಷ್ಣತೆ ಹೆಚ್ಚಾಗಿ ಬೆಂಕಿ ಉತ್ಪತ್ತಿಯಾಗಿರುವ ಕುರಿತು ಸಂಶಯ ವ್ಯಕ್ತಪಡಿಸಲಾಗಿದೆ. ಈ ಅವಘಡದಿಂದಾಗಿ ಸುಮಾರು 4 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ರಾತ್ರಿ ವೇಳೆ ಸಿಬ್ಬಂದಿ ವ್ಯವಸ್ಥೆ ಇಲ್ಲದೆ ಸಮಸ್ಯೆ ಉದ್ಭವಿಸಿದೆ. ಖಾಸಗಿ ಕಟ್ಟಡದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು ದೇರಳಕಟ್ಟೆ ಜಂಕ್ಷನ್

ದೇರಳಕಟ್ಟೆ: ಬಿಎಸ್ಸೆನ್ನೆಲ್ ಉಪಕೇಂದ್ರದಲ್ಲಿ ಬೆಂಕಿ; ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಜೂ.4 ರಂದು ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಪುತ್ತೂರು. ಜೂ. 2, 33 ಕೆವಿ ಕಡಬ – ಪುತ್ತೂರು ಏಕಮಾರ್ಗವನ್ನು ದ್ವಿಮಾರ್ಗಗೊಳಿಸುವ ವಿದ್ಯುತ್ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಹಾಗೂ 33ಕೆವಿ ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡ ಕಾರಣ ಜೂ.4ರಂದು ಪೂರ್ವಾಹ್ನ 10 ರಿಂದ ಅಪರಾಹ್ನ 5 ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 33/11 ಕೆವಿ ಸವಣೂರು, ನೆಲ್ಯಾಡಿ, ಕಡಬ ಮತ್ತು ಸುಬ್ರಹ್ಮಣ್ಯ ಉಪ ವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಬೇಕೆಂದು ಪ್ರಕಟಣೆ ತಿಳಿಸಿದೆ.

ಜೂ.4 ರಂದು ವಿದ್ಯುತ್ ನಿಲುಗಡೆ Read More »

ಕರಾವಳಿ

ದ.ಕ. ಇಂದು ಮತ್ತೆ 11 ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಮಂಗಳೂರು. ಜೂ. 2, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂರು ವರ್ಷದ ಮಗು ಸೇರಿದಂತೆ ಹನ್ನೊಂದು ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಕೋವಿಡ್ – 19 ಪತ್ತೆಯಾದವರೆಲ್ಲರೂ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿದ್ದವರೆನ್ನಲಾಗಿದ್ದು, 7 ಮಂದಿ ಮಹಿಳೆಯರು ಹಾಗೂ 4 ಮಂದಿ ಪುರುಷರಾಗಿದ್ದಾರೆ. ಸೋಂಕಿತರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ.

ದ.ಕ. ಇಂದು ಮತ್ತೆ 11 ಮಂದಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ

ಪೋಸ್ಟ್ ಮ್ಯಾನ್ ಗೆ ಕೊರೋನಾ ನೆಗೆಟಿವ್ ➤ ಗಂಟಲ ದ್ರವ ಪರೀಕ್ಷೆ ವರದಿಯಲ್ಲಿ ದೃಢ

(ನ್ಯೂಸ್ ಕಡಬ) newskadaba.com ಬೆಳ್ಳಾರೆ,ಜೂ 02: ಬೆಳ್ಳಾರೆಯಲ್ಲಿ ಕಳೆದ ದಿನಗಳ ಹಿಂದೆಯಷ್ಟೇ ಕ್ವಾರಂಟೈನ್ ನಲ್ಲಿದ್ದ ದರ್ಖಾಸಿನ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಐವರ್ನಾಡಿನ ಪೋಸ್ಟ್ ಮ್ಯಾನ್ ಗೆ ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿತ್ತು.       ಇನ್ನು ಆ ಭಾಗಕ್ಕೆ ಪೋಸ್ಟ್ ಮ್ಯಾನ್ ಕರ್ತವ್ಯಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಅವರನ್ನು ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿತ್ತು. . ಮೇ.29 ರಂದು ಅವರ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಅವರ ಪರೀಕ್ಷಾ ವರದಿ

ಪೋಸ್ಟ್ ಮ್ಯಾನ್ ಗೆ ಕೊರೋನಾ ನೆಗೆಟಿವ್ ➤ ಗಂಟಲ ದ್ರವ ಪರೀಕ್ಷೆ ವರದಿಯಲ್ಲಿ ದೃಢ Read More »

ಕರಾವಳಿ, ಕರ್ನಾಟಕ

ತಲ್ವಾರ್ ದಾಳಿ ನಡೆಸಿ ಯುವಕನ ಹತ್ಯೆ ➤ ಐವರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ 02: ಸೋಮವಾರ ಯುವಕನ ಮೇಲೆ ತಲ್ವಾರ್ನಿಂದ ದಾಳಿ ನಡೆಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಪೊಲೀಸರು ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರಕಾಯುಧಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ದೀಪೇಶ್, ಸುಹಾಸ್ ಶೆಟ್ಟಿ, ಪ್ರಶಾಂತ್ ಯಾನೆ ಪಚ್ಚು ಮೋಕ್ಷಿತ್ ಮತ್ತು ಧನರಾಜ್ ಎಂದು ಗುರುತಿಸಲಾಗಿದೆ.   ಸೋಮವಾರ ತಂಡವೊಂದು ಮೂಡಬಿದ್ರೆ ತಾಲೂಕಿನ ಕಟೀಲು ಸಮೀಪದ ಎಕ್ಕಾರು ದೇವರಗುಡ್ಡೆಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪರಿಣಾಮ ಮಂಗಳೂರಿನ ಮರಕಡ

ತಲ್ವಾರ್ ದಾಳಿ ನಡೆಸಿ ಯುವಕನ ಹತ್ಯೆ ➤ ಐವರು ಆರೋಪಿಗಳು ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿಯಲ್ಲಿ ಕೋವಿಡ್ ಸ್ಪೋಟ ➤ ಒಂದೇ ದಿನ 210 ಜನರಿಗೆ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಉಡುಪಿ,ಜೂ 02: ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಕೋವಿಡ್-19 ಸೋಂಕಿತರ ಸಂಖ್ಯೆ ಇಂದು ಉಡುಪಿಯಲ್ಲಿ ದೃಢವಾಗಿದೆ. ಇಂದು ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ ಬರೋಬ್ಬರಿ 210 ಜನರಿಗೆ ಸೋಂಕು ದೃಢವಾಗಿದೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಆರ್ ಅಶೋಕ್, ಉಡುಪಿಯಲ್ಲಿ ಇಂದು 210 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ಧೃಡವಾಗಿದೆ. ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರಲ್ಲೇ ಹೆಚ್ಚಿನ ಸೋಂಕು ಕಾಣಿಸಿಕೊಳ್ಳುತ್ತಿರುವ ಕಾರಣ, ಮಹಾರಾಷ್ಟ್ರ ದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲು ನಿರ್ಧರಿಸಲಾಗಿದೆ ಎಂದು

ಉಡುಪಿಯಲ್ಲಿ ಕೋವಿಡ್ ಸ್ಪೋಟ ➤ ಒಂದೇ ದಿನ 210 ಜನರಿಗೆ ಸೋಂಕು ದೃಢ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top