ಕರಾವಳಿ

ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಕಡಬ ಕಾಂಗ್ರೇಸ್‍ ವತಿಯಿಂದ ತನಿಖೆಗೆ ಆಗ್ರಹ

(ನ್ಯೂಸ್‌ ಕಡಬ) newskadaba.com ಆ. 20. ರಾಜ್ಯ ಸರಕಾರ ಜಾರಿಗೆ ತಂದಿರುವ ʼರೈತ ವಿರೋಧಿ ಭೂಸುಧಾರಣಾ ಕಾಯ್ದೆʼಯ ತಿದ್ದುಪಡಿ , ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಯ ತಿದ್ದುಪಡಿಗಳನ್ನು ತಕ್ಷಣ ಹಿಂಪಡೆಯಬೇಕು ಹಾಗೂ ಕೊರೋನಾ ನಿಯಂತ್ರಣದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ತನಿಖೆಯನ್ನು ಉಚ್ಚನ್ಯಾಯಾಲಯದ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಅಗ್ರಹಿಸಿ ಗುರುವಾರ ಕಡಬ ಬ್ಲಾಕ್ ಕಾಂಗ್ರೇಸ್ ವತಿಯಿಂದ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು. ಕಡಬ ತಹಶೀಲ್ದಾರ್ ಕಛೇರಿ ಎದುರು ಸೇರಿದ ಕಾಂಗ್ರೇಸ್ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಕಡಬ […]

ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಕಡಬ ಕಾಂಗ್ರೇಸ್‍ ವತಿಯಿಂದ ತನಿಖೆಗೆ ಆಗ್ರಹ Read More »

ಕರಾವಳಿ, ಕರ್ನಾಟಕ

ಮಳೆಗೆ ಮನೆಯ ಮೇಲ್ಛಾವಣಿ ಕುಸಿತ ➤ ಪ್ರಾಣಾಪಾಯದಿಂದ ಪಾರಾದ ಎಂಟು ಮಂದಿ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,20:  ಮಳೆಯ ಅವಾಂತರಕ್ಕೆ ಈಗಾಗಲೇ ಕರಾವಳಿ ನುಗಿದೆ. ಕಳೆದ ದಿನ ಸುರಿದ ಭಾರಿ ಗಾಳಿ ಮಳೆಗೆ ಮಂಗಳೂರಿನ ಕೊಣಾಜೆ ಗ್ರಾಮದ ನರೇಕಳ ಎಂಬಲ್ಲಿ ಇಂದು ಮುಂಜಾನೆ 6 ಗಂಟೆಗೆ ಮನೆಯೊಂದು ಕುಸಿದು ತೀವ್ರ ಮಟ್ಟದ ಹಾನಿಯಾಗಿದೆ.     ಕೊಣಾಜೆ ಗ್ರಾಮದ ನರೇಕಳ ಎಂಬಲ್ಲಿ ಇಂದು ಮುಂಜಾಣೆ ಮಳೆರಾಯನ ಅವಾಂತರಕ್ಕೆ ಮನೆಯೊಂದು ನೆಲಕಚ್ಚಿದೆ. ನರೇಕಳದ ಕೊರಗಪ್ಪ ಮೂಲ್ಯ ಎಂಬುವರ ಮನೆಯ ಮೇಲ್ಛಾವಣಿ ಏಕಾಏಕಿಯಾಗಿ ಕುಸಿದು ಬಿದ್ದಿದೆ. ಈ ಘಟನೆ ನಡೆದ ವೇಳೆ

ಮಳೆಗೆ ಮನೆಯ ಮೇಲ್ಛಾವಣಿ ಕುಸಿತ ➤ ಪ್ರಾಣಾಪಾಯದಿಂದ ಪಾರಾದ ಎಂಟು ಮಂದಿ Read More »

ಕರಾವಳಿ, ಕರ್ನಾಟಕ

ಸುಳ್ಯ: ತಾಲೂಕು ಕಛೇರಿಯಲ್ಲಿ ದೇವರಾಜು ಅರಸುರವರ 105 ನೇ ಜನ್ಮ ದಿನಾಚಾಚರಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 20: ಹಿಂದುಳಿದ ವರ್ಗಗಳ ನೇತಾರ ಹಾಗೂ ದಕ್ಷ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ 105 ನೇ ಜನ್ಮ ದಿನಾಚರಣೆಯನ್ನು ತಾಲೂಕು ಕಛೇರಿ ಸುಳ್ಯದಲ್ಲಿ ಇಂದು ಆಚರಿಸಲಾಯಿತು.   ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸುಳ್ಯ ಇದರ ವಿಸ್ತರಣಾಧಿಕಾರಿಗಳಾದ ವಿಜಯ್‌ ಎಂ.ಪಿ. ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುಳ್ಯ: ತಾಲೂಕು ಕಛೇರಿಯಲ್ಲಿ ದೇವರಾಜು ಅರಸುರವರ 105 ನೇ ಜನ್ಮ ದಿನಾಚಾಚರಣೆ Read More »

ಕರಾವಳಿ, ಕರ್ನಾಟಕ

ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಠಿಕಾಣಿ ಹೂಡಿದ ಬೀದಿನಾಯಿಗಳು

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 20. ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದ್ದ ಬಸ್‌ ಗಳ ಒಳಗೆ ಬೀದಿನಾಯಿಗಳು ಮಲಗಿಕೊಂಡಿರುವುದು  ಕಂಡುಬಂದಿದೆ. ಪ್ರಯಾಣಿಕರೋರ್ವರು ಬಸ್‌ಗೆ ಹತ್ತುವ ವೇಳೆ ನಾಯಿಗಳು ಬಸ್ ಒಳಗಡೆ ಮಲಗಿರುವ ದೃಶ್ಯ ಕಂಡು ಬಂದಿದ್ದು, ಬಸ್ ‌ಬಳಿ ಬಂದ ಪ್ರಯಾಣಿಕರನ್ನು ನಾಯಿಗಳು ಕಚ್ಚಲು ಮುಂದಾಗಿವೆ. ಬಸ್ಸಿನ ಬಾಗಿಲುಗಳನ್ನು ಸರಿಯಾಗಿ ಮುಚ್ಚದಿರುವುದೇ ಬೀದಿ ನಾಯಿಗಳು ಬಸ್ ಏರಿ ಕುಳಿತುಕೊಳ್ಳಲು ಕಾರಣ ಎನ್ನಲಾಗಿದೆ.

ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಠಿಕಾಣಿ ಹೂಡಿದ ಬೀದಿನಾಯಿಗಳು Read More »

ಕರಾವಳಿ

ಕಂಕನಾಡಿ ಬಾರ್ & ರೆಸ್ಟೋರೆಂಟ್ ನ ಶೆಡ್ಡಿನಲ್ಲಿ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,20: ನಗರದ ಕಂಕನಾಡಿ ಹಾಲಿವುಡ್ ಬಾರ್&ರೆಸ್ಟೋರೆಂಟ್ ನ ಶೆಡ್ಡಿನ ಬಳಿ ಆಗಸ್ಟ್ 18 ರಂದು 53 ವರ್ಷ ಪ್ರಾಯದ ಮಹೇಶ್ ಎಂಬವರ ಮೃತ ಶರೀರ ಪತ್ತೆಯಾಗಿದೆ. ರೆಸ್ಟೋರೆಂಟ್‍ನ ಶೆಡ್ಡಿನ ಪಕ್ಕಾಸಿಗೆ ಹಳೆಯ ಇಲೆಕ್ಟ್ರಿಕಲ್ ವಯರನ್ನು ಕಟ್ಟಿ ವಯರ್‍ನ ಇನ್ನೊಂದು ತುದಿಯನ್ನು ಕುತ್ತಿಗೆಗೆ ಉರುಳಾಗಿ ಉಪಯೋಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ದೇಹದ ಭಾರದಿಂದ ವಯರ್ ತುಂಡಾಗಿ ಕೆಳಕ್ಕೆ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ಗಂಡಸಿನ ಚಹರೆ ಇಂತಿವೆ: ಹೆಸರು: ಮಹೇಶ, ತಂದೆ: ಹನುಮಂತ,

ಕಂಕನಾಡಿ ಬಾರ್ & ರೆಸ್ಟೋರೆಂಟ್ ನ ಶೆಡ್ಡಿನಲ್ಲಿ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ, ದಕ್ಷಿಣ ಕನ್ನಡದಲ್ಲಿ 2 ದಿನ ಮಳೆ ಹೆಚ್ಚಳ ➤ ಯೆಲ್ಲೋ ಅಲರ್ಟ್​ ಘೋಷಣೆ

(ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ. ಆ,20:  ಕರ್ನಾಟಕದಾದ್ಯಂತ ನಾಲ್ಕು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದೆ. ಮಲೆನಾಡು, ಕರಾವಳಿ, ಕೊಡಗು ಮಾತ್ರವಲ್ಲದೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿಯೂ ಮಳೆ ಜಾಸ್ತಿಯಾಗಿದೆ. ಬೆಂಗಳೂರಿನಲ್ಲಿಯೂ 2 ದಿನಗಳಿಂದ ಮಳೆ ಹೆಚ್ಚಾಗಿದೆ. ಇನ್ನು ಎರಡು ದಿನ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಧಿಕವಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ಘೋಷಿಸಿದೆ.   ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಉತ್ತರ ಕನ್ನಡ, ಉಡುಪಿ, ಹಾಗೂ ದಕ್ಷಿಣ ಕನ್ನಡ

ಉಡುಪಿ, ದಕ್ಷಿಣ ಕನ್ನಡದಲ್ಲಿ 2 ದಿನ ಮಳೆ ಹೆಚ್ಚಳ ➤ ಯೆಲ್ಲೋ ಅಲರ್ಟ್​ ಘೋಷಣೆ Read More »

ಕರಾವಳಿ

ದಸರಾಗೂ ತಟ್ಟಿದ ಕೊರೋನಾ ಬಿಸಿ ➤ ವಿಶ್ವವಿಖ್ಯಾತ ಜಂಬೂ ಸವಾರಿಗೆ ಬೀಳುತ್ತಾ ಬ್ರೇಕ್..?

(ನ್ಯೂಸ್‌ಕಡಬ) newskadaba.com ಬೆಂಗಳೂರು, ಆ 20: ಮಹಾಮಾರಿ ಕೊರೋನಾ ಸೋಂಕಿನಿಂದ ಮೈಸೂರು ದಸರಾ ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಈ ಬಾರಿ ಅವಕಾಶ ಇಲ್ಲದಂತಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಬಾರಿ ಸರಳ ದಸರಾ ಆಚರಣೆ ಮಾಡಿದರೂ ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ವಿಶ್ವ ವಿಖ್ಯಾತ ಜಂಬೂ ಸವಾರಿ ನಡೆಯುವುದು ಅನುಮಾನ . ಏಕೆಂದರೆ ಜಂಬೂ ಸವಾರಿಯನ್ನು ಕಣ್ತುಂಬಿಸಿಕೊಳ್ಳಲು ದೇಶ-ವಿದೇಶಗಳಿಂದ

ದಸರಾಗೂ ತಟ್ಟಿದ ಕೊರೋನಾ ಬಿಸಿ ➤ ವಿಶ್ವವಿಖ್ಯಾತ ಜಂಬೂ ಸವಾರಿಗೆ ಬೀಳುತ್ತಾ ಬ್ರೇಕ್..? Read More »

ಕರಾವಳಿ, ಕರ್ನಾಟಕ

ಸುಬ್ರಹ್ಮಣ್ಯ : ಮೂವರು ಹೋಟೆಲ್ ಸಿಬ್ಬಂದಿಗಳಿಗೆ ಕೊವೀಡ್-19 ದೃಢ

(ನ್ಯೂಸ್ ಕಡಬ) newskadaba.com ಕಡಬ. ಆ,20:  ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಪರೀಕ್ಷೆ ವೇಳೆ ಮೂರು ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕಳೆದ ವಾರ ಹೊಟೇಲೊಂದರ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢವಾಗಿತ್ತು.     ಬಳಿಕ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಎಲ್ಲರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಅವರನ್ನು ಕಳೆದ ದಿನ ಕೊವೀಡ್ ಪರೀಕ್ಷೆ ಗೆ ಒಳಪಡಿಸಲಾಗಿದ್ದು ಅದರಲ್ಲಿ ಮೂವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ವರದಿ ಬಂದಿದೆ. ಈ ಹಿನ್ನಲೆಯಲ್ಲಿ ಅವರನ್ನ ಅವರ ಮನೆಯಲ್ಲೇ ಕ್ವಾರಂಟೈನ್

ಸುಬ್ರಹ್ಮಣ್ಯ : ಮೂವರು ಹೋಟೆಲ್ ಸಿಬ್ಬಂದಿಗಳಿಗೆ ಕೊವೀಡ್-19 ದೃಢ Read More »

ಕರಾವಳಿ, ಕರ್ನಾಟಕ

ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,20: ಕರಾವಳಿಯ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಬಂದಿದ್ದು, ಕರೆಯ ಜಾಡು ಹಿಡಿದು ಹೋದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಈ ಹಿಂದೆ ನಿರ್ದೇಶಕರಾಗಿದ್ದ ವಾಸುದೇವ ರಾವ್ ಅವರ ಮೊಬೈಲ್ ಗೆ ನಿನ್ನೆ ಮಧ್ಯಾಹ್ನದ ವೇಳೆಗೆ ನಿಲ್ದಾಣಕ್ಕೆ ಬಾಂಬ್ ಹಾಕುವುದಾಗಿ ಕರೆ ಬಂದಿತು. ಕೂಡಲೇ ಅವರು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅವರು ಪೊಲೀಸರಿಗೆ ತಿಳಿಸಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಹುಸಿಬಾಂಬ್ ಕರೆ

ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ➤ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಎಡಮಂಗಲ : ಗ್ರಾ.ಪಂ. ವ್ಯಾಪ್ತಿಗೆ ಎಣ್ಮೂರು ಗ್ರಾಮ ಅಧಿಕೃತವಾಗಿ ಸೇರ್ಪಡೆ

(ನ್ಯೂಸ್‌ಕಡಬ) newskadaba.com ಎಣ್ಮೂರು, ಆ 20: ಎಣ್ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಎಣ್ಮೂರು ಗ್ರಾಮ ಮತ್ತು ಮುರುಳ್ಯ ಗ್ರಾಮಗಳು ಸೇರಿದ್ದು, ಆದರೆ ಎಣ್ಮೂರು ಎಡಮಂಗಲ ಗ್ರಾಮ ಪಂಚಾಯತ್ ಭಾಗವಾಗಲಿದೆ ಎಂದರು. ಕಳೆದ ದಿನ ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವನಿಶಂಕರ್ ಅವರು ತಾಲೂಕು ಪಂಚಾಯತ್ ನ ಸಹಾಯಕ ಲೆಕ್ಕಾಧಿಕಾರಿ ಹರೀಶ್ ರಾವ್ ಅವರೊಂದಿಗೆ ಎಣ್ಮೂರು ಗ್ರಾಮ ಪಂಚಾಯತ್ ಕಛೇರಿಗೆ ತೆರಳಿ ಅದೇ ಗ್ರಾಮಕ್ಕೆ ಸಂಬಂಧಪಟ್ಟ ಅಧಿಕೃತ ಕಡತ ಮತ್ತು ವಹಿಗಳನ್ನು ಎಡಮಂಗಲ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿದ್ದರು.ಗ್ರಾಮದ ಎಲ್ಲಾ ವ್ಯವಹಾರಗಳಿಗೆ

ಎಡಮಂಗಲ : ಗ್ರಾ.ಪಂ. ವ್ಯಾಪ್ತಿಗೆ ಎಣ್ಮೂರು ಗ್ರಾಮ ಅಧಿಕೃತವಾಗಿ ಸೇರ್ಪಡೆ Read More »

ಕರಾವಳಿ, ಕರ್ನಾಟಕ
Scroll to Top