ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಠಿಕಾಣಿ ಹೂಡಿದ ಬೀದಿನಾಯಿಗಳು

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 20. ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದ್ದ ಬಸ್‌ ಗಳ ಒಳಗೆ ಬೀದಿನಾಯಿಗಳು ಮಲಗಿಕೊಂಡಿರುವುದು  ಕಂಡುಬಂದಿದೆ.

ಪ್ರಯಾಣಿಕರೋರ್ವರು ಬಸ್‌ಗೆ ಹತ್ತುವ ವೇಳೆ ನಾಯಿಗಳು ಬಸ್ ಒಳಗಡೆ ಮಲಗಿರುವ ದೃಶ್ಯ ಕಂಡು ಬಂದಿದ್ದು, ಬಸ್ ‌ಬಳಿ ಬಂದ ಪ್ರಯಾಣಿಕರನ್ನು ನಾಯಿಗಳು ಕಚ್ಚಲು ಮುಂದಾಗಿವೆ. ಬಸ್ಸಿನ ಬಾಗಿಲುಗಳನ್ನು ಸರಿಯಾಗಿ ಮುಚ್ಚದಿರುವುದೇ ಬೀದಿ ನಾಯಿಗಳು ಬಸ್ ಏರಿ ಕುಳಿತುಕೊಳ್ಳಲು ಕಾರಣ ಎನ್ನಲಾಗಿದೆ.

Scroll to Top