ಕರಾವಳಿ

ಬೆಳ್ಮಣ್ : ಡೆಂಗ್ಯೂಗೆ ನರ್ಸ್ ಬಲಿ

(ನ್ಯೂಸ್ ಕಡಬ) newskadaba.com ಬೆಳ್ಮಣ್,ಜು.08: ಕರಾವಳಿಯಲ್ಲಿ ಕೊರೊನಾ ವ್ಯಾಪಕಗೊಳ್ಳುತ್ತಿರುವ ನಡುವೆ ಮಾರಕ ಡೆಂಗ್ಯೂ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿದೆ. ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಯ ನರ್ಸ್ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಬೆಳ್ಮಣ್ ನಿವಾಸಿ ದಿವ್ಯಾ (23) ಮೃತ ನರ್ಸ್. ದಿವ್ಯಾ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಖಾಸಗಿ ಆಸ್ಪತ್ರೆಯ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 15 ದಿನದಿಂದ ಜ್ವರದಿಂದ ಬಳಲುತ್ತಿದ್ದರು. ನಂತರ ತಾನೇ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಚಿಕಿತ್ಸೆ […]

ಬೆಳ್ಮಣ್ : ಡೆಂಗ್ಯೂಗೆ ನರ್ಸ್ ಬಲಿ Read More »

ಕರಾವಳಿ, ಕರ್ನಾಟಕ

ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.08: ಹಿರಿಯ ನಟಿ ಜಯಂತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯಂತಿ ಅವರ ಆರೋಗ್ಯದಲ್ಲಿ ಏರು-ಪೇರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಯಂತಿ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯ ಸತೀಶ್ ಎಂಬುವರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಜಯಂತಿ ಅವರಿಗೆ ಕೊರೊನಾ ಆಗಿದೆಯೇ ಎಂಬ ಅನುಮಾನ ಮುಂಚೆ ಇತ್ತು, ಆದರೆ ಅವರಿಗೆ ಕೊರೊನಾ ಆಗಿಲ್ಲವೆಂದು ಅವರ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜಯಂತಿ ಅವರ ಆರೋಗ್ಯದ ಬಗ್ಗೆ ಆತಂಕ ಪಡುವ ಸ್ಥಿತಿಯಲ್ಲಿಲ್ಲ ಎಂದು

ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ

ಲಕ್ಷ್ಮೀನಗರ ಯೋಗಿಶ್ ಕೊಲೆ ➤ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ…!!!

(ನ್ಯೂಸ್ ಕಡಬ) newskadaba.com ಉಡುಪಿ,ಜು 08. ಲಕ್ಷ್ಮೀನಗರದಲ್ಲಿ ಸೋಮವಾರ ತಡ ರಾತ್ರಿ ಹತ್ಯೆಗೈದಿದ್ದ ಯೋಗಿಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸುಜಿತ್ ಪಿಂಟೊ,ರೊಹೀತ್ ಪಿಂಟೊ, ಅನ್ನು ಯಾನೆ ಪ್ರದೀಪ ಮತ್ತು ವಿನಯ್ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಯೋಗಿಶ್ ಮತ್ತು ಆರೋಪಿಗಳೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಗಲಾಟೆ ತಾರಕಕ್ಕೇರಿ ಆರೋಪಿಗಳು ಯೋಗೀಶ್ ನನ್ನು ಹತ್ಯೆಗೈದು ಪರಾರಿಯಾಗಿದ್ದರು. ಘಟನೆಯ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಲ್ಪೆ

ಲಕ್ಷ್ಮೀನಗರ ಯೋಗಿಶ್ ಕೊಲೆ ➤ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ…!!! Read More »

ಕರಾವಳಿ, ಕ್ರೈಮ್ ನ್ಯೂಸ್

ರಸ್ತೆಬಿಟ್ಟ ಚರಂಡಿಗೆ ಇಳಿದ ಲಾರಿ ➤ ಪ್ರಾಣಾಪಾಯದಿಂದ ಚಾಲಕ, ನಿರ್ವಾಹಕ ಪಾರು

(ನ್ಯೂಸ್ ಕಡಬ) newskadaba.com ಪೆರ್ನೆ,ಜು.07:  ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಸಮೀಪದ ಕಡಂಬು ಎಂಬಲ್ಲಿ ಟ್ಯಾಂಕರ್ ಲಾರಿ ರಸ್ತೆಯ ಪಕ್ಕದಲ್ಲಿರುವ ಚರಂಡಿಗೆ ಬಿದ್ದು ಚಾಲಕ ಮತ್ತು ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಕಳೆದ ವಾರ ಇದೆ ಚರಂಡಿಗೆ ಬೃಹತ್ ಲಾರಿಯೊಂದು ಬಿದ್ದು ಜಖಂ ಗೊಂಡಿದ್ದು. ಈ ಚರಂಡಿಯು ಅರ್ಧ ರಸ್ತೆಯನ್ನು ಆಕ್ರಮಿಸಿಕೊಂಡಿದ್ದು ಎದುರಿನಿಂದ ಬರುವ ವಾಹನಕ್ಕೆ ಸೈಡ್ ಕೊಡಲು ಚಾಲಕರು ತಬ್ಬಿಬ್ಬಾಗಿ ಈ ಚರಂಡಿಗೆ ಬೀಳುವ ಪರಿಸ್ಥಿತಿ ಎದುರಾಗಿದ್ದು ಇನ್ನೂ ಹೆಚ್ಚಿನ ಅಪಾಯ ಸಂಭವಿಸುವ ಮುಂಚೆ ಹೆದ್ದಾರಿ ಇಲಾಖೆ ಈ

ರಸ್ತೆಬಿಟ್ಟ ಚರಂಡಿಗೆ ಇಳಿದ ಲಾರಿ ➤ ಪ್ರಾಣಾಪಾಯದಿಂದ ಚಾಲಕ, ನಿರ್ವಾಹಕ ಪಾರು Read More »

ಕರಾವಳಿ, ಕರ್ನಾಟಕ

ವಿಟ್ಲದಲ್ಲಿ ಮತ್ತೆ ಮೂವರಿಗೆ ಕೊರೋನಾ ಪಾಸಿಟಿವ್ ➤ ಕೊರೋನಾಗೆ ನಲುಗಿದ ಒಂದೇ ಕುಟುಂಬದ ಏಳು ಮಂದಿ

(ನ್ಯೂಸ್ ಕಡಬ) newskadaba.com ವಿಟ್ಲ, ಜು.08. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರಿನಲ್ಲಿ ಮತ್ತೆ ಮೂವರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಒಂದೇ ಕುಟುಂಬದ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಕ್ಕೆತ್ತೂರು 31 ವರ್ಷದ ಯುವಕನಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಕುಟುಂಬದ ಸದಸ್ಯರೆಲ್ಲರ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು‌. ಬಳಿಕ ಯುವಕನ ಸಹೋದರನಿಗೆ, ಪತ್ನಿ, ಹಾಗೂ ಮತ್ತೊಬ್ಬರು ಮಹಿಳೆ ಸೇರಿದಂತೆ ನಾಲ್ಕು ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ಇದೀಗ

ವಿಟ್ಲದಲ್ಲಿ ಮತ್ತೆ ಮೂವರಿಗೆ ಕೊರೋನಾ ಪಾಸಿಟಿವ್ ➤ ಕೊರೋನಾಗೆ ನಲುಗಿದ ಒಂದೇ ಕುಟುಂಬದ ಏಳು ಮಂದಿ Read More »

ಕರಾವಳಿ

ಮಾಜಿ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ)newskadaba.com ಪುತ್ತೂರು, ಜು.7, ಮಾಜಿ ಕ್ರಿಕೆಟ್‌ ಆಟಗಾರ ಪುತ್ತೂರು ಜೈನ ಬಸದಿ ಬಳಿಯ ನಿವಾಸಿ ವಾರಿಸೇನ ಶೆಟ್ಟಿ(90 ವ)ರವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ನೆಲ್ಲಿಕಟ್ಟೆ ಮಿತ್ರ ಮಂಡಳಿಯ ಅಸ್ತಿತ್ವದಲ್ಲಿ ಸಕ್ರೀಯ ಆಟಗಾರರಾಗಿದ್ದರು. ಇತ್ತೀಚೆಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಮೃತರು ಪುತ್ರಿಯರಾದ ಜ್ಯೋತಿ, ವಾಣಿಶ್ರೀ, ಮಾಲಿನಿ ಮತ್ತು ಪುತ್ರ ರಾಜೇಶ್ ಅವರನ್ನು ಅಗಲಿದ್ದಾರೆ.

ಮಾಜಿ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ ನಿಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ ಐದು ಮಂದಿ ಬೈಕ್ ಕಳ್ಳರ ಬಂಧನ ➤ 4 ಬೈಕ್ ಸಹಿತ 3,63,000 ರೂ ಮೌಲ್ಯದ ಸೊತ್ತು ವಶ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜು.8:  ಹಲವು ದಿನಗಳಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಐದು ಮಂದಿಯಿಂದ 4 ಬೈಕ್ ಸಹಿತ 3,63,000 ರೂ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ದ್ವಿಚಕ್ರ ವಾಹನಗಳು ಕಳವು ಆಗುತ್ತಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ಪಿಎಸ್‌ಐ ನಂದ ಕುಮಾರ್‌ ನೇತೃತ್ವದ ತಂಡ ಕಾರ್ಯಾಚರಣೆ ಇಳಿದಿತ್ತು. ಗುರುವಾಯನಕೆರೆ ಸಮೀಪದ ಜೈನ್‌ ಪೇಟೆ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಈ ಸಂದರ್ಭ ಅನುಮಾನಸ್ಪದವಾಗಿ ಎರಡು ಬೈಕಿನಲ್ಲಿ ಬಂದ ಸವಾರರನ್ನು

ಬೆಳ್ತಂಗಡಿ ಐದು ಮಂದಿ ಬೈಕ್ ಕಳ್ಳರ ಬಂಧನ ➤ 4 ಬೈಕ್ ಸಹಿತ 3,63,000 ರೂ ಮೌಲ್ಯದ ಸೊತ್ತು ವಶ Read More »

ಕರಾವಳಿ

ಕೋಟ :ಹೋಮ್ ಕ್ವಾರೆಂಟೈನ್‌ನಿಂದ ಬೇಸರಗೊಂಡು SSLC ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಡುಪಿ,ಜು.08: ಕೊರೋನಾ  ಕ್ವಾರಂಟೈನ್​ ವಿಚಾರವಾಗಿ SSLC ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಾಲಿಗ್ರಾಮದ ಮಾಣಿಕಟ್ಟಿನಲ್ಲಿ ಮಂಗಳವಾರ ನಡೆದಿದೆ. 15 ವರುಷದ ಕಾರ್ತಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಕೋಟ ವಿವೇಕ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ. ಇತ್ತೀಚಿಗೆ ತಾಯಿ ಮನೆಗೆಲಸ ಮಾಡಿಕೊಂಡಿದ್ದ ಮನೆಯಲ್ಲಿ ಕರೊನಾ ಸೋಂಕು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ತಾಯಿ ರುದ್ರಮ್ಮ ಮತ್ತು ಮಗನಿಗೆ ಹೋಂ ಕ್ವಾರಂಟೈನ್ ಹಾಕಲಾಗಿತ್ತು.ಇದೇ ವಿಚಾರವಾಗಿ ತುಂಬಾ ದುಃಖದಲ್ಲಿದ್ದ ಕಾರ್ತಿಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಮೃತನ ಕೊವೀಡ್

ಕೋಟ :ಹೋಮ್ ಕ್ವಾರೆಂಟೈನ್‌ನಿಂದ ಬೇಸರಗೊಂಡು SSLC ವಿದ್ಯಾರ್ಥಿ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆ..!!!

(ನ್ಯೂಸ್ ಕಡಬ) newskadaba.com ಮಂಗಳೂರು, ಜು 08. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಬುಧವಾರ ಒಂದೇ ದಿನ ಮೂವರು ಮೃತಪಟ್ಟಿದ್ದು ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಪುತ್ತೂರು ಮೂಲದ 32 ವರ್ಷದ ಮಹಿಳೆ, ಉಳ್ಳಾಲದ 62 ವರ್ಷದ ವೃದ್ದೆ, ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂವರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದು ಈ ಪೈಕಿ ಇಬ್ಬರು ಮಹಿಳೆಯರು ನಗರದ ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಿಲ್ಲೆಯಲ್ಲಿ ಕೊರೊನಾ ಶರವೇಗದಲ್ಲಿ ವ್ಯಾಪಿಸುತ್ತಿದ್ದು ಮಂಗಳವಾರದವರೆಗೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆ..!!! Read More »

ಕರಾವಳಿ

ಕೊರೋನಾ ಸೋಂಕು ➤ ಪುತ್ತೂರು ಮೂಲದ ಬಾಣಂತಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು,ಜು.08: ಕೊರೋನಾ ಸೋಂಕಿತ ಪುತ್ತೂರು ಮೂಲದ ಬಾಣಂತಿ ಒಬ್ಬರು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇತ್ತೀಚೆಗೆ ಹೆರಿಗೆ0ದು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೂರ್ನಡ್ಕ ನಿವಾಸಿಯೊಬ್ಬರ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಆಕೆಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಮಹಿಳೆ ಹೆರಿಯಾದ ಬಳಿಕ ಮಹಿಳೆ ಮತ್ತು ಹಸುಳೆಯನ್ನು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇದೀಗ ಬಾಣಂತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಇಂದು ನಸುಕಿನ ಜಾವ ಮೃತಪಟ್ಟಿರುವುದು ತಿಳಿದು ಬಂದಿದೆ. ಮಹಿಳೆಯ ಮೃತ ದೇಹವವನ್ನು ಪುತ್ತೂರಿಗೆ ತರಲಾಗುವುದು. ಬಳಿಕ

ಕೊರೋನಾ ಸೋಂಕು ➤ ಪುತ್ತೂರು ಮೂಲದ ಬಾಣಂತಿ ಮೃತ್ಯು Read More »

ಕರಾವಳಿ, ಕರ್ನಾಟಕ
Scroll to Top