ಕರಾವಳಿ

ದಿ| ಶಾಂತಪ್ಪ ಗೌಡ ಪಿಜಕಳ ಸ್ಮರಣಾರ್ಥ ಕಡಬದಲ್ಲಿ ಹಗ್ಗಜಗ್ಗಾಟದ ಸಂಭ್ರಮ: ಪುರುಷ ಹಾಗೂ ಮಹಿಳಾ ತಂಡಗಳ ನಡುವೆ ಕಾಳಗ

(ನ್ಯೂಸ್‌ ಕಡಬ) newskadaba.com,  ಎ.04: ​ ​ಕಡಬ: ಶ್ರೀ ದುರ್ಗಾ ಸೇವಾ ಸಮಿತಿ ಕಡಬ ಮತ್ತು ಶ್ರೀರಾಮ ಯುವಕ ಮಂಡಲ ರಾಮನಗರ ಕಡಬ ಇವರ ಸಂಯುಕ್ತ ಆಶ್ರಯದಲ್ಲಿ, ದಿ| ಶಾಂತಪ್ಪ ಗೌಡ ಪಿಜಕಳ ಇವರ ಸ್ಮರಣಾರ್ಥವಾಗಿ ಬೃಹತ್ ಹಗ್ಗಜಗ್ಗಾಟ ಪಂದ್ಯಾಟವು ನಾಳೆ (ಏಪ್ರಿಲ್ 05, ಭಾನುವಾರ) ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಜರುಗಲಿದೆ. ​ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಕ್ರೀಡಾಕೂಟವು ಮಧ್ಯಾಹ್ನ 2:00 ಗಂಟೆಯಿಂದ ಆರಂಭವಾಗಲಿದ್ದು, ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ […]

ದಿ| ಶಾಂತಪ್ಪ ಗೌಡ ಪಿಜಕಳ ಸ್ಮರಣಾರ್ಥ ಕಡಬದಲ್ಲಿ ಹಗ್ಗಜಗ್ಗಾಟದ ಸಂಭ್ರಮ: ಪುರುಷ ಹಾಗೂ ಮಹಿಳಾ ತಂಡಗಳ ನಡುವೆ ಕಾಳಗ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಏ.24ಕ್ಕೆ ಎಸ್‌ಎಸ್‌ಎಲ್‌ಸಿ, ಏಪ್ರಿಲ್ 7 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

(ನ್ಯೂಸ್‌ ಕಡಬ) newskadaba.com,  ಎ.04: ರಾಜ್ಯಾದ್ಯಂತ ಕುತೂಹಲ ಮೂಡಿಸಿದ್ದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಬುಧವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಫಲಿತಾಂಶ ಮತ್ತು ಮುಂದಿನ ಪರೀಕ್ಷೆಗಳ ಸಂಭಾವ್ಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಏಪ್ರಿಲ್ 5 ರಿಂದ ಏಪ್ರಿಲ್ 20ರವರೆಗೆ ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯಲಿದೆ. ಶಿಕ್ಷಣ ಇಲಾಖೆಯ ವೇಳಾಪಟ್ಟಿಯಂತೆ ಏಪ್ರಿಲ್ 24ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಸುಮಾರು 8.65 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ

ಏ.24ಕ್ಕೆ ಎಸ್‌ಎಸ್‌ಎಲ್‌ಸಿ, ಏಪ್ರಿಲ್ 7 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಯುದ್ಧದ ಪರಿಣಾಮ: ಪುತ್ತೂರು ಬೈಪಾಸ್‌ನಲ್ಲಿ ಇಂಧನಕ್ಕಾಗಿ ಆಟೋ ರಿಕ್ಷಾಗಳ ದೀರ್ಘ ಸಾಲು

(ನ್ಯೂಸ್‌ ಕಡಬ) newskadaba.com,  ಎ.04: ಪುತ್ತೂರು: ಜಾಗತಿಕ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಪುತ್ತೂರು ಬೈಪಾಸ್ ರಸ್ತೆಯಲ್ಲಿ ಆಟೋ ರಿಕ್ಷಾಗಳ ದೀರ್ಘ ಸಾಲು ಕಂಡುಬಂದಿದೆ. ಬೆಳಿಗ್ಗೆಯಿಂದಲೇ ನೂರಾರು ಆಟೋ ರಿಕ್ಷಾಗಳು ಇಂಧನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದು, ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಇಂಧನದ ಅಭಾವದಿಂದ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ಪ್ರಯಾಣಿಕರಿಗೂ ತೊಂದರೆ ಉಂಟಾಗಿದೆ. ಯುದ್ಧದ ಪರಿಣಾಮ ಸ್ಥಳೀಯ ಸಾರಿಗೆ ವ್ಯವಸ್ಥೆಯ ಮೇಲೂ ಬೀರಿದ್ದು, ಸಾಮಾನ್ಯ ಜನರ ದೈನಂದಿನ ಜೀವನದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಸಮಸ್ಯೆಗೆ

ಯುದ್ಧದ ಪರಿಣಾಮ: ಪುತ್ತೂರು ಬೈಪಾಸ್‌ನಲ್ಲಿ ಇಂಧನಕ್ಕಾಗಿ ಆಟೋ ರಿಕ್ಷಾಗಳ ದೀರ್ಘ ಸಾಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಲ್‌ಪಿಜಿ ಕೊರತೆ; ಪ್ರಯಾಣಿಕರಿಂದ 10% ಹೆಚ್ಚಿಗೆ ಬಾಡಿಗೆ ಕೇಳುತ್ತಿರುವ ಆಟೋ ಚಾಲಕರು!

(ನ್ಯೂಸ್‌ ಕಡಬ) newskadaba.com,  ಎ.04:  ಮಧ್ಯಪ್ರಾಚ್ಯ ಯುದ್ಧದಿಂದಾಗಿ ಆಟೋ ಗ್ಯಾಸ್‌ಗೆ ಅಭಾವ, ಗ್ಯಾಸ್‌ ಬಂಕ್‌ನವರಿಂದ ದುಬಾರಿ ದರ ವಸೂಲಿಯಿಂದಾಗಿ ಕೆಲ ಆಟೋ ಚಾಲಕರು ಶೇ.10 ರಷ್ಟು ಬಾಡಿಗೆ ಹಣವನ್ನು ಹೆಚ್ಚುವರಿಯಾಗಿ ನೀಡಿ ಎಂದು ಪ್ರಯಾಣಿಕರಲ್ಲಿ ಮನವಿ ಮಾಡುತ್ತಿದ್ದಾರೆ. ಗಂಟೆಗಟ್ಟಲೆ ಕಾದರೂ ಆಟೋ ಗ್ಯಾಸ್‌ ಸಿಗುತ್ತಿಲ್ಲ. ಮತ್ತೊಂದೆಡೆ ಗ್ಯಾಸ್‌ ಬಂಕ್‌ನವರು ದುಬಾರಿ ದರಕ್ಕೆ ಗ್ಯಾಸ್‌ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರಯಾಣಿಕರು ಹೆಚ್ಚುವರಿಯಾಗಿ ಶೇ.10 ರಷ್ಟು ಬಾಡಿಗೆ ನೀಡಬೇಕು ಎಂದು ಬೆಂಗಳೂರು ಆಟೋ ಸೇನೆ ಹೆಸರಿನಲ್ಲಿ ಮೀಟರ್‌ ಬಳಿ ಬೋರ್ಡ್‌ಗಳನ್ನು

ಎಲ್‌ಪಿಜಿ ಕೊರತೆ; ಪ್ರಯಾಣಿಕರಿಂದ 10% ಹೆಚ್ಚಿಗೆ ಬಾಡಿಗೆ ಕೇಳುತ್ತಿರುವ ಆಟೋ ಚಾಲಕರು! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಎ.04:  ಇಂದಿನಿಂದ ಏ.7ರವರೆಗೆ ಬೆಂಗಳೂರು ಮತ್ತು ಸುತ್ತಲಿನ ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ… ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆಯಾಗಲಿದೆ. ಅಲ್ಲದೇ ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರ್ಗಿ, ವಿಜಯಪುರ, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇನ್ಫೋಸಿಸ್ ಹಿರಿಯ ಅಧಿಕಾರಿಗಳಂತೆ ನಟಸಿ 6.3 ಕೋಟಿ ವಂಚನೆ

(ನ್ಯೂಸ್‌ ಕಡಬ) newskadaba.comwಎ.03:  ಇನ್ಫೋಸಿಸ್ ಸಂಸ್ಥೆಯ ಹಿರಿಯ ಅಧಿಕಾರಿಗಳಂತೆ ನಟನೆ ಮಾಡಿ ಸುಮಾರು 6.3 ಕೋಟಿ ರೂಪಾಯಿ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೈಸೂರು ಮರ್ಕಂಟೈಲ್ ಕಂಪನಿ ನೀಡಿದ ದೂರಿನ ಪ್ರಕಾರ, ಗಗನ್ ಎಂಬಾತ ತಾನು ಇನ್ಫೋಸಿಸ್ ಸಂಸ್ಥೆಯ ಸಿಎಸ್ಆರ್ ಪ್ರಾದೇಶಿಕ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿ ವಿಶ್ವಾಸ ಗಳಿಸಿದ್ದಾನೆ. ಆತ ತಾನು ಹಿರಿಯ ಅಧಿಕಾರಿಗಳಾದ ನಿಲಾದ್ರಿ ಪ್ರಸಾದ್ ಮಿಶ್ರಾ

ಇನ್ಫೋಸಿಸ್ ಹಿರಿಯ ಅಧಿಕಾರಿಗಳಂತೆ ನಟಸಿ 6.3 ಕೋಟಿ ವಂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪೋಕ್ಸೋ ಕಾಯ್ದೆ: ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

(ನ್ಯೂಸ್‌ ಕಡಬ) newskadaba.comwಎ.03: ಪೋಕ್ಸೋ ಕಾಯ್ದೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಾಲ ಗರ್ಭಿಣಿ ಪ್ರಕರಣದ ಕುರಿತು ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟ ಮಾಡಿದೆ. ಕಡ್ಡಾಯವಾಗಿ ವರದಿ ಮತ್ತು ಕ್ರಮದ ಬಗ್ಗೆ ಮಾರ್ಗಸೂಚಿ ಪ್ರಕಟ ಮಾಡಿದ್ದು, ಎಲ್ಲಾ ಆಸ್ಪತ್ರೆಗಳು ಈ ನಿಯಮಗಳನ್ನು ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ನಿಯಮಗಳು: ಪೋಕ್ಸೋ ಪ್ರಕರಣದ ವಿವರಗಳನ್ನು ಸೂಕ್ತವಾಗಿ ದಾಖಲಿಸಬೇಕು. ವೈದ್ಯಕೀಯ ದಾಖಲೆಗಳನ್ನು ಕಾನೂನುಬದ್ಧವಾಗಿ ಸಂಗ್ರಹಿಸಬೇಕು. ರೋಗಿಯ ಗೌಪ್ಯತೆಯನ್ನು ಕಾಪಾಡಬೇಕು. ತನಿಖಾಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಬೇಕು. ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ವೈದ್ಯರು

ಪೋಕ್ಸೋ ಕಾಯ್ದೆ: ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ತುಳು ರಂಗಭೂಮಿ ಕಲಾವಿದ,ಕಾಪು ರಂಗತರಂಗ ನಾಟಕ ತಂಡದ ಸ್ಥಾಪಕ ಸದಸ್ಯ ಸುಜಿತ್‌ ಶೆಟ್ಟಿ ಪಾದೂರು ವಿಧಿವಶ

(ನ್ಯೂಸ್‌ ಕಡಬ) newskadaba.comwಎ.03: ತುಳು ರಂಗಭೂಮಿ ಕಲಾವಿದ , ಕಾಪು ರಂಗ ತರಂಗ ಕಲಾವಿದರು ತಂಡದ ಸ್ಥಾಪಕ ಸದಸ್ಯ, ಮಾಜಿ ಸಂಚಾಲಕ, ಸುಜಿತ್‌ ಶೆಟ್ಟಿ ಪಾದೂರು (54) ಏಪ್ರಿಲ್ 3, ಶುಕ್ರವಾರ ನಿಧನರಾಗಿದ್ದಾರೆ. ಪ್ರಸಿದ್ಧ ರಂಗ ಕಲಾವಿದರಾಗಿದ್ದ ಅವರು ಹಾಸ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಪಾತ್ರಗಳನ್ನು ಅತ್ಯಂತ ಯಶಸ್ಸಿಯಾಗಿ ನಿಭಾಯಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಕೆ. ಲೀಲಾಧರ ಶೆಟ್ಟಿ ಅವರ ಸಾರಥ್ಯದ ಕಾಪು ರಂಗ ತರಂಗ ಕಲಾವಿದರು ತಂಡದ ಸ್ಥಾಪಕ ಸದಸ್ಯರಾಗಿ , ತಂಡದ ಸಮಗ್ರ ನಿರ್ವಹಣೆಯ ಜವಾಬ್ದಾರಿಯನ್ನು

ಉಡುಪಿ: ತುಳು ರಂಗಭೂಮಿ ಕಲಾವಿದ,ಕಾಪು ರಂಗತರಂಗ ನಾಟಕ ತಂಡದ ಸ್ಥಾಪಕ ಸದಸ್ಯ ಸುಜಿತ್‌ ಶೆಟ್ಟಿ ಪಾದೂರು ವಿಧಿವಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಏಪ್ರಿಲ್ 8 ರವರೆಗೆ ಪಿಲಿಕುಳ ಜೈವಿಕ ಉದ್ಯಾನವನ ಸಾರ್ವಜನಿಕರಿಗೆ ಪ್ರವೇಶಕ್ಕೆ ನಿಷೇಧ

(ನ್ಯೂಸ್‌ ಕಡಬ) newskadaba.com,ಎ.03: ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಿಂದಾಗಿ ಪಿಲಿಕುಳ ನಿಸರ್ಗಧಾಮದಲ್ಲಿರುವ ಜೈವಿಕ ಉದ್ಯಾನವನವು ಏಪ್ರಿಲ್ 1 ರಿಂದ ಏಪ್ರಿಲ್ 8 ರವರೆಗೆ ಸಾರ್ವಜನಿಕರಿಗೆ ಮುಚ್ಚಲ್ಪಡುತ್ತದೆ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಅಗತ್ಯ ಮೂಲಸೌಕರ್ಯ ದುರಸ್ತಿಗೆ ಅನುಕೂಲವಾಗುವಂತೆ ಮತ್ತು ಸೌಲಭ್ಯದ ಸುರಕ್ಷತೆ ಮತ್ತು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ತಾತ್ಕಾಲಿಕವಾಗಿ ಮುಚ್ಚುವುದು ಅಗತ್ಯವಾಗಿದೆ. ಈ ಅವಧಿಯಲ್ಲಿ ಮೃಗಾಲಯವು ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುವುದಿಲ್ಲ. ಸಂದರ್ಶಕರು ಮತ್ತು ಪ್ರವಾಸಿಗರು ದಿನಾಂಕಗಳನ್ನು ಗಮನಿಸಿ ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.

ಮಂಗಳೂರು: ಏಪ್ರಿಲ್ 8 ರವರೆಗೆ ಪಿಲಿಕುಳ ಜೈವಿಕ ಉದ್ಯಾನವನ ಸಾರ್ವಜನಿಕರಿಗೆ ಪ್ರವೇಶಕ್ಕೆ ನಿಷೇಧ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ 54ನೇ ವರ್ಷದ ಉಚಿತ ವಿವಾಹ ಮಹೋತ್ಸವ ಅರ್ಜಿ ಸಲ್ಲಿಕೆಗೆ ಏಪ್ರಿಲ್ 25 ಕೊನೆಯ ದಿನ

(ನ್ಯೂಸ್‌ ಕಡಬ) newskadaba.com,ಎ.03   ಧರ್ಮಸ್ಥಳ:ವಿಶ್ವವಿಖ್ಯಾತ ಕ್ಷೇತ್ರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗುವ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 29ರಂದು ಬುಧವಾರ ಸಂಜೆ ಈ ಪವಿತ್ರ ಕಾರ್ಯಕ್ರಮ ನಡೆಯಲಿದೆ. ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲದಿಂದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಈ ಮಹತ್ಕಾರ್ಯದ ಪ್ರಮುಖ ವಿವರಗಳು ಇಲ್ಲಿವೆ: ಕಾರ್ಯಕ್ರಮದ ವಿವರಗಳು: ದಿನಾಂಕ: 29-04-2026, ಬುಧವಾರ ಸಮಯ:ಸಂಜೆ ಗಂಟೆ 6.40ಕ್ಕೆ

ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ 54ನೇ ವರ್ಷದ ಉಚಿತ ವಿವಾಹ ಮಹೋತ್ಸವ ಅರ್ಜಿ ಸಲ್ಲಿಕೆಗೆ ಏಪ್ರಿಲ್ 25 ಕೊನೆಯ ದಿನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top