ಕೊರೊನಾ ವಾರಿಯರ್‍ಗೆ ನೀರಿನ ಬಾಟಲ್ ಕೊಡಲು ನಿರಾಕರಿಸಿದ ಅಂಗಡಿ ಮಾಲಕ



(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.10:ಆ್ಯಂಬುಲೆನ್ಸ್ ಚಾಲಕರೋರ್ವರಿಗೆ ಅಂಗಡಿಯೊಂದರ ಮಾಲಕ ನೀರಿನ ಬಾಟಲ್ ಕೊಡಲು ನಿರಾಕರಿಸಿದ ಆರೋಪ ಮಂಗಳೂರಿನಲ್ಲಿ ನಡೆದಿದೆ.








ಸುಳ್ಯದ ಆ್ಯಂಬುಲೆನ್ಸ್ ಚಾಲಕ ಅಭಿಲಾಷ್ ಅವರು ಅಸೌಖ್ಯಕ್ಕೊಳಗಾಗಿದ್ದ ರೋಗಿಯೋರ್ವವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಬೆಳಗ್ಗಿನ ಜಾವ ಕರೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭ ಕುಡಿಯಲು ನೀರು ಅವಶ್ಯವಿದ್ದುದರಿಂದ ಫಳ್ನೀರ್‍ನಲ್ಲಿರುವ ಅಂಗಡಿಯೊಂದಕ್ಕೆ ತೆರಳಿ ನೀರು ಕೇಳಿದಾಗ ನೀರು ನಿರಾಕರಿಸಿ ನಿಂದಿಸಿದ ಆರೋಪ ವ್ಯಕ್ತವಾಗಿದೆ.







ಇದರಿಂದ ಬೇಸರಗೊಂಡ ಆ್ಯಂಬುಲೆನ್ಸ್ ಚಾಲಕ ಬಂದರು ಠಾಣೆಯಲ್ಲಿ ದೂರು ದಾಖಳಿಸಿದ್ದಾರೆ. ಕೊರೊನಾ ವಾರಿಯರ್‍ಗೆ ಅಂಗಡಿಯಲ್ಲಿದ್ದಾತ ಕೋವಿಡ್ ರೋಗಿಗಳನ್ನು ಸಾಗಿಸುವ ಆ್ಯಂಬುಲೆನ್ಸ್ ಚಾಲಕರಿಗೆ ನೀರಿನ ಬಾಟಲಿ ಕೊಡುವುದಿಲ್ಲ. ನೀವು ಊರಿಗೆ ಕೋವಿಡ್ ವೈರಸ್ ಹರಡುತ್ತಿದ್ದೀರಿ ಎಂದು ನಿಂದಿಸಿರುವುದಾಗಿ ಚಾಲಕ ಠಾಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top