ಕರಾವಳಿ

ಈಶ್ವರಮಂಗಲ ➤ 25 ಅಡಿ ಆಳಕ್ಕೆ ಉರುಳಿ ಮನೆಯ ಮೇಲೆ ಪಲ್ಟಿಯಾದ KSRTC ಬಸ್

(ನ್ಯೂಸ್ ಕಡಬ) newskadaba.com ಪುತ್ತೂರು,ಜೂ.10: ಪುತ್ತೂರಿನಿಂದ ಈಶ್ವರಮಂಗಲ ಕಡೆ ಸಂಚರಿಸುತ್ತಿದ್ದ  KSRTC ಬಸ್ ಈಶ್ವರಮಂಗಲ ಸಮೀಪದ ಸಾಂತ್ಯ ಎಂಬಲ್ಲಿ ಪಲ್ಟಿಯಾಗಿ ಮನೆಯೊಂದರ ಮೇಲೆ ಬಿದ್ದ ಘಟನೆ ಇಂದು  ಬೆಳಿಗ್ಗೆ ನಡೆದಿದೆ.   ಪುತ್ತೂರಿನಿಂದ ಈಶ್ವರಮಂಗಲ ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಧರೆಗುರುಳಿ 25 ಅಡಿ ಆಳದಲ್ಲಿರುವ ಮಂಜುನಾಥ ರೈ ಎಂಬವರ ಮನೆಯ ಬದಿಯ  ದನದ ಹಟ್ಟಿಯ ಮೇಲೆ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 21 ಜನ ಪ್ರಯಾಣಿಕರಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಬಸ್ಸಿನ ಚಾಲಕ ಹಾಗೂ […]

ಈಶ್ವರಮಂಗಲ ➤ 25 ಅಡಿ ಆಳಕ್ಕೆ ಉರುಳಿ ಮನೆಯ ಮೇಲೆ ಪಲ್ಟಿಯಾದ KSRTC ಬಸ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಾಪತ್ತೆಯಾಗಿದ್ದ ಯುವಕ ಶಿವಮೊಗ್ಗದಲ್ಲಿ ಪತ್ತೆ ➤ನೇತ್ರಾವತಿ ಸೇತುವೆಯ ಬಳಿ ಬೈಕ್ ನಿಲ್ಲಿಸಿದ್ದೆ ತಪ್ಪಾಯಿತೇ?

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.10:ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಬೈಕ್ ನಿಲ್ಲಿಸಿ ಯುವಕನೋರ್ವ ನಾಪತ್ತೆಯಾಗಿದ್ದ ಆದರೆ ಇದೀಗ ಯವಕ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು. ಶಿವಮೊಗ್ಗದಲ್ಲಿ ಇರುವುದಾಗಿ ಸ್ವತಃ ಪ್ರವೀಣ್ ಸಫಲ್ಯನೇ ತನ್ನ ಮನೆಯವರಿಗೆ ಮಾಹಿತಿ ನೀಡಿದ್ದಾನೆ. ಇದರಿಂದ ಆತಂಕಕ್ಕೆ ಕಾರಣವಾಗಿದ್ದ ಪ್ರಕರಣ ಇತ್ಯರ್ಥವಾಗಿದೆ. ಸದ್ಯ ಯುವಕ ಕ್ಷೇಮವಾಗಿದ್ದು ಮನೆಮಂದಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ನಾಪತ್ತೆಯಾಗಿದ್ದ ಯುವಕ ಶಿವಮೊಗ್ಗದಲ್ಲಿ ಪತ್ತೆ ➤ನೇತ್ರಾವತಿ ಸೇತುವೆಯ ಬಳಿ ಬೈಕ್ ನಿಲ್ಲಿಸಿದ್ದೆ ತಪ್ಪಾಯಿತೇ? Read More »

ಕರಾವಳಿ

ನಾಳೆಯಿಂದ ಮುಂಗಾರು ಜೋರು ➤ಆರೆಂಜ್ ಆಲರ್ಟ್ ಫೋಷಿಸಿದ ಜಿಲ್ಲಾಡಳಿತ

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.10:ರಾಜ್ಯದ ಕರಾವಳಿ ವ್ಯಾಪ್ತಿಯಲ್ಲಿ ಜೂ.11,12 ಮತ್ತು 13 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂ 11 ಬಳಿಕ ಮುಂಗಾರು ಮತ್ತಷ್ಟು ಚುರುಕುಗೊಳ್ಳುದರಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಹಾಗೂ ಉತ್ತರ ಕನ್ನಡದಲ್ಲಿ ಹವಾಮಾನ ಇಲಾಖೆ ಆರೆಂಜ್ ಆಲರ್ಟ್ ಫೋಷಣೆ ಮಾಡಿದೆ. ಜೂ,1ರಂದೇ ಮುಂಗಾರು ಕೇರಳ ಪ್ರವೇಶಿಸಿತ್ತು ಆದರೆ ನಿಸರ್ಗ ಚಂಡಮಾರುತದಿಂದಾಗಿ ರಾಜ್ಯಕ್ಕೆ ಪ್ರವೇಶ ತಡವಾಗಿತ್ತು ಈಗ ಮುಂಗಾರು ಕರಾವಳಿಗೆ ಪ್ರವೇಶವಾಗಿದ್ದರೂ ಕೂಡ, ಕಳೆದ ಕೆಲವು ದಿನಗಳಿಂದ ಹೇಳಿಕೊಳ್ಳುವಂತ

ನಾಳೆಯಿಂದ ಮುಂಗಾರು ಜೋರು ➤ಆರೆಂಜ್ ಆಲರ್ಟ್ ಫೋಷಿಸಿದ ಜಿಲ್ಲಾಡಳಿತ Read More »

ಕರಾವಳಿ

ನಾಪತ್ತೆಯಾಗಿದ್ದ ಯುವ ಜೋಡಿ ಮದುವೆಯಾಗಿ ಪತ್ತೆ ➤ ಜೋಡಿಯನ್ನ ಕರೆ ತಂದ ಸುಬ್ರಹ್ಮಣ್ಯ ಪೊಲೀಸರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.10: ಯುವ ಜೋಡಿಯೊಂದು ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿ 24 ಗಂಟೆಗಳಲ್ಲಿ ಸುಬ್ರಹ್ಮಣ್ಯ ಪೊಲೀಸರು ಜೋಡಿಯನ್ನು ಪತ್ತೆಹಚ್ವಿ ಕರೆತಂದಿದ್ದಾರೆ. ಹರಿಹರ ಪಲ್ಲತಡ್ಕ ಗ್ರಾಮದ ಕಲ್ಲೆಮಠದ ಯುವತಿ ಲಿಖಿತಾ ಹಾಗೂ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಯುವಕ, ಸುಬ್ರಹ್ಮಣ್ಯದಲ್ಲಿ ಹೋಮ್ ಗಾರ್ಡ್ ಆಗಿ ಕರ್ತವ್ಯದಲ್ಲಿದ್ದ ಅಭಿಲಾಷ್ ವಾರದ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಸೋಮವಾರದಂದು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳವಾರದಂದು ಪ್ರೇಮಿಗಳನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿರುವ ಸುಬ್ರಹ್ಮಣ್ಯ ಪೊಲೀಸರು, ಬುಧವಾರ ಬೆಳಿಗ್ಗೆ ಕರೆತಂದಿದ್ದಾರೆ.

ನಾಪತ್ತೆಯಾಗಿದ್ದ ಯುವ ಜೋಡಿ ಮದುವೆಯಾಗಿ ಪತ್ತೆ ➤ ಜೋಡಿಯನ್ನ ಕರೆ ತಂದ ಸುಬ್ರಹ್ಮಣ್ಯ ಪೊಲೀಸರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕರಾವಳಿಯಲ್ಲಿ ಮುಂಗಾರು ಅಬ್ಬರ ➤ ಹೆಚ್ಚುತ್ತಿದೆ ಗುಡುಗು ಮಿಂಚಿನ ಆರ್ಭಟ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.10: ಈಗಾಗಲೇ ಕರಾವಳಿಯಲ್ಲಿ ಮುಂಗಾರು ಮಳೆಯ ಅಬ್ಬರ ಆರಂಭವಾಗಿದೆ. ಗುಡುಗು ಮಿಂಚಿನ ಆರ್ಭಟವೂ ಹೆಚ್ಚಾಗುತ್ತಿದೆ.ಕಳೆದ ಕೆಲ ದಿನಗಳ ಹಿಂದೆ ನಿಸರ್ಗ ಚಂಡ ಮಾರುತದ ಬಳಿಕ ಕರಾವಳಿಯಲ್ಲಿ ಮುಂಗಾರು ಕಣ್ಣ ಮುಚ್ಚಾಲೆ ಆಡುತ್ತಿದೆ. ಕರಾವಳಿಯಲ್ಲಿ ಮುಂಗಾರು ಮಳೆಯ ಅಬ್ಬರ ಆರಂಭವಾಗಿದೆ. ಇಂದು ಬೆಳಗ್ಗೆಯಿಂದ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆ ಬಿರುಸುಗೊಂಡಿದ್ದು ಗುಡುಗು-ಸಿಡಿಲಿನ ಜೊತೆಗೆ ಮಳೆಯಾಗುತ್ತಿದೆ. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು,

ಕರಾವಳಿಯಲ್ಲಿ ಮುಂಗಾರು ಅಬ್ಬರ ➤ ಹೆಚ್ಚುತ್ತಿದೆ ಗುಡುಗು ಮಿಂಚಿನ ಆರ್ಭಟ Read More »

ಕರಾವಳಿ, ಕರ್ನಾಟಕ

ಕೊರೊನಾ ವಾರಿಯರ್‍ಗೆ ನೀರಿನ ಬಾಟಲ್ ಕೊಡಲು ನಿರಾಕರಿಸಿದ ಅಂಗಡಿ ಮಾಲಕ

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.10:ಆ್ಯಂಬುಲೆನ್ಸ್ ಚಾಲಕರೋರ್ವರಿಗೆ ಅಂಗಡಿಯೊಂದರ ಮಾಲಕ ನೀರಿನ ಬಾಟಲ್ ಕೊಡಲು ನಿರಾಕರಿಸಿದ ಆರೋಪ ಮಂಗಳೂರಿನಲ್ಲಿ ನಡೆದಿದೆ. ಸುಳ್ಯದ ಆ್ಯಂಬುಲೆನ್ಸ್ ಚಾಲಕ ಅಭಿಲಾಷ್ ಅವರು ಅಸೌಖ್ಯಕ್ಕೊಳಗಾಗಿದ್ದ ರೋಗಿಯೋರ್ವವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಬೆಳಗ್ಗಿನ ಜಾವ ಕರೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭ ಕುಡಿಯಲು ನೀರು ಅವಶ್ಯವಿದ್ದುದರಿಂದ ಫಳ್ನೀರ್‍ನಲ್ಲಿರುವ ಅಂಗಡಿಯೊಂದಕ್ಕೆ ತೆರಳಿ ನೀರು ಕೇಳಿದಾಗ ನೀರು ನಿರಾಕರಿಸಿ ನಿಂದಿಸಿದ ಆರೋಪ ವ್ಯಕ್ತವಾಗಿದೆ. ಇದರಿಂದ ಬೇಸರಗೊಂಡ ಆ್ಯಂಬುಲೆನ್ಸ್ ಚಾಲಕ ಬಂದರು ಠಾಣೆಯಲ್ಲಿ ದೂರು ದಾಖಳಿಸಿದ್ದಾರೆ. ಕೊರೊನಾ ವಾರಿಯರ್‍ಗೆ ಅಂಗಡಿಯಲ್ಲಿದ್ದಾತ ಕೋವಿಡ್ ರೋಗಿಗಳನ್ನು

ಕೊರೊನಾ ವಾರಿಯರ್‍ಗೆ ನೀರಿನ ಬಾಟಲ್ ಕೊಡಲು ನಿರಾಕರಿಸಿದ ಅಂಗಡಿ ಮಾಲಕ Read More »

ಕರಾವಳಿ

ಶ್ರೀ ಕಾರಿಂಜ ಸನ್ನಿಧಿಯಲ್ಲಿ ಅಪರೂಪದ ದೃಶ್ಯ ➤ ಅಂತರ ಕಾಯ್ದುಕೊಂಡು ನೈವೇದ್ಯ ಸ್ವೀಕರಿಸಿದ ವಾನರ ಸೇನೆ

(ನ್ಯೂಸ್ ಕಡಬ) newskadaba.com ಬಂಟ್ವಾಳ,ಜೂ.10: ಸುದೀರ್ಘ ಲಾಕ್‌ ಡೌನ್ ಬಳಿಕ ದೇವಸ್ಥಾನಗಳಲ್ಲಿ ಇದೀಗ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ, ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.  ಆದರೆ ದೇವಸ್ಥಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.ಇದಕ್ಕಾಗಿಯೇ ದೇಗುಲಗಳಲ್ಲಿ ಬಣ್ಣದಿಂದ ಬಾಕ್ಸ್ ‌ಗಳನ್ನು ಬಳಿಯಲಾಗಿದೆ. ಆದ್ರೆ ಇಲ್ಲೊಂದು ದೇವಸ್ಥಾನದಲ್ಲಿ ಕೋತಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಅದರ ಮೇಲೆ ಕುಳಿತ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಾರೀ ಮೆಚ್ಚುಗೆ ಗಳಿಸಿದೆ.   ಹೌದು ದಕ್ಷಿಣ ಕನ್ನಡ ಜಿಲ್ಲೆಯ

ಶ್ರೀ ಕಾರಿಂಜ ಸನ್ನಿಧಿಯಲ್ಲಿ ಅಪರೂಪದ ದೃಶ್ಯ ➤ ಅಂತರ ಕಾಯ್ದುಕೊಂಡು ನೈವೇದ್ಯ ಸ್ವೀಕರಿಸಿದ ವಾನರ ಸೇನೆ Read More »

ಕರಾವಳಿ, ಕರ್ನಾಟಕ

ಆತ್ಮಹತ್ಯೆಗೆ ಹಾಟ್ ಸ್ಪಾಟ್ ಆಗುತ್ತಿದೆಯೇ ನೇತ್ರಾವತಿ ಸೇತುವೆ?

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.10:ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಬೈಕ್ ನಿಲ್ಲಿಸಿ ಯುವಕನೋರ್ವ ನಾಪತ್ತೆಯಾಗಿದ್ದು. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾಗಿರುವ ಯುವಕ ಕುರ್ನಾಡು ನಿವಾಸಿ ಪ್ರವೀಣ್ ಸಪಲ್ಯ(28) ಎನ್ನಲಾಗಿದೆ. ಈತ ಖಾಸಗಿ ಕಂಪೆನಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ರಾತ್ರಿ ಪಾಳಿ ಕೆಲಸ ಮುಗಿಸಿ ಬರುತ್ತಿದ್ದ ಸಂದರ್ಭ ಸೇತುವೆಯ ಬಳಿ ಬೈಕ್ ನಿಲ್ಲಿಸಿ ನಾಪತ್ತೆ ಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೆ ನದಿಯ ಬಳಿ ಪತ್ತೆಗಾಗಿ ಹುಡುಕಾಟ ಕಾರ್ಯಚರಣೆ ಆರಂಭವಾಗಿದೆ.

ಆತ್ಮಹತ್ಯೆಗೆ ಹಾಟ್ ಸ್ಪಾಟ್ ಆಗುತ್ತಿದೆಯೇ ನೇತ್ರಾವತಿ ಸೇತುವೆ? Read More »

ಕರಾವಳಿ

ಉಳ್ಳಾಲ ನೇತ್ರಾವತಿ ನದಿ ತೀರದಲ್ಲಿ ಯುವಕನ ಶವ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.10: ಮಂಗಳೂರು ಹೊರವಲಯದ ಉಳ್ಳಾಲ ನೇತ್ರಾವತಿ ನದಿ ತೀರದಲ್ಲಿ ಯುವಕನ ಶವ ಪತ್ತೆ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಈ ಶವ ಪತ್ತೆಯಾಗಿದೆ. ಶವದ ಗುರುತು ಪತ್ತೆ ಮಾಡಲಾಗಿದ್ದು ಕೊಲ್ಯ ಸಾರಸ್ವತ ಕಾಲೊನಿ ನಿವಾಸಿ ಚೇತನ್ ಆಚಾರ್ಯ (33) ಎಂದು ಗುರುತ್ತಿಸಲಾಗಿದೆ.ಎರಡು ದಿನದ ಹಿಂದೆ ಮನೆಯಿಂದ ಹೊರಟಿದ್ದ ಚೇತನ್ ಬಳಿಕ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ  ಇಂದು ಬೆಳಿಗ್ಗೆ ಚೇತನ್ ನಾಪತ್ತೆ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾನಸಿಕ ಖಿನ್ನತೆಯಿಂದ

ಉಳ್ಳಾಲ ನೇತ್ರಾವತಿ ನದಿ ತೀರದಲ್ಲಿ ಯುವಕನ ಶವ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮುಳ್ಳು ಹಂದಿ ದಾಳಿ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜೂ.10, ಯುವಕನೋರ್ವ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮುಳ್ಳು ಹಂದಿ ದಾಳಿ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ನಡೆದಿದೆ. ದಾಳಿಗೊಳಗಾದ ಯುವಕನನ್ನು ಶಫೀಕ್ (16) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಸ್ನೇಹಿತನ ಜತೆ ಸಾಲೆತ್ತೂರಿನಿಂದ ಕರೈಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆನ್ನಲಾಗಿದೆ.

ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮುಳ್ಳು ಹಂದಿ ದಾಳಿ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top