ಕರಾವಳಿ

ಅರಂತೋಡು- ಅಂಗಡಿಮಜಲು ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 16. ಅರಂತೋಡು ಗ್ರಾಮದ ಅಂಗಡಿಮಜಲು ರಸ್ತೆಯ ಕಾಂಕ್ರೀಟೀಕರಣಕ್ಕೆ ಸುಳ್ಯ ಶಾಸಕಾಭಿವೃಧ್ದಿ 20 ಲಕ್ಷ ರೂಪಾಯಿ ಅನುದಾನದಲ್ಲಿ ಅರಂತೋಡು ಅಂಗಡಿಮಜಲು ರಸ್ತೆಗೆ ಕಾಂಕ್ರೀಟೀಕರಣದ ಶಿಲಾನ್ಯಾಸ ಕಾರ್ಯಕ್ರಮವು ಸೆ.16 ರಂದು ನಡೆಯಿತು. ಸುಳ್ಯ ಶಾಸಕ ಎಸ್. ಅಂಗಾರ ಶಿಲಾನ್ಯಾಸ ನೇರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ, ಅರಂತೋಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕೊಡೆಂಕೇರಿ, ಅರಂತೋಡು ಗ್ರಾಮ […]

ಅರಂತೋಡು- ಅಂಗಡಿಮಜಲು ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದ ಐರಾವತ ➤ ಫೋಮ್ ಶೀಟ್ ಬಳಸಿ ತಯಾರಿಸಿದ ಬಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 16. ಕಲಾವಿದನೋರ್ವ ಫೋಮ್ ಶೀಟ್ ನಿಂದ ತಯಾರಿಸಿದ ಕೆ.ಎಸ್.ಆರ್.ಟಿ.ಸಿ ಬಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಯರ್, ಸ್ಟೇರಿಂಗ್, ಗೇರ್, ಹೆಡ್ ಲೈಟ್, ಲಾಕ್ ಗಳುಳ್ಳ ಬಾಗಿಲು, ಕಿಟಕಿ, ತುರ್ತು ನಿರ್ಗಮನ ಕಿಟಕಿ, ಮಿರರ್ ಸೇರಿದಂತೆ ಎಲ್ಲವೂ ಇವೆ. ಆದರೆ ಈ ಬಸ್ ನಲ್ಲಿ ಪ್ರಯಾಣ ಮಾತ್ರ ಅಸಾಧ್ಯ, ಕಾರಣ ಇದು ನಿಜವಾದ ಬಸ್ಸಲ್ಲ, ಸಣ್ಣ ಗಾತ್ರದ ಆಟಿಕೆಯ ಬಸ್. ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದ ಕರ್ನಾಟಕ ಸಾರಿಗೆ ಸಂಸ್ಥೆಯ

ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದ ಐರಾವತ ➤ ಫೋಮ್ ಶೀಟ್ ಬಳಸಿ ತಯಾರಿಸಿದ ಬಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚರಂಡಿಯಲ್ಲಿಯೇ ವಿದ್ಯುತ್ ಕಂಬ ಅಳವಡಿಕೆ ➤ ಅಪಾಯಕ್ಕೆ ಆಹ್ವಾನ , ಸ್ಥಳೀಯರ ಆಕ್ರೋಶ..!

(ನ್ಯೂಸ್ ಕಡಬ) newskadaba.com ಎಲಿಮಲೆ, ಸೆ.16:  ಸೋಣಂಗೇರಿ ಸುಬ್ರಹ್ಮಣ್ಯ ರಸ್ತೆಯ ಎಲಿಮಲೆಯಲ್ಲಿ ಮೆಸ್ಕಾಂ ವತಿಯಿಂದ ಹೊಸ ಹೆಚ್.ಟಿ. ಲೈನ್ ತಂತಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಕಂಬ ಅಳವಡಿಸಿ ಹೈ ಟೆನ್ಶನ್ ತಂತಿ ಎಳೆಯಲಾಗಿದೆ.  ಆದರೆ ವಿದ್ಯುತ್ ಕಂಬಗಳನ್ನು ಮಾತ್ರ ರಸ್ತೆಬದಿಯಲ್ಲಿ ನೀರು ಹೋಗುವ ಚರಂಡಿಯಲ್ಲಿಯೇ ಹಾಕಲಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.   ವಿದ್ಯುತ್ ಕಂಬಗಳನ್ನು ರಸ್ತೆ ಬದಿಯಲ್ಲಿ ನೀರು ಹೋಗುವ ಚರಂಡಿಯಲ್ಲಿ ಹಾಕಿ ಎಡವಟ್ಟು ಆಗಿದೆ. ಮಳೆಗಾಲದಲ್ಲಿ ಸಾಕಷ್ಟು ನೀರು ಈ ಚರಂಡಿಯಲ್ಲಿ ಹರಿಯುತ್ತಿದ್ದು

ಚರಂಡಿಯಲ್ಲಿಯೇ ವಿದ್ಯುತ್ ಕಂಬ ಅಳವಡಿಕೆ ➤ ಅಪಾಯಕ್ಕೆ ಆಹ್ವಾನ , ಸ್ಥಳೀಯರ ಆಕ್ರೋಶ..! Read More »

ಕರಾವಳಿ

ಕೋವಿಡ್ ಕೇಸ್ : ಇಂದು (ಸೆ.16) ಒಟ್ಟು 31 ಮಂದಿಯಲ್ಲಿ ಕೋರೊನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಸೆ.16:  ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು  31 ಮಂದಿಗೆ ಕೊರೋನಾ ದೃಢಗೊಂಡಿದೆ. ಕಡಬ ತಾಲೂಕಿನ ಬಲ್ಯದ 59 ವರ್ಷದ ಪುರುಷ, ಆಲಂಕಾರಿನ 40 ವರ್ಷದ ಮಹಿಳೆ, ಬಿಳಿನೆಲೆಯ 24ವರ್ಷದ ಯುವತಿ, ಶಿರಾಡಿಯ 43 ವರ್ಷದ ಮಹಿಳೆ, 63 ವರ್ಷದ ವ್ಯಕ್ತಿ, 50 ವರ್ಷದ ಮಹಿಳೆ, 60 ವರ್ಷದ ಮಹಿಳೆ, 55 ವರ್ಷದ ವ್ಯಕ್ತಿ, ಕೌಕ್ರಾಡಿ ಯ 68 ವರ್ಷದ ವ್ಯಕ್ತಿ, ನೆಲ್ಯಾಡಿಯ ವರ್ಷದ 27 ವರ್ಷದ

ಕೋವಿಡ್ ಕೇಸ್ : ಇಂದು (ಸೆ.16) ಒಟ್ಟು 31 ಮಂದಿಯಲ್ಲಿ ಕೋರೊನಾ ದೃಢ Read More »

ಕರಾವಳಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ➤ ಎರಡು ಅಂಗಡಿಯಲ್ಲಿ ಅಪಾರ ಹಾನಿ!

(ನ್ಯೂಸ್ ಕಡಬ) newskadaba.com ಉಡುಪಿ, ಸೆ.16:  ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದಾಗಿ ಉಡುಪಿ ಸರ್ವೀಸ್ ಬಸ್ ನಿಲ್ದಾಣದಲ್ಲಿನ ಎರಡು ಅಂಗಡಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಸುಮಾರು ಎರಡು ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಇಂದು ಮುಂಜಾನೆ ಈ ಅವಘಡ ಉಂಟಾಗಿದೆ ಎಂದು ಹೇಳಲಾಗಿದ್ದು 2 ಅಂಗಡಿ ಸಂಪೂರ್ಣ ಸುಟ್ಟುಹೋಗಿವೆ. ಸ್ಥಳಕ್ಕೆ ನಗರ ಸಭಾ ಸದಸ್ಯರಾದ ಟಿ ಜಿ ಹೆಗಡೆ , ನಗರ ಸಭೆಯ ಅಧಿಕಾರಿಗಳು ಬೇಟಿ ನೀಡಿದ್ದಾರೆ.    

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ➤ ಎರಡು ಅಂಗಡಿಯಲ್ಲಿ ಅಪಾರ ಹಾನಿ! Read More »

ಕರಾವಳಿ

ನೂಜಿಬಾಳ್ತಿಲ ಗ್ರಾ.ಪಂ. ಗ್ರಾಮವಿಕಾಸ ಕಾಮಗಾರಿ ಅಪೂರ್ಣ ➤ ಐದು ವರ್ಷ ಕಳೆದರೂ ದಡ ಸೇರದ ಸಭಾಂಗಣದ ಕಾಮಗಾರಿ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಸೆ. 16. ಸರಕಾರದ ಮಹತ್ವಾಕಾಂಕ್ಷೆಯ ಮುಖ್ಯ ಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಸಭಾಂಗಣದ ಕಾಮಗಾರಿ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಇನ್ನೂ ಪೂರ್ಣಗೊಳ್ಳದೇ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದೆ. ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ 2015-16ನೇ ಸಾಲಿನ ಮುಖ್ಯ ಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಸೇರ್ಪಡೆಗೊಂಡು ಗ್ರಾಮದ ಅಭಿವೃದ್ಧಿಗೆ ರೂ. 75 ಲಕ್ಷ ಅನುದಾನ ಬಿಡುಗಡೆಗೊಂಡಿತ್ತು. ಅದರಲ್ಲಿ ರೂ. 18 ಲಕ್ಷದಲ್ಲಿ ನೂಜಿಬಾಳ್ತಿಲ ಗ್ರಾ.ಪಂ. ಕಛೇರಿಯ ಮೇಲ್ಚಾವಣಿಯಲ್ಲಿ

ನೂಜಿಬಾಳ್ತಿಲ ಗ್ರಾ.ಪಂ. ಗ್ರಾಮವಿಕಾಸ ಕಾಮಗಾರಿ ಅಪೂರ್ಣ ➤ ಐದು ವರ್ಷ ಕಳೆದರೂ ದಡ ಸೇರದ ಸಭಾಂಗಣದ ಕಾಮಗಾರಿ Read More »

ಕರಾವಳಿ, ಕರ್ನಾಟಕ

ಸುಳ್ಯದ ಅಂಚೆ ಸಿಬ್ಬಂದಿಗೆ ಕೋವಿಡ್ ದೃಢ ➤ ಎರಡು ದಿನ ಕಚೇರಿ ಸೀಲ್ ಡೌನ್.!

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.16:  ಉಭಯ ತಾಲೂಕಿನಲ್ಲಿ ದಿನದಿಂದ ದಿನದಿಂದ ದಿನಕ್ಕೆ ಕೋವಿಡ್- 19 ಹೆಚ್ಚಾಗುತ್ತಲೇಯಿದೆ. ಇಂದು ಸುಳ್ಯದ ಅಂಚೆ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ದೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಕಚೇರಿ ಸ್ಯಾನಿಟೈಸ್ ಮಾಡುವ ನಿಟ್ಟಿನಲ್ಲಿ ಸೀಲ್ ಡೌನ್ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.  

ಸುಳ್ಯದ ಅಂಚೆ ಸಿಬ್ಬಂದಿಗೆ ಕೋವಿಡ್ ದೃಢ ➤ ಎರಡು ದಿನ ಕಚೇರಿ ಸೀಲ್ ಡೌನ್.! Read More »

ಕರಾವಳಿ

ಪಂಜಿಮೊಗರು ಬಳಿ ಗುಡ್ಡೆಯ ತಡೆಗೋಡೆ ಕುಸಿತ ➤ ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ ಭೇಟಿ, ಪರಿಶೀಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.16:  ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಹಾಮಳೆಗೆ ಪಂಜಿಮೊಗರು ವಾರ್ಡಿನ ಉರುಂದಾಡಿ ಗುಡ್ಡೆ ನಿವಾಸಿಯಾದ ಜಯಂತ್ ಅವರ ಮನೆಯ ತಡೆಗೋಡೆ ಕುಸಿದಿದ್ದು, ಬಿ,ಕೆ . ಇಂದಿರಾ ಸುರೇಶ್ ಅವರ ಮನೆಯ ತಡೆಗೋಡೆ ಕುಸಿದಿದೆ.     ಕುಸಿದ ಪರಿಣಾಮಕ್ಕೆ ಪಕ್ಕದ ಮನೆಗೆ ಹಾನಿಯಾಗಿದ್ದು ಹಾಗೂ ಗುಡ್ಡೆಯಂಗಡಿ ನಿವಾಸಿಯಾದ ಚಂದ್ರ ಅವರ ಮನೆಯ ಹಿಂದಿನ ಗುಡ್ಡೆ ಕುಸಿದು ಮನೆಗೆ ಭಾಗಶಃ ಹಾನಿಯಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.

ಪಂಜಿಮೊಗರು ಬಳಿ ಗುಡ್ಡೆಯ ತಡೆಗೋಡೆ ಕುಸಿತ ➤ ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ ಭೇಟಿ, ಪರಿಶೀಲನೆ Read More »

ಕರಾವಳಿ

ಮಣಿಪಾಲ :ಆರ್ಥಿಕ ಸಮಸ್ಯೆಯಿಂದ ಆತ್ಯಹತ್ಯೆಗೆ ಶರಣಾದ ಟ್ಯಾಕ್ಸಿ ಚಾಲಕ

(ನ್ಯೂಸ್ ಕಡಬ) newskadaba.com ಮಣಿಪಾಲ, ಸೆ.16:  ಆರ್ಥಿಕ ಸಮಸ್ಯೆಯಿಂದ ಹೌಸಿಂಗ್ ಲೋನ್ ಕಟ್ಟಲಾಗದೆ ನೊಂದು ಟ್ಯಾಕ್ಸಿ ಚಾಲಕರೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಮಣಿಪಾಲದ ಸುವಿಧಾ ಅಪಾಟ್ಮೆಂಟ್ ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.   ಮೃತ ವ್ಯಕ್ತಿಯನ್ನು ಕುಂದಾಪುರ ಮೂಲದ ರಾಘವೇಂದ್ರ ಎಂದು ಗುರುತಿಸಲಾಗಿದೆ. ಮೃತ ರಾಘವೇಂದ್ರ ಅವರು ಬ್ಯಾಂಕೊಂದರಲ್ಲಿ ಹೌಸಿಂಗ್ ಲೋನ್ ಮಾಡಿದ್ದು ಆರ್ಥಿಕ ಸಮಸ್ಯೆಯಿಂದ ಅದನ್ನು ಕಟ್ಟಲಾಗಿದೆ, ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ರಾಘವೇಂದ್ರ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದಾರೆ.ಪ್ರಕರಣಕ್ಕೆ ಸಂಬಂಧ ಪಟ್ಟಂತೆ

ಮಣಿಪಾಲ :ಆರ್ಥಿಕ ಸಮಸ್ಯೆಯಿಂದ ಆತ್ಯಹತ್ಯೆಗೆ ಶರಣಾದ ಟ್ಯಾಕ್ಸಿ ಚಾಲಕ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಕೊರೋನಾ ಸೋಂಕಿತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶ

(ನ್ಯೂಸ್ ಕಡಬ) ಮಂಗಳೂರು, ಸೆ. 16. 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಕೊರೊನಾ ಸೋಂಕಿನಿಂದಾಗಿ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದು ಪರೀಕ್ಷೆ ಬರೆಯಲು ಆಗ್ರಹಿಸುವ ವಿದ್ಯಾರ್ಥಿಗಳು ತಾವು ಚಿಕಿತ್ಸೆ ಪಡೆಯುತ್ತಿರುವ ವೈಧ್ಯಾಧಿಕಾರಿಗಳ ಅನುಮತಿಯಂತೆ ಪತ್ರವನ್ನು ಪಡೆದು ಮನವಿ ಸಲ್ಲಿಸಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಗೊತ್ತು ಮಾಡಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಅಂತಹ ವಿದ್ಯಾರ್ಥಿಗಳಿದ್ದಲ್ಲಿ ತಾಲೂಕುವಾರು ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸೆಪ್ಟೆಂಬರ್ 19ರೊಳಗೆ ನೊಂದಾಯಿಸಬಹುದು. ಸಂಪರ್ಕಿಸಬಹುದಾದ ನೋಡಲ್

ಮಂಗಳೂರು: ಕೊರೋನಾ ಸೋಂಕಿತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶ Read More »

ಕರಾವಳಿ, ಕರ್ನಾಟಕ
Scroll to Top