ಕರಾವಳಿ

ಪಟ್ಟೆ: ಸೀರೆ ಹೊಳೆಯ ಸೇತುವೆ ಬಿರುಕು➤ ವಾಹನ ಸಂಚಾರ ಬಂದ್

(ನ್ಯೂಸ್ ಕಡಬ) newskadaba.com.ಬಡಗನ್ನೂರು,ಆ.13: ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಪಟ್ಟೆಯಿಂದ ಗೆಜ್ಜೆಗಿರಿ ಮೂಲಕ ಈಶ್ವರಮಂಗಲಕ್ಕೆ ಸಂಪರ್ಕ ಕಲ್ಪಿಸುವ ಜಿ.ಪಂ. ರಸ್ತೆಯ ಪಟ್ಟೆ ಎಂಬಲ್ಲಿ ಸೀರೆ ಹೊಳೆಗೆ ನಿರ್ಮಿಸಿದ ಸೇತುವೆಯ ಒಂದು ಬದಿ ಬಿರುಕು ಬಿಟ್ಟು ಕುಸಿತದ ಭೀತಿಯಲ್ಲಿದೆ. ಗೆಜ್ಜೆಗಿರಿ ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭ ಪಟ್ಟೆಯಿಂದ ಗೆಜ್ಜೆಗಿರಿ ತನಕ ರಸ್ತೆ ವಿಸ್ತರಣೆ ಮತ್ತು ಕಾಂಕ್ರೀಟ್‌ ಕಾಮಗಾರಿ ಮಾಡಲಾಗಿತ್ತು. ಪಟ್ಟೆಯಲ್ಲಿ ಸೀರೆ ಹೊಳೆಯ ಸೇತುವೆಯ ಒಂದು ಬದಿಗೆ ಕಾಂಪೌಂಡ್‌ ಹಾಗೂ ಇನ್ನೊಂದು ಬದಿಗೆ ತಡೆಗೋಡೆ ನಿರ್ಮಿಸಲಾಗಿತ್ತು.ಆದರೆ ಇದೀಗ ತಡೆಗೋಡೆ ಕುಸಿತದ […]

ಪಟ್ಟೆ: ಸೀರೆ ಹೊಳೆಯ ಸೇತುವೆ ಬಿರುಕು➤ ವಾಹನ ಸಂಚಾರ ಬಂದ್ Read More »

ಕರಾವಳಿ

ಆತೂರು: ಆಯುಷ್ಮಾನ್ ಕಾರ್ಡ್ ಅಭಿಯಾನ

(ನ್ಯೂಸ್ ಕಡಬ) newskadaba.com ಆತೂರು, ಆ.12, ಬದ್ರಿಯಾ ಜುಮಾ ಮಸೀದಿ ಆತೂರು ಹಾಗು ಎಸ್ಕೆಎಸ್ಸೆಸ್ಸೆಫ್ ಆತೂರು ಇದರ ಜಂಟಿ ಆಶ್ರಯದಲ್ಲಿ ಮಂಗಳವಾರದಂದು ಭಾರತ ಹಾಗು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖಾ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನವು ಬದ್ರಿಯಾ ಹಾಲ್ ಆತೂರುನಲ್ಲಿ ನಡೆಯಿತು. ಆಯಷ್ಮಾನ್ ಕಾರ್ಡ್ ಅಭಿಯಾನಕ್ಕೆ ಸೈಯದ್ ಜುನೈದ್ ಜಿಫ್ರಿ ತಂಙಳ್ ದುಆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಬದ್ರಿಯಾ ಜುಮಾ ಮಸೀದಿ ಆತೂರು ಇದರ ಅಧ್ಯಕ್ಷರಾದ ಬಿ.ಕೆ ಅಬ್ದುಲ್ ರಝಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಆತೂರು: ಆಯುಷ್ಮಾನ್ ಕಾರ್ಡ್ ಅಭಿಯಾನ Read More »

ಕರಾವಳಿ, ಕರ್ನಾಟಕ

ಬೆಳ್ತಂಗಡಿ: ಎಂ.ಆರ್.ಎಫ್ ಟಯರ್ ಶೋರೂಂ ಮಾಲಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.12, ನಗರದ ಎಮ್.ಆರ್.ಎಫ್ ಟಯರ್ ಶೋ ರೂಮ್ ನ ಮಾಲಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಮೃತರನ್ನು ಟಯರ್ ಶೋರೂಂ ಮಾಲಕ ಪ್ರಕಾಶ್ ತುಳುಪುಳೆ(50.ವ) ಎಂದು ಗುರುತಿಸಲಾಗಿದೆ. ತಮ್ಮ ಉದ್ಯಮದ ಮೂಲಕ ಬೆಳ್ತಂಗಡಿ ಜನತೆಗೆ ಚಿರಪರಿಚಿತರಾಗಿದ್ದ ಪ್ರಕಾಶ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಬೆಳ್ತಂಗಡಿ: ಎಂ.ಆರ್.ಎಫ್ ಟಯರ್ ಶೋರೂಂ ಮಾಲಕ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಆನೆಗಳನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣವೆಂದ ದರ್ಶನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ,12: ಚಾಲೆಂಜಿಂಗ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಪಂಚ ಪ್ರಾಣ. ಆಗಾಗ ತಮ್ಮ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ. ಇಂದು ವಿಶ್ವ ಆನೆ ದಿನ ಇರುವ ಕಾರಣ ದರ್ಶನ್ ಆನೆಯೊಂದಿಗಿನ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.   ಇಂದು ಆಗಸ್ಟ್ 12 ವಿಶ್ವ ಆನೆ ದಿನ. ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂದು

ಆನೆಗಳನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣವೆಂದ ದರ್ಶನ್ Read More »

ಕರಾವಳಿ, ಕರ್ನಾಟಕ

ಪೊಯ್ಯೆಗುಡ್ಡೆ-ಮದ್ದಡ್ಕ ಸಂಪರ್ಕ ರಸ್ತೆ ಗ್ರಾಮ ಪಂಚಾಯತ್‌ನಿಂದ ದುರಸ್ಥಿ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಆ.12: ವಾರಗಳ ಹಿಂದೆ ಸುರಿದ ಕುಂಭದ್ರೋಣ ಮಳೆಯಿಂದಾಗಿ ಕುಡೆರಂಜ ಎಂಬಲ್ಲಿ ಪೊಯ್ಯಗುಡ್ಡೆ-ಮದ್ದಡ್ಕ ಸಂಪರ್ಕಿಸುವ ಸಂಪರ್ಕ ರಸ್ತೆ ಕೊಚ್ಚಿ ಹೊಗಿತ್ತು ಇದನ್ನು ಪಂಚಾಯತ್‌ ವತಿಯಿಂದ ಇಂದು ದುರಸ್ಥಿ ಪಡಿಸಲಾಯಿತು.   ಪಡಂಗಡಿ ಗ್ರಾಮ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಸಂತೋಷ್‌ ಕುಮಾರ್‌ ಜೈನ್‌ ಮುಂದಾಳತ್ವದಲ್ಲಿ ಪಂಚಾಯತ್‌ ವತಿಯಿಂದ ಮೋರಿ ಹಾಗೂ ಜೆಸಿಬಿ ಮೂಖಾಂತರ ಮಣ್ಣು ಹಾಕಿ ಸರಿಪಡಿಸಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಯಿತು. ರಸ್ತೆ ದುರಸ್ಥಿಯ ಸಂದರ್ಭ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಾರ್ವಜನಿಕರು ಉಪಸ್ಥಿತರಿದ್ದು ರಸ್ತೆ

ಪೊಯ್ಯೆಗುಡ್ಡೆ-ಮದ್ದಡ್ಕ ಸಂಪರ್ಕ ರಸ್ತೆ ಗ್ರಾಮ ಪಂಚಾಯತ್‌ನಿಂದ ದುರಸ್ಥಿ Read More »

ಕರಾವಳಿ

ಎಸ್‍ಎಸ್‍ಎಲ್‍ಸಿ ಫಲಿತಾಂಶ – ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಗೆ ಶೇ.80 ಫಲಿತಾಂಶ

ಸುಬ್ರಹ್ಮಣ್ಯ, ಆ.12: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಶೇ.80 ಫಲಿತಾಂಶ ಲಭಿಸಿದೆ. ಒಟ್ಟು 40 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಊರ್ವಿ ಜಿ.(618), ಧನ್ಯ ಎನ್.ಎಚ್.(567), ಸಿಂಚನ ಎನ್.(542), ಪ್ರಮೀಳಾ(537), ಲತಾ ಜಿ.ಒ.(535) ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಎಸ್‍ಎಸ್‍ಎಲ್‍ಸಿ ಫಲಿತಾಂಶ – ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಗೆ ಶೇ.80 ಫಲಿತಾಂಶ Read More »

ಕರಾವಳಿ, ಕರ್ನಾಟಕ

ವಿಪಕ್ಷ ನಾಯಕ ಮಾಜಿ ಸಿಎಂ ಕೊರೋನಾದಿಂದ ಗುಣಮುಖ

(ನ್ಯೂಸ್ ಕಡಬ) newskadaba.com, ಬೆಂಗಳೂರು, ಆ. 12, ಕೊರೋನಾ ಸೋಕು ದೃಢಪಟ್ಠ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಅವರು ಈಗ ಗುಣಮುಖರಾಗಿದ್ದಾರೆ. ಎರಡನೇ ಬಾರಿಗೆ ನಡೆಸಲಾದ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ. ಕಳೆದ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ಇವರಿಗೆ ಆರಂಭದ ಎರಡು ದಿನ ಜ್ವರ ಕಾಣಿಸಿಕೊಂಡಿದ್ದು, ಸೋಂಕಿನ ಉಳಿದ ಯಾವುದೇ ಲಕ್ಷಣವಿರಲಿಲ್ಲ. ಸಿದ್ದರಾಮಯ್ಯ ಅವರು ನಾಳೆ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ

ವಿಪಕ್ಷ ನಾಯಕ ಮಾಜಿ ಸಿಎಂ ಕೊರೋನಾದಿಂದ ಗುಣಮುಖ Read More »

ಕರಾವಳಿ

ಮೂಡಬಿದ್ರೆ: ಬೈಕ್ ಅಪಘಾತ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com, ಮೂಡಬಿದ್ರೆ, ಆ. 12, ಬೈಕ್ ಸ್ಕಿಡ್ ಆದ ಪರಿಣಾಮ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ವಾಲ್ಪಾಡಿಯ ಕ್ವಾಯಕುಡೆ ಎಂಬಲ್ಲಿ ಇಂದು ನಡೆದಿದೆ. ಮೃತರನ್ನು ಅಳಿಯೂರಿನ ವಿಕಾಸ್ ನಗರದ ನಿವಾಸಿ ತಿಮ್ಮಪ್ಪ ಮಡಿವಾಳ(55) ಎಂದು ಗುರುತಿಸಲಾಗಿದೆ. ಇವರು ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ತನ್ನ ಬೈಕ್ ನಲ್ಲಿ ಶಿರ್ತಾಡಿಯಲ್ಲಿರುವ ತಮ್ಮ ಹೊಟೇಲ್ ಕಡೆಗಡ ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.

ಮೂಡಬಿದ್ರೆ: ಬೈಕ್ ಅಪಘಾತ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಶಕ್ತಿ ರೆಸಿಡೆನ್ಶಿಯಲ್ ಶಾಲಾ ಮಕ್ಕಳಿಗೆ ವರ್ಚುವಲ್ ಮೂಲಕ ಕೃಷ್ಣ ಜನ್ಮಾಷ್ಟಮಿ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 12, ಭಗವಾನ್ ಕೃಷ್ಣನ ಜನನವು ವಿಷ್ಣುವಿನ ಎಂಟನೇ ಅವತಾರವೆಂದು ನಂಬಲಾಗಿದೆ, ಇದು ವಾರ್ಷಿಕ ಹಿಂದೂ ಹಬ್ಬವಾಗಿದ್ದು, ಇದನ್ನುಜನ್ಮಷ್ಟಮಿಅಥವಾ ಗೋಕುಲಾಷ್ಟಮಿ ಎಂದುಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಶ್ರಾವಣ ಅಥವಾ ಭಾದ್ರಪದ ತಿಂಗಳಲ್ಲಿ ಕೃಷ್ಣ ಪಕ್ಷದ ಎಂಟನೇ ದಿನ ಅಥವಾ ಅಷ್ಟಮಿಯಲ್ಲಿಆಚರಿಸಲಾಗುತ್ತದೆ. ಈ ವರ್ಷ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಿಂದ ವರ್ಚುವಲ್‍ ಜನ್ಮಾಷ್ಟಮಿ ಆಚರಣೆಯನ್ನು ಆಗಸ್ಟ್10 ರಂದು ಶಕ್ತಿಯ ಪುಟ್ಟ ಮಕ್ಕಳಿಗಾಗಿ ನಡೆಸಲಾಯಿತು. ಅದರಲ್ಲಿ ಕೃಷ್ಣ ರೂಪಕ್ಕೆ ಬಣ್ಣಗಳನ್ನು ತುಂಬಲು ಮತ್ತು ಯಶೋದ ಕೃಷ್ಣನಂತೆ ಉಡುಗೆ

ಶಕ್ತಿ ರೆಸಿಡೆನ್ಶಿಯಲ್ ಶಾಲಾ ಮಕ್ಕಳಿಗೆ ವರ್ಚುವಲ್ ಮೂಲಕ ಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ಕರಾವಳಿ, ಕರ್ನಾಟಕ

ಸೆ. 1 ರಿಂದ ದ.ಕ. ಮೀನುಗಾರಿಕೆ ಪ್ರಾರಂಭ – ಸಚಿವ ಕೋಟಾ ಶ್ರೀನಿವಾಸ ಪ್ರಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 12, ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಮೀನುಗಾರಿಕೆ ಚಟುವಟಿಕೆಯನ್ನು ಈ ಹಿಂದೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಸೆಪ್ಪಂಬರ್ 1 ರಿಂದ ಮೀನುಗಾರಿಕೆ ಪುನ: ಪ್ರಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೀನುಗಾರಿಕೆ ಪುನರಾರಂಭ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಆಗಸ್ಟ್ 1 ರಿಂದ ಮೀನುಗಾರಿಯನ್ನು ಪ್ರಾರಂಭ ಮಾಡುವಂತೆ ಈ ಹಿಂದೆ ಚಿಂತನೆ ನಡೆಸಲಾಗಿತ್ತು.

ಸೆ. 1 ರಿಂದ ದ.ಕ. ಮೀನುಗಾರಿಕೆ ಪ್ರಾರಂಭ – ಸಚಿವ ಕೋಟಾ ಶ್ರೀನಿವಾಸ ಪ್ರಜಾರಿ Read More »

ಕರಾವಳಿ, ಕರ್ನಾಟಕ
Scroll to Top