ಮೂಡಬಿದ್ರೆ: ಬೈಕ್ ಅಪಘಾತ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com, ಮೂಡಬಿದ್ರೆ, ಆ. 12, ಬೈಕ್ ಸ್ಕಿಡ್ ಆದ ಪರಿಣಾಮ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ವಾಲ್ಪಾಡಿಯ ಕ್ವಾಯಕುಡೆ ಎಂಬಲ್ಲಿ ಇಂದು ನಡೆದಿದೆ.

ಮೃತರನ್ನು ಅಳಿಯೂರಿನ ವಿಕಾಸ್ ನಗರದ ನಿವಾಸಿ ತಿಮ್ಮಪ್ಪ ಮಡಿವಾಳ(55) ಎಂದು ಗುರುತಿಸಲಾಗಿದೆ. ಇವರು ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ತನ್ನ ಬೈಕ್ ನಲ್ಲಿ ಶಿರ್ತಾಡಿಯಲ್ಲಿರುವ ತಮ್ಮ ಹೊಟೇಲ್ ಕಡೆಗಡ ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.

Scroll to Top