ಕರಾವಳಿ

ಆಕರ್ಷಣ ತಂತ್ರ ಮತ್ತು ದಿನ ಭವಿಷ್ಯ

ಓಂ ನಮೋ ಆದಿಪುರುಷಾಯಸ್ಯ! ಆಕರ್ಷಣ ಕುರು ಕುರು ಸ್ವಾಹಾ!! ಈ ಮಂತ್ರವನ್ನು ನೀವು ಒಂಬತ್ತು ದಿನಗಳ ಕಾಲ ಪ್ರತಿನಿತ್ಯ ಬೆಳಗಿನ ಜಾವ 108 ಬಾರಿ ಜಪಿಸಿ ಇದರಿಂದ ದಿನದಿಂದ ದಿನಕ್ಕೆ ನೀವು ಆಕರ್ಷಿತವಾಗಿ ನಿಮ್ಮ ವ್ಯಕ್ತಿತ್ವ ಎಲ್ಲರಿಗೂ ಕಾಣಿಸುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, […]

ಆಕರ್ಷಣ ತಂತ್ರ ಮತ್ತು ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

?? ?ig Breaking News ದಕ್ಷಿಣ ಕನ್ನಡದಲ್ಲಿ ಕೊರೋನಾ ರುದ್ರ ತಾಂಡವ ➤ ಇಂದೂ ಓರ್ವರನ್ನು ಬಲಿ ಪಡೆದ ಕೊರೋನಾ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.7, ಮಹಾಮಾರಿ ಕೊರೋನಾವು ದಿನದಿಂದ ದಿನಕ್ಕೆ ತನ್ನ ಉಗ್ರ ಸ್ವರೂಪವನ್ನು ಮುಂದುವರೆಸುತ್ತಿದ್ದು, ಇಂದು ಕೂಡಾ ಮಂಗಳೂರಿನಲ್ಲಿ ಓರ್ವ ವ್ಯಕ್ತಿಯನ್ನು ಬಲಿ ಪಡೆದುಕೊಂಡಿದೆ. ನಗರದ ಹೊರವಲಯದ ಮೂಡಬಿದ್ರೆ ನಿವಾಸಿ 53 ವರ್ಷ ಪ್ರಾಯದ ವ್ಯಕ್ತಿ. ಇವರು ಕೊರೋನಾ ಸೊಂಕಿನಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಮೃತರಾಗಿದ್ದಾರೆ. ಇದರೊಂದಿಗೆ ದಕ್ಷಿಣ ಕನ್ನಡದಲ್ಲಿ ಕೊರೋನಾ ಸಾವಿನ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

?? ?ig Breaking News ದಕ್ಷಿಣ ಕನ್ನಡದಲ್ಲಿ ಕೊರೋನಾ ರುದ್ರ ತಾಂಡವ ➤ ಇಂದೂ ಓರ್ವರನ್ನು ಬಲಿ ಪಡೆದ ಕೊರೋನಾ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಮನೆಯ ಕಾಂಪೌಂಡ್ ಕುಸಿತ ➤ ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com ಪುತ್ತೂರು, ಜು.07, ಮನೆಯೊಂದರ ಆವರಣಗೋಡೆ ಕುಸಿತಗೊಂಡ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಜುಲೈ 7ರಂದು ಪರ್ಲಡ್ಕದ ಗೋಳಿಕಟ್ಟೆಯಲ್ಲಿ ನಡೆದಿದೆ. ಕಳೆದ ಮೂರು ದಿವಸಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಕಂಪೌಂಡ್ ಕುಸಿದಿದೆ ಎಂದು ತಿಳಿದು ಬಂದಿದೆ.

ಪುತ್ತೂರು: ಮನೆಯ ಕಾಂಪೌಂಡ್ ಕುಸಿತ ➤ ಮಹಿಳೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ : ಲಾಕ್‌ಡೌನ್‌ನಲ್ಲಿ ಕನ್ನಡ ಕಲಿತ ಫ್ರೆಂಚ್ ಪ್ರಜೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಜು.07: ಲಾಕ್‌ಡೌನ್ ಸಂದರ್ಭ ಸ್ವದೇಶಕ್ಕೆ ಹೋಗಲಾರದೆ ಭಾರತದಲ್ಲಿ ಸಿಲುಕಿಕೊಂಡ ಫ್ರೆಂಚ್ ನಾಗರಿಕರೊಬ್ಬರು ಕಾಲಹರಣ ಮಾಡದೆ ಕನ್ನಡ ಭಾಷೆ ಕಲಿಕೆಗೆ ಸದುಪಯೋಗ ಮಾಡಿಕೊಂಡು ಗಮನ ಸೆಳೆದಿದ್ದಾರೆ.     ಒಂದು ವರ್ಷ ಪ್ರವಾಸಿ ವೀಸಾದಲ್ಲಿ ಭಾರತ ಪ್ರವಾಸಕ್ಕೆ ಬಂದ 25 ವರ್ಷದ ಬ್ಯಾಪ್ಟಿಸ್ಟ್ ಮರಿಯೊಟ್, ಬೆಳ್ತಂಗಡಿಯ ಮುಂಡಾಜೆ ಎಂಬ ಹಳ್ಳಿಯ ಬಾಡಿಗೆ ಕೋಣೆಯಲ್ಲಿ ಉಳಿದಿದ್ದರು. ಮಾರ್ಚ್ ಅಂತ್ಯದೊಳಗೆ ಅವರು ಮರಳಬೇಕಿತ್ತು. ಆ ಹೊತ್ತಿಗೆ ಲಾಕ್‌ಡೌನ್ ಜಾರಿಯಾಗಿದ್ದರಿಂದ ಬಾಕಿಯಾದರು. ಈ ಸಂದರ್ಭವನ್ನು ಅವರು ಬಳಸಿದ್ದು ಕನ್ನಡ

ಬೆಳ್ತಂಗಡಿ : ಲಾಕ್‌ಡೌನ್‌ನಲ್ಲಿ ಕನ್ನಡ ಕಲಿತ ಫ್ರೆಂಚ್ ಪ್ರಜೆ Read More »

ಕರಾವಳಿ, ಕರ್ನಾಟಕ

ಕರಾವಳಿಯಲ್ಲಿ ಇಂದಿನಿಂದ ಜು 11ರ ವರೆಗೆ ಭಾರಿ ಮಳೆ ಸಾಧ್ಯತೆ ➤ ಎಲ್ಲೋ ಅಲರ್ಟ್ ಘೋಷಣೆ

(ನ್ಯೂಸ್ ಕಡಬ) newskadaba.com ಕರಾವಳಿ ,ಜು.07:  ಜು 7ರಿಂದ 11ರವರೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್‌‌ ಘೋಷಿಸಲಾಗಿದೆ ಎಂಬುದಾಗಿ ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆ ಕರಾವಳಿಯ ಕಡೆಗೆ ಆಗ್ನೇಯ ಅರಬ್ಬಿ ಸಮುದ್ರದಿಂದ ಗಂಟೆಗೆ ಸುಮಾರು 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಈ ನಿಟ್ಟಿನಲ್ಲಿ ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ತಿಳಿಸಿದೆ. ಇನ್ನು ಜು 10ರಿಂದ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮಳೆಯ ಪ್ರಮಾಣವು ಅಧಿಕವಾಗಲಿದ್ದು, ಮುಂದಿನ 48 ಗಂಟೆಗಳವರೆಗೆ

ಕರಾವಳಿಯಲ್ಲಿ ಇಂದಿನಿಂದ ಜು 11ರ ವರೆಗೆ ಭಾರಿ ಮಳೆ ಸಾಧ್ಯತೆ ➤ ಎಲ್ಲೋ ಅಲರ್ಟ್ ಘೋಷಣೆ Read More »

ಕರಾವಳಿ, ಕರ್ನಾಟಕ

ಮಸೀದಿ ಇಮಾಂ ನಿವೃತ್ತಿ ವೇತನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ)newskadaba.com ಮಂಗಳೂರು, ಜು. 07, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಾವಣೆಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಮಸೀದಿಗಳಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟು ಸೇವೆಗೈದು ಕೆಲಸದಿಂದ ನಿವೃತ್ತಿ ಹೊಂದಿ 65 ವರ್ಷ ಪೂರ್ತಿಗೊಳಿಸಿದ ಇಮಾಮ್‍ರವರಿಗೆ ಮಾಸಿಕ ರೂ. 2,000 ಮತ್ತು ಮೌಝನ್ (ಮುಕ್ರಿ) ರವರಿಗೆ ಮಾಸಿಕ ರೂ. 1,500 ನಿವೃತ್ತಿ ವೇತನ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ವತಿಯಿಂದ ನೀಡಲಾಗುತ್ತದೆ. ಅರ್ಜಿ ನಮೂನೆಯನ್ನು ಜಿಲ್ಲಾ ವಕ್ಫ್ ಕಚೇರಿಯಿಂದ ಪಡೆದುಕೊಂಡು ಭರ್ತಿ ಮಾಡಿ ಆಧಾರ್ ಕಾರ್ಡ್ ನಕಲು ಪ್ರತಿ,

ಮಸೀದಿ ಇಮಾಂ ನಿವೃತ್ತಿ ವೇತನಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

ಅಂಗನವಾಡಿ ಸಹಾಯಕಿ ಹುದ್ದೆ ➤ ಅರ್ಜಿ ಆಹ್ವಾನ

(ನ್ಯೂಸ್ ಕಡಬ)newskadaba.com ಮಂಗಳೂರು, ಜು. 07, ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 2 ಅಂಗನವಾಡಿ ಕಾರ್ಯಕರ್ತೆ ಮತ್ತು 13 ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳನ್ನು ಭರ್ತಿ ಮಾಡಲು ವೆಬ್‍ಸೈಟ್ ವಿಳಾಸ http://www.anganwadirecruit.kar.nic.ing ರಲ್ಲಿ ಜುಲೈ 1 ರಿಂದ ಅರ್ಜಿ ಆಹ್ವಾನಿಸಿದ್ದು, ಜುಲೈ 30 ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಕಾರ್ಯಕರ್ತೆ ಹುದ್ದೆ ಖಾಲಿಯಿರುವ ಅಂಗನವಾಡಿ ಕೇಂದ್ರದ ವಿವರ ಇಂತಿವೆ:- 1) ಬಜ್ಪೆ ಗ್ರಾಮ ಪಂಚಾಯತ್, ಸ್ವಾಮಿಲ ಪದವು ಅಂಗನವಾಡಿ

ಅಂಗನವಾಡಿ ಸಹಾಯಕಿ ಹುದ್ದೆ ➤ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಕುಂದಾಪುರ : ಅಗ್ನಿ ಅವಘಡ, ಅಂಗಡಿಗಳು ಸಂಪೂರ್ಣ ಭಸ್ಮ

(ನ್ಯೂಸ್ ಕಡಬ) newskadaba.com ಕುಂದಾಪುರ,ಜು.07: ಗಂಗೊಳ್ಳಿ ಸಮೀಪದ ವಾಟರ್ ಟ್ಯಾಂಕ್ ಬಳಿ ಇರುವ ಎರಡು ಅಮಗಡಿಗಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋದ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ. ಜಿ ದಿನೇಶ್ ನಾಯಕ್ ಮತ್ತು ಜಿ ಪದ್ಮನಾಭ್ ನಾಯಕ್ ಎಂಬವರಿಗೆ ಸೇರಿದ ಅಂಗಡಿಯಾಗಿದ್ದು, ಎರಡು ಅಂಗಡಿಗಳು ಸಂಪೂರ್ಣವಾಗಿ ಭಸ್ಮವಾಗಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಕುಂದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಸಂಭವಿಸಿರಬಹುದೆಂದು

ಕುಂದಾಪುರ : ಅಗ್ನಿ ಅವಘಡ, ಅಂಗಡಿಗಳು ಸಂಪೂರ್ಣ ಭಸ್ಮ Read More »

ಕರಾವಳಿ, ಕರ್ನಾಟಕ

ಸಾರ್ವಜನಿಕರಿಗಾಗಿ ಸೇವಾ ಸಿಂಧು ಆನ್ ಲೈನ್ ಸೇವೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜು. 07, ರಾಷ್ಟ್ರೀಯ ಇ-ಆಡಳಿತ ಹಾಗೂ ಇಡಿಸಿಎಸ್ ನಿರ್ದೇಶನಾಲಯದ ನಿರ್ದೇಶನದಂತೆ ಇ-ಜಿಲ್ಲಾ ಯೋಜನೆಯ ಸೇವಾ ಸಿಂಧು ಅಂತರ್ಜಾಲ ತಾಣವನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ವಿವಿಧ ಇಲಾಖೆಗಳ 451 ಸೇವೆಗಳು ಲಭ್ಯವಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 240 ಸಿ.ಎಸ್.ಸಿ. ಕೇಂದ್ರಗಳಿವೆ. ಕೊರೊನಾ ಅವಧಿಯಲ್ಲಿ ಸಾರ್ವಜನಿಕರು ನೇರವಾಗಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಬದಲು ಸೇವಾ ಸಿಂಧು ಆನ್ ಲೈನ್ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಸರಕಾರದ ಸೇವೆಗಳನ್ನು ಸೇವಾಸಿಂಧು ವೆಬ್ ಸೈಟ್ ಮೂಲಕ ಅಥವಾ ಸಮೀಪದ ಸಿ.ಎಸ್.ಸಿ.

ಸಾರ್ವಜನಿಕರಿಗಾಗಿ ಸೇವಾ ಸಿಂಧು ಆನ್ ಲೈನ್ ಸೇವೆ Read More »

ಕರಾವಳಿ, ಕರ್ನಾಟಕ

ಉಡುಪಿ: ಕ್ಷುಲಕ ಕಾರಣಕ್ಕೆ ಯುವಕನ ಹತ್ಯೆ

(ನ್ಯೂಸ್ ಕಡಬ) newskadaba.com ಉಡುಪಿ,ಜು.07: ಉಡುಪಿ  ಕ್ಷುಲಕ ಕಾರಣಕ್ಕೆ ಗುಂಪೊಂದು ಯುವಕನನ್ನು ಹತ್ಯೆ ಮಾಡಿದ ಘಟನೆ ಲಕ್ಷ್ಮೀನಗರ ಪ್ರದೇಶದಲ್ಲಿ   ಮಂಗಳವಾರ ನಡೆದಿದೆ. ಹತ್ಯೆಯಾದ ಯುವಕನನ್ನು ಯೋಗೀಶ್ ಎಂದು ಗುರುತಿಸಲಾಗಿದೆ. ಯೋಗೀಶ್ ಮತ್ತು ತಂಡ ನಡುವೆ ಇದ್ದ ವೈಯಕ್ತಿಕ ಮನಸ್ತಾಪವೇ ಈ ಘಟನೆಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಉಡುಪಿ: ಕ್ಷುಲಕ ಕಾರಣಕ್ಕೆ ಯುವಕನ ಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top