ಕರಾವಳಿ

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಸದಸ್ಯರ ನೇಮಕ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 03: ಕರ್ನಾಟಕ ರಾಜ್ಯದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಮೂರು ಜನರನ್ನು ಸಹ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಡಾ.ಪುರುಷೋತ್ತಮ ಕೆ.ವಿ ಕರಂಗಲ್ಲು, ಕಿರಣ್‌ ಕುಂಬಲಚೇರಿ ಹಾಗೂ ಪೆರ್ಲಂಪಾಡಿಯ ಭರತೇಶ್‌ ಅಲಸಂಡೆಮಜಲು ರವರನ್ನು ಸಹ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಸದಸ್ಯರ ನೇಮಕ Read More »

ಕರಾವಳಿ, ಕರ್ನಾಟಕ

ಕಂದ್ರಪ್ಪಾಡಿ ಅಂಚೆ ಕಛೇರಿಯ ದುರಸ್ಥಿಯ ಕುರಿತು ಸಭೆ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 03. ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಅಂಚೆ ಕಛೇರಿಯ ದುರಸ್ಥಿಗಾಗಿ ಊರವರು ನಡೆಸಿದ ಸಭೆಯಲ್ಲಿ ಊರಿನವರಿಂದಲೇ ಧನ ಸಂಗ್ರಹ ಮಾಡುವ ಮೂಲಕ ಸ್ವತಃ ಯುವಕ ಮಂಡಲದವರೇ ದುರಸ್ಥಿಯ ನೇತೃತ್ವ ವಹಿಸಿಕೊಂಡಿದ್ದಾರೆ. ಇದೇ ಸಂದರ್ಭ ಕಛೇರಿಯ ದುರಸ್ಥಿ ಕುರಿತು ಸರಕಾರದ ಗಮನ ಸೆಳೆದ ಊರವರ ಸಭೆಯನ್ನು ಮರದು ದುರಸ್ಥಿಗೆ ಕಾರಣಕರ್ತರಾದ ಚಂದ್ರಶೇಖರ್ ಅವರನ್ನು ಗೌರವಿಸಲಾಯಿತು.

ಕಂದ್ರಪ್ಪಾಡಿ ಅಂಚೆ ಕಛೇರಿಯ ದುರಸ್ಥಿಯ ಕುರಿತು ಸಭೆ Read More »

ಕರಾವಳಿ, ಕರ್ನಾಟಕ

ರಾಜ್ಯಮಟ್ಟದ ವಿಜ್ಞಾನ ವಿಷಯಾಧಾರಿತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಸಮ್ಯಕ್ತ್.ಹೆಚ್.ಜೈನ್

(ನ್ಯೂಸ್ ಕಡಬ) newskadaba.com ಕಡಬ, ಸೆ. 03: ಕರ್ನಾಟಕ ರಾಜ್ಯ ಸಾಹಿತ್ಯ ಪರಿಷತ್ತು (ರಿ) ಜಿಲ್ಲಾ ಘಟಕ ರಾಯಚೂರು,ಅಂತರ್ಜಾಲದ ಅಂಗಳದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ವಿಷಯದ ಕಾವ್ಯ ರಚನಾ ಸ್ಪರ್ಧೆಯು ಇತ್ತೀಚೆಗೆ ನಡೆಯಿತು.   ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸಮ್ಯಕ್ತ್.ಹೆಚ್.ಜೈನ್.‌ ರವರು ತೃತೀಯ ಸ್ಥಾನ ಪಡೆದಿರುವುದರ ಮೂಲಕ ಸಂಸ್ಥೆಯಿಂದ ಕೊಡಲ್ಪಡುವ ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ. ಕವಿ, ಲೇಖಕ, ವಿಮರ್ಶೆಗಾರ, ನಾಟಕ ರಚನೆಗಾರರಾಗಿ ಗುರುತಿಸಿಕೊಂಡಿರುವ ಇವರು ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ

ರಾಜ್ಯಮಟ್ಟದ ವಿಜ್ಞಾನ ವಿಷಯಾಧಾರಿತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಸಮ್ಯಕ್ತ್.ಹೆಚ್.ಜೈನ್ Read More »

ಕರಾವಳಿ, ಕರ್ನಾಟಕ

ನೂಜಿಬಾಳ್ತಿಲ: ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 03. ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನೂಜಿಬಾಳ್ತಿಲದಲ್ಲಿ ನಡೆದಿದೆ.   ಮೃತ ವ್ಯಕ್ತಿಯನ್ನು ನೂಜಿಬಾಳ್ತಿಲ ಗ್ರಾಮದ ಪೂಜಾರಿಮನೆ ನಿವಾಸಿ ಶೀನಪ್ಪ ಗೌಡ (66) ಎಂದು ಗುರುತಿಸಲಾಗಿದೆ. ಕುಡಿತದ ಚಟ ಹೊಂದಿದ್ದು, ಅಲ್ಲದೇ ಮಗನ ಅನಾರೋಗ್ಯವನ್ನು ಕಂಡು ಬೇಸತ್ತಿದ್ದ ಇವರು ಮನೆಯ ಕೊಟ್ಟಿಗೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನೂಜಿಬಾಳ್ತಿಲ: ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ಮಠಾಧೀಶ ಶ್ರೀಗಳಿಂದ 24 ನೇ ಚಾತುರ್ಮಾಸ್ಯ ಸಮಾಪನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ. 03: ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳಾದ ಶ್ರೀ ಶ್ರೀ ವಿದ್ಯಾಪ್ರಸನ್ನ ಅವರ 24 ನೇ ಚಾತುರ್ಮಾಸ್ಯ ಕಳೆದ ದಿನ ಸಮಾಪನ ಗೊಂಡಿತು.     ಈ ಹಿನ್ನಲೆಯಲ್ಲಿ ಕಳೆದ ದಿನ ದರ್ಪಣ ತೀರ್ಥ ನದಿಯಲ್ಲಿ ಮೃತ್ತಿಕಾ ವಿಸರ್ಜನೆ ನಡೆಯಿತು. ಬಳಿಕ ಶ್ರೀಗಳು ಬಿಳಿನೆಲೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳುವ ಮೂಲಕ ಸೀಮೋಲ್ಲಂಘನೆ ಮಾಡಿದರು. ಈ ಸಂದರ್ಭದಲ್ಲಿ ಭಕ್ತರು ಕುಣಿತ ಭಜನೆ ಮೂಲಕ ಮೆರವಣಿಗೆಯೊಂದಿಗೆ

ಸುಬ್ರಹ್ಮಣ್ಯ: ಮಠಾಧೀಶ ಶ್ರೀಗಳಿಂದ 24 ನೇ ಚಾತುರ್ಮಾಸ್ಯ ಸಮಾಪನ Read More »

ಕರಾವಳಿ, ಕರ್ನಾಟಕ

ದಿ. ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ ಸಾರ್ವಜನಿಕ ಬಸ್ ತಂಗುದಾಣ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಪುತ್ತೂರು. ಸೆ.03:   ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿಯಾಗಿದ್ದ ದಿ. ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ ಸಂಪ್ಯದಲ್ಲಿ ಸಾರ್ವಜನಿಕ ಬಸ್ ತಂಗುದಾಣ ನಿರ್ಮಾಣವಾಗಿದ್ದು ಇಂದು ( ಸೆ.03) ಕಾರ್ತಿಕ್ ರವರ ತಂದೆ ರಮೇಶ್ ಸುವರ್ಣ ಹಾಗೂ ತಾಯಿ ಹೇಮಾವತಿ ಯವರು ಲೋಕಾರ್ಪಣೆ ಮಾಡಿದರು.   ಈ ಸಂದರ್ಭದಲ್ಲಿ ಹಿಂ.ಜಾ.ವೇ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ , ತಾ. ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾ ಕೃಷ್ಣ

ದಿ. ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ ಸಾರ್ವಜನಿಕ ಬಸ್ ತಂಗುದಾಣ ಲೋಕಾರ್ಪಣೆ Read More »

ಕರಾವಳಿ, ಕರ್ನಾಟಕ

ಬೆಂಗಳೂರು: ಅಕ್ರಮ ವಜ್ರ ಸಾಗಾಟ ➤ಕಡಬದ ವ್ಯಕ್ತಿಯ ಸಹಿತ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 03: ವಜ್ರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಕಡಬ ತಾಲೂಕಿನ ವ್ಯಕ್ತಿಯ ಸಹಿತ ಮೂವರನ್ನು ಬೆಂಗಳೂರು ಸಿಟಿ ಬಳಿ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.   ಆರೋಪಿಗಳನ್ನು ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ರವಿ ಕುಮಾರ್(54ವ), ಕಡಬ ತಾಲೂಕಿನ ಬೆಳಂದೂರು ಗ್ರಾಮದ ಸುಧೀರ್(28ವ) ಹಾಗೂ ಬೆಳ್ತಂಗಡಿ ತಾಲೂಕಿನ ಅರಂಬೋಡಿ ಗ್ರಾಮದ ಪ್ರವೀಣ್‌ ಕುಮಾರ್ (51ವ.) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 9 ವಜ್ರದ ಹರಳುಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ

ಬೆಂಗಳೂರು: ಅಕ್ರಮ ವಜ್ರ ಸಾಗಾಟ ➤ಕಡಬದ ವ್ಯಕ್ತಿಯ ಸಹಿತ ಮೂವರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ➤ ಓರ್ವನ ವಿರುದ್ದ ದೂರು

(ನ್ಯೂಸ್ ಕಡಬ) newskadaba.com  ಮಂಗಳೂರು, ಸೆ. 03. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಓರ್ವ ಪೋಲಿಸ್ ವಿರುದ್ಧ ಬೆಂಗಳೂರಿನ ಯುವತಿ ದೂರು ನೀಡಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ನಿವಾಸಿಯಾಗಿರುವ ಪೊಲೀಸ್ ವಿರುದ್ಧ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಮದುವೆ ಮಾತುಕತೆಗಾಗಿ ಮೇ 20ರಂದು ಬೆಂಗಳೂರಿಗೆ ಬಂದಿದ್ದ ಆರೋಪಿ ಅಲ್ಲೇ ಉಳಿದುಕೊಂಡು ಅತ್ಯಾಚಾರವೆಸಗಿದ್ದಾನೆ. ಜೂನ್ 12 ರಂದು ಮಂಗಳೂರಿನ ವಸತಿಗೃಹಕ್ಕೆ ಕರೆಸಿ, ಅತ್ಯಾಚಾರವೆಸಗಿ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ➤ ಓರ್ವನ ವಿರುದ್ದ ದೂರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ‘ಪೋಲಿ’ಸ್ ನಿಂದ ಅತ್ಯಾಚಾರ

(ನ್ಯೂಸ್ ಕಡಬ) newskadaba.com ಮಂಗಳೂರು. ಸೆ.03:  ರಕ್ಷಣೆ ಕೊಡಬೇಕಾದ ಪೊಲೀಸಪ್ಪ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ  ಪೊಲೀಸ್ ಹುದ್ದೆಗೆ ಕಳಂಕ ತಂದಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೋಲಿಸ್ ವಿರುದ್ಧ ಬೆಂಗಳೂರಿನ ಯುವತಿ ದೂರು ನೀಡಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ನಿವಾಸಿಯಾಗಿರುವ ಪೊಲೀಸ್ ವಿರುದ್ಧ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಮೇ 20ರಂದು ಮದುವೆ ಮಾತುಕತೆಗಾಗಿ ಬೆಂಗಳೂರಿಗೆ ಬಂದಿದ್ದ ಆರೋಪಿ ಅಲ್ಲೇ ಉಳಿದುಕೊಂಡು ಅತ್ಯಾಚಾರ ಎಸಗಿದ್ದಾನೆ.

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ‘ಪೋಲಿ’ಸ್ ನಿಂದ ಅತ್ಯಾಚಾರ Read More »

ಕರಾವಳಿ, ಕ್ರೈಮ್ ನ್ಯೂಸ್

ಕೊಯಿಲ: ಮುಬಾರಕ್ ಜುಮಾ ಮಸೀದಿ ಕುದ್ಲೂರು ಹಾಗೂ ಎಸ್ಕೆಎಸ್ಸೆಸ್ಸೆಫ್ ಕುದ್ಲೂರು ಶಾಖೆ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ, ಸೆ. 03. ಮುಬಾರಕ್ ಜುಮಾ ಮಸೀದಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಕುದ್ಲೂರು ಶಾಖೆ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ  ಕಾರ್ಯಕ್ರಮವು  ಕುದ್ಲೂರು ಮಸೀದಿ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುದ್ಲೂರು ಮುಬಾರಕ್ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಮರ್ವೇಲ್ ವಹಿಸಿದರು. ಕುದ್ಲೂರು ಮಸೀದಿಯ ಖತೀಬರಾದ ಅಶ್ರಫ್ ರಹ್ಮಾನಿ ವೀರಮಂಗಿಲ ಕಾರ್ಯಕ್ರಮವನ್ನು ದುಆ ಆಶೀರ್ವಚನ ನೀಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ SKSSF  ಕುದ್ಲೂರು ಶಾಖೆ ಅಧ್ಯಕ್ಷರಾದ ಅಶ್ರಫ್ ಕೋರೆಪದವು ಹಾಗೂ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್

ಕೊಯಿಲ: ಮುಬಾರಕ್ ಜುಮಾ ಮಸೀದಿ ಕುದ್ಲೂರು ಹಾಗೂ ಎಸ್ಕೆಎಸ್ಸೆಸ್ಸೆಫ್ ಕುದ್ಲೂರು ಶಾಖೆ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ Read More »

ಕರಾವಳಿ, ಕರ್ನಾಟಕ
Scroll to Top